ನವೆಂಬರ್ 18 ರಿಂದ 24 ರವರೆಗೆ ಒಟಿಟಿಯಲ್ಲಿ ಬಿಡುಗಡೆಯಾಗಿರುವ ಮತ್ತು ಬಿಡುಗಡೆಯಾಗಲಿರುವ ವೆಬ್ ಸಿರೀಸ್‌ಗಳು ಮತ್ತು ಸಿನಿಮಾಗಳ ಮಾಹಿತಿ ಇಲ್ಲಿದೆ. ನೆಟ್‌ಫ್ಲಿಕ್ಸ್, ಪ್ರೈಮ್ ವೀಡಿಯೋ ಮತ್ತು ಜಿಯೋ ಸಿನೆಮಾದಂತಹ ಜನಪ್ರಿಯ ವೇದಿಕೆಗಳಲ್ಲಿ ವೈವಿಧ್ಯಮಯ ಕಥಾವಸ್ತುಗಳನ್ನು ಒಳಗೊಂಡ 'ಯೇಹ್ ಖಾಲಿ ಕಾಲಿ ಕಾಲಿ ಆಂಖೇ'ಯಿಂದ 'ವೆನ್ ದಿ ಪೋನ್ ರಿಂಗ್ಸ್' ವರೆಗಿನ ಕಾರ್ಯಕ್ರಮಗಳನ್ನು ವೀಕ್ಷಿಸಬಹುದು.
ಇತ್ತೀಚೆಗೆ ಜನ ಥಿಯೇಟರ್‌ನಲ್ಲಿ ರಿಲೀಸ್ ಆಗುವ ಸಿನಿಮಾಗಳಿಗೆ ಕಾಯುವ ಬದಲು ಓಟಿಟಿಯಲ್ಲಿ ಬಿಡುಗಡೆಯಾಗುವ ವೆಬ್ ಸಿರೀಸ್‌ಗಳು, ಸಿನಿಮಾಗಳಿಗಾಗಿ ಕಾಯುತ್ತಿರುತ್ತಾರೆ. ಹೀಗಾಗಿ ಈ ವಾರ ರಿಲೀಸ್ ಆಗಿರುವ ಹಾಗೂ ಆಗಲಿರುವ ಕೆಲ ಒಟಿಟಿ ಸಿರೀಸ್ ಹಾಗೂ ಸಿನಿಮಾಗಳ ಬಗ್ಗೆ ಇಲ್ಲಿದೆ ಮಾಹಿತಿ. 'ಯೇಹ್ ಖಾಲಿ ಕಾಲಿ ಕಾಲಿ ಆಂಖೇ'ಯಿಂದ ನಿಗೂಢ ಥ್ರಿಲ್ಲರ್ ಕೊರಿಯನ್ ಸಿರೀಸ್ 'ವೆನ್ ದಿ ಪೋನ್ ರಿಂಗ್ಸ್' ವರೆಗೆ ಈ ವಾರ ಪೂರ್ತಿ ಅಂದರೆ ನವಂಬರ್ 18ರಿಂದ 24ರವರೆಗೆ ಒಟಿಟಿಯಲ್ಲಿ ರಿಲೀಸ್ ಆದ ಹಾಗೂ ಆಗಲಿರುವ ವೆಬ್ ಸಿರೀಸ್ ಹಾಗೂ ಸಿನಿಮಾಗಳ ಬಗ್ಗೆ ಇಲ್ಲಿ ಮಾಹಿತಿ ಇದ್ದು, ನಿಮಗಿಷ್ಟದ ಸಿರೀಸ್‌ಗಳನ್ನು ನೋಡಬಹುದು.
ಈ ವಾರದ ಒಟಿಟಿ ಫ್ಲಾಟ್‌ಫಾರ್ಮ್‌ಗಳಾದ ನೆಟ್‌ಫ್ಲಿಕ್ಸ್( Netflix), ಪ್ರೈಮ್ ವೀಡಿಯೋ( Prime Video), ಜಿಯೋ ಸಿನೆಮಾ(JioCinema0 ಸೇರಿದಂತೆ ಹೆಚ್ಚಿನ ಜನಪ್ರಿಯ ಸ್ಟ್ರೀಮಿಂಗ್ ಪ್ಲಾಟ್‌ಫಾರ್ಮ್‌ಗಳಾದ್ಯಂತ ಅತ್ಯಾಕರ್ಷಕ ಸಿರೀಸ್ ಸಿನಿಮಾಗಳ ಬಿಡುಗಡೆಯ ಭರವಸೆ ಸಿಕ್ಕಿದೆ. ನೀವು ವೈಜ್ಞಾನಿಕ ಕಾಲ್ಪನಿಕ, ಥ್ರಿಲ್ಲರ್ ಅಥವಾ ನಾಟಕದ ಅಭಿಮಾನಿಗಳಾಗಿದ್ದರೆ, ಬಹು ನಿರೀಕ್ಷಿತ 'ವೆನ್ ದಿ ಫೋನ್ ರಿಂಗ್ಸ್', 'ಯೇ ಕಾಲಿ ಕಾಲಿ ಆಂಖೇನ್' ಸೀಸನ್ 2 ಸೇರಿ ಹಲವು ಶೋಗಳಿವೆ.
undefined
ನಯನತಾರಾ ಬಿಯಾಂಡ್ ದಿ ಫೇರಿಟೇಲ್
ನಯನತಾರಾ ಬಿಯಾಂಡ್ ದಿ ಫೇರಿಟೇಲ್ ನವಂಬರ್ 18ರಂದು ಬಿಡುಗಡೆಯಾಗಿದ್ದು, ಐಎಂಡಿಬಿ ಇದಕ್ಕೆ10ರಲ್ಲಿ 4.0 ರೇಟಿಂಗ್ ನೀಡಿದೆ. ಇದು ನಯನತಾರಾ ಅವರು ಯಾವುದೇ ಬ್ಯಾಕ್‌ಗ್ರೌಂಡ್‌ಗಳಿಲ್ಲದೇ ಸಿನಿಮಾದಲ್ಲಿ ನೆಲೆ ಕಾಣಲು ಕಂಡ ಹೋರಾಟ, ಅವರ ಬದುಕಿನಲ್ಲಾದ ಹಲವು ಪ್ರೇಮ ವೈಫಲ್ಯಗಳು ಸೇರಿದಂತೆ ಅವರ ಬದುಕಿನ ಹಲವು ವಿಚಾರಗಳನ್ನು ಒಳಗೊಂಡಿದ್ದು, ಅವರ 40ನೇ ಹುಟ್ಟುಹಬ್ಬದ ದಿನವಾದ ನವಂಬರ್ 18ರಂದು ಈ ಡಾಕ್ಯುಮೆಂಟರಿ ಬಿಡುಗಡೆಯಾಗಿದೆ, ನೆಟ್‌ಫ್ಲಿಕ್ಸ್‌ನಲ್ಲಿ ಈ ಸಾಕ್ಷ್ಯಾಚಿತ್ರವನ್ನು ನೋಡಬಹುದು.
ಇಂಟಿರಿಯರ್ ಚೀನಾಟೌನ್
ನವಂಬರ್ 19ರಂದು ಡಿಸ್ನಿ ಹಾಟ್‌ಸ್ಟಾರ್‌ನಲ್ಲಿ ಬಿಡುಗಡೆಯಾಗಿದ್ದು, ಐಎಂಡಿಬಿ ಈ ಸಿನಿಮಾಗೆ 10ರಲ್ಲಿ 7.2 ರೇಟಿಂಗ್ ನೀಡಿದೆ. 'ಇಂಟೀರಿಯರ್ ಚೈನಾಟೌನ್'ನ ಮುಖ್ಯ ಪಾತ್ರಗಳಲ್ಲಿ ಜಿಮ್ಮಿ ಓ ಯಾಂಗ್ ಮತ್ತು ರೋನಿ ಚಿಯೆಂಗ್ ನಟಿಸಿದ್ದಾರೆ. ಕಥೆಯು ಚೈನಾಟೌನ್‌ನಲ್ಲಿ ವಾಸಿಸುವ ಸಿನಿಮಾರಂಗದಲ್ಲಿ ನೆಲೆ ಕಾಣಲು ಬಯಸುತ್ತಿರುವ ನಟನೋರ್ವ ಅನಿರೀಕ್ಷಿತವಾಗಿ ಅಪರಾಧಕ್ಕೆ ಸಾಕ್ಷಿಯಾದ ನಂತರ ಬದಲಾಗುವ ಚಿತ್ರಣದ ಕತೆಯನ್ನು ಹೊಂದಿದೆ. ಈ ಸಿನಿಮಾವೂ ಚಾರ್ಲ್ಸ್ ಯು ಬರೆದ, ಈ ಹುಲು ಸರಣಿಯ 2020 ರ ಕಾದಂಬರಿ 'ಇಂಟೀರಿಯರ್ ಚೈನಾಟೌನ್' ರೂಪಾಂತರವಾಗಿದೆ.
ವೆನ್ ದಿ ಫೋನ್ ರಿಂಗ್ಸ್
ಇದು ನೆಟ್‌ಫ್ಲಿಕ್ಸ್‌ನಲ್ಲಿ ನಾಳೆ ಬಿಡುಗಡೆಯಾಗಲಿದ್ದು, ತೀವ್ರ ಕುತೂಹಲ ಹೆಚ್ಚಿಸಿದೆ. ನೆಟ್‌ಫ್ಲಿಕ್ಸ್ ಪ್ರಕಾರ ವೆನ್ ದಿ ಫೋನ್ ರಿಂಗ್ಸ್ ಕಾಕಾವೋ ಪೇಜ್ ವೆಬ್ ಕಾದಂಬರಿಯನ್ನು ಆಧರಿಸಿದ ಕತೆಯಾಗಿದ್ದು, ಅಪಹರಣಕಾರರಿಂದ ಕರೆ ಬಂದಾಗ ಆಗಷ್ಟೇ ರಾಜಕಾರಣಿಯಾಗಿ ಬೆಳೆಯುತ್ತಿರುವ ಯುವಕ ಹಾಗೂ ಆತನ ಮೂಕ ಪತ್ನಿಯ ಚಡಪಡಿಸುವಿಕೆಯ ಕತೆ ಹೊಂದಿದೆ. ಈ ಥ್ರಿಲ್ಲರ್ ಡ್ರಾಮಾದಲ್ಲಿ ಯೂ ಯೆನ್-ಸಿಯೋಕ್, ಚೇ ಸೂ-ಬಿನ್, ಹಿಯೋ ನಾಮ್-ಜುನ್ ಮತ್ತು ಜಂಗ್ ಗ್ಯು-ರಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. ಕೊರಿಯನ್ ಸಿನಿಮಾಗಳನ್ನು ಇಷ್ಟಪಡುವವರಿಗೆ ಇದು ಉತ್ತಮ ಆಯ್ಕೆ.
ಯೇ ಕಾಲಿ ಕಾಲಿ ಆಂಖೇನ್ ಸೀಸನ್ 2
ಇದು ನವಂಬರ್ 22 ರಂದು ಅಂದರೆ ನಾಳೆ ಬಿಡುಗಡೆಯಾಗಲಿದ್ದು, ಇದಕ್ಕೆ ಐಎಂಡಿಬಿ 10ರಲ್ಲಿ 7.1 ರೇಟಿಂಗ್ ನೀಡಿದೆ. ಈ 'ಯೇ ಕಾಲಿ ಕಾಲಿ ಆಂಖೇನ್ ಸೀಸನ್ ವೀಕ್ಷಕರಿಗೆ ತೀವ್ರವಾದ ಭಾವುಕವೆನಿಸುವ ಶಕ್ತಿ, ಹುಚ್ಚು ಹಾಗೂ ಅಪಾಯಗಳ ಮಿಶ್ರಣ ನೀಡುತ್ತದೆ. ಹೊಸ ಸೀಸನ್‌ನಲ್ಲಿ ಶ್ವೇತಾ ತ್ರಿಪಾಠಿ, ತಾಹಿರ್ ರಾಜ್ ಭಾಸಿನ್, ಆಂಚಲ್ ಸಿಂಗ್ ಮತ್ತು ಗುರ್ಮೀತ್ ಚೌಧರಿ ಅವರಿದ್ದಾರೆ.
'ಸ್ಪೆಲ್ಬೌಂಡ್'
ನೀವು ಅನಿಮೇಟೆಡ್ ಚಲನಚಿತ್ರಗಳನ್ನು ಇಷ್ಟಪಡುವವರಾಗಿದ್ದಾರೆ, ಸ್ಪೆಲ್ಬೌಂಡ್ ಉತ್ತಮ ಆಯ್ಕೆಯಾಗಿದೆ. ನಾಳೆ ಈ ಸಿರೀಸ್ ಬಿಡುಗಡೆಯಾಗಲಿದ್ದು, ನೆಟ್‌ಫ್ಲಿಕ್ಸ್‌ನಲ್ಲಿ ನೋಡಬಹುದಾಗಿದೆ. ಇದರಲ್ಲಿ ಏಲಿಯನ್ ರೀತಿಯ ಸಾಹಸಗಳಿದ್ದು, ಲುಂಬ್ರಿಯಾದ ರಾಜ ಮತ್ತು ರಾಣಿಯನ್ನು ರಾಕ್ಷಸರನ್ನಾಗಿ ಪರಿವರ್ತಿಸಿದ ನಂತರ ತನ್ನ ಕುಟುಂಬ ಮತ್ತು ರಾಜ್ಯವನ್ನು ಉಳಿಸಲು ಮಾಡುವ ಹೋರಾಟದ ಕತೆ ಇದೆ. ರಾಚೆಲ್ ಜೆಗ್ಲರ್, ನಿಕೋಲ್ ಕಿಡ್ಮನ್, ಜೇವಿಯರ್ ಬಾರ್ಡೆಮ್, ಜಾನ್ ಲಿಥ್ಗೋ, ಟೈಟಸ್ ಬರ್ಗೆಸ್, ಜೆನಿಫರ್ ಲೆವಿಸ್ ಮತ್ತು ನಾಥನ್ ಲೇನ್ ಧ್ವನಿ ನೀಡಿದ್ದಾರೆ.
ದಿ ರಾಣಾ ದಗ್ಗುಬಾಟಿ ಶೋ
ದಿ ರಾಣಾ ದಗ್ಗುಬಾಟಿ ಶೋ ಇದು ನವಂಬರ್ 23ರಂದು ರಿಲೀಸ್ ಆಗಲಿದ್ದು, ಇದೊಂದು ತೆಲುಗಿನ ಟಾಕ್ ಶೋ ಆಗಿದೆ. ಇದು ನೋಡುಗರಿಗೆ ಸಿನಿಮಾ ರಂಗದ ಜನರ ತೆರೆ ಹಿಂದಿನ ಕತೆಗಳನ್ನು ವೀಕ್ಷಕರಿಗೆ ನೀಡುತ್ತಿದ್ದು, ಈ ಸೀಸನ್‌ನಲ್ಲಿ ನಟರಾದ ದುಲ್ಕರ್ ಸಲ್ಮಾನ್, ನಾಗ ಚೈತನ್ಯ, ನಾನಿ, ರಿಷಭ್ ಶೆಟ್ಟಿ, ಎಸ್.ಎಸ್. ರಾಜಮೌಳಿ, ಗೋಪಾಲ್ ವರ್ಮಾ, ಶ್ರೀಲೀಲಾ ಮೊದಲಾದ ತಾರೆಯರು ಭಾಗಿಯಾಗಲಿದ್ದಾರೆ.