ಅಕ್ಷಯ್ ಕುಮಾರ್ ಬಳಿ ಇದೆ 260 ಕೋಟಿ ಮೌಲ್ಯದ ಜೆಟ್; ಸ್ಪಷ್ಟನೆ ನೀಡಿದ ನಟ

Published : Oct 16, 2022, 05:35 PM IST
ಅಕ್ಷಯ್ ಕುಮಾರ್ ಬಳಿ ಇದೆ 260 ಕೋಟಿ ಮೌಲ್ಯದ ಜೆಟ್; ಸ್ಪಷ್ಟನೆ ನೀಡಿದ ನಟ

ಸಾರಾಂಶ

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ 260 ಕೋಟಿ ಮೌಲ್ಯದ ಜೆಟ್‌ನ ಮಾಲಿಕ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಬಗ್ಗೆ ಅಕ್ಷಯ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಬಾಲಿವುಡ್ ಸ್ಟಾರ್ ಅಕ್ಷಯ್ ಕುಮಾರ್ ಅತ್ಯಂತ ಶ್ರೀಮಂತ ನಟರಲ್ಲಿ ಒಬ್ಬರು. ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟ ಅಕ್ಷಯ್ ಕುಮಾರ್ ಅವರಿಗೆ ಈ ವರ್ಷ ತುಂಬಾ ನಿರಾಶದಾಯಕವಾಗಿದೆ. ಈ ವರ್ಷ ರಿಲೀಸ್ ಆದ ಅಕ್ಷಯ್ ಕುಮಾರ್ ಸಿನಿಮಾಗಳು ಸಕ್ಸಸ್ ಕಂಡಿಲ್ಲ. ಬಾಕ್ಸ್ ಆಫೀಸ್‌ನಲ್ಲೂ ಕಮಾಯಿ ಮಾಡಿಲ್ಲ. ಆದರೂ ಅಕ್ಷಯ್ ಬೇಡಿಕೆ ಏನು ಕಮ್ಮಿ ಆಗಿಲ್ಲ. ಸದಾ ಸಿನಿಮಾಗಳಲ್ಲಿ ತೊಡಗಿಸಿಕೊಳ್ಳುವ ಅಕ್ಷಯ್ ಕುಮಾರ್ ಬಗ್ಗೆ ಮತ್ತೊಂದು ಸುದ್ದಿ ವೈರಲ್ ಆಗಿದೆ. ಬಾಲಿವುಡ್ ಕಿಲಾಡಿ 260  ಕೋಟಿ ಮೌಲ್ಯದ ಜೆಟ್‌ನ ಮಾಲಿಕ ಎನ್ನುವ ಸುದ್ದಿ ವೈರಲ್ ಆಗಿದೆ. ಈ ಬಗ್ಗೆ ಅಕ್ಷಯ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.

ಅಕ್ಷಯ್ ಕುಮಾರ್ 260 ಕೋಟಿ ಮೌಲ್ಯದ ಜೆಟ್‌ನ ಮಾಲಿಕ ಎನ್ನುವ ಸುದ್ದಿಯ ಸ್ಟ್ರೀನ್ ಶಾಟ್ ಶೇರ್ ಮಾಡಿ, ಬಾಲ್ಯದಲ್ಲಿ ಓದಿದ ಕವಿತೆ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ. 'ಲೈಯರ್..ಲೈಯರ್ ಪ್ಯಾಂಟ್ಸ್ ಆನ್ ಫೈರ್. ಈ ಪದ್ಯವನ್ನು ಬಾಲ್ಯದಲ್ಲಿ ಕೇಳಿದ್ದೆ' ಎನ್ನುವ ಸಾಲಿನ ಮೂಲಕ ಪ್ರಾರಂಭ ಮಾಡಿದ ಅಕ್ಷಯ್, ಕೆಲವು ಜನರು ಸರಿಯಾಗಿ ಬೆಳೆದು ಬಂದಿಲ್ಲ. ಆದರೆ ನಾನು ಸುಮ್ಮನೆ ಬಿಟ್ಟು ಬಿಡುವ ವನಸ್ಥಿತಿಯವನಲ್ಲ. ನನ್ನ ಬಗ್ಗೆ ಅಧಾರ ರಹಿತ ಸುದ್ದಿಗಳನ್ನು ಬರೆದರೆ ನಾನು ಅದನ್ನು ಬಿಡಲ್ಲ. ಬಯಲಿಗೆ ಎಳೆಯುತ್ತೇನೆ' ಎಂದು ಹೇಳಿದ್ದಾರೆ. ಈ ಮೂಲಕ ಅಕ್ಷಯ್ ಬಳಿ ದುಬಾರಿ ಜೆಟ್ ಇದೆ ಎನ್ನುವ ಸುದ್ದಿಯನ್ನು ತಳ್ಳಿ ಹಾಕಿದ್ದಾರೆ. 

ನನ್ನ ಬೇಬಿ ಗರ್ಲ್ ವೇಗವಾಗಿ ಬೆಳೆಯುತ್ತಿದ್ದಾಳೆ; ಮಗಳ ಹುಟ್ಟುಹಬ್ಬಕ್ಕೆ ಅಕ್ಷಯ್ ಕುಮಾರ್ ಭಾವನಾತ್ಮಕ ಪೋಸ್ಟ್

ಅಕ್ಷಯ್ ಕುಮಾರ್ ಪ್ರತಿಕ್ರಿಯೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತ ಪಡಿಸುತ್ತಿದ್ದಾರೆ. ಅಕ್ಷಯ್ ಕುಮಾರ್ ಇವತ್ತು ರೌಡಿ ಮೂಡಲ್ಲಿ ಇದ್ದಾರೆ ಎಂದು ಕಾಮೆಂಟ್ ಮಾಡುತ್ತಿದ್ದಾರೆ. ತುಂಬಾ ಸಮಯದ ನಂತರ ತುಂಬಾ ಅಗ್ರೆಸಿವ್ ಆಗಿದ್ದಾರಾ ಎಂದು ಮತ್ತೋರ್ವ ಕಾಮೆಂಟ್ ಮಾಡಿದ್ದಾನೆ. 

ಅಕ್ಷಯ್ ಕುಮಾರ್ ಈ ವರ್ಷದ ಐದನೇ ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ರಾಮ್ ಸೇತು ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರಲು ಸಜ್ಜಾಗಿದ್ದಾರೆ. ಇತ್ತೀಚಿಗಷ್ಟೆ ಸಿನಿಮಾದ ಟ್ರೈಲರ್ ರಿಲೀಸ್ ಆಗಿದೆ. ಚಿತ್ರದಲ್ಲಿ ಜಾಕ್ವೆಲಿನ್ ಫರ್ನಾಂಡೀಸ್, ನುಸ್ರುತ್ ಬರುಚ್ಚ, ಸತ್ಯದೇವ್ ಮತ್ತು ನಾಸರ್ ಸೇರಿದಂತೆ ಅನೇಕರು ನಟಿಸಿದ್ದಾರೆ.

ಖ್ಯಾತ ಗಾಯಕನಿಗೆ ತನ್ನ ಮನೆ ಮಾರಿದ ಅಕ್ಷಯ್ ಕುಮಾರ್; 4 ಕೋಟಿಯ ಪ್ರಾಪರ್ಟಿ 6 ಕೋಟಿಗೆ ಸೇಲ್

ಈ ವರ್ಷದ ಆರಂಭದಲ್ಲಿ ಅಕ್ಷಯ್ ನಟನೆಯ ಬಚ್ಚನ್ ಪಾಂಡೆ ಸಿನಿಮಾ ರಿಲೀಸ್ ಆಗಿತ್ತು. ಬಳಿಕ ಸಾಮ್ರಾಟ್ ಪೃಥ್ವಿರಾಜ್ ಮತ್ತು ರಕ್ಷಾ ಬಂಧನದ ಮೂಲಕ ಅಭಿಮಾನಿಗಳ ಮುಂದೆ ಬಂದರು.  ಆದರೆ ಯಾವ ಸಿನಿಮಾ ಹೇಳಿಕೊಳ್ಳುವಷ್ಟು ಸಕ್ಸಸ್ ಕಂಡಿಲ್ಲ. ರಾಮ್ ಸೇತು ಸಕ್ಸಸ್ ಕಾಣುತ್ತಾ ಎಂದು ಕಾದುನೋಡಬೇಕಿದೆ.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?