Liplock ಮಾಡಿ ಪೇಚಿಗೆ ಸಿಲುಕಿದ ನಟಿ ತಮನ್ನಾ ಭಾಟಿಯಾ

By Suchethana Naik  |  First Published Mar 16, 2023, 9:29 PM IST

ಲಿಪ್​ಲಾಕ್​ ಸೀನ್​ನಲ್ಲಿ ತಾವು ಕಾಣಿಸಿಕೊಳ್ಳುವುದೇ ಇಲ್ಲ ಎಂದು ಪಣತೊಟ್ಟಿದ್ದ ನಟಿ ತಮನ್ನಾ ಭಾಟಿಯಾ ವೆಬ್​ಸಿರೀಸ್​ನಲ್ಲಿ ಈ ಸೀನ್​ ಮಾಡಿ ಪೇಚಿಗೆ ಸಿಲುಕಿದ್ದಾರೆ.
 


ಕನ್ನಡದಲ್ಲಿ `ಜಾಗ್ವಾರ್' (Jagwar) ಮತ್ತು `ಕೆಜಿಎಫ್' ಚಿತ್ರಗಳ ಐಟೆಮ್ ಹಾಡುಗಳಿಗೆ ನೃತ್ಯ ಮಾಡಿರೋ  ಮಿಲ್ಕಿ ಬ್ಯೂಟಿ  ತಮನ್ನಾ ಭಾಟಿಯಾ ದಕ್ಷಿಣ ಚಿತ್ರರಂಗದ ಬಹುಬೇಡಿಕೆಯ ನಟಿ. ಪ್ರಮುಖವಾಗಿ ತೆಲಗು ಮತ್ತು ತಮಿಳು ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಇವರು ಕೆಲ ಹಿಂದಿ ಚಿತ್ರಗಳಲ್ಲಿ ಕೂಡ ನಟಿಸಿದ್ದಾರೆ. 34 ವರ್ಷದ ಈ ಬೆಡಗಿ  ಮುಂಬೈನಲ್ಲಿ ಸಿಂಧಿ ಕುಟುಂಬದವರು. 13 ನೇ ವಯಸ್ಸಿನಲ್ಲಿಯೇ ನಟನೆಗೆ ಇಳಿದ ತಮನ್ನಾ,  2005 ರಲ್ಲಿ ತಮ್ಮ ಹದಿನೈದನೇ ವಯಸ್ಸಿನಲ್ಲಿ `ಚಾಂದ್ ಸಾ ರೋಷನ್ ಚೆಹರಾ' (Chand Sa Roshan Chehra) ಚಿತ್ರದಲ್ಲಿ ನಾಯಕಿಯಾಗಿ ನಟಿಸಿದರು. ಈ ಚಿತ್ರ ಯಶಸ್ವಿಯಾಗಲಿಲ್ಲ. ಅದೇ ವರ್ಷ ತೆಲುಗಿನ ಶ್ರೀ ಮತ್ತು ಮುಂದಿನ ವರ್ಷ ತಮಿಳಿನ ಕೇಡಿ ಚಿತ್ರಗಳಲ್ಲಿ ನಟಿಸಿದರು. ಈ ಚಿತ್ರಗಳ ನಟನೆಗೆ ಪ್ರಶಂಸೆ ಪಡೆದರು. ನಂತರ ತೆರೆಕಂಡ ಹ್ಯಾಪಿ ಡೇಸ್, ಕಲ್ಲೂರಿ ಚಿತ್ರಗಳು ತಮನ್ನಾಗೆ ಇನ್ನಷ್ಟು ಖ್ಯಾತಿ ನೀಡಿದವು. 'ಕೊಂಚಂ ಇಷ್ಟಂ ಕೊಂಚಂ ಕಷ್ಟಂ', ಪೈಯ್ಯ, 100 %  ಲವ್, ಬದ್ರಿನಾಥ್  ಮುಂತಾದ ಚಿತ್ರಗಳು ತಮಿಳು ಮತ್ತು ತೆಲಗು ಚಿತ್ರರಂಗದಲ್ಲಿ ತಮನ್ನಾಗೆ ಭದ್ರವಾದ ತಳಪಾಯ ಹಾಕಿದವು. ಹಿಂದಿಯಲ್ಲಿ ಹಿಮ್ಮತ್​ವಾಲಾ, ಎಂಟರ್ಟೇನ್​ಮೆಂಟ್ ಮುಂತಾದ ಚಿತ್ರಗಳಲ್ಲಿ ನಟಿಸಿದರು. ಎರಡು ಭಾಗಗಳಲ್ಲಿ ತೆರೆಕಂಡ ಬಾಹುಬಲಿ ಚಿತ್ರ ತಮನ್ನಾ ಭಾರತದಾದ್ಯಂತ ಜನಪ್ರಿಯತೆ ತಂದು ಕೊಟ್ಟಿತು.

ಇಂತಿಪ್ಪ ತಮನ್ನಾ ಒಂದು ವಿಷಯದಲ್ಲಿ ಭಾರಿ ಸ್ಟ್ರಿಕ್ಟ್​ ಆಗಿದ್ದರು. ಅದು ಲಿಪ್​ಲಾಕ್​ (Liplock) ವಿಷಯ. ಕೆಲವೇ ಕೆಲವು ನಟಿಯರು ಕಿಸ್​ ಕೊಡದ ಸಾಲಿಗೆ ಸೇರಿದ್ದು ಅದರಲ್ಲಿ ತಮನ್ನಾ ಕೂಡ ಒಬ್ಬರು. ಬಾಲ್ಯದ ಚಿತ್ರಗಳನ್ನು ಹಿಡಿದರೆ ತಮನ್ನಾ ನಟನಾ ಪ್ರಪಂಚಕ್ಕೆ ಬಂದು 21 ವರ್ಷಗಳೇ ಕಳೆದಿವೆ. ಈಕೆ ನಾಯಕಿಯಾಗಿ ಭಾರಿ ಜನಪ್ರಿಯತೆ ಪಡೆದಿದ್ದರೂ  ಲಿಪ್‌ ಲಾಕ್‌ ಮತ್ತು  ಇಂಟಿಮೇಟ್ ಸೀನ್‌ಗಳಿಂದ ಭಾರಿ ದೂರ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾಹಿತಿ ನೀಡಿದ್ದ ನಟ, ಇಂಥ ಸನ್ನಿವೇಶಗಳಲ್ಲಿ ನಟಿಸಬಾರದು ಎಂದು  ಷರತ್ತು ವಿಧಿಸಿಕೊಂಡಿರುವುದಾಗಿ ಹೇಳಿದ್ದರು.  ಒಂದು ವೇಳೆ ಅಂಥ ಸನ್ನಿವೇಶ ಬಂದದ್ದೇ ಆದರೆ ಅದು ವಿಜಯ್ ದೇವರಕೊಂಡ ಜೊತೆ ಮಾತ್ರ ಲಿಪ್‌ ಲಾಕ್ ಮಾಡಲು ಇಷ್ಟಪಡುವುದಾಗಿ  ಹೇಳಿಕೊಂಡಿದ್ದರು. 

Tap to resize

Latest Videos

Anikha Surendran: 'ಬ್ರಾ' ಬಗ್ಗೆ ಪಾಠ ಮಾಡಿದ್ದ ನಟಿಯಿಂದ ಈಗ ಲಿಪ್​ಲಾಕ್​ ಅನುಭವ

ಆದರೆ ತಮನ್ನಾ ಈಗ ಉಲ್ಟಾ ಹೊಡೆದಿದ್ದಾರೆ.  ವೆಬ್‌ ಸೀರಿಸ್‌ವೊಂದರಲ್ಲಿ (Web series) ಸೀನ್​ ಒಂದರಲ್ಲಿ ತಮನ್ನಾ ಲಿಪ್​ಲಾಕ್​ ಮಾಡಿರುವುದು ಮಾತ್ರವಲ್ಲದೇ ಸಿಕ್ಕಾಪಟ್ಟೆಯಾಗಿ ಹಾಟ್​ ಆಗಿ ನಟಿಸಿದ್ದಾರೆ ಎನ್ನಲಾಗಿದೆ. ಕಿಯಾರಾ ಅದ್ವಾನಿ ಕೆಲ ದಿನಗಳ ಹಿಂದಷ್ಟೇ 'ಲಸ್ಟ್ ಸ್ಟೋರಿಸ್' ವೆಬ್‌ ಸೀರಿಸ್‌ನಲ್ಲಿ ಇದೇ ರೀತಿ  ಕಾಣಿಸಿಕೊಂಡಿದ್ದರು. ನಟಿ ಸಮಂತಾ ಕೂಡ 'ಫ್ಯಾಮಿಲಿಮ್ಯಾನ್- 2' ಸೀರಿಸ್‌ನಲ್ಲಿ ಇದೇ ರೀತಿ  ಹಾಟ್  ದರ್ಶನ ಕೊಟ್ಟಿದ್ದರು. ಈಗ ತಮನ್ನಾ ಸರದಿ.  'ಲಸ್ಟ್ ಸ್ಟೋರಿಸ್' ಸೀಸನ್- 2 ಶುರುವಾಗುತ್ತಿದ್ದು, ಇದರಲ್ಲಿ  ತಮನ್ನಾ ನಟಿಸುತ್ತಿದ್ದಾರೆ. ಇದರಲ್ಲಿ ಹಾಟ್​ ಸೀನ್​ ಮಾಡಿದ್ದಾರೆ.  ಈ ಸೀರಿಸ್ ನೆಟ್‌ಫ್ಲಿಕ್ಸ್‌ನಲ್ಲಿ (Netflix) ಶೀಘ್ರವೇ ಸ್ಟ್ರೀಮಿಂಗ್ ಆಗಲಿದೆ. 

ರಾಮ್ ಚರಣ್​ಗೆ ಇಷ್ಟವಿಲ್ಲದಿದ್ರೂ ಲಿಪ್​ಲಾಕ್​ ಮಾಡಿದ್ರಾ ಸಮಂತಾ?

ತಮನ್ನಾ ಜೊತೆ ಆಕೆಯ ಬಾಯ್‌ಫ್ರೆಂಡ್ ಎಂದು ಹೇಳಲಾಗುತ್ತಿರುವ ವಿಜಯ್ ವರ್ಮಾ ನಟಿಸಿದ್ದಾರೆ. ನೀನಾ ಗುಪ್ತಾ, ಕಾಜೋಲ್‌ರಂತಹ ನಟಿಯರು ಈ ವೆಬ್ ಸೀರಿಸ್‌ನಲ್ಲಿ ಇ್ದಾರೆ. 'ಲಸ್ಟ್ ಸ್ಟೋರಿಸ್' (Lust Stories) ಸೀಸನ್- 2ನಲ್ಲಿ ವಿಜಯ್ ವರ್ಮಾ ಜೊತೆ ತಮನ್ನಾ  ಲಿಪ್‌ ಲಾಕ್‌  (Liplock) ಮಾಡಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೇ, ಬಹುತೇಕ ನಟಿಯರನ್ನು ಮೀರಿಸುವಷ್ಟು  ಹಾಟ್ ಆಗಿ ಕಾಣಿಸಿಕೊಂಡಿದ್ದಾರಂತೆ. ವಿಜಯ್ ವರ್ಮಾ (Vijay Verma) ಅವರ ಜೊತೆ ತಮನ್ನಾ ಡೇಟಿಂಗ್​ನಲ್ಲಿ ಇದ್ದಾರೆಂದು ಹೇಳಲಾಗುತ್ತಿದ್ದು, ಇದಕ್ಕಾಗಿಯೇ ತಮ್ಮ ಷರತ್ತನ್ನು ಮೀರಿದ್ದಾರೆ ಎನ್ನಲಾಗುತ್ತಿದೆ. ಅದೇನೆ ಇದ್ದರೂ ಸದ್ಯ ಅವರನ್ನು ನೆಟ್ಟಿಗರು ಟ್ರೋಲ್​  ಮಾಡುತ್ತಿದ್ದು, ತಮ್ಮ ಮಾತನ್ನು ಮೀರಿರುವುದಕ್ಕೆ ಪೇಚಿಗೆ ಸಿಲುಕಿದ್ದಾರೆ. ಇದೇ ವೇಳೆ  ತಾವು ಡೇಟಿಂಗ್​  ಮಾಡುತ್ತಿದ್ದೇವೆ ಎಂಬುದು ಸುಳ್ಳು ಸುದ್ದಿ ಎಂದಿದ್ದಾರೆ ತಮನ್ನಾ. ಸದ್ಯ ತಮನ್ನಾ 'ಭೋಳಾ ಶಂಕರ್', 'ಜೈಲರ್', 'ಅರನ್ಮಣೈ- 4', 'ಬಾಂದ್ರಾ', 'ಬೋಲೆ ಚೂಡಿಯಾ' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.
 

click me!