ಮೆಗಾಸ್ಟಾರ್ ಕುಟುಂಬದಲ್ಲಿ ಮತ್ತೊಂದು ಮದುವೆ ಸಂಭ್ರಮ; ಅಯೋಧ್ಯೆ ಸುಂದರಿ ಜೊತೆ ವರುಣ್ ತೇಜ್ ಮದುವೆ?

Published : Mar 05, 2023, 10:45 AM ISTUpdated : Mar 05, 2023, 10:47 AM IST
ಮೆಗಾಸ್ಟಾರ್ ಕುಟುಂಬದಲ್ಲಿ ಮತ್ತೊಂದು ಮದುವೆ ಸಂಭ್ರಮ; ಅಯೋಧ್ಯೆ ಸುಂದರಿ ಜೊತೆ ವರುಣ್ ತೇಜ್ ಮದುವೆ?

ಸಾರಾಂಶ

ಮೆಗಾಸ್ಟಾರ್ ಕುಟುಂಬದಲ್ಲಿ ಮತ್ತೊಂದು ಮದುವೆ ಸಂಭ್ರಮ. ನಟ ಚಿರಂಜೀವಿ ಸಹೋದರನ ಪುತ್ರ ವರುಣ್ ತೇಜ್ ಸದ್ಯದಲ್ಲೇ ಮದುವೆ ಆಗುತ್ತಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. 

ಮೆಗಾಸ್ಟಾರ್ ಚಿರಂಜೀವಿ ಕುಟುಂಬದಲ್ಲಿ ಮತ್ತೊಂದು ಮದುವೆ ಸಂಭ್ರಮ ಎನ್ನುವ ಸುದ್ದಿ ಕೇಳಿ ಬರುತ್ತಿದೆ. ಚಿರಂಜೀವಿ ಸಹೋದರ ನರೇಂದ್ರ ಬಾಬು ಪುತ್ರ ವರುಣ್ ತೇಜ್ ಹಸೆಮಣೆ ಏರಲು ಸಜ್ಜಾಗಿದ್ದಾರೆ ಎನ್ನುವ ಸುದ್ದಿ ವೈರಲ್ ಆಗಿದೆ. ಕಳೆದ ಎರಡು ವರ್ಷಗಳ ಹಿಂದೆ ಮಗಳ ಮದುವೆ ಮಾಡಿದ್ದ ನರೇಂದ್ರ ಬಾಬು ಇದೀಗ ಪುತ್ರನ ಮದುವೆಗೆ ಸಜ್ಜಾಗಿದ್ದಾರೆ. ಕಳೆದ ಕೆಲವು ತಿಂಗಳಿಂದ ವರುಣ್ ತೇಜ್ ಮದುವೆ ಸುದ್ದಿ ಕೇಳಿ ಬರುತಿದೆ. ಆದರೆ ಹುಡುಗಿ ಯಾರು ಎನ್ನುವ ವಿಚಾರ ಬಹಿರಂಗವಾಗಿರಲಿಲ್ಲ.ಇದೀಗ ಉತ್ತರ ಪ್ರದೇಶದ ಅಯೋಧ್ಯೆ ಮೂಲದ ನಟಿ ಲಾವಣ್ಯ ತ್ರಿಪಾಠಿ ಜೊತೆ ಮದುವೆ ಆಗುತ್ತಿದ್ದಾರೆ ಎನ್ನಲಾಗಿದೆ. ವರುಣ್ ತೇಜ್ ಮತ್ತು ಲಾವಣ್ಯಾ ತ್ರಿಪಾಠಿ ಇಬ್ಬರೂ ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಸುದ್ದಿ ಎರಡು ವರ್ಷಗಳಿಂದ ಸುದ್ದಿಯಾಗುತ್ತಿತ್ತು. ಇದೀಗ ಅವರನ್ನೇ ಮದುವೆಯಾಗುತ್ತಿದ್ದಾರೆ ವರುಣ್ ಎನ್ನಲಾಗಿದೆ.

ಇತ್ತೀಚೆಗಷ್ಟೆ ನಟ ವರುಣ್ ತೇಜ್ ತಂದೆ ನಾಗ ಬಾಬು ಅವರು ಮಗನ ಮದುವೆ ವಿಚಾರವಾಗಿ ಸುಳಿವು ನೀಡಿದ್ದರು. ಶೀಘ್ರವೇ ವರುಣ್ ತೇಜ್ ಮದುವೆ ಘೋಷಣೆ ಮಾಡುವ ಬಗ್ಗೆ ಅವರು ಮಾಹಿತಿ ನೀಡಿದ್ದರು. ಈ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿತ್ತು. ಲಾವಣ್ಯ ಹಾಗೂ ವರುಣ್ ತೇಜ್ ಮದುವೆ ನಡೆಯುತ್ತಿದೆ ಎನ್ನುವ ಮಾತು ಕೇಳಿ ಬಂದಿದೆ. ಇದೀಗ ಲಾವಣ್ಯ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಇಂಡಿಯಾ  ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಲಾವಣ್ಯ ಮದುವೆ ಬಗ್ಗೆ ಪ್ರತಿಕ್ರಿಯೆ ನೀಡಿದರು. ಮದುವೆ ಯಾವಾಗ ನಡೆಯಬೇಕೋ ಆಗ ನಡೆಯಲಿದೆ ಎಂದರು. ಲಾವಣ್ಯ ಸುಮಾರು 10 ವರ್ಷಗಳಿಂದ ತೆಲುಗು ಸಿನಿಮಾರಂಗದಲ್ಲಿ ಸಕ್ರೀಯರಾಗಿದ್ದಾರೆ. 

ವರುಣ್ ತೇಜ್ ಜೊತೆ ಮದುವೆ ವದಂತಿ ಬಗ್ಗೆ ಮಾತನಾಡಿದ ಲಾವಣ್ಯ, 'ನನ್ನ ಗಮನ ಏನಿದ್ದರೂ ಈಗ ಸಿನಿಮಾಗಳ ಮೇಲೆ. ಮದುವೆ ಅನ್ನೋದು ನಿಜಕ್ಕೂ ಸುಂದರ. ಅದು ಸರಿಯಾದ ವ್ಯಕ್ತಿಯೊಂದಿಗೆ ಆಗಬೇಕು ಎಂಬುದು ನನ್ನ ಭಾವನೆ. ಮದುವೆ ಆಗುವ ಕಾಲಕ್ಕೆ ಆಗುತ್ತದೆ. ಹೀಗೆಯೇ ಮದುವೆ ಆಗಬೇಕು ಎಂದು ಕನಸು ಕಂಡವನು ನಾನಲ್ಲ’ ಎಂದಿದ್ದಾರೆ ಲಾವಣ್ಯ.

ಐಟಂ ಡಾನ್ಸ್ ಮಾಡಲು ಇಷ್ಟೊಂದು ಸಂಭಾವನೆ ಪಡೆದ್ರಾ ಪೂಜಾ ಹೆಗ್ಡೆ?

ವರುಣ್ ತೇಜ್ ಜೊತೆ ಡೇಟಿಂಗ್ ಬಗ್ಗೆ  ಅಧಿಕೃತ ಗೊಳಿಸದಿದ್ದರೂ ಇಬ್ಬರ ಮದುವೆ ವಿಚಾರ ಭಾರಿ ವೈರಲ್ ಆಗಿದೆ. ಅಂದಹಾಗೆ ಲಾವಣ್ಯ ಹಾಗೂ ವರುಣ್ ತೇಜ್ ಅವರು ‘ಮಿನಿಸ್ಟರ್​’, ‘ರಾಯಾಭಾರಿ’ ಸಿನಿಮಾಗಳಲ್ಲಿ ಒಟ್ಟಾಗಿ ನಟಿಸಿದ್ದಾರೆ. ಸೆಟ್​ನಲ್ಲಿ ಇವರ ಮಧ್ಯೆ ಪ್ರೀತಿ ಮೂಡಿದೆ ಎನ್ನಲಾಗುತ್ತಿದೆ. ಲಾವಣ್ಯ ಹುಟ್ಟುಹಬ್ಬದ ದಿನ ವರುಣ್ ತೇಜ್ ಪ್ರಪೋಸ್ ಮಾಡಿದ್ದರು ಎನ್ನಲಾಗಿದೆ. ವಜ್ರದ ಉಂಗುರವನ್ನು ಲಾವಣ್ಯ ಅವರಿಗೆ ಗಿಫ್ಟ್ ಮಾಡಿದ್ದರು ಎನ್ನುವ ಸುದ್ದಿಯೂ ಇದೆ. 

ಸದ್ಯ ಲಾವಣ್ಯ ಮದುವೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಬಹಿರಂಗ ಪಡಿಸಿಲ್ಲವಾದರೂ ಸದ್ಯದಲ್ಲೇ ಮದುವೆ ನಡೆಯಲಿದೆ ಎನ್ನಲಾಗಿದೆ. ಈ ಬಗ್ಗೆ ಸದ್ಯದಲ್ಲೇ ವರುಣ್ ತೇಜ್ ಕುಟುಂಬ ಬಹಿರಂಗ ಪಡಿಸಲಿದ್ದಾರೆ ಎನ್ನಲಾಗಿದೆ.  

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಐಶ್ವರ್ಯಾ ರೈ ಮಗಳು ಆರಾಧ್ಯ ಬಾಲಿವುಡ್‌ಗೆ ಎಂಟ್ರಿ ಕೊಡೋದು ಯಾವಾಗ?
ಎದ್ದೇಳಿ ಹಿಂದೂಗಳೇ ಮೌನ ನಿಮ್ಮನ್ನು ರಕ್ಷಿಸುವುದಿಲ್ಲ, ಬಾಂಗ್ಲಾದೇಶ ಘಟನೆ ಖಂಡಿಸಿ ನಟಿ ಕಾಜಲ್ ಎಚ್ಚರಿಕೆ