
ಬೆಂಗಳೂರು (ಮಾ. 13): ವಿರಾಟ್ ಕೊಹ್ಲಿ- ಅನುಷ್ಕ ಶರ್ಮಾ ಮದುವೆ ವಿಚಾರವನ್ನು ಕೊನೆ ಘಳಿಗೆವರೆಗೂ ಬಹಳ ಗೌಪ್ಯವಾಗಿಟ್ಟಿದ್ದರು. ಸೆಲಬ್ರಿಟಿಗಳಿಗೆ ಖಾಸಗಿತನ ಕಾಪಾಡಿಕೊಳ್ಳುವುದು ದೊಡ್ಡ ಸವಾಲಿನ ಕೆಲಸ. ಹೋದಲ್ಲಿ ಬಂದಲ್ಲಿ ಜನ , ಮಾಧ್ಯಮದವರು ಮುತ್ತುತ್ತಲೇ ಇರುತ್ತಾರೆ. ಸುದ್ದಿಯಾಗಿ ಬಿಡುತ್ತದೆ.
ಮಹೇಶ್ ಬಾಬು ಸಿನಿಮಾ ಆಫರ್‌ಗೆ ’ನೋ’ಎಂದ ಉಪೇಂದ್ರ!
2017 ರಲ್ಲಿ ಅನುಷ್ಕಾ- ವಿರಾಟ್ ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಖಾಸಗಿತನ ಕಾಪಾಡಿಕೊಳ್ಳಲು ವಿರಾಟ್- ಅನುಷ್ಕಾ ಹೆಸರು ಬದಲಾಯಿಸಿಕೊಂಡಿದ್ದರು ಎಂದು ತಡವಾಗಿ ತಿಳಿದು ಬಂದಿದೆ. ಮದುವೆಗೆ ಕ್ಯಾಟರಿಂಗ್ ಮಾಡುವಾಗ, ಡೆಕೋರೇಶನ್ ಮಾಡುವಾಗ ವಿರಾಟ್ ಹೆಸರು ರಾಹುಲ್ ಎಂದು ಬದಲಾಯಿಸಿಕೊಂಡಿದ್ದೆವು. ನನ್ನ ಹೆಸರು ಕೂಡಾ ಬದಲಾಯಿಸಿದ್ದೆ ಎಂದು ಅನುಷ್ಕಾ ಶರ್ಮಾ ಹೇಳಿದ್ದಾರೆ.
ಯಶ್ ಅಭಿಮಾನಿಗಳಿಗೆ ಗುಡ್‌ನ್ಯೂಸ್! ಶುರುವಾಗುತ್ತಿದೆ ಕೆಜಿಎಫ್-2 ಶೂಟಿಂಗ್
‘ನಮಗೆ ನಮ್ಮ ಸ್ಟೈಲಲ್ಲಿ ಮದುವೆಯಾಗಬೇಕು ಎಂದಿತ್ತು. ಸೆಲಬ್ರಿಟಿಗಳ ರೀತಿ ಮದುವೆಯಾಗುವುದು ನಮಗೆ ಇಷ್ಟವಿರಲಿಲ್ಲ. ನಮ್ಮ ಮದುವೆಯಲ್ಲಿ ಕುಟುಂಬದವರು, ಸ್ನೇಹಿತರು, ಆತ್ಮೀಯರು ಸೇರಿದಂತೆ 42 ಮಂದಿ ಮಾತ್ರ ಇದ್ದರು‘ ಎಂದು ಅನುಷ್ಕಾ ಹೇಳಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.