ಸಲ್ಮಾನ್ ಖಾನ್ ತುಂಬಾ ಸರಳ ವ್ಯಕ್ತಿ ಆದರೆ ಜನರು ತಪ್ಪಾಗಿ ತಿಳಿದುಕೊಂಡಿದ್ದಾರೆ; ನಿರ್ದೇಶಕ ಮುಕೇಶ್ ಛಾಬ್ರಾ

By Shruthi Krishna  |  First Published Mar 20, 2023, 2:03 PM IST

ಸಲ್ಮಾನ್ ಖಾನ್ ತೀರಾ ಸರಳ ವ್ಯಕ್ತಿ ಆದರೆ ಜನರು ಅವರನ್ನು ತಪ್ಪಾಗಿ ತಿಳಿದುಕೊಂಡಿದ್ದಾರೆ ಎಂದು ಬಾಲಿವುಡ್ ನಿರ್ದೇಶಕ ಮುಕೇಶ್ ಛಾಬ್ರಾ ಹೇಳಿದ್ದಾರೆ. 


ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ತುಂಬಾ ಸರಳವಾಗಿ ಜೀವನ ನಡೆಸುತ್ತಿದ್ದಾರೆ, ಆದರೆ ಜನ ಅವರನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಬಾಲಿವುಡ್ ಕಾಸ್ಟಿಂಗ್ ನಿರ್ದೇಶಕ, ನಿರ್ದೇಶಕ ಮುಕೇಶ್ ಛಾಬ್ರಾ  ಹೇಳಿದ್ದಾರೆ. ಪಾಡ್‌ಕಾಸ್ಟ್‌ನಲ್ಲಿ ಮುಕೇಶ್, ಸಲ್ಮಾನ್ ಖಾನ್ ಬಗ್ಗೆ ಮಾತನಾಡಿದ್ದಾರೆ. ಸಲ್ಮಾನ್ ಐಷಾರಾಮಿ ಜೀವನ ಇಷ್ಟಪಡುವುದಿಲ್ಲ ಸರಳವಾಗಿ ಇರುವುದು ಕೆಲವೇ ಜನರಿಗೆ ಮಾತ್ರ ಗೊತ್ತಿದೆ ಎಂದು ಹೇಳಿದ್ದಾರೆ. 
ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಸೇರಿದಂತೆ ಬಾಲಿವುಡ್‌ನ ಅನೇಕ ಸೆಲೆಬ್ರಿಟಿಗಳಿಗೆ ಮುಕೇಶ್ ಛಾಬ್ರಾ ಕಾಸ್ಟಿಂಗ್ ಡೈರೆಕ್ಟರ್ ಆಗಿದ್ದಾರೆ. 

ಸಲ್ಮಾನ್ ಖಾನ್ ಅವರ ಬಜರಂಗಿ ಭಾಯಿಜಾನ್ ಮತ್ತು ಟ್ಯೂಬ್‌ಲೈಟ್‌ನಂತಹ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಹಾಗೂ ಅನೇಕ ವರ್ಷಗಳಿಂದ ಸಲ್ಮಾನ್ ಖಾನ್ ಅವರನ್ನು ತುಂಬಾ ಹತ್ತಿರದಿಂದ ನೋಡಿದ್ದಾರೆ. ಮುಕೇಶ್ ಪ್ರಕಾರ, ಸಲ್ಮಾನ್ ಸ್ಟಾರ್ ಡಮ್ ಇದ್ದರೂ ಹೆಚ್ಚು ಬದಲಾಗಿಲ್ಲ. 

Tap to resize

Latest Videos

ಮುಕೇಶ್ ಛಾಬ್ರಾ,  ಸಲ್ಮಾನ್ ಖಾನ್ ಬಗ್ಗೆ, 'ಅವರು (ಸಲ್ಮಾನ್ ಖಾನ್) ಯಾವಾಗಲೂ ಎಲ್ಲರಿಗೂ ಲಭ್ಯವಿರುವ ಏಕೈಕ ವ್ಯಕ್ತಿ ನಿಮ್ಮನ್ನು ಸದಾ ಬೆಂಬಲಿಸುವ ವ್ಯಕ್ತಿ. ಅವರು ಪ್ರಾಮಾಣಿಕ ವ್ಯಕ್ತಿ. ಆದರೆ ಜನರು ಅವರ ಪ್ರಾಮಾಣಿಕತೆಯನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಾರೆ. ಅದು ಸಮಸ್ಯೆ. ನೀವು ಪ್ರಾಮಾಣಿಕವಾಗಿ ಏನನ್ನಾದರೂ ಹೇಳಿದಾಗ ಜನರು ಅದನ್ನು ವಿಭಿನ್ನವಾಗಿ ತೆಗೆದುಕೊಳ್ಳುತ್ತಾರೆ. ಒತ್ತಡದಿಂದಾಗಿ ನಟ ಶಾರುಖ್ ಮತ್ತು ಅಮೀರ್ ಖಾನ್ ಅವರಂತೆಯೇ ವಿಭಿನ್ನ ಮನಸ್ಥಿತಿಗಳೊಂದಿಗೆ ಬರುತ್ತಾರೆ. 'ಅವರ ಮನಸ್ಥಿತಿಯನ್ನು ಅರ್ಥಮಾಡಿಕೊಳ್ಳಬೇಕು' ಎಂದು ಹೇಳಿದರು. 

ಸಲ್ಮಾನ್ ಖಾನ್‌ಗೆ ಮತ್ತೆ ಜೀವ ಬೆದರಿಕೆ; ಕೊಂದೇ ತೀರುತ್ತೇನೆ ಎಂದ ಗ್ಯಾಂಗ್‌ಸ್ಟರ್

ಮತ್ತಷ್ಟು ವಿವರಿಸಿದ ಮುಖೇಶ್ ಚಾಬ್ರಾ 'ಸಲ್ಮಾನ್ ಖಾನ್ ಸರಳ ಜೀನನ ನಡೆಸುತ್ತಿದ್ದಾರೆ. ಕೇವಲ  1BHK ಅಪಾರ್ಟ್ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ. ಈ ಬಗ್ಗೆ ಕೆಲವರಿಗೆ ಮಾತ್ರ ತಿಳಿದಿದೆ. ಒಂದು ಸೋಫಾ, ಡೈನಿಂಗ್ ಟೇಬಲ್ ಹಾಗೂ ಜನರ ಜೊತೆ ಮಾತನಾಡಿರುವ ಸಣ್ಣ ಪ್ರದೇಶವಿದೆ. ಜಿಮ್ ಕೂಡ ಇದೆ. ದೇಶದ ದೊಡ್ಡ ಸ್ಟಾರ್ ಹೀಗೆ ಸರಳವಾಗಿ ಜೀವಿಸುತ್ತಿದ್ದಾರೆ. ಅವರು ಬ್ರಾಂಡ್‌ಗಳನ್ನು ಇಷ್ಟಪಡುವುದಿಲ್ಲ ಅಥವಾ ದುಬಾರಿ ವಸ್ತುಗಳನ್ನು ಖರೀದಿಸುವುದಿಲ್ಲ. ಅವರು ಎಲ್ಲವನ್ನೂ ತಿನ್ನುತ್ತಾನೆ, ಸಾಮಾನ್ಯ ಜೀವನವನ್ನು ನಡೆಸುತ್ತಾರೆ. ನಾನು 15 ವರ್ಷಗಳಿಂದ ಅವರೊಂದಿಗೆ ಸಂಪರ್ಕದಲ್ಲಿದ್ದೀನಿ. ಅವರು ಬದಲಾಗಿರುವುದನ್ನು ನಾನು ನೋಡಿಲ್ಲ' ಎಂದು ಹೇಳಿದ್ದಾರೆ. 

ನನ್ನ ಮದುವೆ ಪ್ರಸ್ತಾಪ ರಿಜೆಕ್ಟ್ ಮಾಡಿದ್ರು ಜೂಹಿ ಚಾವ್ಲಾ ತಂದೆ; ಶಾಕಿಂಗ್ ವಿಚಾರ ಬಿಚ್ಚಿಟ್ಟ ಸಲ್ಮಾನ್ ಖಾನ್

ನಿರ್ದೇಶಕ ಮುಕೇಶ್ ನಟ ಸುಶಾಂತ್ ಸಿಂಗ್ ರಜಪೂತ್ ಅವರಿಗೆ ದಿಲ್ ಬೇಚಾರ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವ ಮೂಲಕ ನಿರ್ದೇಶಕರಾಗಿ ಎಂಟ್ರಿ ಕೊಟ್ಟರು. ಸದ್ಯ ಸಲ್ಮಾನ್ ಖಾನ್ ಕಿಸಿ ಕಾ ಭಾಯ್ ಕಿಸಿ ಕಿ ಜಾನ್ ಚಿತ್ರೀಕರಣ ಮುಗಿಸಿದ್ದು ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಇನ್ನೂ ಕತ್ರಿನಾ ಕೈಫ್ ಜೊತೆಗೆ ಟೈಗರ್ 3 ಸಿನಿಮಾ ಕೂಡ ಮುಗಿಸಿದ್ದಾರೆ. 

click me!