ಹಲವಾರು ಫ್ಲಾಪ್ ಚಿತ್ರಗಳನ್ನು ಕೊಟ್ಟ ಈ ನಟಿ, 6 ವರ್ಷ ಸಿನಿಮಾದಿಂದ ದೂರವಿದ್ದಾರೆ. ಆದರೂ ಅಮಿತಾಭ್ ಬಚ್ಚನ್, ಶಾರುಖ್ ಖಾನ್ಗಿಂತಲೂ ಪಾಪ್ಯುಲರ್ ನಟಿ ಎನಿಸಿಕೊಂಡಿದ್ದಾರೆ. ಯಾರೀಕೆ?
ಬಾಲಿವುಡ್ ಬೆಡಗಿಯರಾದ ದೀಪಿಕಾ ಪಡುಕೋಣೆಯಿಂದ ಹಿಡಿದು ಆಲಿಯಾ ಭಟ್ ವರೆಗೆ, ಕತ್ರಿನಾ ಕೈಫ್ರಿಂದ ಹಿಡಿದು ಕಂಗನಾ ರಣಾವತ್ಎವರೆಗೆ ಬಾಲಿವುಡ್‌ನ ಟಾಪ್ ನಟಿಯರು ತಮ್ಮ ವೃತ್ತಿಜೀವನದಲ್ಲಿ ಪ್ರಮುಖ ಫ್ಲಾಪ್‌ಗಳನ್ನು ಕಂಡಿದ್ದಾರೆ. ಈ ಪೈಕಿ ಕೆಲವರು ಮಾತ್ರ ಹಿಟ್ ಫಿಲ್ಮ್ ನೀಡುವ ಮೂಲಕ ಮತ್ತೆ ಚಿಗುರಿಕೊಂಡಿದ್ದಾರೆ. ಆದರೆ 2018ರಿಂದಲೂ ಫ್ಲಾಪ್ ಆಗಿರುವ ನಟಿಯೊಬ್ಬರು ಇದೀಗ ಬಿಗ್-ಬಿ ಅಮಿತಾಭ್ ಬಚ್ಚನ್, ಬಾಲಿವುಡ್ ಬಾದ್ಶಾಹ್ ಶಾರುಖ್ ಖಾನ್, ಹೃತಿಕ್ ರೋಷನ್ ಅವರಿಗಿಂತಲೂ ಹೆಚ್ಚಿನ ಅಭಿಮಾನಿಗಳನ್ನು ಹೊಂದಿದ್ದಾರೆ ಎಂದರೆ ನಂಬುವಿರಾ? ಹಾಗಿದ್ದರೆ ಆ ತಾರೆ ಯಾರು? ಈಕೆಯ ಹೆಸರೇ ಅನುಷ್ಕಾ ಶರ್ಮಾ. ಸ್ಟಾರ್ ಭಾರತೀಯ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರನ್ನು ಮದುವೆಯಾದ ಮೇಲೆ ವಾಮಿಕಾ ಮತ್ತು ಅಕಾಯ್ ಎಂಬ ಇಬ್ಬರು ಮಕ್ಕಳ ಅಮ್ಮನಾಗಿ ಚಿತ್ರರಂಗದಿಂದ ದೂರವೇ ಉಳಿದಿದ್ದಾರೆ. ಆದರೆ ಕುತೂಹಲದ ವಿಷಯ ಏನೆಂದರೆ ಇವರು 2018ರಲ್ಲಿ ಫ್ಲಾಪ್ ಚಿತ್ರ ನೀಡಿ ಕೊನೆಗೆ ಚಿತ್ರರಂಗದಿಂದ ದೂರವಾಗಿದ್ದರೂ, ಹಲವಾರು ಫ್ಲಾಪ್ ಚಿತ್ರಗಳನ್ನು ನೀಡಿದ್ದರೂ, ಫಾಲೋವರ್ಸ್ ಸಂಖ್ಯೆಯಲ್ಲಿ ಇವರೇ ಮುಂದೆ ಇದ್ದಾರೆ. ಬಹುತೇಕ ನಟ-ನಟಿಯರು ಒಂದೇ ಒಂದು ಫ್ಲಾಪ್ ಚಿತ್ರ ಮಾಡಿದರೂ ಮತ್ತೆ ಅವಕಾಶ ಸಿಗುವುದು ಕಡಿಮೆಯೇ. ಹಾಗೊಂದು ವೇಳೆ ಅವಕಾಶ ಪಡೆದರೂ ಆ ಚಿತ್ರವೂ ಫ್ಲಾಪ್ ಆಯಿತು ಎಂದರೆ ಮೂಲೆಗುಂಪು ಅಷ್ಟೇ. ಆದರೆ ಅನುಷ್ಕಾ ವಿಷಯದಲ್ಲಿ ಹಾಗಲ್ಲ. ಫಾಲೋವರ್ಸ್ ಲೆಕ್ಕದಲ್ಲಿ ಇವರೇ ಟಾಪ್ನಲ್ಲಿದ್ದಾರೆ.
ಸ್ಟಾರ್ ಹೀರೋಗಳನ್ನು ಹಿಂದಿಕ್ಕಿ ಫೇಮಸ್ ಆಗಿದ್ದಾರೆ ನಟಿ ಅನುಷ್ಕಾ ಶರ್ಮಾ. 2022 ರ ನೆಟ್‌ಫ್ಲಿಕ್ಸ್ ಚಲನಚಿತ್ರ ಕ್ವಾಲಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡ ಬಳಿಕ ನಟಿಯ ಸೋಷಿಯಲ್ ಮೀಡಿಯಾ ಫಾಲೋವರ್ಸ್ ಸಂಖ್ಯೆ 67.3 ಕೋಟಿ ಆಗಿದೆ. ಟಾಪ್ ನಟರನ್ನು ಹೋಲಿಕೆ ಮಾಡುವುದಾದರೆ ಅಮಿತಾಭ್ ಬಚ್ಚನ್ (37.5 ಕೋಟಿ) ಶಾರುಖ್ ಖಾನ್ (46.5 ಕೋಟಿ) ಹೃತಿಕ್ ರೋಷನ್ (47.6 ಕೋಟಿ). ಅಂದರೆ ಇವರು ಅಮಿತಾಭ್ ಅವರಿಗಿಂತಲೂ ದುಪ್ಪಟ್ಟು ಫಾಲೋವರ್ಸ್ಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಪಡೆಯುವ ಮೂಲಕ ಟಾಪ್-1 ನಟಿ ಎನಿಸಿಕೊಂಡಿದ್ದಾರೆ.
15 ರೂ. ಸೀರೆಯುಟ್ಟ ಬಾಲಿವುಡ್ ಬ್ಯೂಟಿ ಅದಾ ಶರ್ಮಾ! ಏನಿದರ ಸೀಕ್ರೆಟ್, ಸ್ಯಾರಿ ಗುಟ್ಟು ಬಿಚ್ಚಿಟ್ಟ ನಟಿ...
ಇನ್ನು ಅನುಷ್ಕಾ ಅವರ ಸಿನಿ ಪಯಣದ ಕುರಿತು ಹೇಳುವುದಾದರೆ, ಮೊದಲ ಸಿನಿಮಾದಲ್ಲಿಯೇ ಶಾರುಖ್ ಖಾನ್ಗೆ ಜೋಡಿಯಾದರು. 2008ರಲ್ಲಿ ‘ರಬ್ ನೆ ಬನಾ ದಿ ಜೋಡಿ’ ಚಿತ್ರವಿದು. ಈ ಸಿನಿಮಾ ಸೂಪರ್ ಹಿಟ್ ಆಯಿತು. ಇದಾದ ಬಳಿಕ ‘ಬ್ಯಾಂಡ್ ಬಾಜಾ ಬಾರಾತ್ (2010)’, ‘ಪಿಕೆ (2014)’, ‘ಸುಲ್ತಾನ್ (2016)’, ‘ಏ ದಿಲ್ ಹೈ ಮುಷ್ಕಿಲ್ (2016)’ ಮತ್ತು ‘ಸಂಜು (2018)’ ನಂತಹ ಚಿತ್ರಗಳನ್ನು ನೀಡಿದರು. ಇವುಗಳೆಲ್ಲಾ ಒಳ್ಳೆಯ ಕಮಾಯಿಯನ್ನೇ ಮಾಡಿದವು. ಅದರೆ ಅದಾದ ಬಳಿಕ ಭಾರತೀಯ ಇತಿಹಾಸದಲ್ಲಿ ಅತಿದೊಡ್ಡ ಫ್ಲಾಪ್ ಗಳಲ್ಲಿ ಒಂದು ಎನಿಸಿರುವ 2015ರಲ್ಲಿ ಬಿಡುಗಡೆಯಾದ ‘ಬಾಂಬೆ ವೆಲ್ವೆಟ್ನಲ್ಲಿ ನಟಿಸಿದರು. ಅನುರಾಗ್ ಕಶ್ಯಪ್ ನಿರ್ದೇಶನದ ಈ ಚಿತ್ರ, ಫ್ಯಾಂಟಮ್ ಫಿಲ್ಮ್ಸ್ ಬ್ಯಾನರ್ ಅಡಿಯಲ್ಲಿ ರೂ.120 ಕೋಟಿಗಳ ಬಜೆಟ್ ನಲ್ಲಿ ನಿರ್ಮಿಸಲಾಗಿತ್ತು. ಆದರೆ ಭಾರತದಲ್ಲಿ ಗಳಿಸಿದ್ದು ಕೇವಲ ರೂ.23.71 ಕೋಟಿ ರೂ.
ಅದಾದ ಬಳಿಕ ಅನುಷ್ಕಾ, ಬಿಗ್ ಫ್ಲಾಪ್ ಸಿನಿಮಾ ನೀಡುತ್ತಾ ಸಾಗಿದರು. ರಣಬೀರ್ ಕಪೂರ್, ಕರಣ್ ಜೋಹರ್, ಮನೀಶ್ ಚೌಧರಿ ನಟನೆಯ ಚಿತ್ರದಲ್ಲಿ ಕಾಣಿಸಿಕೊಂಡರು. ಇವರು ಕೊನೆಯದಾಗಿ 2018ರಲ್ಲಿ ಬಿಡುಗಡೆಯಾದ ಜೀರೋ ಚಿತ್ರದಲ್ಲಿ ನಾಯಕಿಯಾಗಿ ನಟಿಸಿದ್ದರು. ಇದರಲ್ಲಿ ಶಾರುಖ್ ಖಾನ್ ಗೆ ಜೋಡಿಯಾಗಿದ್ದಾರೆ. 200 ಕೋಟಿ ರೂ. ಬಜೆಟ್ನಲ್ಲಿ ತಯಾರಾದ ಈ ಚಿತ್ರವೂ ದೊಡ್ಡ ಫ್ಲಾಪ್ ಆಯಿತು. ವಿಶ್ವಾದ್ಯಂತ ಕೇವಲ 178 ಕೋಟಿ ರೂ. ಗಳಿಸಿತು. ಇಷ್ಟರಲ್ಲಿಯೇ, ಅನುಷ್ಕಾ 2017 ರಲ್ಲಿ ವಿರಾಟ್ ಕೊಹ್ಲಿ ಅವರನ್ನು ವಿವಾಹವಾಗಿದ್ದು, ಚಿತ್ರರಂಗದಿಂದ ಅಂತರ ಕಾಯ್ದುಕೊಂಡರು. 2021ರಲ್ಲಿ ಹೆಣ್ಣು ಮಗುವಿಗೆ ಮತ್ತು 2024ರಲ್ಲಿ ಗಂಡು ಮಗುವಿಗೆ ಜನ್ಮ ನೀಡಿದರು. ಮದುವೆಯ ನಂತರ ‘ಪರಿ’ ಸೇರಿದಂತೆ ಇನ್ನೂ 3 ಚಿತ್ರಗಳಲ್ಲಿ ಕಾಣಿಸಿಕೊಂಡರು. 2022ರಲ್ಲಿ ಅವರು ನೆಟ್ ಫ್ಲಿಕ್ಸ್ ಚಲನಚಿತ್ರ ಕ್ವಾಲಾ/ಕ್ಲಾದಲ್ಲಿ ಅತಿಥಿ ಪಾತ್ರವನ್ನು ಮಾಡಿದರು. ಇದೀಗ ಫಾಲೋವರ್ಸ್ ಸಂಖ್ಯೆಯಲ್ಲಿ ಸೂಪರ್ ಹಿಟ್ ಆಗಿದ್ದಾರೆ.
ಯುವಕನ ಕೈ ನೋಡಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಭಾವುಕ: ಆತನ ಅಭಿಮಾನಕ್ಕೆ ನಟಿಯ ಕಣ್ಣೀರು