ಮಗ ಸಿಕ್ಕಿಲ್ಲ ಅಂದ್ರೆ ಮಾಜಿ ಪತ್ನಿ ಮಲೈಕಾಗೆ ಕರೆ ಮಾಡೋದು; ಆಶ್ಚರ್ಯನೇ ಬೇಡ ಎಂದ ಅರ್ಬಾಜ್ ಖಾನ್

Published : Mar 20, 2023, 02:10 PM IST
ಮಗ ಸಿಕ್ಕಿಲ್ಲ ಅಂದ್ರೆ ಮಾಜಿ ಪತ್ನಿ ಮಲೈಕಾಗೆ ಕರೆ ಮಾಡೋದು; ಆಶ್ಚರ್ಯನೇ ಬೇಡ ಎಂದ ಅರ್ಬಾಜ್ ಖಾನ್

ಸಾರಾಂಶ

ಮಾಜಿ ಪತ್ನಿ ಮಲೈಕಾ ಅರೋರಾ ಜೊತೆ ಪದೇ ಪದೇ ಟ್ರೋಲ್ ಆಗುತ್ತಿರುವುದರ ಬಗ್ಗೆ ಮೌನ ಮುರಿದ ಅರ್ಬಾಜ್ ಖಾನ್. ಸಮಾಜದಲ್ಲಿ ಏನೇ ಮಾತನಾಡಿದ್ದರೂ ನಾವು ಕೇರ್ ಮಾಡಲ್ಲ ಎಂದ ನಟ....  

ಹಿಂದಿ ಚಿತ್ರರಂಗದಲ್ಲಿ ನಟ, ನಿರ್ದೇಶಕ ಹಾಗೂ ನಿರ್ಮಾಪಕನಾಗಿ ಗುರುತಿಸಿಕೊಂಡಿರುವ ಅರ್ಬಾಜ್ ಖಾನ್ ಕೆಲವು ದಿನಗಳಿಂದ ಸುದ್ದಿಯಲ್ಲಿದ್ದಾರೆ. ಮಾಜಿ ಪತ್ನಿ ಜೊತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಳ್ಳುತ್ತಿರುವುದಕ್ಕೆ ಪದೇ ಪದೇ ಟ್ರೋಲ್ ಆಗುತ್ತಿದ್ದಾರೆ. ಅಲ್ಲದೆ ಮಲೈಕಾ ಜೊತೆ ಫೋನ್ ಕಾಲ್‌ನಲ್ಲಿ ಮಾತನಾಡುತ್ತಾರೆಂದು ತಿಳಿಯುತ್ತಿದ್ದರಂತೆ ನೆಟ್ಟಿಗರು ಕೊಟ್ಟ ರಿಯಾಕ್ಷನ್‌ಗೆ ಶಾಕ್ ಆಗಿದ್ದಾರೆ. ಫ್ಯಾಮಿಲಿ, ಟ್ರೋಲ್‌ಗಳು ಮತ್ತು ಪುತ್ರನ ಬಗ್ಗೆ ಅರ್ಬಾಜ್ ಮಾತನಾಡಿದ್ದಾರೆ.

ಅರ್ಬಾಜ್ ಖಾನ್ ಮತ್ತು ಮಲೈಕಾ ಅರೋರಾ 1998ರಲ್ಲಿ ಅದ್ಧೂರಿಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ಜೋಡಿ 20 ವರ್ಷ ಅರ್ಹಾನ್ ಖಾನ್ ಎಂಬ ಮಗನಿದ್ದಾನೆ. ವಿದೇಶದಲ್ಲಿ ಓಡುತ್ತಿರುವ ಅರ್ಹಾನ್ ಆಗಾಗ ಭಾರತಕ್ಕೆ ಬಂದು ಫೋಷಕರ ಜೊತೆ ಸಮಯ ಕಳೆಯುತ್ತಾರೆ. 18 ವರ್ಷ ಸಂಸಾರ ಮಾಡಿದ ನಂತರ 2017ರಲ್ಲಿ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನ ಪಡೆದುಕೊಂಡರು. ಅರ್ಬಾಜ್ ಖಾನ್ ಸದ್ಯಕ್ಕೆ ಮಾಡಲ್ ಕಮ್ ನಟಿ ಜಾರ್ಜಿಯಾ ಅರ್ಧಾನಿ ಡೇಟಿಂಗ್ ಮಾಡುತ್ತಿದ್ದಾರೆ. ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್‌ ಪ್ರೀತಿಸುತ್ತಿದ್ದಾರೆ.

ಮಾಡೋಕೆ ಕೆಲಸ ಇಲ್ಲ; ಅಣ್ಣ ಸಲ್ಮಾನ್ ಖಾನ್ ಯಶಸ್ಸಿನ ಬಗ್ಗೆ ಕೊಂಕು ಮಾತನಾಡುವವರಿಗೆ ಅರ್ಬಾಜ್ ತಿರುಗೇಟು

'ನನ್ನ ಬಗ್ಗೆ ಜನರು ಏನು ಮಾತನಾಡಿಕೊಳ್ಳುತ್ತಾರೆ ಅನ್ನೋದು ನನಗೆ ಮುಖ್ಯವಾಗಲ್ಲ. ಜನರಿಗೆ ಏನು ನಾವು ನಾಟಕ ಮಾಡಿ ಪಬ್ಲಿಸಿಟಿ ಪಡೆಯುತ್ತಿದ್ದೀವಿ ಎನ್ನುತ್ತಾರೆ. ನಿಜ ಹೇಳಬೇಕು ಅಂದ್ರೆ ಇದೆಲ್ಲಾ ನಮಗೆ ಅಗತ್ಯವೇ ಇಲ್ಲ. ನೆಮ್ಮದಿಯಾಗಿ ಜೀವನ ನಡೆಯುತ್ತಿದೆ. ನಾನು ಹೊರಗಡೆ ಮತ್ತು ಕ್ಯಾಮೆರಾ ಮುಂದೆ ಹೇಗೆ ಇರುತ್ತೀವಿ ಅದನ್ನೇ ನಿಜ ಅಂದುಕೊಂಡು ನಮ್ಮ ಬದುಕು ಅಷ್ಟೇ ಎನ್ನುವ ಲೆಕ್ಕಚಾರ ಮಾಡುತ್ತಾರೆ. ನಮ್ಮ ಮನೆಯಲ್ಲಿ ನಮ್ಮ ಜೊತೆ ವಾಸವಿದ್ದರೆ ಮಾತ್ರ ಅಸಲಿ ಸತ್ಯ ಗೊತ್ತಾಗುವುದು' ಎಂದು ಟ್ರೋಲ್ ಮಾಡುವವರ ಬಗ್ಗೆ ಇಟೈಮ್ಸ್‌ ಸಂದರ್ಶನದಲ್ಲಿ ಅರ್ಬಾಜ್ ಖಾನ್ ಮಾತನಾಡಿದ್ದಾರೆ.

'ಪಬ್ಲಿಕ್‌ನಲ್ಲಿ ಇದ್ದೀವಿ ಅನ್ನೋ ಕಾರಣಕ್ಕೆ ಒಂದು ರೀತಿ ವರ್ತಿಸುವುದು ಮನೆಯಲ್ಲಿ ಇದ್ದೀವಿ ಅನ್ನೋ ಕಾರಣಕ್ಕೆ ಇನ್ನೊಂದು ರೀತಿ ವರ್ತಿಸುವುದು ಮಾಡಲ್ಲ. ಅರ್ಹಾನ್ ಹುಟ್ಟುಹಬ್ಬವನ್ನು ಪ್ರತಿ ವರ್ಷ ಒಟ್ಟಿಗೆ ಆಚರಿಸುತ್ತೀವಿ. ನನ್ನ ಮಗ ವಿದ್ಯಾಭ್ಯಾಸ ಕಾಲೇಜ್‌ ಮತ್ತು ಅವನ ಆರೋಗ್ಯದ ಬಗ್ಗೆ ಮಾತನಾಡಲು ನಾನು ಮಲೈಕಾ ಜೊತೆ ಆಗಾಗ ಪೋನ್‌ನಲ್ಲಿ ಮಾತನಾಡುವೆ. ಮಾತನಾಡುವುದರಲ್ಲಿ ತಪ್ಪಿಲ್ಲ..ನನ್ನ ಮಾಜಿ ಪತ್ನಿ ಜೊತೆ ನನ್ನ ಮಗನ ಬಗ್ಗೆ ಮಾತನಾಡಿದರೆ ಯಾರು ಇಲ್ಲಿ ತೊಂದರೆ ಆಗುತ್ತಿದೆ? ನನ್ನ ಮಗ ಫೊನ್ ಪಿಕ್ ಮಾಡಿಲ್ಲ ನನಗೆ ಸಿಕ್ಕಿಲ್ಲ ಅಂದ್ರೆ ನಾನು ಮೊದಲು ಕರೆ ಮಾಡುವುದು ನನ್ನ ಮಾಜಿ ಪತ್ನಿ ಮಲೈಕಾಗೆ' ಎಂದು ಅರ್ಬಾಜ್ ಖಾನ್ ಹೇಳಿದ್ದಾರೆ.

Malaika Arora: ಮಾಜಿ ಪತಿಯನ್ನು ತಬ್ಬಿಕೊಂಡು ಸುದ್ದಿಯಾಗ್ತಿದ್ದಾರೆ ನಟಿ ಮಲೈಕಾ ಅರೋರಾ!

'ಮಲೈಕಾ ಮತ್ತು ನಾನು ವಿಚ್ಛೇದನ ಪಡೆದುಕೊಂಡು ದೂರು ಆದ್ಮೇಲೆ ನಮ್ಮ ಬಗ್ಗೆ ಮಾತ್ರ ಯೋಚನೆ ಮಾಡುತ್ತೀವಿ ಅನ್ನೋದು ಸುಳ್ಳು. ಜನರು ಹೇಗೆ ಇಷ್ಟೊಂದು ಸ್ವಾರ್ತದಿಂದ ಯೋಚನೆ ಮಾಡುತ್ತಾರೆ? ನಾವು ದೂರ ಆಗಿ ಮಾತನಾಡುವುದು ನಿಲ್ಲಿಸಿದ್ದರೆ ಇದರಿಂದ ನನ್ನ ಮಗನ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ದೇವರ ದಯೇ ನನ್ನ ಕುಟುಂಬದಲ್ಲಿ ಈ ರೀತಿ ಯಾವ ಗೊಂದಲಗಳು ಇಲ್ಲ. ನನ್ನ ತಂದೆ ತಾಯಿ ಅವರವರ ಇಷ್ಟದ ತಕ್ಕಂತೆ ಜೀವನ ಒಪ್ಪಿಕೊಂಡು ಮುಂದೆ ಸಾಗಿದ್ದಾರೆ ಅನ್ನೋದು ಅರ್ಹಾನ್‌ಗೆ ಅರ್ಥವಾಗಿದೆ. ಮಗನೇ ಒಪ್ಪಿಕೊಂಡಿರುವಾಗ ಜನರಿಗೆ ಯಾಕೆ ಸಮಸ್ಯೆ?' ಎಂದಿದ್ದಾರೆ ಅರ್ಬಾಜ್.  
 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಕೊಳಕು ಪ್ಯಾಂಟ್‌ ಬಗ್ಗೆ ಮಾತನಾಡಿದ್ರು, ಮೊಮ್ಮಗನ ಸಿನಿಮಾಕ್ಕೆ ಸಮಸ್ಯೆ ತಂದ್ರು: Jaya Bachchan ಬಾಯ್ಕಾಟ್‌ ಆಗ್ತಾರಾ?
ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?