ಕೆ.ಎಲ್ ರಾಹುಲ್ ಜೊತೆ ಒಂದೇ ಮನೆಗೆ ಶಿಫ್ಟ್ ಆದ್ರಾ ಎಂದಿದ್ದಕ್ಕೆ ಗರಂ ಆದ ಅತಿಯಾ; Reply ಹೀಗಿತ್ತು

By Shruiti G Krishna  |  First Published May 7, 2022, 1:55 PM IST

ಕೆ ಎಲ್ ರಾಹುಲ್ ಜೊತೆ ಒಂದೇ ಮನೆಗೆ ಶಿಫ್ಟ್ ಆಗಿರುವ ವದಂತಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಅತಿಯಾ ಶೆಟ್ಟಿ ಫುಲ್ ಗರಂ ಆಗಿದ್ದರು. ಈ ವಿಚಾರವನ್ನು ತಳ್ಳಿ ಹಾಕಿರುವ ನಟಿ ಹೊಸ ಮನೆಗೆ ಹೋಗುತ್ತಿರುವುದು ನಿಜ ಆದರೆ ನನ್ನ ಹೆತ್ತವರ ಜೊತೆ ಎಂದು ಹೇಳಿದ್ದಾರೆ.


ಟೀಂ ಇಂಡಿಯಾ ಆಟಗಾರ ಕೆಎಲ್ ರಾಹುಲ್(KL Rahul ) ಮತ್ತು ಬಾಲಿವುಡ್ ಸ್ಟಾರ್ ಸುನಿಲ್ ಶೆಟ್ಟಿ ಪುತ್ರಿ ಅತಿಯಾ ಶೆಟ್ಟಿ(Athiya Shetty) ಪ್ರೀತಿ ವಿಚಾರ ಗುಟ್ಟಾಗಿ ಉಳಿದಿಲ್ಲ. ಇಬ್ಬರು ಕಳೆದ ಮೂರ್ನಾಲ್ಕು ವರ್ಷಗಳಿಂದ ಒಬ್ಬರನ್ನೊಬ್ಬರು ಪ್ರೀತಿಸುತ್ತಿದ್ದಾರೆ ಎನ್ನುವ ಈಗಾಗಲೇ ಬಹಿರಂಗವಾಗಿದೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಒಟ್ಟಿಗೆ ಇರುವ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಈ ಸ್ಟಾರ್ ಜೋಡಿ ತಮ್ಮ ಪ್ರೀತಿ ವಿಚಾರವನ್ನು ಬಿಚ್ಚಿಡುತ್ತಿದ್ದಾರೆ. ಈ ಪ್ರಣಯ ಪಕ್ಷಿಗಳು ಇದೀಗ ಮದುವೆಗೆ ಸಿದ್ಧವಾಗಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ. ಕೆ ಎಲ್ ರಾಹುಲ್ ಬಹುಕಾಲದ ಗೆಳತಿ ಅತಿಯಾ ಶೆಟ್ಟಿ ಜೊತೆ ಈ ವರ್ಷದ ಚಳಿಗಾಲದಲ್ಲಿ ಹಸೆಮಣೆ ಏರಲಿದ್ದಾರೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿದ್ದವು.

ಈ ನಡುವೆ ಸ್ಟಾರ್ ಜೋಡಿ ಮದುವೆಗೂ ಮೊದಲೇ ಮುಂಬೈನಲ್ಲಿ ಒಟ್ಟಿಗೆ ಇರಲು ನಿರ್ಧರಿಸಿದ್ದು ದುಬಾರಿ ಬಾಡಿಗೆ ಮನೆ ಮಾಡಿರುವ ವಿಚಾರ ವೈರಲ್ ಆಗಿದೆ. ಆಗಾಗ ಕದ್ದು-ಮುಚ್ಚಿ ಭೇಟಿಯಾಗುತ್ತಿದ್ದ ಈ ಪ್ರಣಯ ಪಕ್ಷಿಗಳು ಇದೀಗ ಒಟ್ಟಿಗೆ ಒಂದೇ ಮನೆಯಲ್ಲಿ ಇರಲು ಪ್ಲಾನ್ ಮಾಡಿದ್ದಾರೆ. ಆಗಲೆ ಇಬ್ಬರು ಮುಂಬೈನ ಬಾಂದ್ರದಲ್ಲಿ ಅಪಾರ್ಟ್ಮೆಂಟ್ ಬಾಡಿಗೆ ಪಡೆದಿದ್ದಾರೆ ಎನ್ನಲಾಗಿತ್ತು. ಬಾಂದ್ರಾದ ಕಾರ್ಟರ್ ರೋಡ್ ಅಪಾರ್ಟ್ಮೆಂಟ್ ನಲ್ಲಿ ಹೊಸ ಮನೆ ಬಾಡಿಗೆ ಪಡೆದಿದ್ದು 4 ರೂಮ್ ಇರುವ ಈ ಮನೆಗೆ ತಿಂಗಳಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ಬಾಡಿಗೆ ಕಟ್ಟುತ್ತಿದ್ದಾರೆ ಎನ್ನುವ ಸುದ್ದಿ ಕೇಳಿಬರುತ್ತಿತ್ತು.

Tap to resize

Latest Videos

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟಿ ಅತಿಯಾ ಶೆಟ್ಟಿ ಫುಲ್ ಗರಂ ಆಗಿದ್ದರು. ಈ ವಿಚಾರವನ್ನು ತಳ್ಳಿ ಹಾಕಿರುವ ನಟಿ ಹೊಸ ಮನೆಗೆ ಹೋಗುತ್ತಿರುವುದು ನಿಜ ಆದರೆ ನನ್ನ ಹೆತ್ತವರ ಜೊತೆ ಎಂದು ಹೇಳಿದ್ದಾರೆ. ಸುನಿಲ್ ಶೆಟ್ಟಿ ಮತ್ತು ಮನ ಶೆಟ್ಟಿ ಜೊತೆ ಹೊಸ ಮನೆಗೆ ಹೋಗುತ್ತಿದ್ದೀನಿ ಬೇರೆಯವರ ಜೊತೆ ಅಲ್ಲ ಎಂದು ಹೇಳಿದ್ದಾರೆ.

ಕನ್ನಡಿಗ ಕೆಎಲ್‌ ರಾಹುಲ್‌ ಮದುವೆ ಫಿಕ್ಸ್‌, ಐಪಿಎಲ್‌ ಬೆನ್ನಲ್ಲೇ ಅದ್ದೂರಿ ಮದುವೆ

ಇತ್ತೀಚಿಗೆ ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿದ್ದ ಅತಿಯಾ ಶೆಟ್ಟಿ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ನಾನು ಯಾರೊಂದಿಗೂ ಹೋಗುತ್ತಿಲ್ಲ. ನನ್ನ ಹೆತ್ತವರ ಜೊತೆ ಹೋಗುತ್ತಿದ್ದೀನಿ' ಎಂದು ಹೇಳಿದ್ದಾರೆ. ಇನ್ನು ಮದುವೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಲು ಅತಿಯಾ ನಿರಾಕರಿಸಿದ್ದಾರೆ. ಜನರು ಏನು ಬೇಕಾದರು ಹೇಳಲಿ, ಮಾತನಾಡಿಕೊಳ್ಳಲಿ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದು ಅತಿಯಾ ಹೇಳಿದ್ದಾರೆ.

ಒಂದೇ ಮನೆಗೆ ಶಿಫ್ಟ್ ಆಗಲಿದ್ದಾರೆ Athiya Shetty KL Rahul

ಅತಿಯಾ ಏನೆ ಹೇಳಿದರೂ ಇಬ್ಬರ ಮದುವೆ ವಿಚಾರ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಈಗಾಗಲೇ ಮದುವೆಗೆ ಸಿದ್ದತೆ ನಡೆಯುತ್ತಿದೆ ಎಂದು ಆಪ್ತಮೂಲಗಳು ತಿಳಿಸಿವೆ ಎಂದು ಪಿಂಕ್ ವಿಲ್ಲ ವರದಿ ಮಾಡಿತ್ತು. ಈ ವರ್ಷದ ಕೊನೆಯಲ್ಲಿ ನವೆಂಬರ್ ಅಥವಾ ಡಿಸೆಂಬರ್ ನಲ್ಲಿ ಮದುವೆಯಾಗಲಿದ್ದಾರೆ ಎನ್ನಲಾಗಿದೆ. ದಕ್ಷಿಣ ಭಾರತೀಯ ಶೈಲಿಯಲ್ಲಿ ಇಬ್ಬರ ಮದುವೆ ನಡೆಯಲಿದ್ದು, ಶೆಟ್ಟಿ ಸಂಪ್ರದಾಯದಂತೆ ರಾಹುಲ್ ಮತ್ತು ಅತಿಯಾ ಹಸೆಮಣೆ ಏರಲಿದ್ದಾರೆ. ಅಂದಹಾಗೆ ಸುನಿಲ್ ಶೆಟ್ಟಿ ಕರ್ನಾಟಕದ ಮೂಲ್ಕಿ ಮೂಲದವರು. ರಾಹುಲ್ ಕೂಡ ಮಂಗಳೂರು ಮೂಲದವರು. ಇಬ್ಬರು ತುಳು ಕುಟುಂಬದವರು. ಹಾಗಾಗಿ ದಕ್ಷಿಣ ಭಾರತೀಯ ಶೈಲಿಯಲ್ಲಿ ಮದುವೆ ನಡೆಯಲಿದೆ ಎನ್ನಲಾಗಿದೆ. ಆದರೆ ಕುಟುಂಬದವರು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

 

click me!