ಲವ್​ ಜಿಹಾದ್​ಗೆ ನಟಿ ಬಲಿ? ನಟ ಶೀಜಾನ್​ ಖಾನ್​ಗೆ ಸಿಗಲಿಲ್ಲ ಬೇಲ್​, ಕೋರ್ಟ್​ ಹೇಳಿದ್ದೇನು?

By Suvarna News  |  First Published Jan 14, 2023, 2:51 PM IST

ಲವ್​ ಜಿಹಾದ್​ ಎಂದೇ ಭಾರಿ ಸದ್ದು ಮಾಡಿರುವ ನಟಿ ತುನಿಷಾ ಶರ್ಮಾ ಕೇಸ್​ನಲ್ಲಿ ಆರೋಪಿ ಶೀಜಾನ್​ ಖಾನ್​ಗೆ ಕೋರ್ಟ್​ ಜಾಮೀನು ನಿರಾಕರಿಸಿದೆ. ಇದಕ್ಕೆ ಕಾರಣವೇನು?
 


ಮುಂಬೈ: ಚಿತ್ರರಂಗದಲ್ಲಿ ಭಾರಿ ಕೋಲಾಹಲ ಸೃಷ್ಟಿಸಿದ್ದ  ನಟಿ ತುನಿಷಾ ಶರ್ಮಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಸಹನಟ  ಶೀಜಾನ್ ಮೊಹಮ್ಮದ್ ಖಾನ್​ಗೆ (Sheejan mohammed Khan) ಮುಂಬೈ ಕೋರ್ಟ್​ ಜಾಮೀನು ನಿರಾಕರಿಸಿದೆ. ಇದು ಲವ್​ ಜಿಹಾದ್​ ಕೇಸ್​ ಎಂದೇ ಭಾರಿ ಸುದ್ದಿಯಾದ ಘಟನೆಯಾಗಿದೆ. 'ಅಲಿ ಬಾಬಾ' ಎಂಬ ಹಿಟ್ ಷೋನಲ್ಲಿ ರಾಜಕುಮಾರಿ ಮೇರಿಯಮ್ ಪಾತ್ರದಲ್ಲಿ ಸಕತ್​ ಫೇಮಸ್​  (famous) ಆಗಿದ್ದ 20 ವರ್ಷದ ತುನಿಷಾ ಶೂಟಿಂಗ್​ ಸ್ಪಾಟ್​ನಲ್ಲಿಯೇ ಆಕೆಯ ವ್ಯಾನಿಟಿ ವಾಹನದಲ್ಲಿ ಚಿಂತಾಜನಕ ಸ್ಥಿತಿಯಲ್ಲಿ ಕಂಡುಬಂದಿದ್ದರು. ಆಸ್ಪತ್ರೆಗೆ ತಲುಪುವಷ್ಟರಲ್ಲಿ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು.

ಶೀಜಾನ್ ಖಾನ್‌ ಹಾಗೂ ತುನಿಷಾ ಶರ್ಮಾ (Tunisha Sharma) ಪರಸ್ಪರ ಪ್ರೇಮಿಸುತ್ತಿದ್ದು, ತುನಿಷಾ ಆತ್ಮಹತ್ಯೆ (suicide)ಮಾಡಿಕೊಳ್ಳುವ 15 ದಿನಗಳ ಹಿಂದಷ್ಟೇ ಇವರಿಬ್ಬರ ಮಧ್ಯೆ ಬ್ರೇಕಪ್ ಆಗಿತ್ತು. ಇದೇ ಕಾರಣದಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಘಟನೆ ನಡೆದ ಡಿಸೆಂಬರ್ 24​ರಂದು ಸಿಸಿಟಿವಿ (CCTV) ದೃಶ್ಯ ನೋಡಿದಾಗ ಅದರಲ್ಲಿ  ತುನಿಷಾ ಶರ್ಮಾ ಅವರನ್ನು  ಶೀಜಾನ್ ಖಾನ್ ಮತ್ತು ಮತ್ತೊಬ್ಬ ಮಹಿಳೆ  ಆಸ್ಪತ್ರೆಗೆ ಹೋಗುತ್ತಿರುವುದು ಕಂಡುಬಂದಿದೆ. ಆದರೆ ಅದಾಗಲೇ ಅವರು ಮೃತಪಟ್ಟಿದ್ದರು. ಘಟನೆಗೂ ಮುನ್ನ  ಕೂಡ ತುನಿಷಾ ಮತ್ತು ಶೀಜಾನ್​ ಒಟ್ಟಿಗೆ ಇರುವುದು ಸಿಸಿಟಿವಿಯಲ್ಲಿ ದಾಖಲಾಗಿದೆ.  ಇದನ್ನೇ ಆಧಾರವಾಗಿಟ್ಟುಕೊಂಡಿರುವ ಮಹಾರಾಷ್ಟ್ರದ ಪಾಲ್ಘರ್ ಜಿಲ್ಲಾ ನ್ಯಾಯಾಲಯದ ನ್ಯಾಯಾಧೀಶ (Judge) ಆರ್.ಡಿ.ದೇಶಪಾಂಡೆ ಅವರು, ತುನಿಷಾ ಮತ್ತು ಶೀಜಾನ್​ ಘಟನೆಯ ದಿನ ಒಟ್ಟಿಗೇ ಇರುವುದನ್ನು ಸಿಸಿಟಿವಿ ಫುಟೇಜ್​ನಲ್ಲಿ ನೋಡಿದ್ದೇನೆ. ಇವರಿಬ್ಬರ ನಡುವೆ ಏನೋ ಆಗಿದೆ ಎನ್ನುವುದು ಇದರಿಂದ ತಿಳಿದುಬರುತ್ತದೆ. ಆದ್ದರಿಂದ ಈ ಹಂತದಲ್ಲಿ ಜಾಮೀನು ನೀಡುವುದು ಸೂಕ್ತವಲ್ಲ ಎಂದು ಎನಿಸುತ್ತಿದೆ ಎಂದಿದ್ದಾರೆ. 

Tap to resize

Latest Videos

ಆತ್ಮಹತ್ಯೆ ಮಾಡಿಕೊಂಡ ಕಿರುತೆರೆ ನಟಿ ತುನಿಷಾ ಶರ್ಮಾ ಜೀವನದ 7 ಅಚ್ಚರಿ ವಿಚಾರಗಳು...

ಇವರಿಬ್ಬರು ಸಂಬಂಧದಲ್ಲಿದ್ದರು ಮತ್ತು 15 ದಿನಗಳ ಹಿಂದೆ ಇವರ ನಡುವಿನ ಸಂಬಂಧ ಮುರಿದು ಬಿತ್ತು. ಇದರಿಂದ ತುನಿಷಾ ಶರ್ಮಾ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಅದುವೇ ಅವರನ್ನು ಸಾವಿನ ದವಡೆಗೆ ದೂಡಿದೆ ಎಂದು ಶಂಕಿಸಲಾಗಿದೆ ಎಂದು ಸಾವಿನ ಘಟನೆ ಕುರಿತು ದಾಖಲಾದ ಎಫ್‌ಐಆರ್‌ನಲ್ಲಿ (FIR)  ಪೊಲೀಸರು ಹೇಳಿದ್ದಾರೆ. ಮಾತ್ರವಲ್ಲದೇ ಈ ಘಟನೆಯ ಹಿಂದೆ ಲವ್​ ಜಿಹಾದ್​ ಇದೆ ಎಂಬ ಮಾತೂ ಕೇಳಿಬರುತ್ತಿದೆ. ತುನಿಷಾ ಅವರಿಗೆ ಬುರ್ಖಾ ಧರಿಸುವಂತೆ ಖಾನ್​ ಹಾಗೂ ಆತನ ಮನೆಯವರು ಒತ್ತಾಯ ಹೇರುತ್ತಿದ್ದರು ಎಂಬ ಸುದ್ದಿ ಹರಿದಾಡುತ್ತಿದೆ. ಈ ಬಗ್ಗೆ ಕೂಡ ವಕೀಲರು ಕೋರ್ಟ್​ ಗಮನಕ್ಕೆ ತಂದಿದ್ದರು. ಈ ಎಲ್ಲಾ ವಿಚಾರಗಳನ್ನು ಕೋರ್ಟ್​ (court) ಗಣನೆಗೆ ತೆಗೆದುಕೊಂಡಿದ್ದರಿಂದ ಸದ್ಯ ನ್ಯಾಯಾಂಗ ಬಂಧನದಲ್ಲಿರುವ 28 ವರ್ಷದ ಶೀಜನ್ ಖಾನ್​ಗೆ ಜೈಲೇ ಗತಿಯಾಗಿದೆ. 

ಇದಕ್ಕೂ ಮೊದಲು ಕೂಡ ತುನಿಷಾ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂದು ಶೀಜಾನ್ ಪೊಲೀಸರ ಮುಂದೆ ಹೇಳಿಕೆ  ನೀಡಿದ್ದ. ತುನಿಷಾ ಇದಕ್ಕೂ ಮೊದಲು ಆತ್ಮಹತ್ಯೆಗೆ ಯತ್ನಿಸಿದ್ದಳು, ಆಗ ನಾನೇ ಆಕೆಯನ್ನು ರಕ್ಷಿಸಿದ್ದೆ. ಅಲ್ಲದೇ ಆಕೆಯ ತಾಯಿಗೆ ಆಕೆಯನ್ನು ಕಾಳಜಿಯಿಂದ ನೋಡುವಂತೆ ಹೇಳಿದ್ದೆ ಎಂದಿದ್ದ. ಇದು ಏಕೆ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಕಿರುತೆರೆ ನಟಿ ತುನಿಷಾ ಶರ್ಮಾಗೆ ಉರ್ದು ಕಲಿಯಲು ಒತ್ತಾಯಿಸಿದ ಖಾನ್ ಕುಟುಂಬ; ತಾಯಿ ಹೇಳಿಕೆ ವೈರಲ್

ಬಾಲನಟಿಯಾಗಿ ಹಿಂದಿ ಚಿತ್ರರಂಗದಲ್ಲಿ ವೃತ್ತಿ ಜೀವನ ಆರಂಭಿಸಿದ ತುನಿಷಾ ಶರ್ಮಾ, ಭಾರತ್ ಕಾ ವೀರ್ ಪುತ್ರ, ಮಹಾರಾಣಾ ಪತ್ರಾಪ್, ಚಕ್ರವರ್ತಿ ಸಾಮ್ರಾಟ್, ಗಬ್ಬಾರ್ ಪೂಂಚವಾಲ, ಶೇರ್ ಎ ಪಂಜಾಬ್, ಮಹಾರಾಜ ರಂಜಿತ್ ಸಿಂಗ್, ಇಂರ್ಟನೆಟ್ ವಾಲಾ, ಇಶ್ಕ್ ಶುಬಾನ್ ಅಲ್ಲಾ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ (Serial) ಕಾಣಿಸಿಕೊಂಡಿದ್ದಾರೆ. ಧಾರಾವಾಹಿ ಮಾತ್ರವಲ್ಲ, ಮರಾಠಿ, ಬಾಲಿವುಡ್ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಫಿತೂರ್, ಬಾರ್ ಬಾರ್ ದೇಖೋ ಕಹಾನಿ 2, ದುರ್ಗಾ ರಾಣಿ ಸಿಂಗ್, ದಬಾಂಗ್ 3 ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.  
 

click me!