ರಾಷ್ಟ್ರಭಾಷಾ ಚರ್ಚೆ ನಡುವೆ ಗಮನ ಸೆಳೆದ ಅನೇಕ್ ಟ್ರೈಲರ್; ಆಯುಷ್ಮಾನ್ ಮಾತಿಗೆ ಭಾರಿ ಪ್ರಶಂಸೆ

By Shruiti G Krishna  |  First Published May 9, 2022, 11:20 AM IST

ರಾಷ್ಟ್ರಭಾಷಾ ಚರ್ಚೆಯ ನಡುವೆಯೇ ಬಾಲಿವುಡ್ ನಟ ಆಯುಷ್ಮಾನ್ ಖುರಾನ(Ayushmann Khurrana) ನಟನೆಯ ಅನೇಕ್ ಟ್ರೈಲರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಟ್ರೈಲರ್‌ನಲ್ಲಿ ಆಯುಷ್ಮಾನ್ ಖುರಾನ ಮತ್ತು ತೆಲಂಗಾಣ ವ್ಯಕ್ತಿಯ ಜೊತೆ ಮಾತನಾಡುತ್ತಿರುವ ದೃಶ್ಯವಿದೆ.


ದೇಶದಲ್ಲಿ ಸದ್ಯ ರಾಷ್ಟ್ರಭಾಷೆಯ ಚರ್ಚೆ ಜೋರಾಗಿ ನಡೆಯುತ್ತಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್(sudeep) ಮತ್ತು ಬಾಲಿವುಡ್ ನಟ ಅಜಯ್ ದೇವಗನ್(Ajay Devgan) ನಡುವಿನ ರಾಷ್ಟ್ರಭಾಷೆ ಚರ್ಚೆ ಕ್ಷಣಾರ್ಧದಲ್ಲಿ ವೈರಲ್ ಆಗಿತ್ತು. ಸುದೀಪ್ ಹಿಂದಿ ರಾಷ್ಟ್ರಭಾಷೆಯಲ್ಲ ಎಂದು ಹೇಳಿದ್ದ ವಿಡಿಯೋವನ್ನು ಅಜಯ್ ದೇವಗನ್ ಶೇರ್ ಮಾಡಿ ಹಿಂದಿ ರಾಷ್ಟ್ರಭಾಷೆ, ಅಲ್ಲ ಎಂದರೆ ಕನ್ನಡದ ಸಿನಿಮಾಗಳನ್ನು ಯಾಕೆ ಡಬ್ ಮಾಡುತ್ತೀರಿ ಎಂದು ಗರಂ ಆಗಿದ್ದರು. ಇದಕ್ಕೆ ಖಡಕ್ ಪ್ರತಿಕ್ರಿಯೆ ನೀಡುವ ಮೂಲಕ ಸುದೀಪ್ ಹಿಂದಿ ರಾಷ್ಟ್ರಭಾಷೆಯಲ್ಲ ಎನ್ನುವುದನ್ನು ಮನವರಿಗೆ ಮಾಡಿಕೊಟ್ಟಿದ್ದರು. ಇಬ್ಬರ ರಾಷ್ಟ್ರ ಭಾಷೆಯ ಚರ್ಚೆ ದೇಶವ್ಯಾಪಿ ಹಬ್ಬಿದ್ದು ಅನೇಕರು ಸುದೀಪ್ ಪರ ಬ್ಯಾಟ್ ಬೀಸಿದ್ದರು.

ರಾಷ್ಟ್ರಭಾಷಾ ಚರ್ಚೆಯ ನಡುವೆಯೇ ಬಾಲಿವುಡ್ ನಟ ಆಯುಷ್ಮಾನ್ ಖುರಾನ(Ayushmann Khurrana) ನಟನೆಯ ಅನೇಕ್ ಟ್ರೈಲರ್ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಟ್ರೈಲರ್‌ನಲ್ಲಿ ಆಯುಷ್ಮಾನ್ ಖುರಾನ ಮತ್ತು ತೆಲಂಗಾಣ ವ್ಯಕ್ತಿಯ ಜೊತೆ ಮಾತನಾಡುತ್ತಿರುವ ದೃಶ್ಯವಿದೆ. ಆಯುಷ್ಮಾನ್ ತೆಲಂಗಾಣ ವ್ಯಕ್ತಿಯನ್ನು ಉತ್ತರ ಭಾರತೀಯರು ಎಂದು ಯಾಕೆ ಭಾವಿಸುತ್ತೀರಿ ಎಂದು ಕೇಳಿದರು. ಹಿಂದಿ ಸ್ಪಷ್ಟವಾಗಿರುವ ಕಾರಣದಿಂದ ಎಂದು ಹೇಳಿದರು. ಇದಕ್ಕೆ ಆಯುಷ್ಮಾನ್ ಪ್ರತಿಕ್ರಿಯೆ ನೀಡಿ ಹಾಗಾದರೆ ಉತ್ತರ ಭಾರತ ಮತ್ತು ದಕ್ಷಿಣ ಭಾರತದವರು ಎಂದು ಹಿಂದಿ ನಿರ್ಧರಿಸುತ್ತದೆಯೇ ಎಂದು ಪ್ರಶ್ನಿಸಿದರು. ತೆಲಂಗಾಣ ವ್ಯಕ್ತಿ ನೋ ಎಂದು ಹೇಳಿದಾಗ. ಆಯುಷ್ಮಾನ್ ಹಾಗಾದರೇ ಇದು ಹಿಂದಿಯ ಬಗ್ಗೆ ಎಲ್ಲ ಎಂದಿದ್ದಾರೆ.

ಅಜಯ್‌ ದೇವಗನ್ - ಸುದೀಪ್ ಮಧ್ಯೆ ಹಿಂದಿ ವಿವಾದ ಉಂಟಾಗಿದ್ಹೇಗೆ.?

Tap to resize

Latest Videos

ರಾಷ್ಟ್ರಭಾಷೆಯ ಚರ್ಚೆಯ ಸಮಯದಲ್ಲಿ ಈ ಟ್ರೈಲರ್ ಸಿಕ್ಕಾಪಟ್ಟೆ ಮೆಚ್ಚುಗೆಗೆ ಪಾತ್ರವಾಗಿದೆ. ಬಾಲಿವುಡ್‌ನ ಅನೇಕ ಸ್ಟಾರ್ ಕಲಾವಿದರು ಟ್ರೈಲರ್ ಅನ್ನು ಹಾಡಿಹಗಳಿದ್ದಾರೆ. ಭಾಷೆಯ ಆಧಾರದ ಮೇಲೆ ಉತ್ತರ ಭಾರತ ಮತ್ತು ದಕ್ಷಿಣ ಭಾರತದವರು ಎಂದು ವಿಭಜನೆಯಾದ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ನಟಿ ತಾಪ್ಸಿ ಪ್ರತಿಕ್ರಿಯೆ ನೀಡಿ, ಆದರೆ ಮನುಷ್ಯ ಮಾತ್ರ ಹೇಗೆ ಭಾರಾತೀಯ..ಇದು ಎಂಥ ಘನವಾದ ಪಂಚ್ ಎಂದು ಹೇಳಿದ್ದಾರೆ.
ಅಜಯ್‌ ದೇವಗನ್‌ ವಿವಾದ: ‘ಹಿಂದಿ ರಾಷ್ಟ್ರ ಭಾಷೆ’ ಅಲ್ಲ, ಕನ್ನಡಿಗರ ಗರ್ಜನೆ

ಅನೇಕ್ ನಿರ್ದೇಶಕ ಅಭಿನವ್ ಸಿನ್ಹಾ ಸಾರಥ್ಯದಲ್ಲಿ ಮೂಡಿಬಂದ ಸಿನಿಮಾವಾಗಿದೆ. ಈ ಸಿನಿಮಾ ಈಶಾನ್ಯ ಭಾರತದ ಜನರು ಎದುರಿಸುತ್ತಿರುವ ಎದುರಿಸುತ್ತಿರುವ ಹಿಂಸೆ ಮತ್ತು ಅನ್ಯಾಯದ ಬಗ್ಗೆ ಕಾಳಜಿ ವಹಿಸುತ್ತದೆ. ಆಯುಷ್ಮಾನ್ ಖುರಾನ ಪೊಲೀಸ್ ಆಫೀಸರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈ ಸಿನಿಮಾ ಬಗ್ಗೆ ಮಾತನಾಡಿದ ಆಯುಷ್ಮಾನ್, ಅನೇಕ್ ನಿಜವಾಗಿಯೂ ಭಾರತೀಯನಾಗುವ ಮನೋಭಾವವನ್ನು ಅಚರಿಸುತ್ತಾರೆ. ಅನುಭವ್ ಸರ್ ಈ ಸಿನಿಮಾದ ಮೂಲಕ ಭಾವೋದ್ರಿಕ್ತ ಕಥೆ ಹೇಳುತ್ತಿದ್ದಾರೆ. ಪಾತ್ರಕ್ಕಾಗಿ ಜೀವತುಂಬಲು ನನ್ನ ಕೈಲಾದಷ್ಟು ಪ್ರಯತ್ನ ಮಾಡಿದ್ದೀನಿ. ಅತ್ಯುತ್ತಮ ಸಿನಿಮಾ ನೀಡಿದ್ದೀವಿ ಎಂದು ಹೇಳಿದ್ದಾರೆ.

click me!