ಸಾಕಷ್ಟು ಲೋಪಗಳಿದ್ದರೂ ಪ್ರೇಕ್ಷಕರು ನಿರ್ಲಕ್ಷಿಸಿದ್ದಾರೆ; KGF 2 ಬಗ್ಗೆ ದಳಪತಿ ವಿಜಯ್ ತಂದೆಯ ಮಾತು

By Shruiti G KrishnaFirst Published May 7, 2022, 1:11 PM IST
Highlights

ವಿಜಯ್ ತಂದೆ ಚಂದ್ರಶೇಖರ್(Chandrasekhar) ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ನೋಡಿ ಪ್ರತಿಕ್ರಿಯೆ ನೀಡಿರುವ ಚಂದ್ರಶೇಖರ್ ಅನೇಕ ಲೋಪದೋಷಗಳಿದ್ದರೂ ಪ್ರೇಕ್ಷಕರು ಅದನ್ನೆಲ್ಲವನ್ನು ನಿರ್ಲಕ್ಷಿಸಿ ಸಿನಿಮಾ ಗೆಲ್ಲಿಸಿದ್ದಾರೆ ಎಂದು ಹೇಳಿದ್ದಾರೆ.

ರಾಕಿಂಗ್ ಸ್ಟಾರ್ ಯಶ್(Yash) ಮತ್ತು ಪ್ರಶಾಂತ್ ನೀಲ್(Prashanth Neel) ಕಾಂಬಿನೇಷನ್‌ನ ಕೆಜಿಎಫ್-2(KGF 2) ಭರ್ಜರಿ ಯಶಸ್ಸು ಕಂಡಿದೆ. ದೇಶ-ವಿದೇಶದಲ್ಲಿ ಕೆಜಿಎಫ್-2 ಸಿನಿಮಾ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಸಿನಿಮಾ ಬಿಡುಗಡೆಯಾಗಿ ಒಂದು ತಿಂಗಳು ಸಮೀಪಿಸುತ್ತಿದ್ದರೂ ಅನೇಕ ಚಿತ್ರಮಂದಿರಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದೆ. ಅಭಿಮಾನಿಗಳು ಈಗಲೂ ಮುಗಿಬಿದ್ದು ಸಿನಿಮಾ ವೀಕ್ಷಿಸುತ್ತಿದ್ದಾರೆ. ಬಾಕ್ಸ್ ಆಫೀಸ್ ನಲ್ಲಿ ಯಶ್ ಕಿಂಗ್ ಆಗಿ ಮೆರೆಯುತ್ತಿದ್ದಾರೆ. ಘಟಾನುಘಟಿ ಸ್ಟಾರ್ ಕಲಾವಿದರನ್ನು ಹಿಂದಿಕ್ಕಿ ಯಶ್ ಭಾರತೀಯ ಸಿನಿಮಾರಂಗದಲ್ಲಿ ರಾರಾಜಿಸುತ್ತಿದ್ದಾರೆ.

ಅಂದಹಾಗೆ ರಾಕಿಂಗ್ ಸ್ಟಾರ್ ನಟನೆಯ ಕೆಜಿಎಫ್-2 ಮತ್ತು ತಮಿಳು ನಟ ವಿಜಯ್ ಅಭಿನಯದ ಬೀಸ್ಟ್(Beast) ಸಿನಿಮಾ ಏಕಕಾಲಕ್ಕೆ ತೆರೆಗೆ ಬಂದವು. ಒಂದು ದಿನದ ಅಂತರದಲ್ಲಿ ಬಂದ ಬೀಸ್ಟ ಮತ್ತು ಕೆಜಿಎಫ್-2 ನಡುವೆ ಬಾಕ್ಸ್ ಆಫೀಸ್ ವಾರ್ ಆಗಲಿದೆ ಎಂದು ಸಿನಿ ಪಂಡಿತರು ಲೆಕ್ಕಾಚಾರ ಹಾಕಿದ್ದರು. ಆದರೆ ಕೆಜಿಎಫ್-2 ಮುಂದೆ ಬೀಸ್ಟ್ ಸಿನಿಮಾ ಹೀನಾಯ ಸೋಲು ಕಂಡಿತು. ಪ್ರೇಕ್ಷಕರ ಬೀಸ್ಟ್ ನೋಡಿ ನಿರಾಸೆ ಪಟ್ಟಿದ್ದರು. ಆದರೆ ಕೆಜಿಎಫ್-2 ತಮಿಳಿನಲ್ಲೂ ದೊಡ್ಡ ಮಟ್ಟದ ಗೆಲುವು ದಾಖಲಿಸಿದೆ. ಬೀಸ್ಟ್ ಮುಂದೆ ಗೆದ್ದು ಬೀಗಿದೆ.

ಇದೀಗ ವಿಜಯ್ ತಂದೆ ಚಂದ್ರಶೇಖರ್(Chandrasekhar) ರಾಕಿಂಗ್ ಸ್ಟಾರ್ ಯಶ್ ನಟನೆಯ ಕೆಜಿಎಫ್-2 ಸಿನಿಮಾ ವೀಕ್ಷಿಸಿದ್ದಾರೆ. ಸಿನಿಮಾ ನೋಡಿ ಪ್ರತಿಕ್ರಿಯೆ ನೀಡಿರುವ ಚಂದ್ರಶೇಖರ್ ಅನೇಕ ಲೋಪದೋಷಗಳಿದ್ದರೂ ಪ್ರೇಕ್ಷಕರು ಅದನ್ನೆಲ್ಲವನ್ನು ನಿರ್ಲಕ್ಷಿಸಿ ಸಿನಿಮಾ ಗೆಲ್ಲಿಸಿದ್ದಾರೆ ಎಂದು ಹೇಳಿದ್ದಾರೆ. ವಿಜಯ್ ತಂದೆ ಕೆಜಿಎಫ್-2 ಸಿನಿಮಾ ನೋಡಿದ ಬಗ್ಗೆ ಸಿನಿಮಾ ವಿಶ್ಲೇಷಕ ರಮೇಶ್ ಬಾಲ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. ಅಲ್ಲದೇ ಚಂದ್ರಶೇಖರ್ ಪ್ರತಿಕ್ರಿಯೆಯನ್ನು ಹೇಳಿದ್ದಾರೆ.

ಹಿಂದಿಯಲ್ಲಿ ಅತಿ ಹೆಚ್ಚು ಗಳಿಕೆ ಕಂಡ 2ನೇ ಸಿನಿಮಾ ಕೆಜಿಎಫ್‌ 2!

'ಚಿತ್ರ ಸಾಕಷ್ಟು ತಾರ್ಕಿಕ ಲೋಕದೋಷಗಳನ್ನ ಹೊಂದಿದ್ದರೂ, ಚಿತ್ರಕಥೆಯು ತುಂಬಾ ಹಿಡಿತ ಮತ್ತು ನಂಬಲರ್ಹವಾಗಿದೆ. ಹಾಗಾಗಿ ಪ್ರೇಕ್ಷಕರು ಲೋಪವನ್ನು ನಿರ್ಲಕ್ಷಿಸಿದ್ದಾರೆ' ಎಂದು ಹೇಳಿದ್ದಾರೆ. ಸಿನಿಮಾ ವೀಕ್ಷಿಸುವಾಗ ಚಂದ್ರಶೇಖರ್ ಸಂಪೂರ್ಣವಾಗಿ ಮುಳುಗಿ ಹೋಗಿದ್ದರು ಎಂದು ರಮೇಶ್ ಬಾಲ ಹೇಳಿದ್ದಾರೆ.

's father about :

" Even though the movie has lot of logical loopholes, the screenplay is so gripping and believable, the audience ignored them.. "

He was completely engrossed while watching the movie..

— Ramesh Bala (@rameshlaus)

ಇನ್ನು ವಿಜಯ್ ತಂದೆ ಬೀಸ್ಟ್ ಸಿನಿಮಾದ ಬಗ್ಗೆ ನಿರಾಸೆ ವ್ಯಕ್ತಪಡಿಸಿದ್ದರು. ವಿಜಯ್ ತಂದೆ ಪ್ರತಿಕ್ರಿಯೆ ನೀಡಿದ ಪೋಸ್ಟ್ ಅನ್ನು ಶೇರ್ ಮಾಡಿರುವ ರಮೇಶ್ ಬಾಲಗೆ ಅನೇಕ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಚಂದ್ರಶೇಖರ್ ಮೊದಲು ತಮ್ಮ ಮಗನ ಸಿನಿಮಾದ ಲೋಪದೋಷಗಳನ್ನು ನೋಡಿಕೊಳ್ಳಲಿ ಎಂದು ಹೇಳುತ್ತಿದ್ದಾರೆ. ಮೊದಲು ಅವರ ಮಗನ ಸಿನಿಮಾದ ಲೋಪದೋಷಗಳ ಬಗ್ಗೆ ಮಾತನಾಡಲಿ ಎಂದು ಅಭಿಮಾಯೊಬ್ಬ ಕಾಮೆಂಟ್ ಮಾಡಿದ್ದಾರೆ.

ಕೆಜಿಎಫ್-2 ಸಿನಿಮಾವನ್ನು ನೋಡಿ ಅನೇಕ ಸ್ಟಾರ್ ಕಲಾವಿದರು ಹಾಡಿಹೊಗಳಿದ್ದಾರೆ. ರಾಮ್ ಚರಣ್, ಪ್ರಬಾಸ್, ಅಲ್ಲು ಅರ್ಜುನ್ ಸೇರಿದಂತೆ ಅನೇಕರು ಪ್ರತಿಕ್ರಿಯೆ ನೀಡಿದ್ದಾರೆ. ಕೆಜಿಎಫ್-2 ತಂಡದ ಶ್ರಮ ಮತ್ತು ಯಶಸ್ಸನ್ನು ಕೊಂಡಿದ್ದಾರೆ.

KGF 2: ಕೆಜಿಎಫ್ 2 ಸಿನಿಮಾ ಕಂಡು ಹೆದರಿದ್ದೆ ಎಂದ ಅಮಿರ್ ಖಾನ್..!

ಅಂದಹಾಗೆ ಕೆಜಿಎಫ್-2 ಸಿನಿಮಾ ಭಾರತದ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳ ಲಿಸ್ಟ್‌ನಲ್ಲಿದೆ. ಬಾಲಿವುಡ್‌ನಲ್ಲಿ ಭರ್ಜರಿ ಕಮಾಯಿ ಮಾಡುವ ಮೂಲಕ 2ನೇ ಸ್ಥಾನದಲ್ಲಿದೆ. ಇನ್ನು ವಿಶ್ವದಾದ್ಯಂತ ಕಲೆಕ್ಷನ್ ನಲ್ಲಿ ಕೆಜಿಎಫ್-2 4ನೇ ಸ್ಥಾನದಲ್ಲಿದೆ. ಸದ್ಯದಲ್ಲೇ ಆರ್ ಆರ್ ಆರ್ ಕಲೆಕ್ಷನ್ ಹಿಂದಿಕ್ಕಿ ಮುನ್ನುಗ್ಗಲಿದೆ. ಕೆಜಿಎಫ್ ದೊಡ್ಡ ಮಟ್ಟದ ಕಲೆಕ್ಷನ್ ಮಾಡುವ ಮೂಲಕ ಇಡೀ ವಿಶ್ವವೇ ಭಾರತೀಯ ಸಿನಿಮಾರಂಗದ ಕಡೆ ತಿರುಗಿ ನೋಡುವಂತೆ ಮಾಡಿದೆ.

click me!