ಕರ್ನಾಟಕದಲ್ಲಿದ್ದ ಜಮೀನು ಕಳೆದುಕೊಂಡ್ವಿ, ಚೆನ್ನೈನಲ್ಲಿ ಚಿಕ್ಕ ಮನೆಯಲ್ಲಿದ್ವಿ; ಎಸ್‌ಎಸ್‌ ರಾಜಮೌಳಿ

By Shriram Bhat  |  First Published Feb 26, 2024, 1:53 PM IST

ನಮ್ಮ ಕುಟುಂಬದಲ್ಲಿ ನನ್ನ ಹಿರಿಯಣ್ಣ ಒಬ್ಬರೇ ದುಡಿಯುವ ವ್ಯಕ್ತಿಯಾಗಿದ್ದರು. 13 ಜನರ ಕುಟುಂಬಕ್ಕೆ ಅವರೊಬ್ಬರ ದುಡಿಮೆಯಿಂದ ಬಂದ ಹಣವೇ ಆಧಾರವಾಗಿತ್ತು. ಅದೇ ವೇಳೆ ನಮ್ಮಣ್ಣ ಮದುವೆಯಾದರು.


ಬಾಹುಬಲಿ ಮತ್ತು ಆರ್‌ಆರ್‌ಆರ್‌ ಸಿನಿಮಾಗಳ ಖ್ಯಾತಿಯ ನಿರ್ದೇಶಕ ಎಸ್‌ಎಸ್‌ ರಾಜಮೌಳಿ ಅವರು ಈಗ ಜಗತ್ಪ್ರಸಿದ್ಧರು. ಈಗ ಅವರು ಸಿನಿಮಾಗಳ ನಿರ್ಮಾಪಕರು, ವಿತರಕರು ಕೂಡ ಹೌದು. ಆದರೆ, ಅವರು ಹುಟ್ಟು, ಹದಿಹರೆಯದ ವೇಳೆ ಅವರು ಹೇಗಿದ್ದರು, ಯಾವ ಪರಿಸ್ಥಿತಿಯಲ್ಲಿ ಇದ್ದರು ಎಂಬ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಿಲ್ಲ. ರಾಜಮೌಳಿಯವರು ಹಾಗಂತೆ, ಹೀಗಂತೆ ಎಂಬ ಊಹಾಪೋಹಗಳು ಜತೆಗೆ ಕೆಲವೊಂದು ಮಾಹಿತಿಗಳು ಮಾತ್ರ ಹೊರಜಗತ್ತಿಗೆ ಗೊತ್ತಿವೆ. ಆದರೆ, ಸ್ವತಃ ರಾಜಮೌಳಿಯವರು ಈ ಬಗ್ಗೆ ಮಾತನಾಡಿದ್ದಾರೆ. 

'ನಮ್ಮದು ತುಂಬಾ ಶ್ರೀಮಂತರ ಕುಟುಂಬವಾಗಿತ್ತು. ನನ್ನ ತಂದೆ 360 ಎಕರೆ ಜಮೀನಿನ ಮಾಲೀಕರಾಗಿದ್ದರು. ಆದರೆ, ನನಗೆ 10-11 ವಯಸ್ಸು ಆಗಿರುವಾಗ ನಮ್ಮ ಕುಟುಂಬ ಎಲ್ಲ ಜಮೀನನ್ನೂ ಮಾರಿ ಸರ್ವಸ್ವವನ್ನೂ ಕಳೆದುಕೊಂಡೆವು. ಬಳಿಕ ನಮ್ಮ ಕುಟುಂಬ ಚೆನ್ನೈಗೆ ಶಿಫ್ಟ್‌ ಆಯಿತು. ಅಲ್ಲಿನ ಒಂದು ಅಪಾರ್ಟ್ಮೆಂಟ್‌ನಲ್ಲಿ ಸಿಂಗಲ್ ಬೆಡ್‌ ರೂಂ ಮನೆಯಲ್ಲಿ ಹದಿಮೂರು (13) ಜನರಿರುವ ನಮ್ಮ ಕುಟುಂಬ ವಾಸವಿತ್ತು. ದಿನನತ್ಯವೂ ಆ ಚಿಕ್ಕ ಮನೆಯ ಬಾಡಿಗೆ ಕಟ್ಟುವುದು ಹೇಗೆ ಎಂಬ ಚಿಂತೆಯಲ್ಲೇ ದಿನ ಕಳೆಯುತ್ತಿದ್ದವು.

Tap to resize

Latest Videos

undefined

ನಟ ವಿನೋದ್ ರಾಜ್ ಮದುವೆ ಗುಟ್ಟಾಗಿ ಇಟ್ಟಿದ್ದು ಯಾಕೆ; ಸ್ಪಷ್ಟ ಉತ್ತರ ಇಲ್ಲಿದೆ ನೋಡಿ!

ನಮ್ಮ ಕುಟುಂಬದಲ್ಲಿ ನನ್ನ ಹಿರಿಯಣ್ಣ ಒಬ್ಬರೇ ದುಡಿಯುವ ವ್ಯಕ್ತಿಯಾಗಿದ್ದರು. 13 ಜನರ ಕುಟುಂಬಕ್ಕೆ ಅವರೊಬ್ಬರ ದುಡಿಮೆಯಿಂದ ಬಂದ ಹಣವೇ ಆಧಾರವಾಗಿತ್ತು. ಅದೇ ವೇಳೆ ನಮ್ಮಣ್ಣ ಮದುವೆಯಾದರು. ಮನೆಗೆ ಬಂದ ಅತ್ತಿಗೆಯನ್ನು ನಾವು ಬಾಬಿ ಎಂದು ಕರೆಯುವ ಬದಲು ಅಮ್ಮ ಎಂದೇ ಕರೆಯುತ್ತಿದ್ದೆವು. ಅವರೂ ಕೂಡ ಕುಟುಂಬಕ್ಕೆ ಅಮ್ಮನ ಹಾಗೇ ಇದ್ದರು. 

ಸದ್ಯದಲ್ಲೇ 'ಶಿವ'ನಾಗಿ ಬರಲಿದ್ದಾರೆ ಪ್ರಭಾಸ್; ಪಾರ್ವತಿಯಾಗಿ ಮಿಂಚಲಿದ್ದಾರಾ ಕಂಗನಾ ರಣಾವತ್?

ನನಗೆ ಆಗ 22 ರಿಂದ 23 ವಯಸ್ಸು ಆಗಿದ್ದರೂ ನಾನೂ ಏನೂ ಕೆಲಸ ಮಾಡುತ್ತಿರಲಿಲ್ಲ. ನನ್ನ ತಂದೆ ನನಗೆ 'ಏನಾದ್ರೂ ಕೆಲಸ ಮಾಡು' ಎನ್ನುತ್ತಿದ್ದರು. ಆದರೆ ನಾನು ಯಾವುದೇ ಕೆಲಸಕ್ಕೆ ಹೋಗದೇ ಅಲ್ಲಿ ಇಲ್ಲಿ ಅಲೆದಾಡಿಕೊಂಡು ನನಗೆ ಅಂತ ಇದ್ದ ಒಂದೇ ಜತೆ ಚಪ್ಪಲಿ ಸವೆಸುತ್ತಿದ್ದೆ ಅಷ್ಟೇ. ನನ್ನ ಚಿಕ್ಕಮ್ಮ 'ಅವ್ನು ರಾಜಮೌಳಿ ಏನಕ್ಕೂ ಲಾಯಕ್ಕಿಲ್ಲ' ಅಂತ ಹೇಳ್ತಾ ಇದ್ರು. ನನ್ನ ಅಮ್ಮ (ಅತ್ತಿಗೆ) 'ನನ್ನ ಮಗನಿಗೆ ಜನರಿಗೆ ಕೆಟ್ಟ ಶಬ್ದಗಳನ್ನು ಬಳಸಿ ಮಾತನಾಡುವುದು ನನಗೆ ಇಷ್ಟವಿಲ್ಲ' ಅಂತ ಅದೊಂದು ದಿನ ಹೇಳಿಬಿಟ್ಟರು. ಆವತ್ತೇ ನನ್ನ ಜೀವನದ ದಿಕ್ಕು ಬದಲಾಗಿಹೋಯಿತು. ಅಮ್ಮನ ಮಾತು ಕೇಳಿದ ಬಳಿಕ ನಾನು ನನ್ನ ಜೀವನ ಹಾಗೂ ಕೆಲಸವನ್ನು ಸೀರಿಯಸ್ಸಾಗಿ ತೆಗೆದುಕೊಂಡೆ' ಎಂದಿದ್ದಾರೆ ಖ್ಯಾತ ನಿರ್ದೇಶಕ ಎಸ್‌ಎಸ್‌ ರಾಜಮೌಳಿ.

ಕನ್ನಡದ 'ಕಿಸ್'​ ಚೆಲುವೆಗೆ ಕೂಡಿ ಬಂತಾ ಕಂಕಣ ಭಾಗ್ಯ; ಸ್ಟಾರ್ ಕುಟುಂಬಕ್ಕೆ ಸೊಸೆಯಾಗ್ತಾರಾ ಶ್ರೀಲೀಲಾ? 

ರಾಜಮೌಳಿಯವರು ಬಾಲ್ಯ ಹಾಗೂ ಯೌವ್ವನದ ದಿನಗಳಲ್ಲಿ ಹಾಗಿದ್ದರು ಎಂಬುದನ್ನು ಅವರೇ ಹೇಳಿಕೊಂಡಿದ್ದಾರೆ. ಆದರೆ, ಇಂದು ಅದೇ ರಾಜಮೌಳಿಯವರು ಪ್ರಪಂಚದ ಖ್ಯಾತ ನಿರ್ದೇಶಕರಲ್ಲಿಒಬ್ಬರು ಎನಿಸಿದರು. ಅದೊಂದು ಪವಾಡ ಎನ್ನುವಂತೆ ಅವರು ಬೆಳೆದಿದ್ದರೂ ಅವರ ಈ ಯಶಸ್ಸಿನ ಹಿಂದೆ ಅವಿರತ ಶ್ರಮವಿದೆ. ಜೀವನವನ್ನು, ಸುತ್ತಮುತ್ತಲಿನ ಪರಿಸರವನ್ನು ಅವರು ನೋಡುವ ರೀತಿ ಅವರನ್ನು ಇಂದು ಈ ಮಟ್ಟಕ್ಕೆ ಕರೆದುಕೊಂಡು ಹೋಗಿದೆ ಎನ್ನಬಹುದು.  

click me!