ಎ.ಆರ್. ರೆಹಮಾನ್ ಮತ್ತು ಸೈರಾ ಬಾನು ಬೇರೆಯಾಗಲು ಕಾರಣವೇನು? ಬಾಲಿವುಡ್ ಸೆಲೆಬ್ರೆಟಿಗಳ ಡಿವೋರ್ಸ್ ಪ್ರಕರಣದಲ್ಲಿ ಬರವು ಸಾಮಾನ್ಯ ಅಂಶಗಳನ್ನು ವಕೀಲೆ ಪಟ್ಟಿ ಮಾಡಿದ್ದಾರೆ.
ಚೆನ್ನೈ(ನ.21) ಸಂಗೀತ ನಿರ್ದೇಶಕ ಎರ್ ಆರ್ ರೆಹಮಾನ್ ಹಾಗೂ ಪತ್ನಿ ಸೈರಾ ಭಾನು ವಿಚ್ಚೇದನ ಪ್ರಕರಣ ಕೋಲಾಹಲ ಸೃಷ್ಟಿಸಿದೆ. ಬರೋಬ್ಬರಿ 29 ವರ್ಷಗಳ ಕಾಲ ಸಂಸಾರ ನಡೆಸಿದ ಜೋಡಿ ಏಕಾಏಕಿ ಡಿವೋರ್ಸ್ ಘೋಷಣೆ ಮಾಡುತ್ತಿದ್ದಂತೆ ಅಭಿಮಾನಿಗಳು ಬೆಚ್ಚಿ ಬಿದ್ದಿದ್ದಾರೆ. ಡಿವೋರ್ಸ್ ಬೆನ್ನಲ್ಲೇ ಹಲವು ಕಾರಣಗಳ ಸುದ್ದಿಗಳು, ಮಾತುಗಳು ಹರಿದಾಡುತ್ತಿದೆ. ಇದೀಗ ರೆಹಮಾನ್ ಪತ್ನಿ ಸೈರಾ ಭಾನು ವಕೀಲೆ ವಂದನಾ ಶಾ ಕಾರಣ ಬಿಚ್ಚಿಟ್ಟಿದ್ದಾರೆ. ಹಲವು ವರ್ಷಗಳ ಬಳಿಕ ಸೈರಾ ಭಾನು ಈ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಇಬ್ಬರು ಗೌರವಯುತವಾಗಿ ಬೇರೆ ಬೇರೆಯಾಗಲು ನಿರ್ಧರಿಸಿದ್ದಾರೆ. ಕಳೆದ ಕೆಲ ವರ್ಷಗಳಿಂದ ಇಬ್ಬರಲ್ಲೂ ಹೊಂದಾಣಿಕೆಯಾಗುತ್ತಿರಲಿಲ್ಲ. ಸರಿಪಡಿಸುವ, ಸರಿ ಹೊಂದಿಸುವ ಪ್ರಯತ್ನಗಳನ್ನು ಸೈರಾ ಭಾನು ಮಾಡಿದ್ದಾರೆ. ಆದರೆ ಎಲ್ಲವೂ ವಿಫಲಗೊಂಡಿದೆ. ಹೀಗಾಗಿ ಅಂತ್ಯಂತ ನೋವಿನಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ವಂದನಾ ಶಾ ಹೇಳಿದ್ದಾರೆ. ಇದೇ ವೇಳೆ ಬಾಲಿವುಡ್ ಸೆಲೆಬ್ರೆಟಿಗಳ ದಾಂಪತ್ಯ ಜೀವನ ಅಂತ್ಯಗೊಳ್ಳುತ್ತಿರುವುದಕ್ಕೆ ಕಾರಣ ನೀಡಿದ್ದಾರೆ.
ವಂದನಾ ಶಾ ಇದೇ ವೇಳೆ ಸೆಲೆಬ್ರೆಟಿಗಳು, ಬಾಲಿವುಡ್ ನಟ ನಟಿಯರ ದಾಂಪತ್ಯ ಜೀವನ ಬಿರುಕು ಬಿಡುವುದಕ್ಕೆ ಕಾರಣಗಳನ್ನೂ ಹೇಳಿದ್ದಾರೆ. ದಿ ಚಿಲ್ ಪಾಡ್‌ಕಾಸ್ಟ್‌ನಲ್ಲಿ ವಂದನಾ ಶಾ ಸೆಲೆಬ್ರೆಟಿ ಡಿವೋರ್ಸ್ ಹಿಂದಿನ ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿದ್ದಾರೆ. ಈ ಪೈಕಿ ಲೈಂಗಿಕ ಜೀವನ ಕುರಿತು ನಿರೀಕ್ಷೆಗಳೇ ಭಿನ್ನವಾಗಿದೆ. ಸೆಲೆಬ್ರೆಟಿಗಳ ದಾಂಪತ್ಯ ಜೀವನದಲ್ಲಿನ ಲೈಂಗಿಕ ಜೀವನ ತೃಪ್ತಿಕರವಾಗಿಲ್ಲ ಅನ್ನೋದು ಒಂದು ಕಾರಣ ಎಂದಿದ್ದಾರೆ. ವಂದನಾ ಶಾ ಹಲವು ಬಾಲಿವುಡ್ ಸೆಲೆಬ್ರೆಟಿಗಳ ಡಿವೋರ್ಸ್ ಕೇಸ್ ಹತ್ತಿರದಿಂದ ನೋಡಿದ್ದಾರೆ. ಈ ಎಲ್ಲಾ ಪ್ರಕರಣಗಳಲ್ಲಿ ಕಂಡು ಬರುವ ಸಾಮಾನ್ಯಗಳನ್ನು ಪಟ್ಟಿ ಮಾಡಿದ್ದಾರೆ.
undefined
ಎಆರ್ ರೆಹಮಾನ್-ಮೋಹಿನಿ ಡೇ ವಿಚ್ಛೇದನ ಕಾಕತಾಳಿಯೋ? 2ಕ್ಕೂ ಲಿಂಕ್ ಇದ್ಯಾ? ಹೊರ ಬಂತು ಸ್ಪಷ್ಟನೆ
ಒಂದು, ದಾಂಪತ್ಯದಲ್ಲಿ ಬೇಸರ. ದಾಂಪತ್ಯ ಸೊರಗುತ್ತಿರುವಂತೆ ಸೆಲೆಬ್ರಟಿಗಳು ಒಂದು ವಿವಾಹದಿಂದ ಇನ್ನೊಂದಕ್ಕೆ ಹೋಗುತ್ತಾರೆ, ಬಾಲಿವುಡ್‌ನ ಶ್ರೀಮಂತ ಕುಟುಂಬಗಳಲ್ಲೂ ಇದು ಸಂಭವಿಸುತ್ತದೆ ಎಂದು ವಂದನಾ ಹೇಳಿದ್ದಾರೆ. ಎರಡನೆಯದಾಗಿ, ಅವರು ತುಂಬಾ ವಿಭಿನ್ನವಾದ ಲೈಂಗಿಕ ಜೀವನ ನಡೆಸುತ್ತಾರೆ ಎಂದು ನಾನು ಭಾವಿಸುತ್ತೇನೆ. ಸಾಮಾನ್ಯ ವ್ಯಕ್ತಿಗಿಂತ ಸೆಲೆಬ್ರೆಟಿಗಳ ಲೈಂಗಿಕ ಜೀವನದ ನಿರೀಕ್ಷೆಗಳು ತುಂಬಾ ಹೆಚ್ಚು. ಮೂರನೆಯದಾಗಿ, ವ್ಯಭಿಚಾರ ಸಂಭವಿಸುತ್ತದೆ, ಒನ್ ನೈಟ್ ಸ್ಟ್ಯಾಂಡ್ ಸಮಸ್ಯೆಯಲ್ಲ ಎಂದಿದ್ದಾರೆ
ನಾನು ಬಾಲಿವುಡ್‌ನ ಭಾಗವಲ್ಲ, ನನಗೆ ಬಂದ ಪ್ರಕರಣಗಳಿಂದ ಮಾತ್ರ ನಾನು ಹೇಳುತ್ತಿದ್ದೇನೆ. ಬೇಸರ, ಸಾಕಷ್ಟು ಪ್ರಾಮುಖ್ಯತೆ ನೀಡದಿರುವುದು, ಅಥವಾ ದಂಪತಿಗಳು ಹೊರಗಿನವರ ಮಾತುಗಳನ್ನು ಹೆಚ್ಚು ಕೇಳುವುದು ಮುಖ್ಯ ಸಮಸ್ಯೆಗಳು. ಆ ಹೊರಗಿನವರು ತಾಯಿ, ಸಹೋದರ ಅಥವಾ ಮಾವನೂ ಆಗಿರಬಹುದು” ಎಂದು ವಂದನಾ ಹೇಳಿದ್ದಾರೆ.
ಕೊನೆಯಲ್ಲಿ ಹೇಳಿದ ಪ್ರಕರಣಕ್ಕೆ ಉದಾಹರಣೆಯಾಗಿ ದಕ್ಷಿಣ ಭಾರತದ ವಿಚ್ಛೇದನ ಪ್ರಕರಣವನ್ನೂ ವಂದನಾ ಹೇಳುತ್ತಾರೆ. ಮಲಗುವ ಕೋಣೆಯಲ್ಲಿ ಮತ್ತು ಸಾಮಾನ್ಯ ಜೀವನದಲ್ಲಿ ಹುಲಿಯಂತೆ ವರ್ತಿಸುವ ಗಂಡ ತನ್ನ ತಂದೆಯ ಮುಂದೆ ಬಂದರೆ ಬೆಕ್ಕಿನಂತಾಗುತ್ತಿದ್ದ. ನಿಜವಾಗಿ ಮಾವನೇ ಎಲ್ಲವನ್ನೂ ನಿಯಂತ್ರಿಸುತ್ತಿದ್ದ. ಇದು ವಿವಾಹ ಮುರಿಯಲು ಕಾರಣವಾಯಿತು ಎನ್ನುತ್ತಾರೆ ವಂದನಾ.