ನಟ ಅಮಿತಾಭ್​ ಬಚ್ಚನ್​ ಅರೆಸ್ಟ್​? ಅಭಿಮಾನಿಗಳನ್ನ ಬೆಚ್ಚಿ ಬೀಳಿಸಿದೆ ಇನ್​ಸ್ಟಾಗ್ರಾಮ್​ ಪೋಸ್ಟ್​!

By Suvarna News  |  First Published May 21, 2023, 12:30 PM IST

ನಟ ಅಮಿತಾಭ್​ ಬಚ್ಚನ್​ ಅರೆಸ್ಟ್​ ಆದ್ರಾ? ಅಮಿತಾಭ್​ ಇನ್​ಸ್ಟಾಗ್ರಾಮ್​  ನೋಡಿ ಫ್ಯಾನ್ಸ್​ ಕಂಗಾಲಾಗಿದ್ದಾರೆ. ಏನಿದು ಹೊಸ ವಿಷ್ಯ? 
 


ಬಾಲಿವುಡ್ ನಟ ಅಮಿತಾಭ್ ಬಚ್ಚನ್ (Amitabh Bachchan) ಹಾಗೂ ಅನುಷ್ಕಾ ಶರ್ಮಾ ಮೊನ್ನೆಯಷ್ಟೇ  ಟ್ರಾಫಿಕ್ ಪೊಲೀಸರಿಂದ ಫೈನ್​ ಹಾಕಿಸಿಕೊಂಡಿರೋ ವಿಷಯ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಇವರಿಬ್ಬರೂ ಟ್ರಾಫಿಕ್​ ಕಿರಿಕಿರಿ ಇದ್ದುದರಿಂದ, ಶೂಟಿಂಗ್​ಗೆ ಟೈಂಗೆ ಸರಿಯಾಗಿ ತಲುಪುವ ಸಲುವಾಗಿ ಕಾರು ಬಿಟ್ಟು ಅಲ್ಲಿಯೇ ಇದ್ದವರ ಬೈಕ್​ ಏರಿದ್ದರು. ನಂತರ ಇವರಿಬ್ಬರೂ ಹೆಲ್ಮೆಟ್​ ಧರಿಸಿರಲಿಲ್ಲ.   ಇದೇ ಅವರು ಮಾಡಿದ ತಪ್ಪು.  ಅಮಿತಾಭ್ ಮತ್ತು ಅನುಷ್ಕಾ ಇಬ್ಬರೂ ಹೆಲ್ಮೆಟ್ ಧರಿಸದೇ ಬೈಕ್ ಏರಿ ಹೊರಟಿದ್ದರು. ಇಬ್ಬರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಟ್ರೋಲಿಗರು ತರಾಟೆ ತೆಗೆದುಕೊಂಡಿದ್ದರು. ಟ್ರಾಫಿಕ್ ರೂಲ್ಸ್ ಅನುಸರಿಸಿಲ್ಲ, ಇಬ್ಬರ ವಿರುದ್ಧವೂ ಕ್ರಮ ತೆಗೆದುಕೊಳ್ಳುವಂತೆ ನೆಟ್ಟಿಗರು ಮುಂಬೈ ಪೊಲೀಸರಿಗೆ ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧವೂ ದೂರು ದಾಖಲು ಮಾಡಿಕೊಳ್ಳಲಾಗಿತ್ತು. ಜೊತೆಗೆ ಇಬ್ಬರಿಗೂ ಒಂದು ಸಾವಿರ ರೂಪಾಯಿಗಳ ದಂಡ ವಿಧಿಸಲಾಗಿತ್ತು.

ಇದರ ಬೆನ್ನಲ್ಲೇ ಈಗ ಅಮಿತಾಭ್​,   ಪೊಲೀಸ್ ವ್ಯಾನ್ ಸಮೇತ  ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಫೋಟೋ ಒಂದನ್ನು ಶೇರ್​ ಮಾಡಿಕೊಂಡಿದ್ದು, ಅದರಲ್ಲಿ   ‘ಅರೆಸ್ಟ್’ (Arrest) ಎಂದು ಬರೆದುಕೊಂಡಿದ್ದಾರೆ. ಈ ರೀತಿ ಬರೆದುಕೊಂಡಿದ್ದು ಅಮಿತಾಭ್ ಫ್ಯಾನ್ಸ್​ಗೆ ದೊಡ್​ಡ ಶಾಕ್ ಆಗಿದೆ. ಸದಾ ಸಾಮಾಜಿಕ ಜಾಲತಾಣದಲ್ಲಿ ಹಾಸ್ಯವನ್ನು ಮಾಡುತ್ತಿರುವ ನಟನ ಈ ಫೋಟೋ ಕೂಡ ತಮಾಷೆಯೇ ಇರಬಹುದು ಎಂದು ಹಲವರು ಅಂದುಕೊಳ್ಳುತ್ತಿದ್ದರೂ ಕೆಲವರಿಗೆ ಇದು ಶಾಕ್​ ಕೊಟ್ಟಿದೆ. ಇದು ಗಿಮಿಕ್​ ಎಂದು ಹಲವರು ಕಮೆಂಟ್​  ಮಾಡುತ್ತಿದ್ದಾರೆ. ಏಕೆಂದರೆ, ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡಿದ್ದ ವಿಚಾರಕ್ಕೆ ಸಂಬಂಧ ಪಟ್ಟಂತೆ ಪ್ರತಿಕ್ರಿಯೆ ನೀಡಿದ್ದ ಬಿಗ್ ಬಿ (Big B), ಅದು ರಸ್ತೆ ಮೇಲೆ ಸವಾರಿ ಮಾಡಿದ ಫೋಟೋ ಅಲ್ಲ, ಶೂಟಿಂಗ್ ಸಂದರ್ಭದ್ದು ಎಂದು ಸಮಜಾಯಿಸಿ ನೀಡಿದ್ದರು. ರಸ್ತೆ ನಿಯಮವನ್ನು ಯಾವುದೇ ಕಾರಣಕ್ಕೂ ಉಲ್ಲಂಘಿಸಿಲ್ಲ ಎಂದು ಹೇಳಿಕೆ ನೀಡಿದ್ದರು. 

Tap to resize

Latest Videos

ಟ್ರಾಫಿಕ್ ಕಿರಿಕಿರಿ ಎಂದು ಬೈಕ್ ಏರಿದ್ದೇ ತಪ್ಪಾಯ್ತು: ಅಮಿತಾಭ್, ಅನುಷ್ಕಾ ವಿರುದ್ಧ ದಾಖಲಾಯ್ತು ಕೇಸ್

ಆದರೆ ಇವರಿಗೆ ದಂಡ ಹಾಕಿದ್ದ ಚಲನ್​ ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಅದರಲ್ಲಿ ಒಂದು ಸಾವಿರ ರೂಪಾಯಿ ದಂಡ ಎಂದು ನಮೂದಾಗಿರುವುದನ್ನು ನೋಡಬಹುದು. ಇದರ ಬೆನ್ನಲ್ಲೇ   ಪೊಲೀಸ್ ವ್ಯಾನ್ ಜೊತೆ ನಿಂತು ಫೋಟೋ ರೆಗೆಸಿಕೊಂಡು ಅರೆಸ್ಟ್ (Arrest) ಎಂದು ಬರೆದದ್ದು ಮತ್ತೆ ಚರ್ಚೆಯನ್ನು ಹುಟ್ಟು ಹಾಕಿದೆ. ವ್ಯಾನ್​ ಬಳಿಯ ಈ ಫೋಟೊದಿಂದ ಅಭಿಮಾನಿಗಳನ್ನು ಇನ್ನಷ್ಟು ಗೊಂದಲದಲ್ಲಿ ಮುಳುಗಿಸಿದ್ದಾರೆ. ನಿಜವಾದದ್ದು ಏನು ಎಂದು ಹೇಳಿ ಎಂದು ಹಲವರು ಕಮೆಂಟ್​ನಲ್ಲಿ ಬಿಗ್​ ಬಿಯನ್ನು ಕೇಳುತ್ತಿದ್ದಾರೆ. ಶೂಟ್‌ಗಾಗಿ ಅಪರಿಚಿತರಿಂದ ಲಿಫ್ಟ್ ಪಡೆದುಕೊಂಡ ನಟ ಮುಂಬೈ ಪೊಲೀಸರಿಂದ ಹೆಲ್ಮೆಟ್ ಧರಿಸದೇ ಇದ್ದುದಕ್ಕೆ ಫೈನ್ ಹಾಕಿಸಿಕೊಂಡೆ ಎಂದಿದ್ದೀರಿ, ನಂತರ  ಈ ದೃಶ್ಯ ಶೂಟಿಂಗ್‌ನ (Shooting) ಭಾಗವಾಗಿದೆ ಎಂದು  ತಿಳಿಸಿದ್ದೀರಿ. ಈಗ ಈ ರೀತಿ ಹೇಳಿಕೆ ಕೊಡುತ್ತಿದ್ದೀರಿ. ನಿಜ ಏನು ಎಂದು ಹಲವರು ಪ್ರಶ್ನಿಸಿದರೆ, ಎಲ್ಲವೂ ಪ್ರಚಾರದ ಗಿಮ್ಮಿಕ್ಕು ಎಂದು ಇನ್ನು ಕೆಲವರು ಮುನಿಸಿನಿಂದಲೂ ಕಮೆಂಟ್​ ಮಾಡಿದ್ದಾರೆ. 

ಹೆಲ್ಮೆಟ್​ (Helmet) ಹಾಕದೇ ಇದ್ದುದು ಒಂದು ವೇಳೆ ನಿಜವಾದದ್ದೇ ಆದರೂ ನಿಯಮಗಳೆಲ್ಲಾ ಸಾಮಾನ್ಯ ಜನರಿಗೆ ಮಾತ್ರ, ಅಮಿತಾಭ್​ ಬಚ್ಚನ್​ ಅವರಂಥ ನಟರನ್ನು ಮುಟ್ಟಲು ಯಾರಿಂದಲೂ ಸಾಧ್ಯವಿಲ್ಲ, ಸೆಲೆಬ್ರಿಟಿಗಳಿಗೆ ನಿಯಮಗಳು ಅನ್ವಯ ಆಗಲ್ಲ ಎಂದೂ ಹಲವರು ಕಮೆಂಟ್​ನಲ್ಲಿ ತಿಳಿಸುತ್ತಿದ್ದಾರೆ. ಇನ್ನು ಕೆಲವರು ಈ ವಯಸ್ಸಿನಲ್ಲಿಯೂ ಅಮಿತಾಭ್​ ಬಚ್ಚನ್​ ಹಾಸ್ಯದ ಮೂಲಕ ಫ್ಯಾನ್ಸ್​ ಬಳಿ ಬರುತ್ತಲೇ ಇರುತ್ತಾರೆ ಎಂದು ಕಮೆಂಟ್​  ಮಾಡಿದ್ದಾರೆ.  ನಮ್ಮ ಹೃಯದಲ್ಲಿ ಜೀವಪರ್ಯಂತ ನೀವು ಬಂಧಿ ಸರ್ ಎಂದು ಇನ್ನೊಬ್ಬ ಅಭಿಮಾನಿ ಹೃದಯಸ್ಪರ್ಶಿಯಾಗಿ ಕಮೆಂಟ್ ಮಾಡಿದ್ದಾರೆ. ತಾತನ ಚಿತ್ರಕ್ಕೆ ಮೊಮ್ಮಗಳು ನವ್ಯಾ ನವೇಲಿ ನಂದಾ ಹೃದಯದ ಎಮೋಜಿ ಸೇರಿಸಿ ಕಾಮೆಂಟ್ ಮಾಡಿದ್ದರೆ, ರೋಹಿತ್ ಬೋಸ್ ರಾಯ್, ನೀವು ಭೂಮಿಯ ಮೇಲಿರುವ ಕೂಲ್ ಡ್ಯಾಡಿ ಅಮಿತ್‌ಜಿ ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಕಮೆಂಟ್ ಮಾಡಿದ್ದಾರೆ. ಒಟ್ಟಿನಲ್ಲಿ ಈ "ಅರೆಸ್ಟ್​' ಎನ್ನುವುದನ್ನು ಏಕೆ ಹಾಕಿದ್ದೇನೆ ಎಂದು ನಟನೇ ಹೇಳಬೇಕಿದೆ.

ಅಮಿತಾಭ್​ ರೇಖಾ ಪ್ರೇಮಕ್ಕೆ ಸಾಕ್ಷಿಯಾದ ಎರಡು ಉಂಗುರ: ರಹಸ್ಯ ಬಿಚ್ಚಿಟ್ಟ ನಟಿ

 

 

click me!