Urfi vs Malaika: ಉರ್ಫಿ ಪಕ್ಕ ನಿಲ್ಲಲು ಹೆದರಿದ ಅರ್ಜುನ್​ ಕಪೂರ್​, ಗರ್ಲ್‌ಫ್ರೆಂಡ್‌ಗೆ ಹೆದರಿದ್ರಾ ಅಂದ್ರು ನೆಟ್ಟಿಗರು!

By Suvarna News  |  First Published Mar 5, 2023, 10:52 AM IST

ನಟ ಅರ್ಜುನ್​ ಕಪೂರ್​ ಬೇಡಬೇಡ ಎನ್ನುತ್ತಲೇ ನಟಿ ಉರ್ಫಿ ಜಾವೇದ್​ ಜೊತೆ ಫೋಟೋ ತೆಗೆಸಿಕೊಂಡಿದ್ದಾರೆ. ಇದೀಗ ಅವರು ಟ್ರೋಲ್​ಗೆ ಒಳಗಾಗುತ್ತಿದ್ದಾರೆ. ಏನನ್ನುತ್ತಿದ್ದಾರೆ ಟ್ರೋಲಿಗರು?
 


ನಟಿ ಉರ್ಫಿ ಜಾವೇದ್​ ಎಂದಾಕ್ಷಣ ಏನು ನೆನಪಾಗುತ್ತದೆ ಎಂದು ಬೇರೆ ಹೇಳಬೇಕಿಲ್ಲ. ಫ್ಯಾಷನ್​ (Fashion) ಲೋಕದಲ್ಲಿ ಕಾಣಸಿಗದ ಎಲ್ಲಾ ವಸ್ತುಗಳನ್ನೂ ತನ್ನ ಮೈಮೇಲೆ ಹಾಕಿಕೊಂಡು ದಿನವೂ ವಿಚಿತ್ರ ವೇಷದಲ್ಲಿ ಕಾಣಿಸಿಕೊಳ್ಳುತ್ತಿರೋ ಈ ನಟಿ ದಿನವೂ ಟ್ರೋಲ್​ಗೆ ಒಳಗಾಗುತ್ತಲೇ ಇದ್ದಾರೆ. ಇದೇ ಆಕೆಗೆ ಖುಷಿ. ಬಟ್ಟೆ ಹಾಕಿಕೊಂಡರೆ ಮೈಮೇಲೆಲ್ಲಾ ಗುಳ್ಳೆಗಳು ಏಳುತ್ತದೆ ಎಂದು ಹೇಳಿಕೊಂಡಿರೋ ಉರ್ಫಿ (Urfi Javed) ಅಂಗಾಂಗ ಪ್ರದರ್ಶನ ಮಾಡದೇ ಯಾವ ಬಟ್ಟೆಗಳನ್ನೂ ಹಾಕಿಕೊಳ್ಳುವುದಿಲ್ಲ. ಈಕೆ ಟ್ರೋಲ್​ ಆಗುತ್ತಿರುವ ಪರಿಯನ್ನು ಕಂಡು ಚಿತ್ರ ನಟರೇ ಹೆದರುತ್ತಿದ್ದಾರೆ ಎನ್ನುವುದಕ್ಕೆ ನಟ ಅರ್ಜುನ್​ ಕಪೂರ್​ ಅವರ ಈ ವೈರಲ್​ ವಿಡಿಯೋನೇ ಸಾಕ್ಷಿ. 

ಅಷ್ಟಕ್ಕೂ ತಮಗಿಂತ ತೀರಾ ದೊಡ್ಡವಳಾಗಿರುವ ಮಲೈಕಾ ಅರೋರಾರನ್ನು (Mallaika Arora) ಮದುವೆಯಾಗಿರುವ ಅರ್ಜುನ್​ ಕಪೂರ್​ಗೆ ಇಂಥ ತುಂಡುಡುಗೆ ಹೊಸ ವಿಷಯವೇನೂ ಅಲ್ಲ ಬಿಡಿ. ವಯಸ್ಸು 50ರ ಸಮೀಪ ಬಂದರೂ ಅಂಗಾಂಗ ಪ್ರದರ್ಶನವನ್ನೇ ಬಂಡವಾಳ ಮಾಡಿಕೊಂಡಿರುವ ಮಲೈಕಾಗೂ ಉರ್ಫಿಗೂ ಬಟ್ಟೆಯಲ್ಲಿ ಹೆಚ್ಚೇನೂ ವ್ಯತ್ಯಾಸವಿಲ್ಲ. ಉರ್ಫಿ ತನ್ನ ಬಟ್ಟೆಗಳ ಜೊತೆ ಕೆಲವೊಂದು ಸ್ಟೇಟ್​ಮೆಂಟ್​ಗಳನ್ನು(Statement) ಕೊಡುತ್ತಾ ಸುದ್ದಿಯಲ್ಲಿ ಇದ್ದರೆ, ಈ ವಯಸ್ಸಿನಲ್ಲಿಯೂ ಅತ್ಯಂತ ಕಡಿಮೆ ತುಂಡುಡುಗೆ (Bikini)  ಹಾಕಿಕೊಂಡು ಚಿಕ್ಕ ವಯಸ್ಸಿನ ಗಂಡನೊಂದಿಗೆ ತಿರುಗುತ್ತಿರುವ ಕಾರಣ  ಮಲೈಕಾ ಟ್ರೋಲ್​ ಆಗುತ್ತಿದ್ದಾರೆ ಅಷ್ಟೇ. ಎರಡನೆಯ ಮದುವೆಯಾಗಿರುವಾಗಲೇ ಮೊದಲ ಪತಿ ಅರ್ಬಾಜ್​ ಖಾನ್​ರನ್ನು(Arbaaz Khan)  ಆಗಾಗ್ಗೆ ತಬ್ಬಿಕೊಳ್ಳುವ ಕಾರಣದಿಂದಲೂ ಮಲೈಕಾ ಟ್ರೋಲ್​ ಆಗುವುದು ಇದೆ. ಮಗನ ಸಲುವಾಗಿ ತಾವಿಬ್ಬರೂ ಉತ್ತಮ ಬಾಂಧವ್ಯ ಹೊಂದಿದ್ದೇವೆ ಎನ್ನುತ್ತಲೇ ಮೊದಲ ಪತಿಯನ್ನು ಆಗಾಗ್ಗೆ ಮಲೈಕಾ ಭೇಟಿಯಾಗುತ್ತಾರೆ.

ಆದರೂ ಈ ವಿಡಿಯೋದಲ್ಲಿ ನಟಿ ಉರ್ಫಿಯನ್ನು ಕಂಡು ಅರ್ಜುನ್​ ಕಪೂರ್​ ಹೆದರಿದಂತೆ ಕಾಣುತ್ತಿದೆ. ಅಷ್ಟಕ್ಕೂ ಆಗಿದ್ದೇನೆಂದರೆ, ಈ ವೈರಲ್​ ವಿಡಿಯೋದಲ್ಲಿ ಅರ್ಜುನ್ ಕಪೂರ್ ಜೊತೆ  ಫೋಟೋ ತೆಗೆಸಿಕೊಳ್ಳಲು ಉರ್ಫಿ ಏನೆಲ್ಲಾ ಸಾಹಸ ಮಾಡಿದರು ಎನ್ನುವುದನ್ನು ಕಾಣಬಹುದು. ಉರ್ಫಿ ಫೋಟೋಗೆ ತನ್ನ ಜೊತೆ ಪೋಸ್​ ಕೊಡಿ ಎಂದು ನಟ ಅರ್ಜುನ್ ಕಪೂರ್ ಅವರನ್ನು  ವಿನಂತಿಸುತ್ತಿದ್ದಂತೆ ಅವರು ಕೊಂಚ ಗಾಬರಿಯಾದದ್ದನ್ನು ಸ್ಪಷ್ಟವಾಗಿ ವಿಡಿಯೋದಲ್ಲಿ ನೋಡಬಹುದು. ಮನಸ್ಸಿಲ್ಲದ ಮನಸ್ಸಿನಿಂದ ಕೃತಕವಾಗಿ ಸ್ಮೈಲ್​ (Smile) ಕೊಟ್ಟು ಯಾವಾಗ ಅಲ್ಲಿಂದ ಕಳಚಿಕೊಳ್ಳುತ್ತೇನೋ ಎನ್ನುವಂತೆ ಅರ್ಜುನ್​ ಕಪೂರ್​ ಪೋಸ್​ ಕೊಟ್ಟಿದ್ದಾರೆ.

Tap to resize

Latest Videos

Malaika Arora: ಮಾಜಿ ಪತಿಯನ್ನು ತಬ್ಬಿಕೊಂಡು ಸುದ್ದಿಯಾಗ್ತಿದ್ದಾರೆ ನಟಿ ಮಲೈಕಾ ಅರೋರಾ!
 
ಇದು ನಡೆದಿರುವುದು ಮುಂಬೈನ (Mumbai) ಕಾರ್ಯಕ್ರಮವೊಂದರಲ್ಲಿ. ಫೋಟೋ ತೆಗೆಸಿಕೊಳ್ಳಲು ಉರ್ಫಿ ಮುಂದಾದಾಗ ಮೊದಲು ಅರ್ಜುನ್​ ನಿರಾಕರಿಸಿದ್ದಾರೆ. ನಂತರ  ಉರ್ಫಿ  ವಿನಂತಿಸಿಕೊಂಡಾಗ (Request) ಓಕೆ ಅಂದು ಫೋಟೋ ತೆಗೆಸಿಕೊಂಡ ರೀತಿಯಲ್ಲಿ ಅವರು ಸಕತ್​ ಟ್ರೋಲ್​  (Troll) ಆಗುತ್ತಿದ್ದಾರೆ.  ಅರ್ಜುನ್ ಕಪೂರ್ ಜೊತೆ ಫೋಟೋ ತೆಗೆಸಿಕೊಂಡ ಖುಷಿಯಲ್ಲಿ ಉರ್ಫಿ ಇದ್ದರೆ, ಅರ್ಜುನ್​ ಕಪೂರ್​ ಬೆಪ್ಪನಂತೆ ನಿಂತಿದ್ದಾರೆ. ಅರ್ಜುನ್​ ಕಪೂರ್​ರನ್ನು ಟ್ರೋಲ್​ (Troll) ಮಾಡುತ್ತಿರುವ ನೆಟ್ಟಿಗರು ಯಾಕೆ ನಿಮ್ಮ ಪತ್ನಿ ಮಲೈಕಾ ಅರೋರಾರ ಭಯವೇ ಎಂದು ಪ್ರಶ್ನಿಸಿದ್ದಾರೆ. ನಿಮಗೆ ಈ ರೀತಿಯ ತುಂಡುಡುಗೆ ಹೊಸತೇನೂ ಅಲ್ಲ. ವಯಸ್ಸಾದ ನಿಮ್ಮ ಪತ್ನಿಯೇ ಹೀಗೆ ಧರಿಸುವಾಗ ತೀರಾ ಚಿಕ್ಕವಳಾಗಿರುವ ಉರ್ಫಿ  ಜೊತೆ ನಿಲ್ಲಲು ಭಯವೇಕೆ ಪಡುತ್ತಿದ್ದೀರಿ ಎಂದು ಇನ್ನು ಕೆಲವರು ಪ್ರಶ್ನಿಸಿದ್ದಾರೆ.  ಚಿಕ್ಕ ವಯಸ್ಸಿನ ಹುಡುಗಿ ಜೊತೆ ತಮ್ಮ ಚಿಕ್ಕ ಪತಿ ನಿಂತುಕೊಂಡರೆ ಮಲೈಕಾ ಎಲ್ಲಿ ಗದರುತ್ತಾರೆ ಎಂಬ ಭಯವೇ ಎಂದು ಇನ್ನು ಕೆಲವರು ಅರ್ಜುನ್​ ಕಾಲೆಳೆದಿದ್ದಾರೆ! ಇನ್ನು ಕೆಲವರು ನಿಮ್ಮ ಪತ್ನಿಗಿಂತ ಈಕೆಯೇ  ಬೆಸ್ಟ್​ ಬಿಡಿ ಎಂದೂ ಹೇಳುತ್ತಿದ್ದಾರೆ. ಅಷ್ಟಕ್ಕೂ ಉರ್ಫಿ ಅವರ ಜೊತೆ ನಿಲ್ಲಲು ಅರ್ಜುನ್​ ಯಾಕೆ ಹಿಂಜರಿಕೆ ಮಾಡಿದರು ಎಂದು ಕೊನೆಗೂ ತಮಗೆ ತಿಳಿಯಲಿಲ್ಲ ಎಂದು ಹಲವು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. 

Urfi Javed: ಮುಸ್ಲಿಮರೂ ಮನೆ ಕೊಡ್ತಿಲ್ಲ, ಏನ್​ ಮಾಡ್ಲಿ? ಟ್ವಿಟರ್​ನಲ್ಲಿ ಉರ್ಫಿ ಗೋಳು

 

click me!