ಥಿಯೇಟರ್‌ನಲ್ಲಿ ರಾಷ್ಟ್ರಗೀತೆ ವೇಳೆ ಎದ್ದು ನಿಲ್ಲಲು ಇಷ್ಟವಿಲ್ಲ: ಪವನ್ ಕಲ್ಯಾಣ್ | ಥಿಯೇಟರ್‌ನಲ್ಲಿ ಮಾತ್ರವೇ ಏಕೆ ರಾಷ್ಟ್ರಗೀತೆ ಪ್ರಸಾರ ಮಾಡಬೇಕು. ರಾಜಕೀಯ ಪಕ್ಷಗಳ ಸಭೆ ಮತ್ತು ಸಮಾರಂಭಗಳು ಆರಂಭವಾಗುವ ಮುನ್ನ ಏಕೆ ರಾಷ್ಟ್ರಗೀತೆ ಏಕೆ ಹಾಡುವುದಿಲ್ಲ’ ಎಂದು ಪ್ರಶ್ನಿಸಿದರು.
ಹೈದರಾಬಾದ್ (ಮಾ. 11): ಸಿನಿಮಾ ಥಿಯೇಟರ್‌ನಲ್ಲಿ ಸಿನಿಮಾ ಪ್ರಸಾರಕ್ಕೂ ಮುನ್ನ ರಾಷ್ಟ್ರಗೀತೆಗೆ ಪ್ರೇಕ್ಷಕರು ಎದ್ದು ನಿಂತು ಗೌರವ ನೀಡಬೇಕೆಂಬ ಸುಪ್ರೀಂ ನಿರ್ದೇಶನದ ಬಗ್ಗೆ ಟಾಲಿವುಡ್ ನಟ ಹಾಗೂ ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅಸಮಾಧಾನ ಹೊರ ಹಾಕಿದ್ದಾರೆ.
ಚುನಾವಣಾ ಪ್ರಚಾರಕ್ಕೆ ಹೊಸ ಫೇಸ್‌ಬುಕ್ ಪೇಜ್ ತೆರೆದ ಸುಮಲತಾ
ಕರ್ನೂಲ್‌ನಲ್ಲಿ ಯುವಕರ ಜೊತೆಗಿನ ಸಂವಾದದಲ್ಲಿ ಮಾತನಾಡಿದ ಅವರು, ‘ಕುಟುಂಬ, ಸ್ನೇಹಿತರ ಜೊತೆ ನಾವು ಸಿನಿಮಾ ನೋಡಲು ಥಿಯೇಟರ್‌ಗೆ ಹೋಗಿರುತ್ತೇವೆ. ಆದರೆ, ಇದೀಗ ಥಿಯೇಟರ್‌ಗಳು ನಮ್ಮ ದೇಶಭಕ್ತಿ ಪರೀಕ್ಷಿಸುವ ವೇದಿಕೆಯಾಗಿವೆ. ಥಿಯೇಟರ್‌ನಲ್ಲಿ ಮಾತ್ರವೇ ಏಕೆ ರಾಷ್ಟ್ರಗೀತೆ ಪ್ರಸಾರ ಮಾಡಬೇಕು. ರಾಜಕೀಯ ಪಕ್ಷಗಳ ಸಭೆ ಮತ್ತು ಸಮಾರಂಭಗಳು ಆರಂಭವಾಗುವ ಮುನ್ನ ಏಕೆ ರಾಷ್ಟ್ರಗೀತೆ ಏಕೆ ಹಾಡುವುದಿಲ್ಲ’ ಎಂದು ಪ್ರಶ್ನಿಸಿದರು.