
ಅರ್ಜುನ್ ಕಪೂರ್ ಮಾಂಗಲ್ಯ ಹಿಡಿದು ನಗುವ ಫೋಟೋ ಶೇರ್ ಮಾಡಿದ್ದಾರೆ. ಅರೆ ಮಲೈಕಾ ಮತ್ತು ಅರ್ಜುನ್ ಶೀಘ್ರ ಮದುವೆಯಾಗ್ತಿದ್ದಾರಾ ಎಂಬ ಪ್ರಶ್ನೆ ತಟ್ಟನೆ ಮೂಡುವಂತಿದೆ ಫೋಟೋ. ಆದ್ರೆ ರೀಸನ್ ಬೇರೆ ಇದೆ.
ಬಾಲಿವುಡ್ ನಟ ಅರ್ಜುನ್ ಕಪೂರ್ ಅವರ ಹಿಟ್ ಚಿತ್ರ ಕಿ ಮತ್ತು ಕಾ ಐದು ವರ್ಷಗಳನ್ನು ಮುಗಿಸಿದೆ. ಇದರ ಖುಷಿ ಆಚರಿಸೋಕೆ ನಟ ಒಂದು ಚಮತ್ಕಾರಿ ಮಾರ್ಗವನ್ನು ಕಂಡುಹಿಡಿದಿದ್ದಾರೆ.
ಕರೀನಾ ಕಪೂರ್ ಖಾನ್ ಅವರೊಂದಿಗೆ ನಟಿಸಿದ್ದ ಸಿನಿಮಾ ಸೂಪರ್ ಹಿಟ್ ಆಗಿತ್ತು. ಆರ್ ಬಾಲ್ಕಿ ನಿರ್ದೇಶಿಸಿದ, ಕಿ ಮತ್ತು ಕಾ ಯುವ, ವಿವಾಹಿತ ದಂಪತಿಗಳನ್ನು ತೋರಿಸಿದೆ. ಅವರ ಸಂಬಂಧವು ಭಾರತೀಯ ಸಮಾಜದಲ್ಲಿ ಮಹಿಳೆಯರು ಮತ್ತು ಪುರುಷರ ಮೇಲೆ ಇರಿಸಲಾಗಿರುವ ಲಿಂಗ ಅಸಮಾನತೆಯನ್ನು ಪ್ರಶ್ನಿಸುತ್ತದೆ.
ಫೆಬ್ರವರಿಯಲ್ಲಿ ಉದ್ಯಮಿ ವೈಭವ್ ಮದುವೆ ಆಗಿದ್ದ ನಟಿ ದಿಯಾ ಮಿರ್ಜಾ ಗರ್ಭಿಣಿ
ಸಿನಿಮಾ ಐದು ವರ್ಷಗಳನ್ನು ಪೂರ್ತಿಗೊಳಿಸುತ್ತಿದ್ದಂತೆ ಅರ್ಜುನ್ ತನ್ನ ಇನ್ಸ್ಟಾಗ್ರಾಮ್ ಖಾತೆಗೆ ಸ್ವತಃ ಮಂಗಳಸೂತ್ರವನ್ನು ಹಿಡಿದಿರುವ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದು ಸಿನಿಮಾ ಸ್ಮರಣೆಯ ತುಣುಕು ಎಂದು ಹೇಳಿದ್ದಾರೆ.
ಕಿ ಮತ್ತು ಕಾ ವಿಶೇಷ ವಿಸ್ತೃತ ಪಾತ್ರಗಳಲ್ಲಿ ಅಮಿತಾಬ್ ಬಚ್ಚನ್ ಮತ್ತು ಜಯ ಬಚ್ಚನ್ ನಟಿಸಿದ್ದಾರೆ. ಅರ್ಜುನ್ ತನ್ನ ಪೋಸ್ಟ್ನಲ್ಲಿ, ಕಿ ಮತ್ತು ಕಾ ಅವರ ತಾಯಿ ದಿವಂಗತ ಮೋನಾ ಶೌರಿ ಕಪೂರ್ ಅವರಿಗೆ ಗೌರವವಾಗಿ ಸಹಿ ಮಾಡುವ ಬಗ್ಗೆ ಮಾತನಾಡಿದ್ದಾರೆ.
ಕರಣ್ ಜೋಹರ್ ಚಿತ್ರದಲ್ಲಿ ರಣವೀರ್, ಆಲಿಯಾ ಜೊತೆ ಸೈಫ್ ಪುತ್ರ ಇಬ್ರಾಹಿಂ!
ಕಳೆದ ವಾರ ನಟ ತನ್ನ ತಾಯಿಯ ಪುಣ್ಯಸ್ಮರಣೆಯಂದು ಭಾವನಾತ್ಮಕ ಪೋಸ್ಟ್ ಮಾಡಿದ್ದರು. ಭಾವನಾತ್ಮಕ ಪೋಸ್ಟ್‌ನಲ್ಲಿ ಅರ್ಜುನ್ 9 ವರ್ಷಗಳು, ಇದು ಸರಿಯಲ್ಲ. ಐ ಮಿಸ್ ಯು ಮಾ ಕಮ್ ಬ್ಯಾಕ್ ನಾ ಪ್ಲೀಸ್… ನನ್ನ ಬಗ್ಗೆ ಚಿಂತೆ ಮಾಡುವುದು, ನನ್ನ ಜೊತೆ ಬೆರೆಯುವುದು, ನನ್ನ ಫೋನ್‌ನಲ್ಲಿ ನಿಮ್ಮ ಹೆಸರು ಕಾಣುವುದನ್ನು ನಾನು ಮಿಸ್ ಮಾಡಿಕೊಳ್ತಿದ್ದೇನೆ, ಮನೆಗೆ ಬಂದು ನಿಮ್ಮನ್ನು ನೋಡುವುದನ್ನು ನಾನು ಮಿಸ್ ಮಾಡಿಕೊಳ್ತಿದ್ದೇನೆ … ನಿಮ್ಮ ನಗುವನ್ನು ಮಿಸ್ ಮಾಡಿಕೊಳ್ತಿದ್ದೇನೆ, ನಿಮ್ಮ ಧ್ವನಿಯನ್ನು ನನ್ನ ಕಿವಿಯಲ್ಲಿ ಪ್ರತಿಧ್ವನಿಸುವ ಅರ್ಜುನ್ ಕರೆಯನ್ನು ಮಿಸ್ ಮಾಡಿಕೊಳ್ತಿದ್ದೇನೆ. ನಾನು ನಿಜವಾಗಿಯೂ ನಿಮ್ಮನ್ನು ಮಿಸ್ ಮಾಡಿಕೊಳ್ತಿದ್ದೇನೆ ಮಾಮ್. ನೀವು ಎಲ್ಲಿದ್ದರೂ ನೀವು ಚೆನ್ನಾಗಿದ್ದೀರಿ ಎಂದು ನಾನು ಭಾವಿಸುತ್ತೇನೆ, ಹಿಂತಿರುಗಿ ಎಂದಿದ್ದಾರೆ. ಅರ್ಜುನ್ ಕಪೂರ್ 2012 ರಲ್ಲಿ ತಾಯಿಯನ್ನು ಕಳೆದುಕೊಂಡರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.