Bollywood Star: ಪ್ರೀತಿಗಾಗಿ ರಾಯಲ್ ಲೈಫ್, ಸೂಪರ್ ಸ್ಟಾರ್ ಪಟ್ಟವನ್ನೇ ದೂರವಿಟ್ಟ ನಟಿ

By Suvarna NewsFirst Published Feb 26, 2024, 12:02 PM IST
Highlights

ಮೈನೆ ಪ್ಯಾರ್ ಕಿಯಾ ಚಿತ್ರ ಅಂದಿನ ದಿನದಲ್ಲೇ ಬಾಕ್ಸಾಫೀಸ್ ನಲ್ಲಿ 28 ಕೋಟಿಗೂ ಅಧಿಕ ರೂಪಾಯಿ ಕಲೆಕ್ಷನ್ ಮಾಡಿತ್ತು. ಆ ಚಿತ್ರಕ್ಕಾಗಿ ಭಾಗ್ಯಶ್ರೀ ಸಲ್ಮಾನ್ ಖಾನ್ ಗಿಂತಲೂ ಹೆಚ್ಚಿನ ಸಂಭಾವನೆ ಪಡೆದಿದ್ದರು. ಮೊದಲ ಚಿತ್ರವೇ ಹಿಟ್ ಆಗಿ ರಾಜಕುವರಿ ಭಾಗ್ಯಶ್ರೀ ಇಡೀ ಭಾರತದ ಸಿನಿಪ್ರಿಯರ ಮನಗೆದ್ದಿದ್ದರು. ಆದರೆ, ತಮ್ಮ ಶಾಲಾ ದಿನಗಳ ಸಂಗಾತಿಗಾಗಿ ಎಲ್ಲವನ್ನೂ ತೊರೆದು ಸರಳ ವಿವಾಹವಾಗಿ ಅಮೆರಿಕಕ್ಕೆ ನಡೆದಿದ್ದರು. 
 

ಅದು 1989 ರ ಡಿಸೆಂಬರ್ ಅಂತ್ಯದ ಸಮಯ. ಅದೊಂದು ಸಿನಿಮಾ ರಿಲೀಸ್ ಆಗಿದ್ದೇ ಆ ಮುದ್ದುಮುಖದ ಬಟ್ಟಲುಕಂಗಳ ನಾಯಕಿ ರಾತ್ರೋರಾತ್ರಿ ಸೂಪರ್ ಸ್ಟಾರ್ ಪಟ್ಟ ಗಿಟ್ಟಿಸಿದ್ದಳು. ಸೂರಜ್ ಭರ್ಜಾತ್ಯಾ ನಿರ್ದೇಶನದ ಸಲ್ಮಾನ್ ಖಾನ್ ನಾಯಕನಾಗಿರುವ ಆ ಚಿತ್ರ 1990ರ ಮೊದಲ ನಾಲ್ಕು ತಿಂಗಳ ಕಾಲ ಭರ್ಜರಿ ಕಲೆಕ್ಷನ್ ಮಾಡಿ ದಾಖಲೆ ನಿರ್ಮಿಸಿತ್ತು. ಎಲ್ಲಕ್ಕಿಂತ ಹೆಚ್ಚಾಗಿ ಭಾಗ್ಯಶ್ರೀ ಎನ್ನುವ ಹೊಸ ಸೂಪರ್ ಸ್ಟಾರ್ ಬಾಲಿವುಡ್ ಗೆ ದೊರೆತಿದ್ದಳು. ಅದು “ಮೈನೆ ಪ್ಯಾರ್ ಕಿಯಾ’. ಈ ಚಿತ್ರದ “ಕಬೂತರ್ ಜಾ ಜಾ...’ ಎನ್ನುವ ಹಾಡಂತೂ ಹಿಟ್ ಆಗಿ, ಮನೆಮನೆಗಳಲ್ಲೂ ಮೊಳಗಿತು. ಪ್ರೇಮಿಗಳ ಪಾಲಿನ ಫೇವರಿಟ್ ಹಾಡಾಯಿತು. “ದಿಲ್ ದೀವಾನಾ, ದಿಲ್ ಸಜನಾ ಸೇ..’ ಹಾಡು ಪ್ರೇಮಿಗಳ ಮನದ ಮಾತಾಗಿ ಎಲ್ಲರ ನಾಲಿಗೆಯ ಮೇಲೆ ನಲಿಯಲು ಶುರುವಾಯಿತು. ಈ ಚಿತ್ರ ಸಲ್ಮಾನ್ ಖಾನ್ ಭವಿಷ್ಯವೂ ಉಜ್ವಲವಾಗಲು ಕಾರಣವಾಯಿತು. ಎಲ್ಲವೂ ಸರಿ. ಆದರೆ, ಏಕಾಏಕಿ ಸೂಪರ್ ಸ್ಟಾರ್ ಆದ ಭಾಗ್ಯಶ್ರೀ ಅದೇ ರೀತಿ ಏಕಾಏಕಿ ಮಾಯವಾಗಿದ್ದರು. 1992ರಲ್ಲಿ ಒಂದೆರಡು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದು ಬಿಟ್ಟರೆ ಮೊದಲ ಚಿತ್ರದಲ್ಲೇ ದೊರೆತಿದ್ದ ಸ್ಟಾರ್ ಡಮ್ ಕಳಚಿಟ್ಟು ನಡೆದುಬಿಟ್ಟಳು. ಬಳಿಕ, ಆಕೆ ಕಾಣಿಸಿಕೊಂಡಿದ್ದೇ ಇತ್ತೀಚಿನ ವರ್ಷಗಳಲ್ಲಿ. 

ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ. “ಮೈನೆ ಪ್ಯಾರ್ ಕಿಯಾ’ (Maine Pyar Kiya) ದ ಭಾಗ್ಯಶ್ರೀ (Bhagyashree) ರಾಜಮನೆತನಕ್ಕೆ (Royal Family) ಸೇರಿದವರು. ಮಹಾರಾಷ್ಟ್ರದ ಸಾಂಗ್ಲಿಯ ರಾಜನಾಗಿದ್ದ ಚಿಂತಾಮಣರಾವ್ ಧುಂಡಿರಾವ್ ಪಟವರ್ಧನ್ ಈ ಭಾಗ್ಯಶ್ರೀ ಅವರ ತಾತ. ಹುಟ್ಟಿನಿಂದಲೂ ಅಷ್ಟಶ್ವೈರ್ಯವನ್ನು ಕಂಡು ಬೆಳೆದಿದ್ದ ಭಾಗ್ಯಶ್ರೀ ವರಿಸಿದ್ದು ಮಾತ್ರ ಕಾಮನ್ ಮ್ಯಾನ್ (Common Man) ಆಗಿದ್ದ ಹಿಮಾಲಯ ದಾಸಾನಿ (Himalaya Dasani) ಅವರನ್ನು. ಹಿಮಾಲಯ ದಾಸಾನಿಗಾಗಿಯೇ ಭಾಗ್ಯಶ್ರೀ ಸೂಪರ್ ಸ್ಟಾರ್ (Super Star) ಪಟ್ಟವನ್ನು ಪಕ್ಕಕ್ಕಿಟ್ಟು ನಡೆದಿದ್ದುದು. ಆತನಿಗಾಗಿಯೇ ತಮ್ಮ ಕುಟುಂಬದ ರಾಯಲ್ ಜೀವನವನ್ನು ಸಹ ತೊರೆದಿದ್ದುದು ಎಂದರೆ ಅಚ್ಚರಿಯಾಗುತ್ತದೆ. 

ಪತಿಯಾಗಿ ನನ್ನಲ್ಲಿದ್ದ ಕೊರತೆಯೇನು? ಡಿವೋರ್ಸ್​ ಬಳಿಕ ಆಮೀರ್​ ಕೇಳಿದ ಪ್ರಶ್ನೆಗೆ ಕಿರಣ್​ ಹೇಳಿದ್ದಿಷ್ಟು...

Latest Videos

ಹಿಮಾಲಯ ದಾಸಾನಿ ಮತ್ತು ಭಾಗ್ಯಶ್ರೀ ಒಂದೇ ಶಾಲೆಯಲ್ಲಿ (School) ಓದಿದವರು. ಕ್ಲಾಸ್ ಮೇಟ್ ಆಗಿದ್ದವರ ನಡುವೆ ಪ್ರೀತಿ (Love) ಮೊಳೆತಿತ್ತು. ಪರಸ್ಪರ ಜಗಳವಾಡುತ್ತಿದ್ದರು. ದಾಸಾನಿ ಸ್ವಲ್ಪ ನಾಚಿಕೆಯ ಸ್ವಭಾವ ಹೊಂದಿದ್ದರಿಂದ ಶಾಲೆ ಅಂತ್ಯವಾಗುವ ಸಮಯದಲ್ಲಿ ಪ್ರೀತಿಯ ಬಗ್ಗೆ ನಿವೇದನೆ ಮಾಡಿಕೊಳ್ಳಲು ಬಯಸಿದ್ದರು. “ಏನೋ ಮಾತನಾಡಬೇಕು’ ಎಂದು ಹೇಳುತ್ತಲೇ ವಾರಗಟ್ಟಲೆ ಸಮಯ ಕಳೆದಿದ್ದರು. “ಏನೇ ಹೇಳಿದರೂ ಪಾಸಿಟಿವ್ ಪ್ರತಿಕ್ರಿಯೆ ಇರುತ್ತೆ’ ಎಂದು ಭಾಗ್ಯಶ್ರೀ ಅಭಯ ನೀಡಿದ ನಂತರ ಪ್ರೀತಿಯ ಬಗ್ಗೆ ಹೇಳುವ ಧೈರ್ಯ ತೋರಿದ್ದರು. ಬಳಿಕ, ತಮ್ಮ ಪ್ರೀತಿಯ ಬಗ್ಗೆ ಭಾಗ್ಯಶ್ರೀ ತಂದೆ-ತಾಯಿಯರ ಬಳಿ ಹೇಳಿಕೊಂಡಾಗ ಅವರು ವಿರೋಧ ವ್ಯಕ್ತಪಡಿಸಿದ್ದರು. “ಇಷ್ಟು ಚಿಕ್ಕ ವಯಸ್ಸಿನಲ್ಲಿ ಪ್ರೀತಿಯೆಲ್ಲ ಬೇಡ. ಸ್ವಲ್ಪ ಸಮಯ ಪರಸ್ಪರ ದೂರವಿರಬೇಕು. ಬಳಿಕವೂ ಪ್ರೀತಿ ಉಳಿದರೆ ನೋಡೋಣ’ ಎಂದು ಕಂಡಿಷನ್ ಹಾಕಿದ್ದರು. ಇಬ್ಬರೂ ಕಾಲೇಜಿಗೆ ಹೋದರೂ ಪರಸ್ಪರ ಮಾತನಾಡಲು ಸಾಧ್ಯವಾಗುತ್ತಿರಲಿಲ್ಲ. ದೂರವಾಣಿ ಸಂಭಾಷಣೆಯೂ ಇರಲಿಲ್ಲ. ಆದರೂ ಇಬ್ಬರ ನಡುವೆ ಪ್ರೀತಿ ಹೆಮ್ಮರವಾಗುತ್ತಿತ್ತು. ಬಳಿಕ, ಹಿಮಾಲಯ ಉನ್ನತ ಅಧ್ಯಯನಕ್ಕಾಗಿ (Study) ಅಮೆರಿಕಕ್ಕೆ ತೆರಳಿದರೆ ಭಾಗ್ಯಶ್ರೀ ಮುಂದಿನ ದಿನಗಳಲ್ಲಿ”ಮೈನೆ ಪ್ಯಾರ್ ಕಿಯಾ’ ಚಿತ್ರಕ್ಕೆ ಅವಕಾಶ ಪಡೆದರು. ಭಾಗ್ಯಶ್ರೀ ಅವರ ತಂದೆ ವಿಜಯಸಿಂಗ್ ರಾವ್ ಮಾಧವರಾವ್ ಪಟವರ್ಧನ್. 

ಫಟಾಫಟ್ ಮದುವೆ
“ಮೈನೆ ಪ್ಯಾರ್ ಕಿಯಾ’ ಚಿತ್ರ ಬಿಡುಗಡೆಯಾದ ಕೆಲ ದಿನಗಳಲ್ಲಿ ತಾವು ಹಿಮಾಲಯ ದಾಸಾನಿ ಅವರನ್ನೇ ವಿವಾಹವಾಗುವುದಾಗಿ, ಅವರನ್ನು ಹೊರತುಪಡಿಸಿ ಬದುಕಲು ಸಾಧ್ಯವಿಲ್ಲವೆಂದು ತಮ್ಮ ಪಾಲಕರಿಗೆ ಭಾಗ್ಯಶ್ರೀ ತಿಳಿಸಿದಾಗ ಅವರು ಮತ್ತೆ ವಿರೋಧಿಸಿದರು. ಆಗ ತಕ್ಷಣ ದಾಸಾನಿ ಅವರಿಗೆ ಕರೆ ಮಾಡಿದ ಭಾಗ್ಯಶ್ರೀ “ನೀನು ನನ್ನನ್ನು ಪ್ರೀತಿಸುತ್ತಿದ್ದರೆ ಈಗಲೇ ನಿನ್ನೊಂದಿಗೆ ಕರೆದೊಯ್ಯಬೇಕು. ನಾನು ಮನೆಯನ್ನು ತೊರೆ (Leave)ಯುತ್ತೇನೆ’ ಎಂದಿದ್ದರು. ಕೇವಲ 15 ನಿಮಿಷಗಳಲ್ಲಿ ಭಾಗ್ಯಶ್ರೀ ಮನೆ ತಲುಪಿದ ಹಿಮಾಲಯ ದಾಸಾನಿ, ಅಲ್ಪ ಸಮಯದಲ್ಲಿ ದೇವಸ್ಥಾನದಲ್ಲಿ ತಾಳಿ ಕಟ್ಟಿದರು. ಇದಕ್ಕೆ ನಟ ಸಲ್ಮಾನ್ ಖಾನ್, ನಿರ್ದೇಶನ ಸೂರಜ್ ಭರ್ಜಾತ್ಯಾ, ಹಿಮಾಲಯ ಪಾಲಕರು (Parents) ಹಾಗೂ ಕೆಲವೇ ಸ್ನೇಹಿತರು ಸಾಕ್ಷಿಯಾಗಿದ್ದರು. 

ಸಿನಿಮಾಗೆ ಬರಲು ಎಂದಿಗೂ ಬಯಸಿರಲಿಲ್ವಂತೆ ಕಿಂಗ್ ಖಾನ್‌

ಈಗ ಇವರ ವಿವಾಹಕ್ಕೆ 30 ವರ್ಷಗಳ ಹರೆಯ. ಮಗ ಅಭಿಮನ್ಯು ದಾಸಾನಿ, ಮಗಳು ಆವಂತಿಕಾ ದಾಸಾನಿ ಇಬ್ಬರೂ ಚಿತ್ರರಂಗದಲ್ಲಿ (Film) ನೆಲೆ ಕಂಡುಕೊಂಡಿದ್ದಾರೆ. 

click me!