
ಬಾಲಿವುಡ್‌ನ ಅತ್ಯಂತ ಬ್ಯುಸಿ ನಟಿಯರಲ್ಲಿ ಒಬ್ಬರಾದ ಕರೀನಾ ಕಪೂರ್ ಅವರು ಬುಧವಾರ ತನ್ನ ಸ್ನೇಹಿತೆ ಅಮೃತಾ ಅರೋರಾ ಅವರ ಮನೆಯಲ್ಲಿ ಕಂಡುಬಂದರು. ಕರೀನಾ ಬಿಳಿ ಟೀ ಶರ್ಟ್ ಮತ್ತು ಟ್ರಾಕ್ ಪ್ಯಾಂಟ್ ಧರಿಸಿರುವುದು ಕಂಡುಬಂತು. ನಟಿಯನ್ನು ಪಾಪರಾಜಿಗಳು ಪ್ರೀತಿಸುತ್ತಿದ್ದರೆ, ಅವರು ಮಾತ್ರ ಅಸಮಾಧಾನಗೊಂಡಿದ್ದಾರೆ.
ಒಂದು ಸಣ್ಣ ಕ್ಲಿಪಿಂಗ್ ಅನ್ನು ತಡ್ಕಾ ಬಾಲಿವುಡ್ ತನ್ನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದೆ. ಅಲ್ಲಿ ಜಬ್ ವಿ ಮೆಟ್ ನಟಿ ತನ್ನ ಅತ್ಯುತ್ತಮ ಸ್ನೇಹಿತೆ ಮನೆಯಿಂದ ಹೊರಬರುತ್ತಿದ್ದರು.
ಮಗುವಾದ ತಿಂಗಳಲ್ಲಿಯೇ ಮತ್ತೆ ಶೂಟಿಂಗ್ ಆರಂಭಿಸಿದ ಕರೀನಾ ಕಪೂರ್!
ವೀಡಿಯೊದಲ್ಲಿ, ಬೆಬೊ ಫೋಟೋಗ್ರಫರ್‌ಗಳು ಕಟ್ಟಡದ ಒಳಗಿನಿಂದ ತನ್ನ ಚಿತ್ರಗಳನ್ನು ಕ್ಲಿಕ್ ಮಾಡುವುದನ್ನು ಗಮನಿಸಿದರು ಮತ್ತು ನಂತರ ಅವಳ ಕೈಗಳನ್ನು ತೋರಿಸುವ ಮೂಲಕ ಚಿತ್ರಗಳನ್ನು ಕ್ಲಿಕ್ ಮಾಡದಂತೆ ಕೇಳಿಕೊಂಡರು.
ನಟಿ ಪಾಪರಾಜಿಗಳು ತಮ್ಮ ಫೋಟೋ ಕ್ಲಿಕ್ ಮಾಡಲು ಒಟ್ಟುಗೂಡಿದಾಗ ಸಾಮಾಜಿಕ ದೂರವನ್ನು ಕಾಪಾಡಿಕೊಳ್ಳಲು ಕೇಳಿಕೊಂಡಿದ್ದರು. ಇನ್ಸ್ಟಾಗ್ರಾಮ್ನಲ್ಲಿ ವೀಡಿಯೊವನ್ನು ಹಂಚಿಕೊಳ್ಳಲಾಗಿದೆ. ಅದರಲ್ಲಿ ಕರೀನಾ ಅವರ ಮಾಸ್ಕ್ ತೆಗೆಯಲು ಕೇಳಲಾಯಿತು. ಅದಕ್ಕೆ ನಟಿ ಒಪ್ಪಿಕೊಂಡರು, ಕ್ಯಾಮೆರಾ ಪರ್ಸನ್ಸ್ ಅವರಿಂದ ಸ್ವಲ್ಪ ಅಂತರ ಕಾಯ್ದುಕೊಂಡರು
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.