ರಾಖಿ ಸಾವಂತ್​ ಮೈಸೂರಿನ ಸೊಸೆಯೇ! ಅಂತೂ ಮದ್ವೆ ಗಲಾಟೆಗೆ ಬಿತ್ತು ಬ್ರೇಕ್​...

By Suvarna News  |  First Published Jan 14, 2023, 3:16 PM IST

ನಟಿ ರಾಖಿ ಸಾವಂತ್​ ಅವರ ಜೊತೆ ಮದುವೆಯಾಗಿದ್ದು ಹೌದು ಎಂದು ಕೊನೆಗೂ ಒಪ್ಪಿಕೊಂಡ ಮೈಸೂರು ಮೂಲದ ಆದಿಲ್​ ಖಾನ್​ ಹೇಳಿದ್ದೇನು?
 


ಇತ್ತೀಚೆಗೆ ಮೈಸೂರಿನಲ್ಲಿ ಮದ್ವೆಯಾಗಿದ್ದ ರಾಖಿ ಸಾವಂತ್​ ಭಾರಿ ಸುದ್ದಿಯಲ್ಲಿದ್ದಾರೆ. ಒಂದೆಡೆ ತಾವು ಮದುವೆಯಾಗಿರುವುದಾಗಿ ರಾಖಿ ಹೇಳಿಕೊಳ್ಳುತ್ತಿದ್ದರೆ, ಅವರ ಪತಿ ಮೈಸೂರು ಮೂಲದ ಆದಿಲ್ ಖಾನ್​ ದುರ್ರಾನಿ ಮಾತ್ರ ತಾವು ಮದುವೆನೇ ಆಗಿಲ್ಲ, ರಾಖಿ ಹೇಳ್ತಿರೋದೆಲ್ಲಾ ಸುಳ್ಳು ಎನ್ನುತ್ತಲೇ ಇದ್ದರು. ಮದುವೆಯ ನೋಂದಣಿಯಾದದ್ದು, ಇವರ ಮದುವೆ ಏಳು ತಿಂಗಳ ಹಿಂದೆಯೇ ಆಗಿದ್ದು, ಪತಿ ಆದಿಲ್​ (Adil Khan) ತಮಗೆ ಕಿರುಕುಳ ಕೊಡುತ್ತಾರೆ ಎಂದು ರಾಖಿ ಅತ್ತಿದ್ದು, ಇವಳನ್ನು ತಾನು ಮದ್ವೆನೇ ಆಗಿಲ್ಲ ಎಂದು ಆದಿಲ್​ ಹೇಳಿರುವುದು... ಹೀಗೆ ಇವರ ಮದುವೆ ಪುರಾಣ ಕಳೆದ ಕೆಲ ದಿನಗಳಿಂದ ವೈರಲ್​ ಆಗುತ್ತಲೇ ಇದೆ. 

ಇತ್ತೀಚೆಗಷ್ಟೇ ಮರಾಠಿ 'ಬಿಗ್ ಬಾಸ್' ನಲ್ಲಿ ಕಾಣಿಸಿಕೊಂಡಿದ್ದ ರಾಖಿ ಸಾವಂತ್, ಎರಡು ದಿನಗಳ ಹಿಂದೆ ಆದಿಲ್ ದುರಾನಿ ಖಾನ್​  ಅವರನ್ನು ಮದುವೆಯಾಗುವುದಾಗಿ ಘೋಷಿಸಿದ್ದಾಗಿನಿಂದ ಇವರ ಮದುವೆಯ ಬಗ್ಗೆ ಬಹಳ ಹಂಗಾಮಾ ಸೃಷ್ಟಿಯಾಗಿತ್ತು. ಅಲ್ಲಿಂದ ಇಲ್ಲಿಯವರೆಗೂ ಇವರ ಮದುವೆಯಾಗಿದ್ದು ಹೌದೋ ಅಲ್ಲವೋ ಎಂಬ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿದ್ದವು. ಮೈಸೂರು ಮೂಲದ ಬಾಯ್ ಫ್ರೆಂಡ್ (Boy Friend) ಆದಿಲ್ ಖಾನ್​ ದುರ್ರಾನಿ ಜೊತೆ ರಾಖಿ ಸಾವಂತ್ ರಿಜಿಸ್ಟರ್ ಮದುವೆಯಾಗಿದ್ದಾರೆ ಎಂಬ ಸುದ್ದಿ ಹರಡಿದ್ದರೂ  ಇದಕ್ಕೆ ಸಂಬಂಧಿಸಿದಂತೆ ಮದುವೆ ನೋಂದಣಿ ಪತ್ರ ವೈರಲ್​ (Viral) ಆಗಿದ್ದೂ  ಆದಿಲ್​ ಮಾತ್ರ ಈ ಸುದ್ದಿಯನ್ನು ತಳ್ಳಿ ಹಾಕುತ್ತಲೇ ಬಂದಿದ್ದರು.  ಆದರೆ ಪೋಟೋಗಳನ್ನು ನೋಡಿದರೆ ಇಬ್ಬರೂ ಕೋರ್ಟ್‌ನಲ್ಲಿ ಮದುವೆಯಾಗಿದ್ದಾರೆ ಎನ್ನುವುದು ಗೊತ್ತಾಗುತ್ತಿತ್ತು. 

Tap to resize

Latest Videos

ಅಮ್ಮನಿಗೆ ಕ್ಯಾನ್ಸರ್, ಆಸ್ಪತ್ರೆಯಲ್ಲಿದ್ದಾರೆ, ದಯವಿಟ್ಟು ಪ್ರಾರ್ಥಿಸಿ; ಕಣ್ಣೀರಿಟ್ಟ ರಾಖಿ ಸಾವಂತ್

ಈ ನಡುವೆಯೇ ರಾಖಿ, ಆದಿಲ್ ಅವರನ್ನು ಸುಮಾರು ಏಳು ತಿಂಗಳ ಹಿಂದೆಯೇ ಮದುವೆಯಾಗಿದ್ದೆ ಎಂದು ಬಹಿರಂಗಪಡಿಸಿದ್ದರು.  ತಮ್ಮ ಪತಿ ಆದಿಲ್  (Adil Khan Durrani) ತಮಗೆ ಭಾರಿ ಮೋಸ ಮಾಡಿರುವುದಾಗಿ ರಾಖಿ ಹೇಳಿಕೊಂಡಿದ್ದರು. ಮದುವೆಯ ಬಗ್ಗೆ ಬಾಯಿ ಬಿಡದಂತೆ ಆದಿಲ್​ ತಮ್ಮನ್ನು ಬೆದರಿಸಿದ್ದರು ಎಂದು ರಾಖಿ ಸಾವಂತ್​ (Rakhi Sawanth) ಹೇಳಿದ್ದರು. 'ಆತನನ್ನು ನಾನು ವರ್ಷಗಳ ಹಿಂದೆಯೇ ಭೇಟಿಯಾಗಿದ್ದೆ. ನಂತರ ಮದುವೆಯ ವಿಚಾರ ನಡೆಯಿತು.  ಕಳೆದ ವರ್ಷ ಜುಲೈನಲ್ಲಿ ಮದುವೆಯಾದ್ವಿ (Marriage). ಆದರೆ ಮದ್ವೆ ಬಗ್ಗೆ ಹೇಳದಂತೆ ಪತಿ ಬೆದರಿಕೆ ಹಾಕಿದ್ದ' ಎಂದು ರಾಖಿ ಹೇಳಿದ್ದಾರೆ. 'ಮದುವೆ ಬಗ್ಗೆ ತಿಳಿದರೆ ಅವನ  ತಂಗಿಗೆ ಹುಡುಗ ಸಿಗುವುದಿಲ್ಲ ಎನ್ನುವ ಕಾರಣ ನೀಡಿ ವಿಷಯ ಬಹಿರಂಗಪಡಿಸಬೇಡಿ ಎಂದಿದ್ದ. ನನ್ನ ಹೆಸರು ಹೇಳುವುದು ಅವನಿಗೆ ನಾಚಿಕೆ ಅಂತೆ. ಅದಕ್ಕೇ ಹೇಳಬೇಡ' ಎಂದು ಹೇಳಿರುವುದಾಗಿ ರಾಖಿ ಹೇಳಿಕೊಂಡಿದ್ದರು.

ಇವರಿಬ್ಬರ ಗಲಾಟೆ ಏನೇ ಇರಲಿ. ಈಗ ಮದುವೆ ಸುಖಾಂತ್ಯಗೊಂಡಿದೆ. ಏಕೆಂದರೆ ತಾವು ರಾಖಿ ಅವರನ್ನು ಮದುವೆಯಾಗಿರುವುದು ನಿಜ ಎಂದು ಗಂಡ ಆದಿಲ್​ ಒಪ್ಪಿಕೊಂಡಿರುವುದಾಗಿ ಇಟೈಮ್ಸ್​ ವರದಿ ಮಾಡಿದೆ. ಹೌದು, ರಾಖಿ ಮತ್ತು ನಾನು ಮದುವೆಯಾಗಿದ್ದೇವೆ. ನಾವು ಒಟ್ಟಿಗೆ ವಾಸಿಸುತ್ತಿದ್ದೇವೆ ಮತ್ತು ಸಂತೋಷವಾಗಿದ್ದೇವೆ" ಎಂದು ಅವರು ಕೆಲವು ಗಂಟೆಗಳ ಹಿಂದೆ ETimes ಟಿವಿಗೆ ತಿಳಿಸಿದ್ದಾರೆ. 

ಸಲಿಂಗಕಾಮ: ಸದ್ಗುರುಗೆ ಉರ್ಫಿ ಜಾವೇದ್ ಹೇಳಿದ್ದೇನು, ಕೇಳಿದ್ದೇನು?

ನಮ್ಮ ಮದುವೆಯಾಗಿರುವುದು ನಿಜ. ಆದರೆ ಈ ಬಗ್ಗೆ ನಮ್ಮ ಮನೆಯವರಿಗೆ ಮನವರಿಕೆ ಮಾಡಿಕೊಡಬೇಕಿದೆ. ಇನ್ನೂ ಅವರಿಗೆ ಮನವರಿಕೆ ಮಾಡಿಕೊಟ್ಟಿಲ್ಲ. ಈ ಕೆಲಸ  ಇನ್ನೂ ಪ್ರಗತಿಯಲ್ಲಿದೆ ಎಂದು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಅಂತೂ ರಾಖಿ ಈಗ ಮೈಸೂರಿನ ಸೊಸೆ (Daughter in law of Mysore) ಎನ್ನುವುದು ಅಧಿಕೃತವಾದಂತಾಗಿದೆ. 

click me!