ನಟ ಮಂಚು ಮನೋಜ್​ ಬಾಳಲ್ಲಿ ಎಂಟ್ರಿ ಕೊಟ್ಟ ಭೂಮಾ ಮೌನಿಕಾ ರೆಡ್ಡಿ, ಹೈದರಾಬಾದ್‌ನಲ್ಲಿ ಅದ್ಧೂರಿ ಮದುವೆ!

Published : Mar 04, 2023, 11:08 PM IST
ನಟ ಮಂಚು ಮನೋಜ್​ ಬಾಳಲ್ಲಿ ಎಂಟ್ರಿ ಕೊಟ್ಟ ಭೂಮಾ ಮೌನಿಕಾ ರೆಡ್ಡಿ, ಹೈದರಾಬಾದ್‌ನಲ್ಲಿ ಅದ್ಧೂರಿ ಮದುವೆ!

ಸಾರಾಂಶ

ಕಳೆದ ಕೆಲ ವರ್ಷಗಳಿಂದ ಕೇಳಿಬರುತ್ತಿದ್ದ ಗಾಸಿಪ್​ಗೆ ನಟ ಮಂಚು ಮನೋಜ್​ ಕೊನೆಗೂ ತೆರೆ ಎಳೆದಿದ್ದಾರೆ. ಭೂಮಾ ಮೌನಿಕಾ ರೆಡ್ಡಿ ಅವರನ್ನು ಎರಡನೆಯ ಪತ್ನಿಯಾಗಿ ಸ್ವೀಕರಿಸಿದ್ದಾರೆ.   

ಟಾಲಿವುಡ್ (Tollywood) ನಟ ಮಂಚು ಮನೋಜ್ (Manchu Manoj) ಮತ್ತು ಭೂಮಾ ಮೌನಿಕಾ ರೆಡ್ಡಿ ಅವರ ಡೇಟಿಂಗ್​ಗೆ ಕೊನೆಗೂ ತೆರೆ ಬಿದ್ದಿದೆ. ಇವರಿಬ್ಬರ ಕುರಿತು ಕೇಳಿಬರುತ್ತಿದ್ದ ಗುಸುಗುಸು ಪಿಸುಪಿಸುವಿಗೂ ಮುಕ್ತಿ ಸಿಕ್ಕಿದೆ. ಈಗ ಈ ಜೋಡಿ  ಹೈದರಾಬಾದ್‌ನಲ್ಲಿ ಅದ್ಧೂರಿಯಾಗಿ ಮದುವೆಯಾಗಿದ್ದಾರೆ.  ಮಂಚು ಅವರಿಗೆ ಇದು 2ನೇ ಮದುವೆ ಆಗಿದೆ. ಕಳೆದ ವರ್ಷ ವಿನಾಯಕ ಚೌತಿಯ ಉತ್ಸವದಲ್ಲಿ ಮನೋಜ್ ಮತ್ತು  ಭೂಮಾ ಮೌನಿಕಾ ರೆಡ್ಡಿ (Bhooma Mounika Reddy) ಮೊದಲ ಬಾರಿಗೆ ಜೋಡಿಯಾಗಿ ಕಾಣಿಸಿಕೊಂಡಿದ್ದರು. ಅಂದಿನಿಂದ ಇವರಿಬ್ಬರೂ ಮದುವೆಯಾಗಲಿದ್ದಾರೆ ಎಂಬ ವದಂತಿ ಹರಿದಾಡಿತ್ತು. ಇದಕ್ಕೆ ಈಗ ತೆರೆ ಬಿದ್ದಿದ್ದೆ. ವಿವಾಹಕ್ಕೆ ಕ್ರೀಮ್ ಮತ್ತು ಗೋಲ್ಡನ್ ಬಣ್ಣದ ಕುರ್ತಾ ಹಾಗೂ ಧೋತಿಯನ್ನ ವರ ಮಂಚು ಮನೋಜ್ ಧರಿಸಿದ್ದರು. ಇನ್ನೂ ಗೋಲ್ಡನ್ ಬಣ್ಣದ ಸೀರೆಯಲ್ಲಿ ವಧು ಮೌನಿಕಾ ರೆಡ್ಡಿ ಮಿಂಚುತ್ತಿದ್ದರು. 

 ಮಂಚು ಮನೋಜ್ ಅವರು ಈ ಹಿಂದೆ ಪ್ರಣತಿ ರೆಡ್ಡಿ (Pranathi Reddy) ಅವರನ್ನು  ಮದುವೆಯಾಗಿದ್ದರು. ಇದು ಲವ್​ಮ್ಯಾರೇಜ್​ ಆಗಿತ್ತು.  2015ರಲ್ಲಿ ತಮ್ಮ ಹುಟ್ಟುಹಬ್ಬದಂದೇ ಮಂಚು ಮನೋಜ್, ಪ್ರಣತಿ ರೆಡ್ಡಿ ಅವರು ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು.  ಈ ಮದುವೆಗೆ  ಸೂಪರ್ ಸ್ಟಾರ್ ರಜನಿಕಾಂತ್ ಸೇರಿದಂತೆ ಅನೇಕ ತಾರೆಯರು ಸಾಕ್ಷಿಯಾಗಿದ್ದರು. ಆದರೆ, ಈ ದಾಂಪತ್ಯ  ಹೆಚ್ಚು ದಿನ ಉಳಿಯಲಿಲ್ಲ. ಮದುವೆಯಾದ ನಾಲ್ಕೇ ವರ್ಷದಲ್ಲಿ ಇಬ್ಬರ ಮಧ್ಯೆ ಮನಸ್ತಾಪ, ಭಿನ್ನಾಭಿಪ್ರಾಯ ಭುಗಿಲೆದ್ದಿತು. ಹೀಗಾಗಿ, 2019ರಲ್ಲಿ ಮಂಚು ಮನೋಜ್ ಹಾಗೂ ಪ್ರಣತಿ ರೆಡ್ಡಿ ಪರಸ್ಪರ ಒಪ್ಪಿಗೆಯ ಮೇರೆಗೆ ವಿಚ್ಛೇದನ (Divorce) ಪಡೆದರು.

Thalapathy vijay: ಬಿಡುಗಡೆಗೆ ಮುನ್ನವೇ 413 ಕೋಟಿ ರೂ. ಬಾಚಿಕೊಂಡ LEO

ಕಳೆದ ನಾಲ್ಕೈದು ದಿನಗಳಿಂದ ಮಂಚು ಮನೋಜ್ ಮದುವೆ ಸುದ್ದಿ ಟ್ರೆಂಡಿಂಗ್ (Trending) ಆಗಿತ್ತು. ಮೋಹನ್ ಬಾಬು ಈ ಮದುವೆ ಬೇಡ, ಮದುವೆಗೆ ನಾನು ಬರೋದಿಲ್ಲ ಎನ್ನುತ್ತಿದ್ದಾರೆ ಎಂದು ಸುದ್ದಿ ಹರಡಿತ್ತು. ಆದರೆ ಮಗನ ಎರಡನೆಯ ಮದುವೆಯಲ್ಲಿ ಅವರು  ಅದ್ಧೂರಿಯಾಗಿಯೇ  ನಡೆಸಿಕೊಟ್ಟಿದ್ದಾರೆ.  ಭೂಮಾ ಮೌನಿಕಾ ರೆಡ್ಡಿ ಟಿಡಿಪಿ ನಾಯಕಿ ಭೂಮಾ ನಾಗಿರೆಡ್ಡಿ ಅವರ ಮಗಳಾಗಿರುವುದರಿಂದ ಅವರನ್ನು ಸೊಸೆಯಾಗಿ ಸ್ವೀಕರಿಸಲು ಮೋಹನ್ ಬಾಬು ಒಪ್ಪಲಿಲ್ಲ ಎಂಬ ವರದಿಗಳು ಹರಡಿದ್ದವು. ಆದರೆ ಮನೋಜ್ ಮದುವೆಯ ಫೋಟೋಗಳೊಂದಿಗೆ ಆ ಸುದ್ದಿಗಳೆಲ್ಲವೂ ಸುಳ್ಳು ಎಂಬುದು ಸ್ಪಷ್ಟವಾಗಿದೆ. ಮದುವೆ ಸಮಾರಂಭದಲ್ಲಿ ಕೆಲವೇ ಅತಿಥಿಗಳು ಭಾಗವಹಿಸಿದ್ದರು. ವೈ.ಎಸ್. ವಿಜಯಮ್ಮ, ಭೂಮಾ ಅಖಿಲ ಪ್ರಿಯಾ ಸೇರಿದಂತೆ ಕೆಲವು ಸಿನಿ ತಾರೆಯರು (Film Stars) ಮತ್ತು ರಾಜಕೀಯ ಗಣ್ಯರು  ಮದುವೆಯಲ್ಲಿ ಭಾಗವಹಿಸಿದ್ದರು.  

ಟಾಲಿವುಡ್‌ನ ಖ್ಯಾತ ನಟ ಹಾಗೂ ನಿರ್ಮಾಪಕ ಮೋಹನ್ ಬಾಬು ಮತ್ತು ನಿರ್ಮಲಾ ದೇವಿ ದಂಪತಿಯ ಪುತ್ರ ಮಂಚು ಮನೋಜ್. ಭೂಮಾ ಮೌನಿಕಾ ರೆಡ್ಡಿ ದಿವಂಗತ ಭೂಮಾ ನಾಗಿರೆಡ್ಡಿ ಮತ್ತು ಶೋಭಾ ರೆಡ್ಡಿ ಅವರ 2ನೇ ಪುತ್ರಿಯಾಗಿದ್ದಾರೆ.‘ಮೇಜರ್ ಚಂದ್ರಕಾಂತ್’ ಸಿನಿಮಾದ ಮೂಲಕ ಬಾಲನಟನಾಗಿ ಮಂಚು ಮನೋಜ್ ಚಿತ್ರರಂಗಕ್ಕೆ ಕಾಲಿಟ್ಟರು. ‘ದೊಂಗ ದೊಂಗದಿ’ ಸಿನಿಮಾದ ಮೂಲಕ ಮಂಚು ಮನೋಜ್ ನಾಯಕರಾದರು. ‘ಶ್ರೀ’, ‘ಪ್ರಯಾಣಂ’, ‘ಬಿಂದಾಸ್’, ‘ಪೋಟುಗಾಡು’, ‘ಶೌರ್ಯ’ (Shourya) ಮುಂತಾದ ಸಿನಿಮಾಗಳಲ್ಲಿ ಮಂಚು ಮನೋಜ್ ಅಭಿನಯಿಸಿದ್ದಾರೆ. ಸದ್ಯ ಮಂಚು ಮನೋಜ್ ಕೈಯಲ್ಲಿ ‘ಅಹಂ ಬ್ರಹ್ಮಾಸ್ಮಿ’ ಸಿನಿಮಾ ಇದೆ. ಐದು ವರ್ಷಗಳಿಂದ ಸಿನಿಮಾದಿಂದ ದೂರ ಉಳಿದಿದ್ದ ಮನೋಜ್ ಈ ವರ್ಷ ವಾಟ್ ದಿ ಫಿಶ್ ಚಿತ್ರದ ಮೂಲಕ ರೀ ಎಂಟ್ರಿ ಕೊಡಲಿದ್ದಾರೆ. 

Anikha Surendran: 'ಬ್ರಾ' ಬಗ್ಗೆ ಪಾಠ ಮಾಡಿದ್ದ ನಟಿಯಿಂದ ಈಗ ಲಿಪ್​ಲಾಕ್​ ಅನುಭವ

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಐಶ್ವರ್ಯಾ ರೈ ಮಗಳು ಆರಾಧ್ಯ ಬಾಲಿವುಡ್‌ಗೆ ಎಂಟ್ರಿ ಕೊಡೋದು ಯಾವಾಗ?
ಎದ್ದೇಳಿ ಹಿಂದೂಗಳೇ ಮೌನ ನಿಮ್ಮನ್ನು ರಕ್ಷಿಸುವುದಿಲ್ಲ, ಬಾಂಗ್ಲಾದೇಶ ಘಟನೆ ಖಂಡಿಸಿ ನಟಿ ಕಾಜಲ್ ಎಚ್ಚರಿಕೆ