ದೊಡ್ಡ ಸಂಚಲನ ಸೃಷ್ಟಿ ಮಾಡುತ್ತಿದೆ ಜ್ಯೋತಿಷಿ ವೇಣು ಸ್ವಾಮಿ ಹೇಳಿಕೆ. ಎರಡು ವರ್ಷದಲ್ಲಿ ಅಗಲಿರುವ ಸ್ಟಾರ್ ನಟ ಯಾರು?
ಟಾಲಿವುಡ್ ಮಂದಿ ಸಿನಿಮಾ ಮಾಡುವಾಗ ಕಥೆ, ನಿರ್ದೇಶಕ, ನಿರ್ಮಾಪಕ ಅಥವಾ ವೀಕ್ಷಕರನ್ನು ನಂಬುತ್ತಾರೋ ಇಲ್ವೋ ಆದರೆ ವೇಣು ಸ್ವಾಮಿ ನುಡಿಯುವ ಭವಿಷ್ಯದ ಮೇಲೆ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅಷ್ಟರ ಮಟ್ಟಕ್ಕೆ ವೇಣು ಸ್ವಾಮಿ ನುಡಿಗಳು ವೈರಲ್ ಆಗುತ್ತದೆ. ಏನೋ ಬಾಯಿಗೆ ಬಂದಂತೆ ಹೇಳುತ್ತಾರೆ ಎಂದು ಸುಮ್ಮನಾಗಲು ಸಾಧ್ಯವಿಲ್ಲ ಪಕ್ಕಾ 100% ನಿಜವೇ ಹೇಳುತ್ತಾರೆ. ಈಗ ವೇಣು ಸೆನ್ಸೇಷನ್ ಹೇಳಿಕೆ ವೈರಲ್ ಆಗುತ್ತಿದೆ.
ಪ್ರತಿ ಸಲವೂ ಸ್ಟಾರ್ ನಟರು ಅಥವಾ ಸಿನಿಮಾ ಉದ್ದೇಶಿಸಿ ಮಾತನಾಡುವ ವೇಣು ಸ್ವಾಮಿ ಈ ಸಲ ಸುಳಿವು ಕೊಡದೆ ಭವಿಷ್ಯ ನುಡಿದಿದ್ದಾರೆ. ತೆಲುಗು ಚಿತ್ರರಂಗದ ಸ್ಟಾರ್ ನಟರು ಖಂಡಿತಾ 2026ರೊಳಗೆ ಅನಾರೋಗ್ಯದಿಂದ ಬಳಲುತ್ತಾರೆ ಇಲ್ಲವಾದರೆ ಅಗಲುತ್ತಾರೆ. ಸಾವಾಗುವುದು ಕನ್ಫರ್ಮ್ ಎಂದಿದ್ದಾರೆ ಆದರೆ ಯಾರು ಆ ಇಬ್ಬರು ಎಂದು ಮಾತ್ರ ರಿವೀಲ್ ಮಾಡಿಲ್ಲ. ಹೀಗಾಗಿ ಚಿತ್ರರಂಗದಲ್ಲಿ ಗೊಂದಲ ಸೃಷ್ಟಿ ಮಾಡಿದೆ.
ಯಾರ್ಯಾರ ಬಗ್ಗೆ ಹೇಳಿದ್ದಾರೆ:
ವಿಜಯ್ ದೇವರಕೊಂಡ ಲೈಗರ್ ಸಿನಿಮಾ ಸೋಲುತ್ತದೆ ಎಂದು ವೇಣು ಹೇಳಿದ್ದರು. ಅಷ್ಟಮ ಶನಿ ಆರಂಭವಾಗುತ್ತಿರುವ ಕಾರಣ ವಿಜಯ್ ಏನೇ ಕೆಲಸ ಮಾಡಿದರೂ ಸೋಲುತ್ತಾರೆ ಹಾಗೂ ಮಾತನಾಡುವಾಗ ಯೋಚನೆ ಮಾಡಬೇಕು ಹೀಗಾಗಿ ಸದ್ಯಕ್ಕೆ ಸಿನಿಮಾ ಒಪ್ಪಿಕೊಳ್ಳಬಾರದು ಎಂದಿದ್ದರು.
ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಮದುವೆ?; ತಮಿಳು ಹಾಸ್ಯ ನಟ ಜೊತೆ ಸಂಬಂಧ!
ನರೇಶ್- ಪವಿತ್ರಾ ಮದುವೆಗೂ ಮುನ್ನವೇ ನರೇಶ್ ಮತ್ತು ರಮ್ಯಾ ಮದುವೆ ಮುರಿದು ಬೀಳುತ್ತದೆ ಎಂದು ವೇಣು ಸ್ವಾಮಿ ಹೇಳಿದ್ದರು. ಇಬ್ಬರ ಜಾತಕ ಮ್ಯಾಜ್ ಆಗುತ್ತಿರಲಿಲ್ಲ ಬೇಡ ಬೇಡ ಎಂದು ವೇಣು ಹೇಳಿದ್ದರೂ ಕೇಳದೆ ಮದುವೆ ಮಾಡಿಕೊಂಡು ನರೇಶ್ ಡಿಪೋರ್ಸ್ ಪಡೆಯುವ ಹಂತ ತಲುಪಿದ್ದಾರೆ. ಸದ್ಯಕ್ಕೆ ಪವಿತಾ ಮತ್ತು ನರೇಶ್ ಬಗ್ಗೆ ಯಾವ ಮಾಹಿತಿ ನೀಡಿಲ್ಲ.
ಈಗಷ್ಟೇ ಜನಿಸಿರುವ ರಾಮ್ ಚರಣ್ ಪುತ್ರಿ ಬಗ್ಗೆನೂ ಕಾಮೆಂಟ್ ಮಾಡಿದ್ದಾರೆ. ಮಗುವಿನ ಪಿನ್ ಟು ಪಿನ್ ಭವಿಷ್ಯ ಹೇಳಿರುವ ವೇಣು ಸ್ವಾಮಿ ಸಣ್ಣಪುಟ್ಟ ದೋಷಗಳಿದೆ ಎಂದು ಹೇಳಿದ್ದಾರೆ. ಹಲ್ಲು ಹಾಗೂ ಕಿವಿಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುವ ಸಾಧ್ಯತೆಗಳು ಹೆಚ್ಚಿದೆ ಎಂದಿದ್ದಾರೆ. ಅಲ್ಲದೆ ಮಗುವಿನ ಜನನದಿಂದ ತಾಯಿ, ತಂದೆ, ತಾತ ಹಾಗೂ ಎಲ್ಲರೂ ಒಂದಾಗುತ್ತಾರೆ ಎಂದಿದ್ದಾರೆ. ಎಲ್ಲಾ ಹೇಳಿಕೆಗೂ ಸ್ಪಷ್ಟನೆ ಕೊಡುವ ವೇಣು ಸ್ವಾಮಿ ಈ ಮಾತಿನ ಅರ್ಥ ಏನೆಂದು ಬಿಡಿಸಿ ಹೇಳಲಿಲ್ಲ ಹೀಗಾಗಿ ಅಭಿಮಾನಿಗಳು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.
ಅಚ್ಚರಿ ಘಟನೆ: ಅಪ್ಪು ಸಮಾಧಿ ಪ್ರದಕ್ಷಿಣೆ ಹಾಕಿ ನಿಂತಲ್ಲೇ ನಿಂತ ಬಸವ
ಪ್ರಭಾಸ್ ಅನಾರೋಗ್ಯದ ಸುಳಿವು ಕೊಟ್ಟಿದ್ದರು. ಪ್ರಭಾಸ್‌ಗೆ ಈ ವರ್ಷ ಸಾಕಷ್ಟ ಆರೋಗ್ಯ ಸಮಸ್ಯೆ ಎದುರಾಗುತ್ತದೆ. ಸದ್ಯಕ್ಕೆ ಶನಿ, ಗುರು ಸ್ಥಾನ ಬದಲಾಗುತ್ತಿರುವುದರಿಂದ ಪ್ರಭಾಸ್ ಜಾತಕದಲ್ಲಿ ಸಮಸ್ಯೆ ಕಾಣಿಸುತ್ತದೆ. ಪ್ರಭಾಸ್‌ದು ವೃಶ್ಚಿಕ ರಾಶಿ, ಅಷ್ಟಾರ್ಥಕ ಶನಿ ಒಂದು ಕಡೆ, ಅಷ್ಟಮ ಗುರು ಮತ್ತೊಂದು ಕಡೆ, ಷಷ್ಠಮ ಗುರು ಮತ್ತೊಂದು ಕಡೆ ಇರುವುದರಿಂದ ಪ್ರಭಾಸ್ ಸಮಸ್ಯೆ ಎದುರಿಸುವ ಸಾಧ್ಯತೆಗಳಿದೆ ಎಂದು ವೇಣುಸ್ವಾಮಿ ಹೇಳಿದ್ದಾರೆ.