ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಮತ್ತು ಪತಿ ರಾಜ್ ಕುಂದ್ರಾ ಡಿವೋರ್ಸ್ ಕೊಡ್ತಾ ಇದ್ದಾರಾ? ವಿಡಿಯೋ ಮೂಲಕ ಪ್ರತ್ಯೇಕದ ಕುರಿತು ತಿಳಿಸಿದ ರಾಜ್ ಕುಂದ್ರಾ
ಬಾಲಿವುಡ್ ಎವರ್ಗ್ರೀನ್ ತಾರೆ ಶಿಲ್ಪಾ ಶೆಟ್ಟಿ ಮತ್ತು ಅವರ ಪತಿ ಉದ್ಯಮಿ ರಾಜ್ ಕುಂದ್ರಾ ಅಶ್ಲೀಲ ವಿಡಿಯೋ ನಿರ್ಮಾಣ ಕೇಸ್‌ನಲ್ಲಿ ಸಿಕ್ಕಿಬಿದ್ದಿರುವ ವಿಷಯ ಎಲ್ಲರಿಗೂ ತಿಳಿದದ್ದೇ. ಅದು 2021ರ ಘಟನೆ. ಶಿಲ್ಪಾ ಬಾಳಲ್ಲಿ ಬಿರುಗಾಳಿ ಬಂದಿತ್ತು. ಇವರ ಪತಿ, ಖ್ಯಾತ ಉದ್ಯಮಿ ರಾಜ್ ಕುಂದ್ರಾ ನೀಲಿ ಚಿತ್ರ (porn film) ಕೇಸ್‌ನಲ್ಲಿ ಸಿಲುಕಿ ಬಿದ್ದಿದ್ದರು. ನಟಿಯರನ್ನು ಮತ್ತು ಮಾಡೆಲ್ಗಳನ್ನು ಬಳಸಿಕೊಂಡು ರಾಜ್ ಕುಂದ್ರಾ ಅವರು ನೀಲಿ ಚಿತ್ರಗಳನ್ನು ತಯಾರಿಸುತ್ತಿದ್ದರು ಎಂಬುದಕ್ಕೆ ಪೊಲೀಸರು ಹಲವು ಸಾಕ್ಷ್ಯಗಳನ್ನು ಒದಗಿಸಿದ್ದರು. ಬ್ಲೂ ಫಿಲ್ಮ್ ಆರೋಪದ ಮೇಲೆ ಅವರು 63 ದಿನಗಳವರೆಗೆ ಜೈಲಿನಲ್ಲಿ ಇದ್ದರು. ನೀಲಿ ಚಿತ್ರಗಳ ನಿರ್ಮಾಣ ದಂಧೆಯಲ್ಲಿ ತೊಡಗಿದ್ದ ಆರೋಪವನ್ನು ಇಂದಿಗೂ ರಾಜ್ ಕುಂದ್ರಾ ಇಂದಿಗೂ ಎದುರಿಸುತ್ತಿದ್ದಾರೆ. ‘ನಾನು ಮಾಡಿದ್ದು ನೀಲಿ ಚಿತ್ರ ಅಲ್ಲ, ಕಾಮೋದ್ರೇಕದ ಸಿನಿಮಾ ಮಾತ್ರ’ ಎಂದು ರಾಜ್ ಕುಂದ್ರಾ ಹೇಳಿಕೆ ನೀಡಿದ್ದರು. ತಾವು ಬ್ಲೂಫಿಲ್ಮ್ ಮಾಡುವುದನ್ನು ಅವರು ಒಪ್ಪಿಕೊಂಡಿರಲಿಲ್ಲ. ಆದರೆ ಈ ಪ್ರಕರಣದಲ್ಲಿ ಹಲವು ನಟಿಯರ ಜೊತೆ ಖುದ್ದು ಶಿಲ್ಪಾ ಶೆಟ್ಟಿಯವರ (Shilpa Shetty) ಹೆಸರೂ ಥಳಕು ಹಾಕಿಕೊಂಡಿತ್ತು.
ಪತಿ ಜೈಲಿಗೆ ಹೋಗುತ್ತಿದ್ದಂತೆಯೇ ಶಿಲ್ಪಾ ಶೆಟ್ಟಿ ಅವರು ಪತಿಗೆ ಡಿವೋರ್ಸ್ ಕೊಡುತ್ತಾರೆ ಎಂದೇ ಸುದ್ದಿಯಾಗಿತ್ತು. ಕೊನೆಗೆ ಅವೆಲ್ಲಾ ಸುಮ್ಮನೇ ಗಾಳಿಸುದ್ದಿಗಳಷ್ಟೇ ಎಂದು ತಿಳಿದಿತ್ತು. ಇದೀಗ ಮತ್ತೊಮ್ಮೆ ಇವರಿಬ್ಬರು ಪ್ರತ್ಯೇಕ ಆಗ್ತಿರೋ ಸುದ್ದಿ ಬಿ ಟೌನ್‌ನಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದೆ. ಇದಕ್ಕೆ ಕಾರಣ, ಖುದ್ದು ರಾಜ್ ಕುಂದ್ರಾ ಅವರು ತಾವು ಪ್ರತ್ಯೇಕಗೊಳ್ಳುತ್ತಿದ್ದೇವೆ. ನೀವೆಲ್ಲರೂ ಹರಿಸಿ ಎಂದು ಇನ್ಸ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಾಕಿದ್ದು. ಕೆಲವರು ಇದು ಪ್ರಚಾರದ ಗಿಮಿಕ್ ಎಂದು ಹೇಳುತ್ತಿದ್ದರು. ಪತಿ-ಪತ್ನಿ ಇಬ್ಬರೂ ಚೆನ್ನಾಗಿಯೇ ಇದ್ದು, ಇಂಥ ಪೋಸ್ಟ್ ರಾಜ್ ಕುಂದ್ರಾ ಹಾಕಿದ್ದು ಏಕೆ ಎನ್ನುವ ಬಗ್ಗೆ ಸಾಕಷ್ಟು ಚರ್ಚೆ ಶುರುವಾಗಿತ್ತು.
ಇಂಡಿಯಾ ಅಂದ್ರೆ ಶಿಲ್ಪಾ ಪತಿ ರಾಜ್ಕುಂದ್ರಾ ದೃಷ್ಟಿಯಲ್ಲಿ ಹೀಗಂತೆ! ವಿಡಿಯೋ ಕೇಳಿ ಛೀಮಾರಿ ಹಾಕ್ತಿದ್ದಾರೆ ನೆಟ್ಟಿಗರು
ಅಷ್ಟಕ್ಕೂ ರಾಜ್ ಕುಂದ್ರಾ ಪ್ರತ್ಯೇಕ ಆಗ್ತಿರೋದಂತೂ ಹೌದು. ಈ ಬಗ್ಗೆ ಖುದ್ದು ವಿಡಿಯೋದ ಮೂಲಕ ಸ್ಪಷ್ಟನೆ ಕೊಟ್ಟಿದ್ದಾರೆ. ಆದರೆ ಅವರು ಪ್ರತ್ಯೇಕ ಆಗ್ತಿರೋದು ಪತ್ನಿ ಶಿಲ್ಪಾ ಅವರಿಂದ ಅಲ್ಲ, ಬದಲಿಗೆ ಅವರು ಧರಿಸುತ್ತಿದ್ದ ಮಾಸ್ಕ್‌ನಿಂದ ಎನ್ನೋದು ವಿಡಿಯೋ ನೋಡಿದರೆ ತಿಳಿಯುತ್ತದೆ. ಅಷ್ಟಕ್ಕೂ ಕಳೆದ ಕೆಲವು ತಿಂಗಳುಗಳಿಂದ ರಾಜ್ ಕುಂದ್ರಾ ಅವರು ಮುಖ ಮುಚ್ಚಿಕೊಂಡೇ ಓಡಾಡುತ್ತಿದ್ದರು. ನೀಲಿ ಚಿತ್ರದ ಕೇಸ್‌ನಲ್ಲಿ ಜೈಲು ಪಾಲಾದ ಮೇಲೆ ಬಿಡುಗಡೆಯಾಗಿದ್ದರೂ ಅವರು ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಕೊನೆಗೆ ಸಾರ್ವಜನಿಕವಾಗಿ ಕಾಣಿಸಿಕೊಳ್ಳಲು ಶುರು ಮಾಡಿದರೂ ಹೆಲ್ಮೆಟ್ ರೀತಿಯ ಮಾಸ್ಕ್ ಧರಿಸಿ, ಓಡಾಡುತ್ತಿದ್ದರು.
ಗಣೇಶನ ಹಬ್ಬದ ಸಂದರ್ಭದಲ್ಲಿ ಗಣೇಶ ಮೂರ್ತಿಯನ್ನು ತರುವಾಗಲೂ ಮಾಸ್ಕ್ ಧರಿಸಿದ್ದರು. ಸಾಲದು ಎಂಬುದಕ್ಕೆ ತಮ್ಮ UT 69 ಚಿತ್ರದ ಬಗ್ಗೆ ಪತ್ರಿಕಾಗೋಷ್ಠಿ ಮಾಡಿದಾಗಲೂ ಮಾಸ್ಕ್ ಧರಿಸಿದ್ದರು. ಮೊನ್ನೆಯಷ್ಟೇ ಮಾಸ್ಕ್ ತೆಗೆದು ಪ್ರಥಮ ಬಾರಿಗೆ ಕಾಣಿಸಿಕೊಂಡಿದ್ದರು. UT 69 ಚಿತ್ರದ ಟ್ರೇಲರ್ ಬಿಡುಗಡೆಯಂದು ಮಾಸ್ಕ್ ತೆಗೆದು ಕಾಣಿಸಿಕೊಂಡಿದ್ದರು. ಇದೀಗ ತಾವು ಈ ಮಾಸ್ಕ್‌ನಿಂದ ಕಾಯಂ ಆಗಿ ಪ್ರತ್ಯೇಕಗೊಳ್ಳುತ್ತಿದ್ದು, ಎಲ್ಲರೂ ಸಹಕರಿಸಬೇಕು, ಪ್ರೀತಿಸಬೇಕು ಎಂದು ಹೇಳಿದ್ದಾರೆ.
ಜನರಿಗೆ ಮುಖ ತೋರಿಸದ ಕೆಲ್ಸ ಯಾಕೆ ಮಾಡ್ಕೊಂಡ್ರಿ ಅಂತ ಶಿಲ್ಪಾ ಶೆಟ್ಟಿಗೆ ಕೇಳ್ತಿದ್ದಾರೆ ಫ್ಯಾನ್ಸ್!
Farewell Masks …it’s time to separate now! Thank you for keeping me protected over the last two years. Onto the next phase of my journey 🙏🎭🥹 🧿😇❤️ pic.twitter.com/svhiGS8aHt
— Raj Kundra (@onlyrajkundra)