ಕೀರ್ತಿ ಸುರೇಶ್ ಕೆನ್ನೆ ಕಚ್ಚಿದ ಸ್ಟಾರ್ ಹೀರೋ ಮಗ; ರಹಸ್ಯ ಬಿಚ್ಚಿಟ್ಟ ನಟಿ

By Mahmad Rafik  |  First Published Aug 1, 2024, 9:32 PM IST

ಸ್ಟಾರ್ ನಟಿಯಾಗಿರುವ ಕೀರ್ತಿ ಸುರೇಶ್ ಅವರ ಮುದ್ದಾದ ಕೆನ್ನೆಯನ್ನು ಖ್ಯಾತ ನಟನ ಪುತ್ರ ಕಚ್ಚಿದ್ದಾನೆ. ಈ ವಿಷಯವನ್ನು ಕೀರ್ತಿ ಸುರೇಶ್ ಅವರೇ ರಿವೀಲ್ ಮಾಡಿದ್ದಾರೆ. 


ಹೈದರಾಬಾದ್: ದಕ್ಷಿಣ ಸಿನಿಮಾ ಅಂಗಳದ ಟಾಪ್ ನಟಿಯರಲ್ಲಿ ಒಬ್ಬರಾಗಿರುವ ನಟಿಯರ ಪೈಕಿ ಕೀರ್ತಿ ಸುರೇಶ್ ಸಹ ಒಬ್ಬರು. ಈ ವರ್ಷ ಬಾಲಿವುಡ್ ಅಂಗಳಕ್ಕೂ ಕೀರ್ತಿ ಸುರೇಶ್ ಪಾದಾರ್ಪಣೆ ಮಾಡಲಿದ್ದು,  ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ತಮಿಳಿನ ಬ್ಲಾಕ್ ಬಸ್ಟರ್ 'ತೇರಿ' ಸಿನಿಮಾದ ರಿಮೇಕ್ 'ಬೇಬಿ ಜಾನ್' ಚಿತ್ರದಲ್ಲಿ ಕೀರ್ತಿ ಸುರೇಶ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಚಾಕ್ಲೇಟ್ ಹೀರೋ ವರುಣ್ ಧವನ್ ನಟಿಸುತ್ತಿದ್ದು, ಬಿಡುಗಡೆಗೂ ಮುನ್ನವೇ ಭರವಸೆಯನ್ನು ಮೂಡಿಸಿದೆ. ಇದರ ಜೊತೆಗೆ ಹಲವು ಸಿನಿಮಾಗಳು ಕೀರ್ತಿ ಸುರೇಶ್ ಬ್ಯಾಗ್‌ನಲ್ಲಿವೆ. ತೆಲುಗಿನ ಸುಹಾಸ್ ಜೊತೆಯಲ್ಲಿ ನಟಿಸುತ್ತಿರುವ ಚಿತ್ರ ನೇರವಾಗಿ ಅಮೆಜಾನ್ ಪ್ರೈಂನಲ್ಲಿಯೇ ಬಿಡುಗಡೆಯಾಗಲಿದೆ. 

ಮೂರು ಮಹಿಳಾ ಪ್ರಧಾನ ಆಧರಿತ ಸಿನಿಮಾಗಳನ್ನು ಒಪ್ಪಿಕೊಂಡಿರುವ ನಟಿ ಕೀರ್ತಿ ಸುರೇಶ್ ತಮ್ಮ ಕೆನ್ನೆಯನ್ನು ಸ್ಟಾರ್ ನಟ ಮಗ ಕಚ್ಚಿರುವ ವಿಷಯವನ್ನು ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಕೆನ್ನೆ ಕಚ್ಚಿದ ಆ ನಟನ ಮಗ ಯಾರು ಎಂದು ಕೇಳಿದ್ದಾರೆ. ಅಭಿಮಾನಿಗಳ ಪ್ರಶ್ನೆಗೆ ಆ ತುಂಟ ಯಾರೆಂದು ಕೀರ್ತಿ ಸುರೇಶ್ ಉತ್ತರ ನೀಡಿದ್ದಾರೆ. 

Tap to resize

Latest Videos

ಕೀರ್ತಿ ಸುರೇಶ್ ಮತ್ತು ನಟ ನಾನಿ ಇಬ್ಬರು ಒಳ್ಳೆಯ ಸ್ನೇಹಿತರಾಗಿದ್ದು, ಜೊತೆಯಾಗಿ ನಟಿಸಿರುವ ನೇನು ಲೋಕಲ್ ಮತ್ತು ದಸರಾ ಚಿತ್ರದಲ್ಲಿ ಇಬ್ಬರ ಕೆಮೆಸ್ಟ್ರಿ ತೆರೆಯ ಮೇಲೆ ಮೂಡಿ ಮಾಡಿತ್ತು. ಶೈಲಜಾ ಚಿತ್ರ ಕೀರ್ತಿ ಸುರೇಶ್ ನಟನೆಗೆ ಮೊದಲ ತೆಲಗು ಸಿನಿಮಾ. ಎರಡನೇ ಚಿತ್ರ ನೇನು ಲೋಕಲ್‌ನಲ್ಲಿ ನಾನಿ ಜೊತೆ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದರು. ಹಾಗಾಗಿ ತೆಲಗು ಸಿನಿಮಾ ಅಂಗಳದಲ್ಲಿರುವ ಒಳ್ಳೆಯ ಸ್ನೇಹಿತರಲ್ಲಿ ನಾನಿ ಸಹ ಒಬ್ಬರಾಗಿದ್ದಾರೆ. ಸಿನಿಮಾದ ಹೊರತಾಗಿಯೂ ನಾನಿ ಕುಟುಂಬದ ಜೊತೆಯೂ ಕೀರ್ತಿ ಸುರೇಶ್ ಒಳ್ಳೆಯ ಬಾಂಧವ್ಯವನ್ನು ಹೊಂದಿದ್ದರೆ. 

ಲಿಪ್​ಲಾಕ್​ಗೆ ಒಲ್ಲೆ ಎನ್ನುತ್ತಲೇ ಸಿನಿಮಾ ರಿಜೆಕ್ಟ್​ ಮಾಡ್ತಿದ್ದ ನಟಿಗೆ ಇದೇನಾಗೋಯ್ತು? ಅಯ್ಯೋ ಕೀರ್ತಿ ಹೀಗೆಕಾದೆ?

ಇತ್ತೀಚೆಗೆ ನೀಡಿದ ಸಂದರ್ಶನದಲ್ಲಿ ನಾನಿ ಹಾಗೂ ಅವರ ಕುಟುಂಬದ ಜೊತೆಗಿನ ಬಗ್ಗೆ ಕೀರ್ತಿ ಸುರೇಶ್ ಹೇಳಿಕೊಂಡಿದ್ದರು. ನಾನು ಹೈದರಾಬಾದ್‌ಗೆ ಬಂದಾಗ ನಾನಿ ಮನೆಗೆ ಹೋಗಿ ಅವರ ಕುಟುಂಬಸ್ಥರನ್ನು ಭೇಟಿಯಾಗಿ ಬರುತ್ತೇನೆ. ನಾನಿ ಪತ್ನಿ ಸಹ ತುಂಬಾ ಆತ್ಮೀಯವಾಗಿ ನಡೆದುಕೊಳ್ಳುತ್ತಾರೆ. ನಾನಿಯವರ ಮಗ ಚಿಕ್ಕವನಿದ್ದಾಗ ನನ್ನನ್ನು ಗರ್ಲ್‌ಫ್ರೆಂಡ್ ಎಂದು ಕರೆಯುತ್ತಿದ್ದನು. ಈಗ ದೊಡ್ಡವನಾಗಿದ್ದು, ಮುದ್ದಾಗಿ ಆಂಟಿ ಎಂದು ಕರೆಯುತ್ತಾನೆ.

ನನ್ನ ಹುಟ್ಟುಹಬ್ಬದಂದು ವಾಯ್ಸ್ ನೋಟ್ ಕಳುಹಿಸಿ ವಿಶ್ ಮಾಡಿದ್ದನು. ಅವನ ನೆನಪು ಆದಾಗೆಲ್ಲಾ ಆ ಕ್ಯೂಟ್ ವಾಯ್ಸ್ ನೋಟ್ ಕೇಳುತ್ತಾನೆ. ನಾನು ಮನೆಗೆ ಹೋದಾಗಲೆಲ್ಲಾ ನನ್ನನ್ನು ತಬ್ಬಿಕೊಂಡು ಕೆನ್ನೆಗೆ ಮುತ್ತು ಕೊಡುತ್ತಿದ್ದನು. ಒಮ್ಮೆಯಂತೂ ಕಚ್ಚಿಯೇ ಬಿಟ್ಟಿದ್ದನು ಎಂದು ಹೇಳಿ ಕೀರ್ತಿ ಸುರೇಶ್ ನಕ್ಕರು.

 ಬ್ಯಾಕ್ ಲೆಸ್ ಬ್ಲೌಸ್ ಧರಿಸಿ ಕಣ್ಣೋಟದಲ್ಲೇ ಹುಡುಗರ ಎದೆಗೆ ಗುರಿ ಇಟ್ಟ ಕೀರ್ತಿ ಸುರೇಶ್

ನಾನಿ ಜೊತೆ ನಟಿಸಿರುವ ಪ್ರತಿಯೊಬ್ಬ ನಾಯಕಿ ಅವರ ಜೊತೆ ಒಳ್ಳೆಯ ಒಡನಾಟ ಹೊಂದಿದ್ದಾರೆ. ಸಾಯಿ ಪಲ್ಲವಿ, ಸಮಂತಾ, ನಜ್ರಿಯಾ, ನಿತ್ಯಾ ಮೆನನ್, ಮೃಣಾಲ್ ಠಾಕೂರ್ ಸೇರಿದಂತೆ ಹಲವು ಕಲಾವಿದರು ನಾನಿ ಕುಟುಂಬದ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. 

click me!