ಸುಶಾಂತ್ ನೆನಪಿಸಿಕೊಂಡು ನಟನ ಹಾಡಿಗೆ ಹೆಜ್ಜೆ ಹಾಕಿದ ಅಂಕಿತಾ

Published : Dec 08, 2020, 03:09 PM ISTUpdated : Dec 08, 2020, 05:19 PM IST
ಸುಶಾಂತ್ ನೆನಪಿಸಿಕೊಂಡು ನಟನ ಹಾಡಿಗೆ ಹೆಜ್ಜೆ ಹಾಕಿದ ಅಂಕಿತಾ

ಸಾರಾಂಶ

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್‌ನ ಮಾಜಿ ಗೆಳತಿ ಆತನ ಸಿನಿಮಾ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ನಟಿಯ ಡ್ಯಾನ್ಸ್ ನೋಡಿದ ಫ್ಯಾನ್ಸ್ ರಿಯಾಕ್ಷನ್ ಹೇಗಿತ್ತು ನೋಡಿ

ನಟಿ ಅಂಕಿತಾ ಲೋಖಂಡೆ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಡ್ಯಾನ್ಸ್ ವಿಡಿಯೋ ಶೇರ್ ಮಾಡಿದ್ದಾರೆ. ಟಿವಿ ಅವಾರ್ಡ್ ಶೋನಲ್ಲಿ ಮಾಡಿದ ನೃತ್ಯದ ತುಣಕನ್ನು ಫ್ಯಾನ್ಸ್ ಜೊತೆ ಹಂಚಿಕೊಂಡಿದ್ದಾರೆ. ಪವಿತ್ರ ರಿಶ್ತಾ ಸೀರಿಯಲ್ ನಟಿ ಸುಶಾಂತ್ ಸಿಂಗ್ ರಜಪೂತ್‌ನ ಕೋನ್ ತುಝೇ ಕ್ಯೂ ಪ್ಯಾರ್ ಹಾಡಿಗೆ ಹೆಜ್ಜೆ ಹಾಕಿದ್ದಾರೆ.

ಬಿಳಿ ಡ್ರೆಸ್‌ನಲ್ಲಿ ನಟಿಯ ಡ್ಯಾನ್ಸ್ ನೋಡಿದ ಫ್ಯಾನ್ಸ್ ಭಾವುಕರಾಗಿದ್ದಾರೆ. ನಟ ಸುಶಾಂತ್‌ನನ್ನು ನೆನಪಿಸಿಕೊಂಡಿದ್ದಾರೆ. ಅವಾರ್ಡ್ ಕಾರ್ಯಕ್ರಮದಲ್ಲಿ ನಟಿಯ ನೃತ್ಯದ ವಿಡಿಯೋಗೆ ಫ್ಯಾನ್ಸ್ ಕಮೆಂಟ್ ಮಾಡಿದ್ದಾರೆ.

ಅಂಕಿತಾ ಲೋಂಖಂಡೆ ವಿರುದ್ಧ ಕಿಡಿ ಕಾಡಿದ ಸುಶಾಂತ್ ಫ್ಯಾನ್ಸ್‌; ಇಷ್ಟೊಂದು ಬದಲಾವಣೆ?

ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ, ಫ್ಯಾನ್ಸ್ ಮಾತ್ರವಲ್ಲದೆ ಕೆಲವು ನಟ, ನಟಿಯರೂ ಹಾರ್ಟ್ ರಿಯಾಕ್ಷನ್ ಕೊಟ್ಟಿದ್ದಾರೆ. ಬಹಳಷ್ಟು ಜನರು ನಟನನ್ನು ಮಿಸ್ ಮಾಡ್ಕೊಳ್ತಿರೋದಾಗಿ ಹೇಳಿದ್ದಾರೆ.

ಒಂದಷ್ಟು ಜನ ಫ್ಯಾನ್ಸ್ ಅಂಕಿತಾ ಅವರನ್ನು ಪೂರ್ತಿ ವಿಡಿಯೋ, ಫೋಟೋಗಳನ್ನು ಶೇರ್ ಮಾಡಿಕೊಳ್ಳುವಂತೆ ಕೇಳಿಕೊಂಡಿದ್ದಾರೆ. ಇತ್ತೀಚೆಗೆ ನಟಿ ಸುಶಾಂತ್ ಜೊತೆ ಮಾಡಿದ್ದ ಪವಿತ್ರ ರಿಶ್ತಾ ಧಾರವಾಹಿಯ ಟೈಟಲ್‌ ಟ್ರಾಕ್‌ಗೆ ಡ್ಯಾನ್ಸ್ ಮಾಡಿದ್ದರು.

ಅರ್ಚನಾ ಮತ್ತು ಮಾನವ್ ಪಾತ್ರದ ಹಾಡಿಗೆ ಅಂಕಿತಾ ಹೆಜ್ಜೆ ಹಾಕಿದ್ದರು. 2009ರಿಂದ 2014ರ ತನಕ ಪ್ರಸಾರವಾದ ಧಾರವಾಹಿಗೆ ಹಲವು ಅವಾರ್ಡ್ ಬಂದಿತ್ತು. ಅಂದಿನ ಕ್ಯೂಟ್ ಜೋಡಿಯಾಗಿದ್ದರು ಅಂಕಿತಾ ಸುಶಾಂತ್.

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?