
ಆಕೆಯೇನೋ ಸುಂದರ ನಟಿಯೇ. ಬಾಲಿವುಡ್‌ನಲ್ಲಿ ಕೆಲವು ಸಿನಿಮಾ ಆಫರ್‌ಗಳೂ ಬಂದವು. ಸೂಪರ್ ಸ್ಟಾರ್ ಅಮೀರ್ ಖಾನ್ ಜೊತೆಗೆ ಒಂದು ದೊಡ್ಡ ಫಿಲಂನಲ್ಲಿ ಹೀರೋಯಿನ್ ಆಗಿಯೂ ನಟಿಸಿದಳು. ಆದರಲ್ಲಿ ಖ್ಯಾತಿಯನ್ನೂ ಪಡೆದಳು. ಆದರೆ ಅದರ ಬಳಿಕ ಆದದ್ದೆಲ್ಲ ಪತನವೇ. ದುರದೃಷ್ಟ ಆಕೆಯನ್ನು ಅಟ್ಟಿಸಿಕೊಂಡು ಬಂತು. ಅವಳ ಹೆಸರು ಆಯೇಷಾ ಝಲ್ಕಾ.
ಕುರ್ಬಾನ್ (1991), ಜೋ ಜೀತಾ ವೋಹಿ ಸಿಕಂದರ್ (1992), ಖಿಲಾಡಿ (1992), ಮತ್ತು ಮೆಹರ್ಬಾನ್ (1993) ಮುಂತಾದ ಚಿತ್ರಗಳಲ್ಲಿ ಆಯೇಷಾ ಬಾಲಿವುಡ್‌ನ ಹಲವು ದೊಡ್ಡ ಸೂಪರ್‌ಸ್ಟಾರ್‌ಗಳೊಂದಿಗೆ ನಟಿಸಿದಳು. ಆದರೂ ಅವಳ ವೃತ್ತಿಜೀವನದ ಉತ್ತುಂಗದಲ್ಲಿದ್ದಾಗಲೇ ಆಕೆ ಅನಿರೀಕ್ಷಿತವಾಗಿ ಚಲನಚಿತ್ರಗಳನ್ನು ತೊರೆದಳು. ಈ ಸುಂದರ ನಟಿ 1980ರ ದಶಕದ ಉತ್ತರಾರ್ಧದಲ್ಲಿ ತಮ್ಮ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸಿದಳು. 1991ರಲ್ಲಿ ಸಲ್ಮಾನ್ ಖಾನ್ ಜೊತೆ ನಟಿಸಿದ ಕುರ್ಬಾನ್ ಚಿತ್ರದೊಂದಿಗೆ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದಳು.
1992ರಲ್ಲಿ ಆಮಿರ್ ಖಾನ್ ಜೊತೆ ನಟಿಸಿದ ಚಿತ್ರದಲ್ಲಿ ನಿಜವಾದ ಮನ್ನಣೆಯನ್ನು ಪಡೆದಳು. 90ರ ದಶಕದ ಈ ನಟಿ ನಂತರ ಒಂದು ತಪ್ಪು ಚಿತ್ರವನ್ನು ಆಯ್ಕೆ ಮಾಡಿದ್ದಕ್ಕಾಗಿ ಭಾರೀ ಬೆಲೆಯನ್ನು ತೆರಬೇಕಾಗಿ ಬಂತು. ಅದು ಅಂತಿಮವಾಗಿ ಆಕೆಯ ವೃತ್ತಿಜೀವನವನ್ನೇ ಹಳಿ ತಪ್ಪಿಸಿತು. ಒಂದು ಕಾಲದಲ್ಲಿ ಸಲ್ಮಾನ್ ಖಾನ್, ಅಕ್ಷಯ್ ಕುಮಾರ್ ಮತ್ತು ಅಮೀರ್ ಖಾನ್‌ರಂತಹ ಸೂಪರ್‌ಸ್ಟಾರ್‌ಗಳ ಎದುರು ನಾಯಕಿಯಾಗಿದ್ದ ಅವಳನ್ನು ಶೀಘ್ರದಲ್ಲೇ ಸೈಡ್ ರೋಲ್‌ಗಳಿಗೆ ಇಳಿಸಲಾಯಿತು. ಉದ್ಯಮದ ಸೂಪರ್‌ಸ್ಟಾರ್ ಮಿಥುನ್ ಚಕ್ರವರ್ತಿ ಅವರ ವೃತ್ತಿಜೀವನವೂ ಸಹ ಅದೇ ಚಿತ್ರದಿಂದ ಬಹುತೇಕ ಧರೆಗಿಳಿಯಿತು.
ಆಯೇಷಾ ತನ್ನ ವೃತ್ತಿಜೀವನವನ್ನು ಮೊದಲೇ ಪ್ರಾರಂಭಿಸಿದ್ದರೂ 1992ರ ಸೂಪರ್‌ಹಿಟ್ ಜೋ ಜೀತಾ ವೋಹಿ ಸಿಕಂದರ್ ಚಿತ್ರದೊಂದಿಗೆ ಮನೆಮಾತಾದಳು. ಇದರಲ್ಲಿ ಆಕೆ ಆಮಿರ್ ಖಾನ್ ಪ್ರೇಯಸಿಯಾಗಿ ನಟಿಸಿದಳು. ಈ ಚಿತ್ರ ಆಕೆಯ ಅತ್ಯಂತ ಸ್ಮರಣೀಯ ಕೃತಿಗಳಲ್ಲಿ ಒಂದಾಗಿದೆ. ಆಮಿರ್ ಅವರೊಂದಿಗಿನ ಆಕೆಯ ತೆರೆಯ ಮೇಲಿನ ಕೆಮಿಸ್ಟ್ರಿ ಕೂಡ ವ್ಯಾಪಕವಾಗಿ ಮೆಚ್ಚುಗೆ ಪಡೆಯಿತು.
ಕೊಹ್ರಾ (1993) ಮತ್ತು ಅನಾಮ್ (1992) ಚಿತ್ರಗಳಲ್ಲಿ ಸಹನಟನಾಗಿದ್ದ ಅರ್ಮಾನ್ ಕೊಹ್ಲಿಯೊಂದಿಗೆ ಆಕೆ ಡೇಟಿಂಗ್ ಮಾಡುತ್ತಿದ್ದಳು. ನಂತರ ಇಬ್ಬರಿಗೂ ಬ್ರೇಕಪ್ ಆಯ್ತು. ಈ ಬ್ರೇಕಪ್ ಆಕೆಯ ಹೃದಯವನ್ನೂ ಒಡೆಯಿತು. ಹೊಸ ಯೋಜನೆಗಳಿಗೆ ಸಹಿ ಹಾಕುವುದನ್ನು ನಿಲ್ಲಿಸಿದಳು. ವೃತ್ತಿಜೀವನದ ಒಂದು ಹಂತದಲ್ಲಿ ಆಯೇಷಾ ʼದಲಾಲ್ʼ ಎಂಬ ಚಿತ್ರದಲ್ಲಿ ನಟಿಸಿದಳು. ಇದರಲ್ಲಿ ಸಾಕಷ್ಟು ಹಸಿಬಿಸಿ ದೃಶ್ಯಗಳಿದ್ದವು. ಅದು ವಿವಾದಾತ್ಮಕವಾಯಿತು.
ಶಾರುಖ್ ಮದುವೆಯಾಗಿ ಇಷ್ಟ ವರ್ಷದ ನಂತರವೂ ಗೌರಿ ಯಾಕೆ ಮತಾಂತರ ಆಗಲಿಲ್ಲ?
ದಲಾಲ್ ಸಿನಿಮಾ ನಿರ್ಮಾಪಕರು ಕೆಲವು ತೀರಾ ಹಾಟ್ ದೃಶ್ಯಗಳಿಗೆ ಈಕೆಯ ಬಾಡಿ ಡಬಲ್ ಅನ್ನು ಬಳಸಿಕೊಂಡರು. ಅದು ಆಕೆಯ ವೃತ್ತಿಜೀವನದ ಮೇಲೆ ನಕಾರಾತ್ಮಕ ಪರಿಣಾಮ ಬೀರಿತು. ಆಯೇಷಾ ನಂತರ ಆ ಚಲನಚಿತ್ರ ನಿರ್ಮಾಪಕರ ವಿರುದ್ಧ ದೂರು ದಾಖಲಿಸಿದಳು. ಈ ವಿವಾದದ ನಂತರ ಆಕೆಯ ವೃತ್ತಿಜೀವನ ಕುಸಿತ ಕಂಡಿತು. ಅಲ್ಲಿಂದ ಬಳಿಕ ಆಕೆ ಹೆಚ್ಚಾಗಿ ಬಿ-ಗ್ರೇಡ್ ಚಲನಚಿತ್ರಗಳ ಆಫರ್‌ಗಳನ್ನು ಸ್ವೀಕರಿಸಲು ಪ್ರಾರಂಭಿಸಿದಳು. ದಲಾಲ್ ಚಿತ್ರದಲ್ಲಿ ಮಿಥುನ್ ಚಕ್ರವರ್ತಿ ಹೀರೋ ಆಗಿದ್ದ. ಈ ಚಿತ್ರವು ಅವನ ವೃತ್ತಿಜೀವನದ ಮೇಲೂ ನಕಾರಾತ್ಮಕ ಪರಿಣಾಮ ಬೀರಿತು. 1993 ಮತ್ತು 1996ರ ನಡುವೆ ಮಿಥುನ್ ಅವರ ಬಹುತೇಕ ಎಲ್ಲಾ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದವು. ಇದು ಅವರ ಯಶಸ್ವಿ ವೃತ್ತಿಜೀವನಕ್ಕೆ ಕೊನೆಯ ಹಂತವನ್ನು ಗುರುತಿಸಿತು.
ಇಂಥ ಆಯೇಷಾ ಝುಲ್ಕಾ ಒಂದು ಹಂತದಲ್ಲಿ ನಾನಾ ಪಾಟೇಕರ್ ಜೊತೆಗೆ ಅಫೇರ್ ಇಟ್ಟುಕೊಂಡಿದ್ದಳಂತೆ. ಅದೇ ಸಂದರ್ಭದಲ್ಲಿ ಮನಿಶಾ ಕೊಯಿರಾಲಾಗೂ ನಾನಾ ಪಾಟೇಕರ್ ಜೊತೆಗೆ ಅಫೇರ್ ಇತ್ತು. ಒಂದು ಸಲ ಯಾವುದೋ ಒಂದು ಫಿಲಂ ಶೂಟಿಂಗ್ ವೇಳೆ ನಾನಾ ಮತ್ತು ಅಯೇಷಾ ಒಟ್ಟಿಗೆ ಆಪ್ತವಾಗಿದ್ದುದನ್ನು ಮನಿಶಾ ನೋಡಿದಳು. ಇದನ್ನು ಕಂಡು ರೇಗಿ ಕೂಗಾಡಿ ಆಯೇಷಾಗೆ ನಿಂದಿಸಿದಳು. ನಂತರ ಮನಿಶಾ ಕೂಡ ನಾನಾನಿಂದ ದೂರವಾದಳು ಎಂಬುದು ಗಾಸಿಪ್.
ರೊಮ್ಯಾನ್ಸ್ ಬೇಡ, ಕಿಸ್ಸಿಂಗ್ ಸೀನ್ ಬೇಡ.. ಕಿಂಗ್ ನಾಗಾರ್ಜುನಗೆ ಕಂಡೀಷನ್ ಹಾಕಿದ್ರು ಸ್ಟಾರ್ ನಟಿ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.