Kareena Kapoorಗಾಗಿ 12-14 ಗಂಟೆಗಳ ಕಾಲ ಕಾಯಬೇಕಾಯಿತ್ತು: ಸತ್ಯ ಬಿಚ್ಚಿಟ್ಟ ತುಷಾರ್ ಕಪೂರ್

By Vaishnavi ChandrashekarFirst Published Oct 16, 2022, 5:32 PM IST
Highlights

ಮೊದಲ ಸಿನಿಮಾ ಚಿತ್ರೀಕರಣ ಮಾಡುವಾಗಲೇ ನಾಲ್ಕನೇ ಪ್ರಾಜೆಕ್ಟ್‌ಗೆ ಸಹಿ ಮಾಡಿದ ಕರೀನಾ ಕಪೂರ್‌ ಬಗ್ಗೆ ಸತ್ಯ ಬಿಚ್ಚಿಟ್ಟ ತುಷಾರ್...

2001ರಲ್ಲಿ ಬಾಲಿವುಡ್ ಚಿತ್ರರಂಗದಲ್ಲಿ ಧೋಳ್ ಎಬ್ಬಿಸಿದ ಸಿನಿಮಾ Mujhe Kucch Kehna Haiದಲ್ಲಿ ಕರೀನಾ ಕಪೂರ್‌ ಮತ್ತು ತುಷಾರ್ ಕಪೂರ್ ಅಭಿನಯಿಸಿದ್ದರು. ಸತೀಶ್ ಕೌಶಿಕ್ ನಿರ್ದೇಶನ ಮಾಡಿರುವ ಈ ಸಿನಿಮಾ ಕ್ಯೂಟ್ ಆಂಡ್ ಹಾರ್ಟ್ ಟಚಿಂಗ್ ಲವ್ ಸ್ಟೋರಿ ಹೇಳುತ್ತದೆ. ಈ ಸಮಯದಲ್ಲಿ ಕರೀನಾ ಜೊತೆ ಕಳೆದ ಕ್ಷಣಗಳ ಬಗ್ಗೆ ತುಷಾರ್ ಮಾತನಾಡಿದ್ದಾರೆ.

ಸಂಪೂರ್ಣ ಸಿನಿಮಾ ಹಿನ್ನಲೆಯಿಂದ ಬರುವ ತುಷಾರ್ ಕಪೂರ್ ವೀಕ್ಷಕರನ್ನು ಮನೋರಂಜಿಸುವುದರಲ್ಲಿ ವಿಫಲರಾಗಿದ್ದಾರೆ. ಇದೇ ನೆಪೋಟಿಸಂಗೆ ಒಂದು ಉದಾಹರಣೆ ಆಗಿರಲಿದೆ ಏಕೆಂದರೆ ತುಷಾರ್ ಹಿನ್ನಲೆ ನೋಡಿ ಯಾವ ನಿರ್ದೇಶಕರು ಅಥವಾ ನಿರ್ಮಾಪಕರು ಮುಂದಾಗುತ್ತಿಲ್ಲ. ಇತ್ತೀಚಿನ ಕುಶ್ವಂತ್ ಸಿಂಗ್ ಸಾಹಿತ್ಯೋತ್ಸವದಲ್ಲಿ ಸ್ಟಾರ್ ಕಿಡ್ ಆಗಿರುವುದಕ್ಕೆ ಏನೆಲ್ಲಾ ಲಾಭ ಮತ್ತು ನಷ್ಟಗಳು ಇದೆ ಎಂದು ರಿವೀಲ್ ಮಾಡಿದ್ದಾರೆ.

ತುಷಾರ್ ಬರೆದಿರುವ 'ಬ್ಯಾಚುಲರ್ ಡ್ಯಾಡ್' ಪುಸ್ತಕದ ಬಗ್ಗೆ ದಿವ್ಯಾ ದತ್ತಾ ಜೊತೆ ಚರ್ಚೆ ಮಾಡುತ್ತಾರೆ. ಜೀವನದ ಅನೇಕ ವಿಚಾರಗಳ ಬಗ್ಗೆ ಇಲ್ಲಿ ಚರ್ಚೆ ಮಾಡಲಾಗಿತ್ತು ಅದರಲ್ಲಿ ಹೈಲೈಟ್ ಆಗಿದ್ದು ತುಷಾರಾ ಕಪೂರ್ ಸ್ಟಾರ್ ಕಿಡ್. 'ಪ್ರತಿಯೊಬ್ಬ ಸ್ಟಾರ್‌ ಕಿಡ್‌ಗೆ ರೆಡ್ ಕಾರ್ಪೆಟ್ ವಾಕ್ ಸಿಗುವುದಿಲ್ಲ. ನನ್ನ ಮೊದಲ ಸಿನಿಮಾ ಮುಝೆ ಕುಚ್ಚ್ ಕೆಹನಾ ಹೈ ಚಿತ್ರೀಕರಣ ಮಾಡುವಾಗ ಕರೀನಾ ಕಪೂರ್‌ ಸಖತ್ ಬ್ಯುಸಿಯಾಗಿದ್ದರು. ಸುಮಾರು 12-14 ಗಂಟೆಗಳ ಕಾಲ ಕರೀನಾ ಕಪೂರ್‌ಗೆ ಕಾಯಬೇಕಿತ್ತು ಏಕೆಂದರೆ ಅಷ್ಟರಲ್ಲಿ ಕರೀನಾ ನಾಲ್ಕು ಸಿನಿಮಾಗಳಿಗೆ ಸಹಿ ಮಾಡಿದ್ದರು. ಮೊದಲ ಸಿನಿಮಾ ರಿಲೀಸ್ ಆಗಲು ಸಜ್ಜಾಗಿತ್ತು, ಇದು ಕರೀನಾ ಕ್ರಿಯೇಟ್ ಮಾಡಿಕೊಂಡಿದ್ದ ಡಿಮ್ಯಾಂಡ್‌ ಫ್ಯಾಮಿಲಿ ಹಿನ್ನಲೆಯಿಂದ ಅಲ್ಲ' ಎಂದು ತುಷಾರ್ ಮಾತನಾಡಿದ್ದಾರೆ.

ಸಿಂಗಲ್ ಪೇರೆಂಟಿಂಗ್ ಕಷ್ಟ ಏನು? ತುಷಾರ್ ಕಪೂರ್ ಅನುಭವದ ಮಾತು

ತುಷಾರ್ ಕಪೂರ್ ಪುಸ್ತಕ ಬರೆದಿದ್ದಾರೆ ಎಂದು ತಿಳಿದಾಗ ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್ ಹರಿದು ಬಂದಿತ್ತು. ಸ್ಟಾರ್ ನಟ ಜೀತೇಂದ್ರ ಪುತ್ರನಾಗಿರುವ ಕಾರಣ ಸಿನಿಮಾ ಒಂದೇ ಜೀವನಕ್ಕೆ ದಾರಿ ಅಲ್ಲ ನಾನು ಬುದ್ಧಿವಂತ ಹಾಗೂ ಎಂಟರ್ಪ್ರೈಸಿಂಗ್ ಎಂದು ಹೇಳಿಕೊಂಡಿದ್ದಾರೆ. 'ನನ್ನ ಪುತ್ರ ಲಕ್ಷ್ಯಾ ನಮ್ಮ ಜೀವನಕ್ಕೆ ಕಾಲಿಟ್ಟ ಗಳಿಗೆಯಿಂದ ಲೈಫ್‌ನ ಹೇಗೆ ಮ್ಯಾನೇಜ್ ಮಾಡುತ್ತಿದ್ದೀರಿ ಎಂದು ನೆಟ್ಟಿಗರು ಪ್ರಶ್ನೆ ಮಾಡುತ್ತಾರೆ. ಹೀಗಾಗಿ ಡ್ಯಾಡ್‌ಗಳ ಲೈಫ್‌ ಹೇಗಿರಲಿದೆ ಎಂದು ತಿಳಿಸಲು ನಾನು ಈ ಪುಸ್ತಕ ಬರೆದಿರುವೆ. ಸ್ಟಾರ್ ಕಿಡ್‌ ಮಕ್ಕಳು ಅಂದ್ರೆ ದಡ್ಡರು ಅಂತಾರೆ ಅದನ್ನು ಸುಳ್ಳು ಅಂತ ಸಾಭೀತು ಮಾಡುವ ಸಲುವಾಗಿ ಈ ನಿರ್ಧಾರಗಳನ್ನು ತೆಗೆದುಕೊಂಡಿರುವೆ'ಎಂದು ತುಷಾರ್ ಹೇಳಿದ್ದಾರೆ.

ಸೆರೋಗೆಸಿ ತುಂಬಾನೇ ಸಾಮಾನ್ಯ ವಿಚಾರ ಎನ್ನುವ ರೀತಿ ಸೆಲೆಬ್ರಿಟಿಗಳು ಜನ ಸಾಮಾನ್ಯರಿಗೆ ತೋರಿಸುತ್ತಿದ್ದಾರೆ ಎನ್ನಲಾಗಿದೆ. ಏಕೆಂದರೆ ತುಷಾರ್ ತಮ್ಮ ಪುತ್ರನನ್ನು ಸೆರೋಗೆಸಿ ಮೂಲಕ ಬರ ಮಾಡಿಕೊಂಡಿರುವುದು. 'ಮದುವೆ ಆಗದವರು ಮಾತ್ರ ಆಗಿರುವವರು ಕೂಡ ಮಕ್ಕಳನ್ನು ದತ್ತು ತೆಗೆದುಕೊಳ್ಳಬಹುದು. ಜನರು ನನ್ನ ಪರ್ಸನಲ್ ಲೈಫ್‌ ಬಗ್ಗೆ ತಪ್ಪು ತಿಳಿದುಕೊಂಡಿದ್ದಾರೆ ತಾತ ಸ್ಟಾರ್ ಕಿಡ್ ಅಪ್ಪ ನಟ ಈತನಿಗೆ ಐಷಾರಾಮಿ ಜೀವನ ಸಿಗಲಿದೆ ಎಂದು. ಇಲ್ಲ ಇದು ಸುಳ್ಳು ಸತ್ಯ ಬೇರೆನೇ ಇದೆ' ಎಂದಿದ್ದಾರೆ.

ಚಿತ್ರರಂಗದಲ್ಲಿರುವ ಏಕೈಕಾ ಸಪೋರ್ಟರ್‌ ಹೆಸರು ರಿವೀಲ್ ಮಾಡಿದ ನಟಿ ಕಂಗನಾ ರಣಾವತ್!

ವೃತ್ತಿ ಜೀವನ ಕಟ್ಟಿಕೊಂಡ ಕಥೆ:

'ಹೋಮ್ ಪ್ರೊಡಕ್ಷನ್‌ ಮೂಲಕ ನನ್ನ ಮೊದಲ ಸಿನಿಮಾ ಬಿಡುಗಡೆಯಾಗಿದ್ದು. ನಾನು ಆಯ್ಕೆ ಮಾಡಿಕೊಂಡ ಸಿನಿಮಾಗಳು ತುಂಬಾನೇ ಡಿಫರೆಂಟ್ ನನ್ನ ತಂದೆ ಮಾಡಿದ ಸಿನಿಮಾಗಳು ನನಗಿಂತ ಡಿಫರೆಂಟ್. ಎಲ್ಲೇ ಹೋದರು ಸ್ಟಾರ್ ಕಿಡ್ ವಿಚಾರಗಳನ್ನು ನಾನು ಚರ್ಚೆ ಮಾಡುವೆ. ವೀಕ್ಷಕರು ನಿಮ್ಮನ್ನು ಜಡ್ಜ್‌ ಮಾಡಬೇಕು ಹಾಗೂ ಇಷ್ಟ ಪಡಬೇಕು. ಕೆಲವರ ಮಾತು ನಮಗೆ ಮುಖ್ಯ ಆಗುವುದಿಲ್ಲ. ನಮ್ಮನ್ನು ಬೇರೆ ಅವರು ಇಷ್ಟ ಪಡುವ ಅಗತ್ಯವಿಲ್ಲ' ಎಂದು ಹೇಳಿದ್ದಾರೆ.

click me!