ಭಾರತೀಯರಿಗಿಂತ ಜಪಾನರು RRR ಮೆಚ್ಚಿಕೊಂಡರು; ಆಸ್ಕರ್‌ ನಂತರ ವರಸೆ ಬದಲಾಯಿಸಿದ ಜ್ಯೂ. ಎನ್‌ಟಿಆರ್‌

By Vaishnavi Chandrashekar  |  First Published Jan 14, 2023, 2:14 PM IST

ಜಪಾನ್‌ನವರು ಆರ್‌ಆರ್‌ಆರ್‌ ಸಿನಿಮಾ ಮೇಲೆ ತೋರಿಸುತ್ತಿರುವ ಪ್ರೀತಿಗೆ ಫಿದಾ ಆದ ಜ್ಯೂ.ಎನ್‌ಟಿಆರ್‌. ಸಂದರ್ಶನ ನೋಡಿ ಅಭಿಮಾನಿಗಳು ಶಾಕ್...


ಸ್ಟಾರ್ ಡೈರೆಕ್ಟರ್‌ ರಾಜಮೌಳಿ ನಿರ್ದೇಶನ ಮಾಡಿರುವ ಆರ್‌ಆರ್‌ಆರ್‌ ಸಿನಿಮಾ ಗೋಲ್ಡನ್‌ ಗ್ಲೋಬ್ಸ್‌ ಅವಾರ್ಡ್‌ ಕಾರ್ಯಕ್ರಮದಲ್ಲಿ ದಿ ಓರಿಜಿನಲ್ ಸಾಂಗ್ ಕ್ಯಾಟಗರಿಯಲ್ಲಿ ನಾಟು ನಾಟು ಪ್ರಶಸ್ತಿ ಪಡೆದಿದೆ.  ಅವಾರ್ಡ್‌ ಗೆದ್ದ ಸಂಭ್ರಮದಲ್ಲಿ ನಟ ಜ್ಯೂನಿಯರ್ ಎನ್‌ಟಿಆರ್‌ ಸಿನಿಮಾದ ಬಗ್ಗೆ ಮಾತನಾಡಿದ್ದಾರೆ. ಆರ್‌ಆರ್‌ಆರ್‌ ಜರ್ನಿ ಹೇಗಿತ್ತು ಎಂದು ಹಂಚಿಕೊಳ್ಳುವುದರ ಜೊತೆಗೆ ಜಾಪನರು ಯಾಕೆ ಸಿನಿಮಾ ಅಷ್ಟೊಂದು ಇಷ್ಟ ಪಟ್ಟರು ಎಂದು ರಿವೀಲ್ ಮಾಡಿದ್ದಾರೆ. 

'ನಾನು ಜಪಾನ್‌ನಲ್ಲಿದ್ದಾಗ ಜನರು ಕಣ್ಣೀರು ಹಾಕುತ್ತಿದ್ದ ದೃಶ್ಯವನ್ನು ಕಣ್ಣಾರೆ ಕಂಡಿರುವೆ. ಆರ್‌ಆರ್‌ಆರ್‌ ಸಿನಿಮಾವನ್ನು ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ, ಭಾರತಕ್ಕಿಂತ ಹೆಚ್ಚಿಗೆ ಸಿನಿಮಾವನ್ನು ಇಷ್ಟ ಪಟ್ಟಿದ್ದಾರೆ ಮೆಚ್ಚಿಕೊಂಡಿದ್ದಾರೆ. ವೆಸ್ಟ್‌ನ ಜನರು ಸಾಮಾಜಿಕ ಜಾಲತಾಣದಲ್ಲಿ ಮಾತ್ರ ಸಿನಿಮಾ ಬಗ್ಗೆ ಮಾತನಾಡುತ್ತಿದ್ದಾರೆ ಅಂದುಕೊಂಡೆ ಅಲ್ಲದೆ ಅಲ್ಲಿರುವ ನಮ್ಮ ಭಾರತೀಯರು ಮಾತ್ರ ಸಿನಿಮಾ ನೋಡುತ್ತಿದ್ದಾರೆ ಅಂದುಕೊಂಡಿದ್ದೆ. ಯಾರೋ ಒಬ್ಬರು ಅಥವಾ ಅವರ ಸ್ನೇಹಿತರು ಸಿನಿಮಾ ನೋಡಿರುತ್ತಾರೆ ಕಡಿಮೆ ಜನರು ಅನ್ನೋದು ಮೈಂಡಲ್ಲಿತ್ತು ಆದರೆ ಅದು ಒಬ್ಬಿಬ್ಬರಲ್ಲ. ಜನರ ಸಾಗರ. ದಿನೇ ದಿನೆ ಜನರ ಸಂಖ್ಯೆ ಹೆಚ್ಚಾಗಿತ್ತು. ಜೀವನದಲ್ಲಿ ಈ ಕ್ಷಣ ಬರುತ್ತದೆ ಎಂದು ಕಲ್ಪಿಸಿಕೊಂಡಿರಲಿಲ್ಲ' ಎಂದು  ಗೋಲ್ಡ್ಡರ್ಬಿ ಸಂದರ್ಶನದಲ್ಲಿ ಎನ್‌ಟಿಆರ್ ಮಾತನಾಡಿದ್ದಾರೆ. 

Tap to resize

Latest Videos

ಜ್ಯೂನಿಯರ್‌ ಎನ್‌ಟಿಆರ್‌ ಕೊಟ್ಟಿರುವ ಮಾಹಿತಿ ಪ್ರಕಾರ ಜಪಾನ್‌ನಲ್ಲಿ ಮೊದಲ ವಾರ 35 ಮಿಲಿಯನ್ ಯೆನ್ ಕಲೆಕ್ಷನ್ ಮಾಡಿದೆ. ಒಟ್ಟಾರೆ 403 ಮಿಲಿಯನ್ ಯೆನ್ ಕಲೆಕ್ಷನ್ ಮಾಡಿರುವ ಮೊದಲ ಭಾರತದ ಸಿನಿಮಾ ಇದು.  ಎರಡು ವಿಭಾಗಗಳಲ್ಲಿ ಆರ್‌ಆರ್‌ಆರ್‌ ಚಿತ್ರ ನಾಮನಿರ್ದೇಶನಗೊಂಡಿದ್ದು, ಈ ಪೈಕಿ ನಾಟು ನಾಟು ಹಾಡಿಗೆ ಜಾಗತಿಕ ಪ್ರಶಸ್ತಿ ದೊರೆತಿದೆ. ಆದರೆ, ಅತ್ಯುತ್ತಮ ಇಂಗ್ಲಿಷ್ ಅಲ್ಲದ ಭಾಷಾ ಚಲನಚಿತ್ರ ಪ್ರಶಸ್ತಿ ಆರ್‌ಆರ್‌ಆರ್‌ ಕೈತಪ್ಪಿದೆ. ಅರ್ಜೆಂಟೀನಾ ದೇಶದ ಅರ್ಜೆಂಟೀನಾ, 1985 ಚಲನಚಿತ್ರಕ್ಕೆ ಈ ಪ್ರಶಸ್ತಿ ಸಿಕ್ಕಿದೆ ಎಂದು ವರದಿಯಾಗಿದೆ.  ಆಲ್ ಕ್ವೈಟ್ ಆನ್ ದಿ ವೆಸ್ಟರ್ನ್ ಫ್ರಂಟ್ (ಜರ್ಮನಿ), ಕ್ಲೋಸ್ (ಬೆಲ್ಜಿಯಂ), ಡಿಸಿಷನ್ ಟು ಲೀವ್, (ದಕ್ಷಿಣ ಕೊರಿಯಾ) ಚಲನಚಿತ್ರಗಳು ಸಹ ಈ ವಿಭಾಗದಲ್ಲಿ ನಾಮನಿರ್ದೇಶನಗೊಂಡಿದ್ದವು. 

ಜಾಗತಿಕವಾಗಿ ₹ 1,200 ಕೋಟಿ ಗಳಿಸಿದ RRR ಈಗಾಗಲೇ ನ್ಯೂಯಾರ್ಕ್ ಫಿಲ್ಮ್ ಕ್ರಿಟಿಕ್ಸ್ ಸರ್ಕಲ್ ಪ್ರಶಸ್ತಿ ವಿಭಾಗದಲ್ಲಿ ರಾಜಮೌಳಿ ಅತ್ಯುತ್ತಮ ನಿರ್ದೇಶಕ ಸೇರಿ ಕೆಲ ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಈ ಪ್ರಶಸ್ತಿ ಕಾರ್ಯಕ್ರಮವನ್ನು ಪ್ರಸಾರ ಮಾಡುವ ಎನ್‌ಬಿಸಿ ಚಾನೆಲ್‌ ಕಳೆದ ವರ್ಷದ ಗೋಲ್ಡನ್ ಗ್ಲೋಬ್‌ ಅವಾರ್ಡ್ಸ್‌ ಸಮಾರಂಭವನ್ನು ಬಹಿಷ್ಕರಿಸಿತ್ತು. ಅಲ್ಲದೆ, ಟಾಮ್ ಕ್ರೂಸ್ ನೇತೃತ್ವದ ಹಾಲಿವುಡ್‌ನ ಅನೇಕ ದೊಡ್ಡ ತಾರೆಗಳು ತಮಗೆ ದೊರೆತಿದ್ದ 3 ಗೋಲ್ಡನ್‌ ಗ್ಲೋಬ್‌ ಪ್ರಶಸ್ತಿಗಳನ್ನು ಹಿಂದಿರುಗಿಸಿದ್ದರು. 

RRR ಚಿತ್ರದ ನಾಟು ನಾಟು ಹಾಡಿಗೆ ಪ್ರತಿಷ್ಠಿತ ಗೋಲ್ಡನ್‌ ಗ್ಲೋಬ್‌ ಅವಾರ್ಡ್ಸ್‌..!

ಅವಾರ್ಡ್​ ಫಂಕ್ಷನ್​ನಲ್ಲಿ ಪಾಲ್ಗೊಂಡಿದ್ದ ಜ್ಯೂ.ಎನ್​ಟಿಆರ್  ಭಾರಿ ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಪ್ರಶಸ್ತಿ ಪಡೆದ ಖುಷಿಯಲ್ಲಿದ್ದ ತಂಡದ ಜೊತೆ ಅಮೆರಿಕನ್​ ಸಂದರ್ಶಕರೊಬ್ಬರು ಸಂದರ್ಶನ ನಡೆಸಿದರು. ಆಗ ಜ್ಯೂ. ಎನ್​ಟಿಆರ್​ ಅವರು ಮಾತನಾಡಿರುವ ಇಂಗ್ಲಿಷ್​ ಭಾರಿ ವೈರಲ್​ ಆಗಿದ್ದು, ಅದೇ ಟ್ರೋಲ್​ ಆಗುತ್ತಿದೆ. ಇದಕ್ಕೆ ಕಾರಣ, ಅವರು ಇಂಗ್ಲಿಷ್​ ಚೆನ್ನಾಗಿಯೇ ಮಾತನಾಡಿದ್ದಾರೆ. ಆದರೆ ಅದರ ಶೈಲಿ ಮಾತ್ರ ವಿದೇಶಿಗರ ಇಂಗ್ಲಿಷ್​ನ ಹಾಗೆ ಇತ್ತು.'ಜ್ಯೂ. ಎನ್‌ಟಿಆರ್ ತಮ್ಮಲ್ಲಿರುವ ಆಂತರಿಕ ಅನಿಲ್ ಕಪೂರ್‌ನನ್ನು ಬಿಚ್ಚಿಟ್ಟಿದ್ದಾರೆ.  ಅನಿಲ್ ಕಪೂರ್ ಅವರ  ಉಚ್ಚಾರಣೆಯ ಕೂಡ ಹೀಗೆಯೇ ಕಾಲಕಾಲಕ್ಕೆ ಬದಲಾಗುತ್ತದೆ ಮತ್ತು ಬಹಳಷ್ಟು ಹಾಸ್ಯಗಳಿಂದ ಕೂಡಿರುತ್ತದೆ' ಎಂದು ಒಬ್ಬ ನೆಟ್ಟಿಗ ಕಾಲೆಳೆದಿದ್ದಾರೆ. 
 

click me!