27 ಕೆ.ಜಿ ತೂಕ ಇಳಿಸಿಕೊಂಡ ಬೋನಿ ಕಪೂರ್​: ಪತ್ನಿ ಶ್ರೀದೇವಿ ನೀಡಿದ್ದ ಟಿಪ್ಸ್ ನೆನಪಿಸಿಕೊಂಡ ನಿರ್ಮಾಪಕ

By Suvarna News  |  First Published Mar 27, 2024, 12:30 PM IST

 27 ಕೆ.ಜಿ ತೂಕ ಇಳಿಸಿಕೊಂಡಿದ್ದಾರೆ ಶ್ರೀದೇವಿ ಪತಿ, ನಿರ್ಮಾಪಕ ಬೋನಿ ಕಪೂರ್​. ಇದಕ್ಕೆ ಕಾರಣವಾಗಿದ್ದು  ಶ್ರೀದೇವಿ ನೀಡಿದ್ದ ಟಿಪ್ಸ್ ಅಂತೆ! ಬೋನಿ ಅವರು ಹೇಳಿದ್ದೇನು?
 


 ಬಾಲಿವುಡ್ ಹಿರಿಯ ನಟಿ ಶ್ರೀದೇವಿ ಇಂದು ನಮ್ಮ ನಡುವೆ ಇಲ್ಲದಿರಬಹುದು, ಆದರೆ ಅವರು ತಮ್ಮ ಅಭಿಮಾನಿಗಳ ಹೃದಯದಲ್ಲಿ ಇನ್ನೂ ಜೀವಂತವಾಗಿದ್ದಾರೆ. ಆಕೆಯ ನಟನೆ ಮಾತ್ರವಲ್ಲದೆ ಆಕೆಯ ಸೌಂದರ್ಯದ ಬಗ್ಗೆಯೂ ಜನರು ಹುಚ್ಚರಾಗಿದ್ದರು. "ಬಾಲಿವುಡ್‌ನ ಮೊದಲ ಮಹಿಳಾ ಸೂಪರ್‌ಸ್ಟಾರ್" ಎಂದೂ ಇವರನ್ನು ಕರೆಯಲಾಗುತ್ತಿತ್ತು.  ಭಾರತೀಯ ಚಿತ್ರರಂಗದ ಲೆಜೆಂಡರಿ ನಟಿ ಎಂದು ಕರೆಸಿಕೊಂಡಿರೋ ಶ್ರೀದೇವಿ (Sridevi) ನಿಗೂಢವಾಗಿ ಸಾವನ್ನಪ್ಪಿ ಇಂದು ಅಂದರೆ ಫೆ. 24ರಂದು ಆರು ವರ್ಷಗಳೇ ಕಳೆದಿದೆ.  ಸೌಂದರ್ಯದ ಘನಿಯಂತಿದ್ದ ಶ್ರೀದೇವಿ ದುರಂತ ಅಂತ್ಯ (sad end) ಕಂಡವರು. ಇವರದ್ದು ಸಹಜ  ಸಾವು ಎಂದು ಹೇಳಲಾಗುತ್ತಿದ್ದರೂ,  ಸಾವಿನ ರಹಸ್ಯ  (Secret) ಕೊನೆಗೂ ರಹಸ್ಯವಾಗಿಯೇ ಉಳಿದಿದೆ. ಶ್ರೀದೇವಿಯ ಸಾವಿನ ರಹಸ್ಯದ ಬಗ್ಗೆ ಹಲವರು ಹಲವು ರೀತಿ ಆಡಿಕೊಳ್ಳುತ್ತಿದ್ದಾರೆ. ಇದು ಬಹುತೇಕ ಕೊಲೆ ಎನ್ನುವುದು ಎಲ್ಲರ ಮಾತು. ಕೊಲೆಗಾರ ಯಾರು ಎನ್ನುವ ಬಗ್ಗೆಯೂ ಜನರು ಆಡಿಕೊಳ್ಳುತ್ತಿದ್ದರೂ ನಿಜ ಏನು ಎಂಬ ರಹಸ್ಯ ಮಾತ್ರ ಶ್ರೀದೇವಿಯ ಜೊತೆಗೇ ಸುಟ್ಟು ಭಸ್ಮವಾಗಿದೆ.  1963ರಲ್ಲಿ ಹುಟ್ಟಿದ್ದ ಈ ತಾರೆ ಇಂದು ಬದುಕಿರುತ್ತಿದ್ದರೆ, 61 ವರ್ಷ ವಯಸ್ಸಾಗಿರುತ್ತಿತ್ತು. ಆದರೆ 2018ರಲ್ಲಿ ಈಕೆ ದುರಂತ ಅಂತ್ಯ ಕಂಡರು. 

ಇದೀಗ ಅವರ ಪತಿ, ಚಿತ್ರ ನಿರ್ಮಾಪಕ ಬೋನಿ ಕಪೂರ್​ ಅವರು ತಮ್ಮ ಪತ್ನಿ ಶ್ರೀದೇವಿ ನೀಡಿದ್ದ ಟಿಪ್ಸ್​ ನೆನಪಿಸಿಕೊಂಡಿದ್ದಾರೆ. ಪತ್ನಿ ಅಂದು ನೀಡಿದ್ದ ಸಲಹೆಯಿಂದ ತಾವು 27 ಕೆ.ಜಿಯಷ್ಟು ತೂಕವನ್ನು ಇಳಿಸಿಕೊಂಡಿರುವ ರಹಸ್ಯವನ್ನು ಅವರು ಬಿಚ್ಚಿಟ್ಟಿದ್ದಾರೆ.  115 ಕೆಜಿ ತೂಕವಿದ್ದ ಬೋನಿ ಕಪೂರ್​ ತಮ್ಮನ್ನು ತಾವು  98 ಕೆಜಿಗೆ ಇಳಿಸಿಕೊಂಡದ್ದು ಹೇಗೆ? ಈ ನಿಟ್ಟಿನಲ್ಲಿ ತಮ್ಮ ದಿವಂಗತ ಪತ್ನಿ ಶ್ರೀದೇವಿಯ ಸಲಹೆಗಳು ಹೇಗೆ ಸಹಾಯ ಮಾಡಿದವು ಎಂಬ ಬಗ್ಗೆ ವಿವರಿಸಿದ್ದಾರೆ. ಅಷ್ಟಕ್ಕೂ ಬೋನಿ ಕಪೂರ್​ ಅವರು ಹೇಳಿದ್ದೇನೆಂದರೆ, ನನ್ನ ಪತ್ನಿಯಾಗಿದ್ದ ಶ್ರೀದೇವಿ ಸದಾ ಹೇಳುತ್ತಿದ್ದಂತೆಯೇ, ನಾನು ಎಣ್ಣೆಯುಕ್ತ ಆಹಾರವನ್ನು ಕಡಿಮೆ ಮಾಡಿದೆ,  ಅಂಟು ರಹಿತ ಊಟವನ್ನು ಪ್ರಾರಂಭಿಸಿದೆ.  ವಾರಕ್ಕೊಮ್ಮೆ ಮಾತ್ರ ಅನ್ನವನ್ನು ತಿನ್ನುತ್ತಿದ್ದೆ. ಆದ್ದರಿಂದ ನಾನು ಕೆಲವೇ ವರ್ಷಗಳಲ್ಲಿ ಬರೋಬ್ಬರಿ 27 ಕೆ.ಜಿ. ತೂಕವನ್ನು ಇಳಿಸಿಕೊಂಡೆ, ಇದಕ್ಕಾಗಿ ನನ್ನ ಪತ್ನಿಯಾಗಿದ್ದ ಶ್ರೀದೇವಿಗೆ ಆಭಾರಿಯಾಗಿದ್ದೇನೆ ಎಂದಿದ್ದಾರೆ. 

Tap to resize

Latest Videos

ಹೋಳಿ ಆಚರಣೆ ವೇಳೆ ಶೆರ್ಲಿನ್​ ಚೋಪ್ರಾ ನಂಗಾ ನಾಚ್​! ಕಾಮನೇನಾದ್ರೂ ಈಗ ನೋಡಿದ್ರೆ... ಅಂದ ನೆಟ್ಟಿಗರು

ನನಗೆ ಸಿಹಿ ಎಂದರೆ ತುಂಬಾ ಇಷ್ಟ. ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದರೆ ಸಿಹಿ ಪದಾರ್ಥಗಳ ಸೇವನೆ ವರ್ಜಿಸಬೇಕು. ಆದರೆ ಅದನ್ನು ಬಿಡಲು ನನಗೆ ಸಾಧ್ಯವಿಲ್ಲ. ಹಾಗೆಂದು ನಾನು ಸುಮ್ಮನೇ ಇಲ್ಲ. ಸಿಹಿಯನ್ನು ಆದಷ್ಟು ಕಡಿಮೆ ಪ್ರಮಾಣದಲ್ಲಿ ಸೇವಿಸಲು ಶುರು ಮಾಡಿದ್ದೇನೆ.  ಆದಷ್ಟು ಕಡಿಮೆ ಸಕ್ಕರೆ ಮತ್ತು ಕಡಿಮೆ ಉಪ್ಪು ಸೇವಿಸುತ್ತೇನೆ. ಆದರೆ ಜೀವಕ್ಕೆ ಅಗತ್ಯ ಇರುವ  ಅನೇಕ ಕಾರ್ಬೋಹೈಡ್ರೇಟ್‌ಗಳನ್ನು ನಾನು ತ್ಯಜಿಸಲಿಲ್ಲ ಎಂದಿದ್ದಾರೆ. ತಮ್ಮ ಆಹಾರದ ಬಗ್ಗೆ   ರಣದೀಪ್ ಹೂಡಾ ಅವರ ಸಹೋದರಿ ಡಾ. ಅಂಜಲಿ ಹೂಡಾ ಸಹಕರಿಸುತ್ತಾರೆ ಎಂದಿದ್ದಾರೆ.  ಇನ್ನು ಒತ್ತಡ ಕಡಿಮೆ  ಮಾಡಿಕೊಳ್ಳಬೇಕಿದೆ. ಆದರೆ ಅದು ನನ್ನ ಜೀವನದ ಅವಿಭಾಜ್ಯ ಅಂಗವಾಗಿರುವ ಕಾರಣ, ಅದು ಸಾಧ್ಯವಾಗುತ್ತಿಲ್ಲ ಎಂದೂ ಬೋನಿ ಕಪೂರ್​ ಹೇಳಿದ್ದಾರೆ.
 
ಅಂದಹಾಗೆ, 2018ರಲ್ಲಿ ಫೆಬ್ರವರಿ 20ರಂದು ನಟಿ ಕುಟುಂಬ ಸಹಿತವಾಗಿ ಮದುವೆಯಲ್ಲಿ ಪಾಲ್ಗೊಳ್ಳಲು ದುಬೈಗೆ ಹೋಗಿದ್ದರು. ಇನ್ನೊಂದೆಡೆ,  ಭಾರತದಲ್ಲಿ ಇದ್ದರು ಎನ್ನಲಾದ ಇವರ ಪತಿ ಬೋನಿ ಕಪೂರ್​ (Bony Kapoor), ಫೆಬ್ರವರಿ 24ರಂದು ಶ್ರೀದೇವಿ ಭೇಟಿ ಮಾಡಿ ಸರ್​ಪ್ರೈಸ್ ಕೊಡೋಕೆ ರೆಡಿ ಆಗಿದ್ದರು ಎಂದು ಹೇಳಲಾಗುತ್ತಿದೆ. ಆದರೆ, ಹೋಟೆಲ್​ ಬಾತ್​ರೂಮ್​ಗೆ ಹೋಗಿದ್ದಷ್ಟೇ. ಅಲ್ಲಿಯೇ ಶ್ರೀದೇವಿ ಮೃತಪಟ್ಟಿದ್ದರು. ಬಾತ್​ಟಬ್​ನಲ್ಲಿ ಮುಳುಗಿ ಶ್ರೀದೇವಿ ಮೃತಪಟ್ಟರು ಎಂದೇ ಹೇಳಲಾಗುತ್ತಿದೆ. ಇವರ ಶವ ಸಿಕ್ಕಿದ್ದು ಬಾತ್​ಟಬ್​ನಲ್ಲಿ.(bathtub) ಆದರೆ ನಿಜವಾಗಿಯೂ ಏನು ಆಗಿದೆ ಎನ್ನುವುದು ಮಾತ್ರ ನಿಗೂಢವಾಗಿಯೇ ಉಳಿದಿದೆ.  

ನಗ್ನ ತಾರೆ ತೃಪ್ತಿ ಡಿಮ್ರಿ ಜೊತೆ ಈ ನಟನಿಗೆ ಡೇಟಿಂಗ್​ ಮಾಡೋ ಆಸೆಯಂತೆ, ಮದ್ವೆ ಕುರಿತು ಹೇಳಿದ್ದೇನು ಕೇಳಿ...

click me!