ವಿನಾಯಕ ದಾಮೋದರ್ ಸಾವರ್ಕರ್ ಅವರ ಕುರಿತಾದ ‘ಸ್ವತಂತ್ರ ವೀರ್ ಸಾವರ್ಕರ್’ ಚಿತ್ರಕ್ಕೆ ಬಿಗ್ಬಾಸ್ ಖ್ಯಾತಿಯ ಅಂಕಿತಾ ಲೋಖಂಡೆ ಸಂಭಾವನೆ ಪಡೆದಿಲ್ಲ ಎನ್ನುವ ವಿಷಯ ರಿವೀಲ್ ಆಗಿದೆ.
ವಿನಾಯಕ ದಾಮೋದರ್ ಸಾವರ್ಕರ್ ಈ ಹೆಸರು ಕೇಳಿದರೆ ಈಗಲೂ ಯುವಕರು ರೋಮಾಂಚನಗೊಳ್ಳುತ್ತಾರೆ. ತಮ್ಮ ಜೀವನವನ್ನು ಸ್ವಾತಂತ್ರಕ್ಕಾಗಿ ಮುಡಿಪಾಗಿಟ್ಟ ಮಹಾನ್ ನಾಯಕ. ಸ್ವಾತಂತ್ರ್ಯ ಹೋರಾಟ, ಹಿಂದುತ್ವದ ಬಗ್ಗೆ ಇವರು ತೆಗೆದುಕೊಂಡ ನಿಲುವುಗಳು ಈಗಲೂ ಯುವಕರಿಗೆ ಸ್ಫೂರ್ತಿದಾಯಕ. ಬಾಲಿವುಡ್ ನಟ ರಣದೀಪ್ ಹೂಡಾ ಅಭಿನಯದ ‘ಸ್ವತಂತ್ರ ವೀರ್ ಸಾವರ್ಕರ್’ ಚಿತ್ರದ (Swatantra Veer Savarkar) ಸಿನಿಮಾ ಮಾರ್ಚ್ 22ರಂದು ಥಿಯೇಟರ್ನಲ್ಲಿ ಬಿಡುಗಡೆ ಆಯಿತು. ಈ ಚಿತ್ರದಲ್ಲಿ ರಣದೀಪ್ ಹೂಡಾ ಜೊತೆಗೆ ಅಂಕಿತಾ ಲೋಖಂಡೆ ಮತ್ತು ಅಮಿತ್ ಸಿಯಾಲ್ ಕೂಡ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಈ ಚಿತ್ರದಲ್ಲಿ ರಣದೀಪ್ ಹೂಡಾ ವಿನಾಯಕ್ ದಾಮೋದರ್ ಸಾವರ್ಕರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರದ ಜೊತೆಗೆ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಈ ಮೂಲಕ ನಿರ್ದೇಶನಕ್ಕೂ ಅವರು ಕಾಲಿಟ್ಟಿದ್ದಾರೆ. ಈ ಚಿತ್ರದಲ್ಲಿ ರಣದೀಪ್ ಎದುರು ಅಂಕಿತಾ ಲೋಖಂಡೆ ಕಾಣಿಸಿಕೊಂಡಿದ್ದಾರೆ. ಅವರ ಪತ್ನಿಯ ಪಾತ್ರದಲ್ಲಿ ಅವರು ನಟಿಸಿದ್ದಾರೆ. ಈ ಚಿತ್ರವನ್ನು ಆನಂದ್ ಪಂಡಿತ್ ಮತ್ತು ಸಂದೀಪ್ ಸಿಂಗ್ ನಿರ್ಮಿಸಿದ್ದಾರೆ.
ಈ ಚಿತ್ರದ ಕುರಿತು ಕುತೂಹಲದ ವಿಷಯವೊಂದು ಇದೀಗ ರಿವೀಲ್ ಆಗಿದೆ. ಅದೇನೆಂದರೆ, ಸಾವರ್ಕರ್ ಅವರ ಪತ್ನಿ ಯಮುನಾ ಬಾಯಿ ಪಾತ್ರವನ್ನು ನಿರ್ವಹಿಸಿರುವ ʻಹಿಂದಿ ಬಿಗ್ ಬಾಸ್ ಸೀಸನ್ 17ʼರ ಖ್ಯಾತಿಯ ಅಂಕಿತಾ ಲೋಖಂಡೆ ಈ ಚಿತ್ರಕ್ಕಾಗಿ ಸಂಭಾವನೆ ಪಡೆದುಕೊಂಡಿಲ್ಲ ಎಂಬುದು. ಈ ಕುರಿತು ನಿರ್ಮಾಪಕ ಸಂದೀಪ್ ಸಿಂಗ್ ಮಾಹಿತಿ ನೀಡಿದ್ದಾರೆ. ಚಿತ್ರಕ್ಕೆ ಸಹಿ ಹಾಕುವ ಮೊದಲು ಅಂಕಿತಾ ಲೋಖಂಡೆ ಒಂದೇ ಒಂದು ಷರತ್ತು ಹಾಕಿದ್ದರು. ಈ ಚಿತ್ರಕ್ಕಾಗಿ ತಾವು ಹಣ ತೆಗೆದುಕೊಳ್ಳುವುದಿಲ್ಲ ಎಂದು. ಅದರಂತೆಯೇ ಅವರು ನಡೆದುಕೊಂಡಿದ್ದಾರೆ ಎಂದು ಸಂದೀಪ್ ಹೇಳಿದ್ದಾರೆ. ಈ ಚಿತ್ರಕ್ಕಾಗಿ ರಣದೀಪ್ ಅವರು ಬಾಡಿ ಟ್ರಾನ್ಸ್ಫಾರ್ಮೆಷನ್ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಈ ಚಿತ್ರದಲ್ಲಿ ಸಾವರ್ಕರ್ ಪಾತ್ರವನ್ನು ನಿರ್ವಹಿಸಲು, ರಣದೀಪ್ 26 ಕೆಜಿಯನ್ನು ಕಳೆದುಕೊಂಡರು. ಸಾವರ್ಕರ್ ಮೇಲಿನ ಗೌರವಕ್ಕಾಗಿ ಈ ರೀತಿ ಬದಲಾವಣೆ ಮಾಡಿಕೊಂಡಿದ್ದಾಗಿ ಅವರು ಹೇಳಿದ್ದರು. ಅಂಕಿತಾ ಅವರು ಸಂಭಾವನೆ ಪಡೆದಿಲ್ಲ ಎನ್ನುವ ವಿಷಯ ಇದೀಗ ರಿವೀಲ್ ಆಗಿದೆ.
ಪ್ರಕಾಶ್ ರಾಜ್@59: ದಕ್ಷಿಣದ ಅತ್ಯಂತ ವಿವಾದಾತ್ಮಕ ನಟ ಎನಿಸಿಕೊಳ್ತಿರುವುದಕ್ಕೆ ಇವೆಲ್ಲಾ ಸಾಕ್ಷಿಯಾದವಾ?
ಈ ಹಿಂದೆ ಕೆಲವೊಂದು ಚಿತ್ರಗಳಲ್ಲಿ ನಾನು ಸಹ-ನಿರ್ಮಾಣ ಮಾಡುತ್ತಿದ್ದಾಗ ಅಂಕಿತಾ ಮತ್ತು ಕಂಗನಾ ಇಬ್ಬರೂ ಸದಾ ನೀವು ನಿರ್ದೇಶಕರಾಗಬೇಕು ಎಂದು ಹೇಳುತ್ತಲೇ ಇದ್ದರು. ನೀವು ಯಾವಾಗ ಸಿನಿಮಾ ಮಾಡಿದರೂ ನಾನು ಅದರಲ್ಲಿ ನಟಿಸುತ್ತೇನೆ ಎಂದ ಅಂಕಿತಾ ಈ ಮುಂಚೆ ಹೇಳಿದ್ದರು. ‘ಸಫೇದ್’ ಚಿತ್ರದ ಸಮಯದಲ್ಲಿ, ಅಂಕಿತಾಗೆ ಬೇರೆ ಅಸೈನ್ಮೆಂಟ್ ಇದ್ದುದರಿಂದ ಸಾಧ್ಯವಾಗಿರಲಿಲ್ಲ. ನಂತರ, ಸಾವರ್ಕರ್ ಪತ್ನಿ ಯಮುನಾ ಬಾಯಿ ಪಾತ್ರಕ್ಕೆ ಒಪ್ಪಿಕೊಂಡರು. ಆದರೆ ಸಂಭಾವನೆ ಬೇಡ ಎಂದು ಹೇಳಿದ್ದರು. ಅದರಂತೆಯೇ ನಡೆದುಕೊಂಡಿದ್ದಾರೆ ಎಂದು ನಿರ್ಮಾಪಕ ಸಂದೀಪ್ ಸಿಂಗ್ ಹೇಳಿದ್ದಾರೆ. ಅಂದಹಾಗೆ ‘ಸ್ವತಂತ್ರ ವೀರ್ ಸಾವರ್ಕರ್’ 4 ದಿನಗಳಲ್ಲಿ 8.25 ಕೋಟಿ ಕಲೆಕ್ಷನ್ ಮಾಡಿದೆ. ರಣದೀಪ್ ಹೂಡಾ ಬರೆದು ನಿರ್ದೇಶಿಸಿದ ಈ ಚಿತ್ರದಲ್ಲಿ ಅಮಿತ್ ಸಿಯಾಲ್, ರಾಜೇಶ್ ಖೇರಾ, ಲೋಕೇಶ್ ಮಿತ್ತಲ್, ಬ್ರಜೇಶ್ ಝಾ, ಸಂತೋಷ್ ಓಜಾ, ರಾಹುಲ್ ಕುಲಕರ್ಣಿ ಮತ್ತು ಮೃಣಾಲ್ ದತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇನ್ನು ಸಾವರ್ಕರ್ ಕುರಿತು ಹೇಳುವುದಾದರೆ, ಸಾವರ್ಕರ್ ವಿದ್ಯಾರ್ಥಿಯಾಗಿದ್ದಾಗಿನಿಂದಲು ಸ್ವದೇಶಿ ಚಳವಳಿಯಲ್ಲಿ ಭಾಗವಹಿಸಿದವರು. ನಂತರ ತಿಲಕರ ಸ್ವರಾಜ್ಯ ಪಕ್ಷದ ಸದಸ್ಯರಾದರು. ಲಂಡನ್‌ನಲ್ಲಿದ್ದಾಗ ಸ್ವತಂತ್ರ ಭಾರತ ಸಮಾಜ ಎಂಬ ಸಂಸ್ಥೆಯನ್ನು ಸ್ಥಾಪಿಸಿದರು. ಸಾವರ್ಕರ್ ಅವರ ಚಟುವಟಿಕೆಗಳನ್ನು ಗಮನಿಸಿದ ಬ್ರಿಟಿಷ್ ಸರ್ಕಾರ 1910 ರಂದು ಲಂಡನ್‌ನಲ್ಲಿ ಅವರನ್ನು ಬಂಧಿಸಿತ್ತು. ಹಡಗಿನ ಮೂಲಕ ಸಾವರ್ಕರ್ ಅವರನ್ನು ಭಾರತಕ್ಕೆ ಕರೆತರಲಾಯಿತು. ಮೊರ್ಸಿಲ್ಲೆಸ್ ಬಂದರಿನಲ್ಲಿ ಹಡಗು ಬಂದು ನಿಂತಾಗ ಸಮುದ್ರಕ್ಕೆ ಹಾರಿದ್ದ ಸಾವರ್ಕರ್, ಈಜಿ ದಡ ಸೇರಿದ್ದರು. ಸಾವರ್ಕರ್ ಅವರನ್ನು ಅಂಡಮಾನ್‌ನ ಕಾಲೇಪಾನಿನಲ್ಲಿನ ಜೈಲಿನಲ್ಲಿ ಇಡಲಾಯಿತು. ಕಾಲಾಪಾನಿ ಜೈಲಿನಲ್ಲಿ ಸಾವರ್ಕರ್ ಚಿತ್ರಹಿಂಸೆಯನ್ನು ಅನುಭವಿಸಿದರು. ಈ ಕುರಿತು ಅವರು ತಮ್ಮ ಜೈಲು ಜೀವನದ ಬಗ್ಗೆ ಮೇರಾ ಲೈಫ್ ಜೈಲ್ ಪುಸ್ತಕದಲ್ಲಿ ವಿವರಿಸಿದ್ದಾರೆ.
ನಗ್ನ ತಾರೆ ತೃಪ್ತಿ ಡಿಮ್ರಿ ಜೊತೆ ಈ ನಟನಿಗೆ ಡೇಟಿಂಗ್ ಮಾಡೋ ಆಸೆಯಂತೆ, ಮದ್ವೆ ಕುರಿತು ಹೇಳಿದ್ದೇನು ಕೇಳಿ...