
ವರದಿ: ಅಮೀತ್ ದೇಸಾಯಿ, ಏಷ್ಯಾನೆಟ್ ಸುವರ್ಣನ್ಯೂಸ್
ರಶ್ಮಿಕಾ ಮಂದಣ್ಣ ಬಳಿಕ ಸೌತ್ ಸಿನಿ ದುನಿಯಾದಲ್ಲಿ ಸಖತ್ ಬ್ಯುಸಿಯಾಗ್ತಿರೋ ಮತ್ತೊಬ್ಬ ನಟಿಮಣಿ ಅಂದ್ರೆ ರುಕ್ಮಿಣಿ ವಸಂತ್. ಸದ್ಯ ರುಕ್ಕು ಕೈಯಲ್ಲಿ ಸಾಲು ಸಾಲು ಸಿನಿಮಾಗಳಿವೆ. ಈ ನಡುವೆ ವಿಜಯ್ ದೇವರಕೊಂಡ ನಟನೆಯ ಹೊಸ ಸಿನಿಮಾದಲ್ಲಿ ನಟಿಸೋ ಆಫರ್ ರುಕ್ಮಿಣಿಗೆ ಬಂದಿತ್ತು. ಆದ್ರೆ ಇದಕ್ಕೆ ರುಕ್ಕು ನೋ ಅಂದಿದ್ದಾರೆ. ರಶ್ಮಿಕಾ ಬಾಯ್ ಫ್ರೆಂಡ್ ಸಿನಿಮಾಗೆ ರುಕ್ಕು ನೋ ಎಂದಿದ್ದೇಕೆ..? ಆ ಕುರಿತ ಮಸಾಲ ಸ್ಟೋರಿ ಇಲ್ಲಿದೆ ನೋಡಿ.
ರಶ್ಮಿಕಾ ಬಾಯ್‌ಫ್ರೆಂಡ್ ಜೊತೆ ನಟಿಸಲ್ಲ ಎಂದಿದ್ದೇಕೆ ರುಕ್ಕು?
ಸಪ್ತಸಾಗರದಾಚೆ ಎಲ್ಲೋ ಚೆಲುವೆ ರುಕ್ಮಿಣಿ ವಸಂತ್ ಕುರಿತ ತಾಜಾ ಕಹಾನಿ ಇದು. ಅಸಲಿಗೆ ಎರಡು ಭಾಗಗಳ ಸಪ್ತಸಾಗರದಾಚೆ ಎಲ್ಲೋ ಮೂವಿ ರುಕ್ಮಿಣಿಗೆ ಸಿಕ್ಕಾಪಟ್ಟೆ ಹೆಸರು ತಂದುಕೊಟ್ತು. ಕನ್ನಡಿಗರ ಜೊತೆಗೆ ಹೆಚ್ಚಾಗಿ ಟಾಲಿವುಡ್, ಕಾಲಿವುಡ್ ಸಿನಿಪ್ರಿಯರು ಕೂಡ ಪುಟ್ಟಿನ ಮೆಚ್ಚಿಕೊಂಡ್ರು. ಸೋ ರುಕ್ಕು ಕೈಯಲ್ಲೀಗ ಸಾಲು ಸಾಲು ಪ್ರಾಜೆಕ್ಟ್ ಇವೆ.
ನಿನಗೆ ಕನಿಕರ ಇಲ್ವಾ? ವಿಜಯ್ ದೇವರಕೊಂಡಗೆ ಬೈದ್ರು ರಶ್ಮಿಕಾ ಫ್ಯಾನ್ಸ್
ಕಳೆದ ವರ್ಷ ರುಕ್ಮಿಣಿ ನಟನೆಯಲ್ಲಿ ಬಂದ ಬಘೀರ ಮತ್ತು ಭೈರತಿ ರಣಗಲ್ ಎರಡೂ ಚಿತ್ರಗಳೂ ಸೂಪರ್ ಹಿಟ್ ಅದ್ವು. ಜೊತೆಗೆ ಅಪ್ಪುಡೋ ಇಪ್ಪುಡೋ ಎಪ್ಪುಡೋ ಸಿನಿಮಾದಲ್ಲಿ ನಟಿಸೋ ಮೂಲಕ ಟಾಲಿವುಡ್ಗೆ ಕಾಲಿಟ್ಟ ರುಕ್ಮಿಣಿ ಟಾಲಿವುಡ್ನಲ್ಲೂ ಸಿಕ್ಕಾಪಟ್ಟೆ ಚಾನ್ಸ್ ಗಿಟ್ಟಿಸಿಕೊಂಡ್ರು.
ಸದ್ಯ ರುಕ್ಮಿಣಿ ವಸಂತ್ ಕೈಯಲ್ಲಿ ವಿಜಯ್ ಸೇಥುಪತಿ ನಟನೆಯ ಏಸ್ ಮತ್ತು ಶಿವಕಾರ್ತಿಕೇಯನ್ ನಟನೆಯ ಮದ್ರಾಸಿ ಚಿತ್ರಗಳಿವೆ. ಇವುಗಳ ನಂತರ ರುಕ್ಮಿಣಿಗೆ ವಿಜಯ್ ದೇವರಕೊಂಡ ಜೊತೆಗೆ ರೌಡಿ ಜನಾರ್ಧನ ಸಿನಿಮಾದಲ್ಲಿ ನಟಿಸೋ ಚಾನ್ಸ್ ಸಿಕ್ಕಿತ್ತು. ಆದ್ರೆ ರೌಡಿ ಜೊತೆ ನಟಿಸೋಕೆ ರುಕ್ಕು ನೋ ಅಂದಿದ್ದಾರೆ.
'ದಿಲ್' ರಾಜು ನಿರ್ಮಾಣದ, ರವಿ ಕಿಶನ್ ಕೊಲ ನಿರ್ದೇಶನದ , ವಿಜಯ್ ದೇವರಕೊಂಡ ನಟನೆಯ ರೌಡಿ ಜನಾರ್ಧನ ಕೂಡ ಬಿಗ್ ಬಜೆಟ್ ಸಿನಿಮಾ. ಆದ್ರೆ ರುಕ್ಮಿಣಿ ಈ ಪ್ರಾಜೆಕ್ಟ್ನ ರಿಜೆಕ್ಟ್ ಮಾಡಿದ್ದಾರೆ. ನಿಮಗೆಲ್ಲಾ ಗೊತ್ತಿರೋ ಹಾಗೆ ವಿಜಯ್ ದೇವರಕೊಂಡ ರಶ್ಮಿಕಾ ಮಂದಣ್ಣ ಬಾಯ್‌ಫ್ರೆಂಡ್. ಇದೇ ಕಾರಣಕ್ಕೇನಾದ್ರೂ ರುಕ್ಕು ಈ ಪ್ರಾಜೆಕ್ಟ್ನಿಂದ ಹಿಂದೆ ಸರಿದರಾ ಅಂತ ಚರ್ಚೆಯಾಗ್ತಾ ಇದೆ.
'ನಾನೊಬ್ಬರಿಗೆ ಪಾರ್ಟ್ನರ್ ಆಗಿದ್ದೇನೆ': ವಿಜಯ್ ದೇವರಕೊಂಡ ಬಗ್ಗೆ ರಶ್ಮಿಕಾ ಮಂದಣ್ಣ ಮಾತಾಡಿದ್ರಾ?
ರೌಡಿಗೆ ರುಕ್ಮಿಣಿ ನೋ ಅನ್ನೋಕೆ ರಕ್ಷಿತ್ ಅಲ್ಲ ಕಾರಣ!
ರುಕ್ಮಿಣಿ ನಟ ರಕ್ಷಿತ್ ಜೊತೆಗೆ ಸಲುಗೆಯಿಂದಿದ್ದಾರೆ ಅದೇ ಕಾರಣಕ್ಕೆ ದೇವರಕೊಂಡ ಜೊತೆಗೆ ನಟನೆಗೆ ಒಪ್ಪಿಲ್ಲ ಅಂತ ಅಂದುಕೊಂಡ್ರೆ ತಪ್ಪು. ಅಸಲಿಗೆ ರುಕ್ಮಿಣಿ ಬಹುಕೋಟಿ ವೆಚ್ಚದ ಎನ್.ಟಿ.ಆರ್ ನೀಲ್ ಸಿನಿಮಾಗೆ ಆಯ್ಕೆಯಾಗಿದ್ದಾರೆ. ಈ ಸಿನಿಮಾ ಮುಗಿಯೋದಕ್ಕೂ ಮುನ್ನ ಬೇರ್ಯಾವ ಪ್ರಾಜೆಕ್ಟ್ ಕೂಡ ಮಾಡೋದು ಬೇಡ ಅಂತ ಪ್ರಶಾಂತ್ ನೀಲ್ ಕಂಡೀಷನ್ ಹಾಕಿದ್ದಾರಂತೆ. ಅದೇ ಕಾರಣಕ್ಕೆ ರುಕ್ಕು ರೌಡಿ ಜನಾರ್ಧನ ಸಿನಿಮಾವನ್ನ ಒಪ್ಪಿಕೊಂಡಿಲ್ಲವಂತೆ.
ಒಟ್ಟಾರೆ ರುಕ್ಮಿಣಿಯನ್ನ ಭವಿಷ್ಯದಲ್ಲಿ ರಶ್ಮಿಕಾ ಪ್ರತಿಸ್ಪರ್ಧಿ ಅಂತ ಹೇಳಲಾಗ್ತಾ ಇದೆ. ಸೋ ರುಕ್ಕು ಆಯ್ಕೆ ಮಾಡ್ತಿರೋ ಪ್ರಾಜೆಕ್ಟ್ಗಳು, ಕೈ ಬಿಡ್ತಾ ಇರೋ ಸಿನಿಮಾಗಳೂ ಎಲ್ಲವೂ ಕೌಂಟ್ ಆಗ್ತಾ ಇವೆ. ಸದ್ಯಕ್ಕೆ ರುಕ್ಕು ಕೈ ಬಿಟ್ಟಿರೋ ರೌಡಿ ಜನಾರ್ಧನ ಸಿನಿಮಾದಲ್ಲಿ ವಿಜಯ್ ಜೊತೆ ನಟಿಸೋ ನಟಿ ಯಾರು? ಕೊನೆಗೆ ರಶ್ಮಿಕಾನೇ ರೌಡಿಗೆ ಜೊತೆಯಾಗ್ತಾರಾ ಎಂಬುದನ್ನು ಕಾದುನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.