ತೂಕ ಇಳಿಸಿಕೊಳ್ಳುವುದು ತುಂಬಾ ಈಸಿ ಎಂದು ನಾನು ಭಾವಿಸಿದೆ. ಆದರೆ ಮತ್ತೂ ತೂಕ ಇಳಿಸಲು ಪ್ರಯತ್ನಿಸಿದಾಗ ಗೊತ್ತಾಯ್ತು ಹೆಚ್ಚು ತೂಕ ಇಳಿಸುವುದು ಅಷ್ಟು ಸುಲಭದ ಕೆಲಸವಲ್ಲ ಎಂದು. ಬಳಿಕ ನಾನು ತುಂಬಾ ಶ್ರಮ ಹಾಕಿ 5-6 ಕೆಜಿ ತೂಕ ಇಳಿಸುತ್ತಾ ಬಂದೆ. ..
'ಸಲಾರ್' ಖ್ಯಾತಿಯ ಸ್ಟಾರ್ ನಟ ಪ್ರಥ್ವಿರಾಜ್ ಸುಕುಮಾರನ್ (Prithviraj Sukumaran)ಅವರು 'ಆಡುಜೀವಿತಂ' ಸಿನಿಮಾಗಾಗಿ 31ಕೆಜಿ ತೂಕ ಕಳದುಕೊಂಡಿದ್ದಾರಂತೆ. ಸಂದರ್ಶನವೊಂದರಲ್ಲಿ ಈ ಬಗ್ಗೆ ಮಾತನಾಡಿರುವ ನಟ ಪ್ರಥ್ವಿರಾಜ್ 'ಆಡುಜೀವಿತಂ ಸಿನಿಮಾಗೆ ಶುರುವಿನಲ್ಲಿ ತುಂಬಾ ತೂಕ ಇರಬೇಕಿತ್ತು. ಅದಕ್ಕಾಗಿ ನಾನು ಬಹಳಷ್ಟು ತೂಕ ಏರಿಸಿಕೊಂಡಿದ್ದೆ. ಆದರೆ, ಬಳಿಕ ಪಾತ್ರದ ಅಗತ್ಯಕ್ಕೆ ತಕ್ಕಂತೆ ಸಾಕಷ್ಟು ತೂಕ ಇಳಿಸಿಕೊಳ್ಳಬೇಕಿತ್ತು. ನಾನು ಒಂದೇ ವಾರದಲ್ಲಿ8-9 ಕೆಜಿ ತೂಕ ಇಳಿಸಿಕೊಂಡೆ.
ಓಹ್, ತೂಕ ಇಳಿಸಿಕೊಳ್ಳುವುದು ತುಂಬಾ ಈಸಿ ಎಂದು ನಾನು ಭಾವಿಸಿದೆ. ಆದರೆ ಮತ್ತೂ ತೂಕ ಇಳಿಸಲು ಪ್ರಯತ್ನಿಸಿದಾಗ ಗೊತ್ತಾಯ್ತು ಹೆಚ್ಚು ತೂಕ ಇಳಿಸುವುದು ಅಷ್ಟು ಸುಲಭದ ಕೆಲಸವಲ್ಲ ಎಂದು. ಬಳಿಕ ನಾನು ತುಂಬಾ ಶ್ರಮ ಹಾಕಿ 5-6 ಕೆಜಿ ತೂಕ ಇಳಿಸುತ್ತಾ ಬಂದೆ. ಕೊನೆಗೆ 31 ಕೆಜಿ ಇಳಿಸಿದಾಗ ಇನ್ನು ಸಾಕು, ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ಇಳಿಸಿದ್ದಾಯ್ತು ಎಂದು ಸಮಾಧಾನ ಪಟ್ಟುಕೊಂಡೆ. ಈಗ ಸಿನಿಮಾ ಬಿಡುಗಡೆ ಬಳಿಕ ನನ್ನ ಪ್ರಯತ್ನ ಸಫಲವಾಗಿದೆ ಎಂದು ಅರ್ತವಾಗಿದೆ. ಏಕೆಂದರೆ ಸಿನಿಪ್ರೇಕ್ಷಕರು ಸಿನಿಮಾ ಮೆಚ್ಚಿಕೊಂಡಿದ್ದಾರೆ, ನನ್ನ ಪಾತ್ರವನ್ನೂ ಹೊಗಳುತ್ತಿದ್ದಾರೆ.
ಸ್ಟಾರ್ ಸುವರ್ಣದಲ್ಲಿ 'ಐಎಎಸ್ ಮಾಡ್ಬೇಕು' ಅಂತಿರೋ ಹುಡ್ಗಿ 'ವರಲಕ್ಷ್ಮಿ ಕಲ್ಯಾಣ' ಆಗ್ತಿದ್ಯಾ!
ಆಡುಜೀವಿತಂ' ಸಿನಿಮಾ ನೈಜ ಘಟನೆ ಆಧರಿಸಿದೆ. ಕೇರಳ ಮೂಲದ ವ್ಯಕ್ತಿ ಕೆಲಸಕ್ಕಾಗಿ ಸೌದಿ ಅರೇಬಿಯಾ ತೆರಳುತ್ತಾರೆ. ಸೂಪರ್ ಮಾರ್ಕೆಟ್ನಲ್ಲಿ ಮಾಡೋ ಕೆಲಸ ಎಂದು ಆತನ ಕರೆದುಕೊಂಡು ಹೋಗುತ್ತಾರೆ. ಆ ಬಳಿಕ ಅದು ಮೋಸ ಅನ್ನೋದು ಗೊತ್ತಾಗುತ್ತದೆ. ಆತನಿಗೆ ಮರಳುಗಾಡಿನಲ್ಲಿ ಕುರಿ ಕಾಯುವ ಕೆಲಸ ಸಿಗುತ್ತದೆ. ಹಲವು ವರ್ಷ ಅಲ್ಲಿಯೇ ಟ್ರ್ಯಾಪ್ ಆಗೋ ಆ ವ್ಯಕ್ತಿ ನಂತರ ಮರಳಿ ಬರುತ್ತಾರೆ. ‘ಆಡುಜೀವಿತಂ’ಬ್ಲೆಸ್ಸಿ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಪೃಥ್ವಿರಾಜ್, ಅಮಲಾ ಪೌಲ್ ಮೊದಲಾದವರು ಸಿನಿಮಾದಲ್ಲಿ ಇದ್ದಾರೆ. ಎಆರ್ ರೆಹಮಾನ್ ಸಂಗೀತ ಸಂಯೋಜನೆ ಚಿತ್ರಕ್ಕಿದೆ.
ಯಂಗ್‌ಸ್ಟರ್ಸ್‌ಗೆ ದೀಪಿಕಾ ಪಡುಕೋಣೆ ಲೈಫ್ ಟಿಪ್ಸ್; ಕೇಳಿ ತಲೆದೂಗಿದ ಯುವಜನರು ಹೇಳಿದ್ದೇನು?
'ಆಡುಜೀವಿತಂ' ಸಿನಿಮಾ ಮಾರ್ಚ್ 28ರಂದು ರಿಲೀಸ್ ಆಗಿ, ಮೊದಲ ದಿನ 7.60 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಎರಡನೇ ದಿನ ಚಿತ್ರದ ಗಳಿಕೆ 6.50 ಕೋಟಿ ರೂಪಾಯಿ ಆಗಿದೆ. ಈ ಮೂಲಕ ಒಟ್ಟಾರೆ ಕಲೆಕ್ಷನ್ 14.10 ಕೋಟಿ ರೂಪಾಯಿ ದಾಟಿದೆ. ಮಲಯಾಳಂ ಚಿತ್ರರಂಗದಿಂದಲೇ 11.82 ಕೋಟಿ ರೂಪಾಯಿ ಗಳಿಕೆ ಆಗಿದೆ. ಕನ್ನಡದಿಂದ 90 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ. ಈ ಚಿತ್ರವನ್ನು ಕರ್ನಾಟಕದಲ್ಲಿ ಹೊಂಬಾಳೆ ಫಿಲ್ಮ್ಸ್ ಹಂಚಿಕೆ ಮಾಡಿದೆ. ಇದೀಗ ಸಕ್ಸಸ್‌ಫುಲ್ ಆಗಿ ಓಡುತ್ತರುವ ಸಿನಿಮಾ ಮತ್ತಷ್ಟು ಗಳಿಸುವ ಸಾಧ್ಯತೆ ದಟ್ಟವಾಗಿದೆ.
ಕಾಲೇಜ್ ಗರ್ಲ್ಸ್‌ಗೆ ಸಮಂತಾ ಹೇಳಿದ ಟಿಪ್ಸ್ ಕೇಳಿ 'ಬಾಯ್ಸ್' ಕಂಗಾಲು; ನಾವೇನು ಮಾಡ್ಲಿ ಅಂತಿದಾರಲ್ರೀ!