
ಕಾಸ್ಟಿಂಗ್ ಕೌಚ್, ಚಿತ್ರರಂಗದಲ್ಲಿ ನಟಿಮಣಿಯರು ಎದುರಿಸುತ್ತಿರುವ ದೊಡ್ಡ ಸಮಸ್ಯೆ. ಇದು ಇಂದು ನಿನ್ನೆಯದಲ್ಲ, ತುಂಬಾ ಹಿಂದಿನಿಂದನೂ ನಟಿಯರು ಎದುರಿಸುತ್ತಿರುವ ಸಮಸ್ಯೆಯಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಕಾಸ್ಟಿಂಗ್ ಕೌಚ್ ವಿಚಾರಗಳು ಬಹಿರಂಗವಾಗುತ್ತಿವೆ. ನಟಿಯರು ಧೈರ್ಯಮಾಡಿ ಬಹಿರಂಗ ಪಡಿಸುತ್ತಿದ್ದಾರೆ. ತನಗಾದ ಕಹಿ ಘಟನೆಯನ್ನು ಸಾರ್ವಜನಿಕವಾಗಿ ಬಿಚ್ಚಿಡುತ್ತಿದ್ದಾರೆ. ಈ ವಿಚಾರವಾಗಿ ಮಿ ಟೂ ಅಭಿಯಾನ ಕೂಡ ಪ್ರಾರಂಭವಾಗಿದ್ದು ಅನೇಕ ನಟಿಯರು ಕಾಸ್ಟಿಂಗ್ ಕೌಚ್ ವಿಚಾರ ಬಿಚ್ಚಿಟ್ಟು ಖ್ಯಾತ ನಿರ್ದೇಶಕ ಮತ್ತು ನಿರ್ಮಾಪಕರ ಕರಾಳ ಮುಖ ಬಯಲಿಗೆಳೆದಿದ್ದರು.
ಇದೀಗ ಮತ್ತೋರ್ವ ಖ್ಯಾತ ನಟಿ ಕಾಸ್ಟಿಂಗ್ ಕೌಚ್ ಅನುಭವವನ್ನು ಬಹಿರಂಗ ಪಡಿಸಿದ್ದಾರೆ. ಅದು ಮತ್ಯಾರು ಅಲ್ಲ ಬಹುಭಾಷೆಯಲ್ಲಿ ನಟಿಸಿರುವ ಹಿರಿಯ ನಟಿ ಆಮಿನಿ. ಕನ್ನಡ ಸೇರಿದಂತೆ ದಕ್ಷಿಣ ಭಾರತದ ಎಲ್ಲಾ ಭಾಷೆಯಲ್ಲೂ ಮಿಂಚಿರುವ ನಟಿ ಆಮನಿ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿಗೆ ಯೂಟ್ಯೂಬ್ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಕಾಸ್ಟಿಂಗ್ ಕೌಚ್ ಇಂದಿನದಲ್ಲ ಅಂದಿನಿಂದನೂ ಇದೆ ಎಂದು ಹೇಳಿದ್ದಾರೆ.
ನಟಿಯಗಬೇಕು ಎನ್ನುವುದು ನನ್ನ ದೊಡ್ಡ ಕನಸಾಗಿತ್ತು. ಕನಸನ್ನು ನನಸು ಮಾಡಿಕೊಳ್ಳಲು ತಾನು ತುಂಬಾ ಶ್ರಿಮಿಸಿದ್ದೇನೆ ಎಂದು ಹೇಳಿದ್ದಾರೆ. ಜೊತೆಗೆ ಕಹಿ ಅನುಭವವನ್ನು ಬಹಿರಂಗ ಪಡಿಸಿದರು. ನಟಿಯಾಗಿ ಎಂಟ್ರಿಯಾಗಲು ಸಾಕಷ್ಟು ಅಡೆತಡೆಗಳನ್ನು ಎದುರಿಸಿದ್ದೆ ಎಂದು ಹೇಳಿದ್ದಾರೆ. ಆಡಿಷನ್‌ಗೆ ಹೋದಾಗ ಯಾವ ರೀತಿ ನಡೆದುಕೊಳ್ಳುತ್ತಾರೆ, ಕೆಲವು ಸಂಸ್ಥೆಗಳಿಂದ ರಿಜೆಕ್ಟ್ ಆಗಿದ್ದು ಯಾಕೆ ಎಂದು ಆಮನಿ ಬಿಚ್ಚಿಟ್ಟಿದ್ದಾರೆ.
ಅನುಷ್ಕಾ ಶೆಟ್ಟಿಯಿಂದ ನಯನತಾರ ವರೆಗೆ ಕಾಸ್ಟಿಂಗ್ ಕೌಚ್ ಬಗ್ಗೆ ಬಾಯಿಬಿಟ್ಟ ದಕ್ಷಿಣದ ನಟಿಯರು!
ಅನೇಕ ವರ್ಷಗಳ ಬಳಿಕ ಆಮನಿ ಈ ಬಗ್ಗೆ ಬಹಿರಂಗ ಪಡಿಸಿದ್ದಾರೆ. ಆಡಿಷನ್ ನೀಡಿದ ಬಳಿಕವೂ ಅನೇಕ ನಿರ್ಮಾಣ ಸಂಸ್ಥೆ ಇನ್ನೂ ಸ್ವಲ್ಪ ಸಮಯ ಕಾಯುವಂತೆ ಹೇಳುದ್ದರು, ಬಳಿಕ ಕರೆಯುತ್ತಿದ್ದರು ಇದೆಲ್ಲ ಮೊದಲು ಅರ್ಥವಾಗುತ್ತಿರಲಿಲ್ಲ ಆದರೆ ಕೆಲವು ದಿನಗಳ ಬಳಿಕ ಅವರ ನಿಜವಾದ ಉದ್ದೇಶ ಏನು ಎಂದು ಅರ್ಥವಾಯಿತು ಅಂತ ಹೇಳಿದರು.
ನಿರ್ಮಾಣ ಸಂಸ್ಥೆಯಿಂದ ಕರೆ ಮಾಡಿ ನಿರ್ದೇಶಕರು ಭೇಟಿಯಾಗಬೇಕಂತೆ ಎಂದು ಹೇಳಿದರು. ಕಾರಣ ಕೇಳಿದೆ ಮೇಕಪ್ ಟೆಸ್ಟ್ ಎಂದರು. ಸರಿ ಎಂದು ಹೋದೆ. ತನ್ನ ತಾಯಿಯನ್ನು ಜೊತೆಯಲ್ಲಿ ಕರೆದುಕೊಂಡು ಹೋದೆ. ತಾಯಿ ಜೊತೆ ಬರುವುದು ಬೇಡ ಎಂದರು. ಒಂಟಿಯಾಗಿ ಬಂದು ಮೇಕಪ್ ಟೆಸ್ಟ್ ಕೊಡಬೇಕು ಎಂದು ಹೇಳಿದರು. ಆದರೆ ನಾನು ತಾಯಿ ಜೊತೆಯೇ ಬರುವುದು ಎಂದು ಹೇಳಿದೆ. ಅದನ್ನು ಅವರು ತಿರಸ್ಕರಿಸಿದರು. ಆ ಸಿನಿಮಾದ ಅವಕಾಶ ಕಳೆದುಕೊಂಡೆ' ಎಂದು ಹೇಳಿದರು.
ಆ ಡರ್ಟಿ ಜಾಗಕ್ಕೆ ಕರೆದ್ರು, ಬಿ ಸೆಕ್ಸಿ ಎಂದರು; ಬಾಲಿವುಡ್ ಕರಾಳ ಮುಖ ಬಿಚ್ಚಿಟ್ಟ ನಟ ರಣ್ವೀರ್ ಸಿಂಗ್
ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹೊಸದೇನಲ್ಲ. ಈ ಹಿಂದೆಯೂ ಅನೇಕ ನಟಿಯರು ಇದನ್ನು ಎದುರಿಸಿದ್ದಾರೆ. ಇಂದಿಗೂ ಸಹ ಈ ಸಮಸ್ಯೆ ಅವರ ವೃತ್ತಿಜೀವನದ ಮೇಲೆ ಪರಿಣಾಮ ಬೀರುತ್ತಿದೆ. ಕೆಲವರು ವೃತ್ತಿಜೀವನಕ್ಕಾಗಿ ರಾಜಿ ಮಾಡಿಕೊಂಡರೆ, ಇನ್ನೂ ಕೆಲವು ನಾಯಕಿಯರು ಮಣಿಯುವುದಿಲ್ಲ. ಈ ಸಮಸ್ಯೆಗೆ ಯಾವಾಗಾ ಶಾಶ್ವತ ಪರಿಹಾರ ಸಿಗುತ್ತೆ ಎಂದು ನಟಿಯರು ಕಾಯುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.