ಸಲ್ಮಾನ್, ಆರ್ಯನ್ ಖಾನ್ ಇಬ್ಬರೂ ಡ್ರಗ್ಸ್ ತೆಗೆದುಕೊಳ್ತಾರೆ; ಬಾಬಾ ರಾಮ್‌ದೇವ ಶಾಕಿಂಗ್ ಹೇಳಿಕೆ

Published : Oct 17, 2022, 03:20 PM IST
 ಸಲ್ಮಾನ್, ಆರ್ಯನ್ ಖಾನ್ ಇಬ್ಬರೂ ಡ್ರಗ್ಸ್ ತೆಗೆದುಕೊಳ್ತಾರೆ; ಬಾಬಾ ರಾಮ್‌ದೇವ ಶಾಕಿಂಗ್ ಹೇಳಿಕೆ

ಸಾರಾಂಶ

ಯೋಗ ಗುರು ಬಾಬಾ ರಾಮ್‌ದೇವ್ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಮತ್ತು ಶಾರುಖ್ ಪುತ್ರ ಆರ್ಯನ್ ಖಾನ್ ವಿರುದ್ಧ ಡ್ರಗ್ಸ್ ಸೇವಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.  

ಉತ್ತರ ಪ್ರದೇಶದ ಮೊರಾದಾಬಾದ್‌ನಲ್ಲಿ ಇತ್ತೀಚಿಗೆ ನಡೆದ ಆರ್ಯವೀರ್ ಮತ್ತು ವೀರಾಂಗನಾ ಸಮಾವೇಶದಲ್ಲಿ ಮಾತನಾಡಿದ ಯೋಗ ಗುರು ಬಾಬಾ ರಾಮ್‌ದೇವ್ ಬಾಲಿವುಡ್ ಸ್ಟಾರ್ ನಟ ಸಲ್ಮಾನ್ ಖಾನ್ ಮತ್ತು ಶಾರುಖ್ ಪುತ್ರ ಆರ್ಯನ್ ಖಾನ್ ವಿರುದ್ಧ ಡ್ರಗ್ಸ್ ಸೇವಿಸುತ್ತಾರೆ ಎಂದು ಗಂಭೀರ ಆರೋಪ ಮಾಡಿದ್ದಾರೆ.  ಬಾಬಾ ರಾಮ್‌ದೇವ್ ಡ್ರಗ್ಸ್ ಮುಕ್ತ ದೇಶದ ಬಗ್ಗೆ ಮಾತನಾಡುತ್ತಾ ಹಲವಾರು ಬಾಲಿವುಡ್ ತಾರೆಯರನ್ನು ತರಾಟೆ ತೆಗೆದುಕೊಂಡರು. ಸಲ್ಮಾನ್ ಖಾನ್ ಡ್ರಗ್ಸ್ ಸೇವಿಸುತ್ತಾರೆ, ಆದರೆ ಆಮೀರ್ ಖಾನ್ ಬಗ್ಗೆ ತನಗೆ ಖಚಿತ ಮಾಹಿತಿ ಇಲ್ಲ ಎಂದು ಹೇಳಿದರು. 

ಇದೇ ಸಮಯದಲ್ಲಿ ಬಾಲಿವುಡ್ ಮತ್ತೋರ್ವ ಸ್ಟಾರ್ ಕಿಂಗ್ ಖಾನ್  ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಬಗ್ಗೆಯೂ ಮಾತನಾಡಿದರು. ಕಳೆದ ವರ್ಷ ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಪುತ್ರ ಆರ್ಯನ್ ಖಾನ್ ಜೈಲು ಸೇರಿದ್ದರು. ಈ ಬಗ್ಗೆ ಮಾತನಾಡಿದ ರಾಮ್ ದೇವ್ ಕಳೆದ ವರ್ಷ ಡ್ರಗ್ಸ್ ಪ್ರಕರಣದಲ್ಲಿ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಅನ್ನು ಹೇಗೆ ಬಂಧಿಸಲಾಯಿತು ಎಂದು ಪ್ರಸ್ತಾಪಿಸಿದರು. ಆದರೆ ಸ್ಟಾರ್ ಕಿಡ್‌ಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಕ್ಲೀನ್ ಚಿಟ್ ನೀಡಿದ ಬಗ್ಗೆ ಉಲ್ಲೇಖಿಸಿಲ್ಲ. 

ಬಾಬಾ ರಾಮ್‌ದೇವ್ ಮಾತಿನಲ್ಲಿ, ಸಲ್ಮಾನ್ ಖಾನ್ ಡ್ರಗ್ಸ್ ಸೇವಿಸುತ್ತಾರೆ. ಆದರೆ ಆಮೀರ್ ಖಾನ್ ಪುತ್ರನ ಬಗ್ಗೆ ನನಗೆ ಗೊತ್ತಿಲ್ಲ. ಶಾರುಖ್ ಖಾನ್ ಪುತ್ರ ಕೂಡ ಡ್ರಗ್ಸ್ ಸೇವಿಸಿ ಜೈಲು ಸೇರಿದ್ದರು. ಇನ್ನು ನಟಿಯರ ಬಗ್ಗೆ ಹೇಳುವುದಾದರೆ ಅವರ ಬಗ್ಗೆ ದೇವರಿಗೆ ಗೊತ್ತು' ಎಂದು ನೇರವಾಗಿ ಆರೋಪ ಮಾಡಿದ್ದಾರೆ. 'ಚಿತ್ರರಂಗದಲ್ಲಿ ಡ್ರಗ್ಸ್ ಇದೆ. ರಾಜಕೀಯದಲ್ಲೂ ಡ್ರಗ್ಸ್ ಇದೆ. ಚುನಾವಣೆ ಸಮಯದಲ್ಲಿ ಮದ್ಯ ಹಂಚಲಾಗುತ್ತದೆ. ಭಾರತ ಮಾದಕ ವಸ್ತು ವ್ಯಸನದಿಂದ ಮುಕ್ತವಾಗಬೇಕು ಎಂಬ ನಿರ್ಣಯ ನಾವು ತೆಗೆದುಕೊಳ್ಳಬೇಕು. ಇದಕ್ಕಾಗಿ ಆಂದೋಲನ ನಡೆಸುತ್ತೇವೆ' ಎಂದು ಬಾಬಾ ರಾಮ್‌ದೇವ್ ಹೇಳಿದರು. 

ಬೆಂಗ್ಳೂರಲ್ಲಿ ಡ್ರಗ್ಸ್‌ ಮಾರುತ್ತಿದ್ದ ಮಲಯಾಳಿ ಕಿರುತೆರೆ ನಟ..!

ಬಾಬಾ ರಾಮ್‌ದೇವ್ ಮಾತಿಗೆ ಅನೇಕ ಪ್ರತಿಕ್ರಿಯೆ ನೀಡುತ್ತಿದ್ದಾರೆ. ನೆಚ್ಚಿಗರಿಂದ ತರಹೇವಾರಿ ಕಾಮೆಂಟ್ ಹರಿದುಬರುತ್ತಿದೆ. 'ಈ ಎಲ್ಲಾ ಡ್ರಗ್ಸ್ ಸಂಬಂಧಿತ ವಿವರಗಳ ಬಗ್ಗೆ ಅವರಿಗೆ ಹೇಗೆ ತಿಳಿದಿದೆ' ಎಂದು ಆಶ್ಚರ್ಯ ಪಡುತ್ತಾರೆ. ಇನ್ನು ಕೆಲವರು, 'ಸಲ್ಮಾನ್ ನಿಮ್ಮ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುತ್ತಾರೆ' ಎಂದು ಹೇಳುತ್ತಿದ್ದಾರೆ. 'ಬಾಬಾ ವಿರುದ್ಧ ನೀರ ಕಾನೂನು ಕ್ರಮ ಕೈಗೊಳ್ಳಿ ಸಲ್ಮಾನ್ ಖಾನ್' ಎಂದು ಅಭಿಮಾನಿಗಳು ಒತ್ತಾಯಿಸುತ್ತಿದ್ದಾರೆ.

ಸೋನಾಲಿ ಪೋಗಟ್‌ ಕೇಸ್‌: ರೆಸ್ಟೋರೆಂಟ್‌ ಮಾಲೀಕನ ಬಂಧನ, ಬಾಥ್‌ರೂಮ್‌ನಲ್ಲಿ ಸಿಕ್ತು ಡ್ರಗ್ಸ್!

ಬಾಲಿವುಡ್‌ನಲ್ಲಿ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಡ್ರಗ್ಸ ಪ್ರಕರಣ ತನಿಖೆ ಪ್ರಾರಂಭವಾಯಿತು. ಚಿತ್ರರಂಗದ ಬಹುತೇಕ ಮಂದಿಗೆ ಡ್ರಗ್ಸ್ ಮಾಫಿಯಾ ನಂಟು ಇರುವ ಬಗ್ಗೆ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಬಯಲಿಗೆಳೆದಿತ್ತು. ಈ ಸಂಬಂಧ ಬಾಲಿವುಡ್‌ನ ಅನೇಕ ಸ್ಟಾರ್ ಕಲಾವಿದರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ದೀಪಿಕಾ ಪಡುಕೋಣೆ, ಸಾರಾ ಅಲಿ ಖಾನ್, ರಾಕುಲ್ ಪ್ರೀತ್ ಸಿಂಗ್, ಅರ್ಜುನ್ ರಾಂಪಲ್, ರಿಯಾ ಚಕ್ರವರ್ತಿ ಸೇರಿದಂತೆ ಅನೇಕ ನಟಿಯರು ವಿಚಾರಣೆ ಎದುರಿಸಿದ್ದರು.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?