ನನ್ನ ಬಟ್ಟೆ ರಾಷ್ಟ್ರಮಟ್ಟದ ಚರ್ಚೆ ಆಗತ್ತೆ ಎಂದು ಗೊತ್ತೇ ಇರ್ಲಿಲ್ಲ: ಸ್ವರಾ ಭಾಸ್ಕರ್ ವ್ಯಂಗ್ಯ

By Suchethana D  |  First Published Nov 21, 2024, 4:59 PM IST

ಹೆಣ್ಣು ಮಕ್ಕಳ ಶಿಕ್ಷಣದ ಪರ ಪ್ರಚಾರ ಮಾಡ್ತಿದ್ದ ಸ್ವರಾ ಭಾಸ್ಕರ್‍‌ ಇದರ ವಿರೋಧಿ ಎನ್ನಲಾದ ಮೌಲಾನಾ ಸಜ್ಜನ್‌ ನೊಮಾನಿ ಭೇಟಿ ಮಾಡಿದ ಬಗ್ಗೆ ಟೀಕೆಗೆ ಒಳಗಾಗಿದ್ದರು. ಅದಕ್ಕೆ ಮಾಜಿ ನಟಿ ಹೇಳಿದ್ದೇನು? 
 


ಮಾಜಿ ನಟಿ ಸ್ವರಾ ಭಾಸ್ಕರ್  (ಫಾತಿಮಾ) ಪತಿ ಫಹಾದ್ ಅಹಮದ್ ಮಹಾರಾಷ್ಟ್ರ ಚುನಾವಣೆಯಲ್ಲಿ ಅನುಶಕ್ತಿ ನಗರ ಕ್ಷೇತ್ರದಿಂದ ಸ್ಪರ್ಧೆ ಮಾಡಿದ್ದು, ಫಲಿತಾಂಶಕ್ಕಾಗಿ ಕಾಯುತ್ತಿದ್ದಾರೆ. ಇದರ ನಡುವೆಯೇ ಸ್ವರಾ ಭಾಸ್ಕರ್‍‌ ಕೆಲವು ದಿನಗಳಿಂದ ಸೋಷಿಯಲ್‌ ಮೀಡಿಯಾಗಳಲ್ಲಿ ಚರ್ಚೆಯಲ್ಲಿದ್ದಾರೆ. ಇದಕ್ಕೆ ಕಾರಣ, ಸ್ವರಾ ಭಾಸ್ಕರ್ ಅವರು  ಪತಿ ಫಹಾದ್ ಅಹ್ಮದ್ ಜೊತೆ ಮೌಲಾನಾ ಸಜ್ಜದ್ ನೊಮಾನಿ ಅವರನ್ನು ಭೇಟಿಯಾಗಿದ್ದು ಮಾತ್ರವಲ್ಲದೇ, ಅವರ ಬಗ್ಗೆ ಹಾಡಿ ಹೊಗಳಿರುವುದಕ್ಕೆ. ಅಷ್ಟಕ್ಕೂ ಹೀಗೆ ಸ್ವರಾ ಟ್ರೋಲ್ ಆಗಲು ಕಾರಣವೂ ಇದೆ. ಅದೇನೆಂದರೆ,  ಸ್ವರಾ ಮದುವೆಗೂ ಮುನ್ನ ಹೆಣ್ಣುಮಕ್ಕಳ ರಕ್ಷಣೆ, ಅವರ ಸ್ವಾತಂತ್ರ, ಹೆಣ್ಣುಮಕ್ಕಳ ಶಿಕ್ಷಣದ ಬಗ್ಗೆ ಹೋರಾಟ ಮಾಡಿ ಹೆಸರು ಮಾಡಿದವರು. ಆದರೆ ಮೌಲಾನಾ ಸಜ್ಜನ್‌ ನೊಮಾನಿ ಸ್ತ್ರೀ ಶಿಕ್ಷಣದ ವಿರೋಧಿ ಎನ್ನಲಾಗಿದೆ. ಇದೇ ಕಾರಣಕ್ಕೆ ಸ್ವರಾ ಅವರು ಇನ್ನಿಲ್ಲದ ಟೀಕೆ ಎದುರಿಸುತ್ತಿದ್ದಾರೆ. ಮಾಡುವುದೆಲ್ಲಾ ಅನಾಚಾರ, ಮನೆ ಮುಂದೆ ಬೃಂದಾವನ ಎಂದೂ ಇವರಿಗೆ ಟೀಕೆ ಮಾಡಲಾಗುತ್ತಿದೆ. 

ಮೌಲಾನಾ ಸಜ್ಜದ್ ನೊಮಾನಿ ಅವರನ್ನು ಭೇಟಿಯಾದ ಸಂದರ್ಭದಲ್ಲಿ  ಸ್ವರಾ  ದುಪ್ಪಟ್ಟಾದಲ್ಲಿ ತಲೆ ಮುಚ್ಚಿಕೊಂಡಿದ್ದರು. ಇದು ಕೂಡ  ಟ್ರೋಲ್‌ಗೆ ಕಾರಣವಾಗಿದೆ. ಸ್ವರ ಭಾಸ್ಕರ್ ಯಾಕೆ ಬುರ್ಖಾ ಧರಿಸಿಲ್ಲ ಎಂದು ಟೀಕಿಸಿದ್ದರೆ, ಸಿನಿಮಾಗಳಲ್ಲಿ ನಟಿಸುವ ಸಂದರ್ಭದಲ್ಲಿ ಬಿಕಿನಿ ಹಾಕಿದಾಗಲೇ ಎಲ್ಲಾ ದರ್ಶನ ಕೊಟ್ಟಾಗಿದೆ, ಈಗ ದುಪಟ್ಟಾ ಹಾಕಿ ಏನು ಪ್ರಯೋಜನ ಎಂದು ಟೀಕಿಸುತ್ತಿದ್ದಾರೆ. ಇದಕ್ಕೆ ಗರಂ ಆಗಿರೋ ಮಾಜಿ ನಟಿ, ನೆಟ್ಟಿಗರು ಮತ್ತು ಟ್ರೋಲಿಗರ ವಿರುದ್ಧ ಹರಿಹಾಯ್ದಿದ್ದಾರೆ. ವ್ಯಂಗ್ಯವಾಗಿರುವ ಪೋಸ್ಟ್‌ ಮಾಡಿರುವ ನಟಿ, ನನ್ನ ಬಟ್ಟೆಯ ಕಪಾಟಿನ ಮೇಲೆ ಯಾಕೆ ಎಲ್ಲರ ಕಣ್ಣು ಗೊತ್ತಾಗ್ತಿಲ್ಲ. ನನ್ನ ಬಟ್ಟೆ ರಾಷ್ಟ್ರೀಯ ಮಟ್ಟದ ಸುದ್ದಿಯಾಗುತ್ತದೆ ಎಂದು ಭಾವಿಸಿರಲಿಲ್ಲ.   ಮದುವೆಯ ನಂತರದ ನನ್ನ ವಾರ್ಡ್ರೋಬ್ ಆಯ್ಕೆಗಳು ವಿಲಕ್ಷಣ  ಚರ್ಚೆಯ ರೂಪ ಪಡೆಯುತ್ತಿವೆ.  ಸಂಘಿ ಕ್ರಿಮಿಕೀಟಗಳಿಗೆ ಇದು ಮೇವು ಒದಗಿಸುತ್ತಿದೆ ಎಂದು ಟೀಕಿಸಿದ್ದಾರೆ.

Tap to resize

Latest Videos

undefined

ಅಯ್ಯಪ್ಪ ಮಾಲೆ ಧರಿಸಿ ದರ್ಗಾಕ್ಕೆ ಭೇಟಿ! ವಿವಾದದ ಸುಳಿಯಲ್ಲಿ ಸಿಲುಕಿರೋ ರಾಮ್‌ಚರಣ್‌ಗೆ ಪತ್ನಿ ಹೇಳಿದ್ದೇನು?  

ಅಷ್ಟಕ್ಕೂ  ಸ್ವರಾ ಭಾಸ್ಕರ್​ ಅವರು  ಸಮಾಜವಾದಿ ಪಕ್ಷದ ನಾಯಕ ಫಹಾದ್ ಝಿರಾರ್ ಅಹ್ಮದ್ (Fahad Zirar  ಅವರೊಂದಿಗೆ ಕಳೆದ ವರ್ಷದ  ಜನವರಿ 6 ರಂದು ಮದುವೆಯಾಗಿದ್ದು, ದಿಢೀರ್​ ಆಗಿ ಈ ಬಗ್ಗೆ ಘೋಷಿಸಿದ್ದರು. ತಾವು ವಿಶೇಷ ವಿವಾಹ ಕಾಯ್ದೆಯಡಿಯಲ್ಲಿ ತಮ್ಮ ವಿವಾಹವನ್ನು ನ್ಯಾಯಾಲಯದಲ್ಲಿ ನೋಂದಾಯಿಸಿಕೊಂಡಿರುವುದಾಗಿ  ತಿಳಿಸಿದ್ದರು. ಸ್ವರಾ ತಮ್ಮ  ಪೋಷಕರೊಂದಿಗೆ ಹಾಜರಾಗಿ ರಿಜಿಸ್ಟ್ರಾರ್ ಕಚೇರಿಯಲ್ಲಿ ಮದುವೆ ನೋಂದಾಯಿಸಿದ್ದ ಫೋಟೋ ಶೇರ್​ ಮಾಡಿದ್ದರು.   ಬಳಿಕ ಒಂದು ಹೆಣ್ಣು ಮಗುವಿನ ಅಮ್ಮ ಆಗಿದ್ದಾರೆ.

ಸ್ವರಾ ಭಾಸ್ಕರ್​ ಮದುವೆಯಾದ ಹೊಸತರದಲ್ಲಿ ಇವರ ಬಗ್ಗೆ ಸಾಕಷ್ಟು ಟೀಕೆಗಳು ಕೇಳಿಬಂದಿದ್ದವು.  ಮುಸ್ಲಿಂ ಯುವಕನ ಜೊತೆ ಮದುವೆಯಾಗಿರುವುದಕ್ಕೆ ಈ ಟೀಕೆಗಳು ಎದ್ದಿದ್ದವು.  ಸ್ವರಾ  ವಿರುದ್ಧ ಸಾಧ್ವಿ ಪ್ರಾಚೀ ಸಿಂಗ್ ವಾಗ್ದಾಳಿ ನಡೆಸಿದ್ದರು.  ದೆಹಲಿಯಲ್ಲಿ ನಡೆದಿದ್ದ  ಶ್ರದ್ಧಾ ವಾಕರ್ ಹತ್ಯೆಯಂತೆಯೇ ಸ್ವರಾ ಭಾಸ್ಕರ್ ಕೂಡ ಹತ್ಯೆಯಾಗಬಹುದು ಎಂದು ಹೇಳಿದ್ದರು. ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುವ ನಿರ್ಧಾರ ತೆಗೆದುಕೊಳ್ಳುವ ಮೊದಲು ಸ್ವರಾ ಫ್ರಿಡ್ಜ್ ನೋಡಬೇಕಿತ್ತು ಎಂದು ಹೇಳಿ ಆಕ್ರೋಶ ವ್ಯಕ್ತಪಡಿಸಿದ್ದರು.  ಆದರೆ ಸ್ವರಾ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳಲಿಲ್ಲ.   ಸಿನಿಮಾ ಸ್ಟೈಲ್​ನಲ್ಲಿಯೇ ಬೆಡ್​ರೂಂ ಶೃಂಗಾರ ಮಾಡಿರುವುದರ ವಿಡಿಯೋ ಶೇರ್​ ಮಾಡಿದ್ದ ನಟಿ, ತಮ್ಮ ಫಸ್ಟ್​ ನೈಟ್​ ಎಂದಿದ್ದರು.  ಇದನ್ನು ಮಾಡಲು ಅಮ್ಮ ತುಂಬಾ ಕಷ್ಟಪಟ್ಟಿದ್ದಾರೆ. ಇದು ತುಂಬಾ ಸುಂದರವಾಗಿದೆ. ಸಿನಿಮಾ ಮಾದರಿಯಲ್ಲಿ ಮೊದಲ ರಾತ್ರಿಯ ಸೀನ್​ ಇರುವ ರೀತಿಯಲ್ಲಿ ಇದನ್ನು ಶೃಂಗಾರ ಮಾಡಲಾಗಿದೆ ಎಂದು ಸ್ವರಾ ಹೇಳಿಕೊಂಡಿದ್ದರು.ಹೀಗೆ ಮೊದಲ ರಾತ್ರಿಯ ಬೆಡ್​ರೂಂ ಚಿತ್ರವನ್ನು ಶೇರ್​ ಮಾಡಿಕೊಂಡಿರುವುದಕ್ಕೆ ಪರ  ವಿರೋಧ ನಿಲುವು ವ್ಯಕ್ತವಾಗಿತ್ತು. ಆಗಲೂ  ಹಲವರು ಟ್ರೋಲ್​  ಮಾಡಿದ್ದರು.

ಹಣವೇ ಜೀವನ, ಹಣವೇ ಸರ್ವಸ್ವ, ಹಣವೊಂದಿದ್ದರೆ... ಎನ್ನುತ್ತಲೇ ಬಟ್ಟೆಯ ಗುಟ್ಟನ್ನೂ ರಟ್ಟು ಮಾಡಿದ ಉರ್ಫಿ
 

click me!