ವಿಜಯ್ ದೇವರಕೊಂಡ ಜೊತೆ ಕರಾವಳಿ ಸುಂದರಿ ರೊಮ್ಯಾನ್ಸ್; ಇಲ್ಲಿದೆ ವಿವರ

By Shruiti G Krishna  |  First Published May 8, 2022, 7:24 PM IST

ಸೌತ್ ಸೆನ್ಸೇಷನ್ ಸ್ಟಾರ್ ವಿಜಯ್ ದೇವರಕೊಂಡ(Vijay Devarakonda) ಚಿತ್ರಕ್ಕೆ ನಾಯಕಿಯಾಗಿ ಪೂಜಾ ಹೆಗ್ಡೆ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಪೂಜಾ ಹೆಗ್ಡೆ ಮತ್ತು ನಿರ್ದೇಶಕ ಪುರಿ ಜಗನ್ನಾಥ್ ಕಾಂಬಿನಷನ್‌ನಲ್ಲಿ ಬರ್ತಿರುವ ಹೊಸ ಸಿನಿಮಾ ಜನಗಣಮನ ಸಿನಿಮಾಗೆ ಪೂಜಾ ನಾಯಕಿಯಾಗಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ.


ಟಾಲಿವುಡ್‌ನ ಪ್ರತಿಭಾವಂತ ನಟಿ ಪೂಜಾ ಹೆಗ್ಡೆ(Pooja Hegde) ಇತ್ತೀಚೆಗೆ ಸಾಲು ಸಾಲು ಸಿನಿಮಾಗಳ ಸೋಲಿನಿಂದ ಕಂಗಾಲಾಗಿದ್ದಾರೆ. ಆದರೂ ಸಿನಿಮಾಗಳ ಆಫರ್ ಕಡಿಮೆಯಾಗಿಲ್ಲ. ಇದೀಗ ಮತ್ತೊಂದು ಬಿಗ್ ಬಜೆಟ್ ಸಿನಿಮಾದಲ್ಲಿ ನಟಿಸಲು ಸಜ್ಜಾಗಿದ್ದಾರೆ ನಟಿ ಪೂಜಾ. ಹೌದು, ಸೌತ್ ಸೆನ್ಸೇಷನ್ ಸ್ಟಾರ್ ವಿಜಯ್ ದೇವರಕೊಂಡ(Vijay Devarakonda) ಚಿತ್ರಕ್ಕೆ ನಾಯಕಿಯಾಗಿ ಪೂಜಾ ಹೆಗ್ಡೆ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ.

ದಕ್ಷಿಣ ಭಾರತದಲ್ಲಿ ಸಾಲು ಸಾಲುಗಳಲ್ಲಿ ಬ್ಯುಸಿಯಾಗಿರುವ ಪೂಜಾ ಹೆಗ್ಡೆ ಒಂದು ಕಾಲದಲ್ಲಿ ಲಕ್ಕಿ ನಾಯಕಿ ಎಂದು ಗುರುತಿಸಿಕೊಂಡಿದ್ದರು. ಪೂಜಾ ಹೆಗ್ಡೆ ಎಲ್ಲಾ ಸಿನಿಮಾಗಳು ಸೂಪರ್ ಆಗಿದ್ದವು. ಇದೀಗ ಬ್ಯಾಕ್ ಟು ಬ್ಯಾಕ್ ಸೋಲಿನ ಸುಳಿಯಲ್ಲಿದ್ದಾರೆ. ದಕ್ಷಿಣದಲ್ಲಿ ಪೂಜಾ, ಬೊಟ್ಟಬೊಮ್ಮ ಆಗಿ ಸೂಪರ್ ಸಕ್ಸಸ್ ಕಂಡಿದ್ರು. ಇತ್ತೀಚಿಗೆ ನಟಿಸಿದ `ರಾಧೆ ಶ್ಯಾಮ್’,`ಬೀಸ್ಟ್’ ಮತ್ತು `ಆಚಾರ್ಯ’ ಚಿತ್ರಗಳು ಹೀನಾಯ ಸೋಲು ಕಂಡಿವೆ. ಬಾಕ್ಸ್ ಆಫೀಸ್‌ನಲ್ಲಿ ಕಲೆಕ್ಷನ್ ಮಾಡಲು ವಿಫಲವಾಗಿವೆ. ಇದೀಗ ಪೂಜಾ ವಿಜಯ್ ದೇವರಕೊಂಡ ಜೊತೆ ರೊಮ್ಯಾನ್ಸ್ ಮಾಡಲು ಸಿದ್ಧರಾಗಿದ್ದಾರೆ.

Tap to resize

Latest Videos

ಪೂಜಾ ಹೆಗ್ಡೆ ಮತ್ತು ನಿರ್ದೇಶಕ ಪುರಿ ಜಗನ್ನಾಥ್ ಕಾಂಬಿನಷನ್‌ನಲ್ಲಿ ಬರ್ತಿರುವ ಹೊಸ ಸಿನಿಮಾ ಜನಗಣಮನ ಸಿನಿಮಾಗೆ ಪೂಜಾ ನಾಯಕಿಯಾಗಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ವಿಜಯ್ ದೇವರಕೊಂಡ ಹೊಸ ಸಿನಿಮಾದ ಬಗ್ಗೆ ಮೇ 9ರಂದು ಅಂದರೆ ವಿಜಯ್ ದೇವರಕೊಂಡ ಹುಟ್ಟುಹಬ್ಬದ ದಿನ ಬಹಿರಂಗ ಪಡಿಸುವ ಸಾಧ್ಯತೆ ಇದೆ.

ಸಾಲು ಸಾಲು ಸೋಲಿನಿಂದ ಕಂಗಾಲಾಗಿ ಕಾಪು ದೇವಸ್ಥಾನಕ್ಕೆ ಬಂದ್ರಾ ಪೂಜಾ ಹೆಗ್ಡೆ?

ಜನಗಣಮನ ಸಿನಿಮಾ ಇತ್ತೀಚಿಗಷ್ಟೆ ಅನೌನ್ಸ್ ಮಾಡಲಾಗಿದೆ. ಈ ಸಿನಿಮಾದಲ್ಲಿ ವಿಜಯ್ ಆರ್ಮಿ ಆಫೀಸರ್ ಆಗಿ ಕಾಣಿಸಿಕೊಳ್ಲುತ್ತಿದ್ದಾರೆ. ಮೊದಲ ಬಾರಿಗೆ ವಿಜಯ್ ಆರ್ಮಿ ಅಧಿಕಾರಿ ಪಾತ್ರದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಈ ಸಿನಿಮಾಗೆ ಚಾರ್ಮಿ ಕೌರ್ ಬಂಡವಾಳ ಹೂಡುತ್ತಿದ್ದಾರೆ. ಲಿಗರ್ ಸಿನಿಮಾ ಬಳಿಕ ವಿಜಯ್ ಮತ್ತು ಪುರಿ ಜಗನ್ನಾಥ್ ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ 2ನೇ ಸಿನಿಮಾ ಇದಾಗಿದೆ. ಇದೀಗ ಪೂಜಾ ಎಂಟ್ರಿ ಕೊಟ್ಟಿರುವುದು ಸಿನಿಮಾದ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗಿದೆ. ಈ ಸಿನಿಮಾ ಮೂಲಕ ಪೂಜಾ ಮತ್ತೆ ಗೆಲುವಿನ ಟ್ರ್ಯಾಕ್‌ಗೆ ಮರಳುತ್ತಾರಾ ಎಂದು ಕಾದು ನೋಡಬೇಕು.

ಒಂದೇ ಒಂದು ಐಟಂ ಸಾಂಗ್‌ಗೆ 1 ಕೋಟಿ ರೂ ಸಂಭಾವನೆ ಪಡೆದ್ರಾ ಸೌತ್‌ನ ಈ ಬೆಡಗಿ.?

ಇತ್ತೀಚಿಗಷ್ಟೆ ಸೌತ್ ಸುಂದರಿ ಪೂಜಾ ಹೆಗ್ಡೆ ಉಡುಪಿ ಜಿಲ್ಲೆಯ ಕಾಪು ಮಾರಿ ಗುಡಿ ಗೆ ಇತ್ತಿಚಿಗಷ್ಟೇ ಭೇಟಿ ನೀಡಿದರು. ಕಾಪು ಮಾರಿಯಮ್ಮನ ಅಪಾರ ಭಕ್ತೆ ಯಾದ ಪೂಜಾ ಹೆಗ್ಡೆ ಈ ಹಿಂದೆಯೂ ಹಲವು ಬಾರಿ ಬಂದು ದೇವಿಯ ದರ್ಶನ ಪಡೆದಿದ್ದಾರೆ. ಮುಂಬೈನಲ್ಲಿ ಹುಟ್ಟಿ ಬೆಳೆದರೂ, ಪೂಜಾ ಹೆಗ್ಡೆಯ ಮೂಲ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕು.ಎಷ್ಟೇ ಪ್ರಖ್ಯಾತಿ ಗಳಿಸಿದ್ರು ಆಗಾಗ ತಮ್ಮ ಪೂರ್ವಜರ ಊರಿನಲ್ಲಿ ಕಾಣಿಸಿಕೊಳ್ತಾರೆ ಪೂಜಾ. ಅವಕಾಶ ಸಿಕ್ಕಾಗಲೆಲ್ಲ ಕಾಪುವಿಗೆ ಆಗಮಿಸಿ ಹೊಸ ಮಾರಿಗುಡಿಗೆ ಭೇಟಿಕೊಟ್ಟು ದೇವಿಯ ದರ್ಶನ ಮಾಡುತ್ತಾ ಬಂದಿದ್ದಾರೆ. ಇಂದು ಕೂಡ ಕುಟುಂಬ ಸಹಿತರಾಗಿ ಬಂದು ಬಹಳ ಹೊತ್ತು ಮಾರಿಗುಡಿಯಲ್ಲಿ ಕಳೆದಿದ್ದರು.

 

 

click me!