ಸಿನಿಮಾ ನಟ ಮಾತ್ರ ಹೀರೋ ಅಲ್ಲ, ಯಾರಾದ್ರೂ ಆಗಬಹುದು; ಯಾಕೆ ಹೀಗಂದ್ಬಿಟ್ರು ರಾಮ್‌ ಚರಣ್?

Published : Mar 27, 2024, 01:10 PM ISTUpdated : Mar 27, 2024, 01:14 PM IST
ಸಿನಿಮಾ ನಟ ಮಾತ್ರ ಹೀರೋ ಅಲ್ಲ, ಯಾರಾದ್ರೂ ಆಗಬಹುದು; ಯಾಕೆ ಹೀಗಂದ್ಬಿಟ್ರು ರಾಮ್‌ ಚರಣ್?

ಸಾರಾಂಶ

ಸ್ಪೈಡರ್ ಮ್ಯಾನ್ ಬಗ್ಗೆ ಮಾತನಾಡುತ್ತ ನಟ ರಾಮ್‌ ಚರಣ್ 'ಸ್ಪೈಡರ್‌ ಮ್ಯಾನ್  ಕಥೆಯಲ್ಲಿ ನಾರ್ಮಲ್ ಮನುಷ್ಯನೊಬ್ಬ ವಿಶೇಷ ಶಕ್ತಿಯನ್ನು ಗಳಿಸಿಕೊಂಡು ಯಾವ ಹಂತಕ್ಕೆ ಹೋಗುತ್ತಾನೆ ಎಂದರೆ, ಆತನನ್ನು ಜನರು ಅಕ್ಷರಶಃ ಆರಾಧಿಸುತ್ತಾರೆ.

ಆರ್‌ಆರ್‌ಆರ್‌ (RRR)ಖ್ಯಾತಿಯ ತೆಲುಗು ನಟ ರಾಮ್‌ ಚರಣ್ (Ram Charan) 'ಹೀರೋ' ಎಂದರೆ ಯಾರು? ಯಾರು ಹೀರೋ ಆಗಬಹುದು ಎಂಬ ಬಗ್ಗೆ ಮಾತನಾಡಿದ್ದಾರೆ. 'ಸ್ಪೈಡರ್‌ ಮ್ಯಾನ್' ಉದಾಹರಣೆಯನ್ನು ಕೊಟ್ಟಿರುವ ರಾಮ್‌ ಚರಣ್‌ 'ನಿಜ ಹೇಳಬೇಕೆಂದರೆ ಕಥೆಯಲ್ಲಿ ಸ್ಪೈಡರ್ ಮ್ಯಾನ್ (Spider Man) ಒಬ್ಬ ನಾರ್ಮಲ್ ಮನುಷ್ಯನೇ ಆಗಿದ್ದಾನೆ. ಆದರೆ, ವಿಶೇಷ ಶಕ್ತಿಯನ್ನು ಪಡೆದ ಆತ, ಜನರ ಸಂಕಷ್ಟಗಳನ್ನು ನಿವಾರಿಸುವ ಪ್ರಯತ್ನ ಮಾಡುತ್ತಾನೆ. ಅದರಿಂದ ಆತ ಸೂಪರ್ ಮ್ಯಾನ್ ಆಗಿ ಪ್ರಖ್ಯಾತಿ ಗಳಿಸುತ್ತಾನೆ. 

ಸ್ಪೈಡರ್ ಮ್ಯಾನ್ ಬಗ್ಗೆ ಮಾತನಾಡುತ್ತ ನಟ ರಾಮ್‌ ಚರಣ್ 'ಸ್ಪೈಡರ್‌ ಮ್ಯಾನ್  ಕಥೆಯಲ್ಲಿ ನಾರ್ಮಲ್ ಮನುಷ್ಯನೊಬ್ಬ ವಿಶೇಷ ಶಕ್ತಿಯನ್ನು ಗಳಿಸಿಕೊಂಡು ಯಾವ ಹಂತಕ್ಕೆ ಹೋಗುತ್ತಾನೆ ಎಂದರೆ, ಆತನನ್ನು ಜನರು ಅಕ್ಷರಶಃ ಆರಾಧಿಸುತ್ತಾರೆ. ಆತ ತಾನು ಗಳಿಸಿದ ವಿಶೇಷ ಶಕ್ತಿಯಿಂದ ಜನರ ಕಷ್ಟಗಳನ್ನು ನಿವಾರಿಸಿ ಅವರ ಪಾಲಿಗೆ ಆಪ್ತ ರಕ್ಷಕ, ಆಪದ್ಭಾಂಧವ ಎನಿಸಿಕೊಳ್ಳುತ್ತಾನೆ. ಆತ ಮಾಡುವ ಮೊದಲ ಕೆಲಸ ಎಂದರೆ, ಜನರ ಕಷ್ಟಗಳನ್ನು ಕೇಳುವುದು. 

ಆರ್ ಸಿಬಿ ಗೆಲ್ಬೇಕು ಮರ್ಯಾದೆ ಪ್ರಶ್ನೆ; ಕೊಹ್ಲಿ ಬಳಗಕ್ಕೆ ಚಿಯರ್ಸ್ ಎಂದ ಸ್ಯಾಂಡಲ್ ವುಡ್ ಸೆಲೆಬ್ರಿಟಿಸ್

ನಟ ರಾಮ್‌ ಚರಣ್ ಈ ಬಗ್ಗೆ ಮಾತನಾಡುತ್ತ 'ಯಾರೇ ಆಗಲೀ, ಹೀರೋ ಎನಿಸಿಕೊಳ್ಳಬೇಕು ಎಂದರೆ, ಜನನಾಯಕ ಅಥವಾ ಲೀಡರ್ ಆಗಬೇಕು ಎಂದರೆ ಮೊದಲ ಮಾಡಬೇಕಾದ ಕೆಲಸ ಕಷ್ಟದಲ್ಲಿರುವ ಜನರ ಮಾತಿಗೆ ಕಿವಿಯಾಗುವುದು. ಸ್ಪೈಡರ್ ಮ್ಯಾನ್ ಅದನ್ನೇ ಮಾಡುತ್ತಾನೆ. ತನ್ನ ಸುತ್ತಮುತ್ತಲಿನ ಜನರಿಗೆ ಏನೇ ಕಷ್ಟ ಬರಲಿ, ಆತ ಮೊದಲು ಅವರು ಕಷ್ಟಗಳನ್ನು ಆಲಿಸಿ, ಬಳಿಕ ಅದಕ್ಕೆ ಪರಿಹಾರ ಒದಗಿಸಲು ಪ್ರಯತ್ನಿಸುತ್ತಾನೆ.

ಹುಡುಗರ ದೇಹದ ಸ್ಮೆಲ್‌, ಸ್ಕಿಲ್‌ ಬಗ್ಗೆ ಸೀಕ್ರೆಟ್‌ ಆಗಿ ಆಬ್ಸರ್ವ್‌ ಮಾಡ್ತಾರಂತೆ ರಿಷಿಕಾ ನಾಯ್ಕ್; ಹುಶಾರ್‌! 

ನೀವು ಯಾರೇ ಆಗಿರಲಿ, ನಿಮ್ಮ ಗಲ್ಲಿಯಲ್ಲಿ, ಊರಿನಲ್ಲಿ ಅಥವಾ ನಿಮ್ಮ ನೆಂಟರಿಷ್ಟರ-ಆಪ್ತರ ಬಳಗದಲ್ಲಿ ಹೀರೋ ಆಗಬೇಕು ಎಂದರೆ ಅದು ತುಂಬಾ ಸುಲಭ. ಜನರಕಷ್ಟಗಳಿಗೆ ಸ್ಪಂದಿಸುವುದು ಹಾಗೂ ಅದಕ್ಕೆ ಆದಷ್ಟು ಬೇಗ ಪರಿಹಾರ ಕಂಡು ಹಿಡಿದು ಅವರನ್ನು ಅದರಿಂದ ಪಾರು ಮಾಡುವುದು. ಹೀರೋ ಎಂದರೆ ನೀವು ಸಿನಿಮಾದಲ್ಲಿಯೇ ನಟಿಸಬೇಕು ಎಂದೇನೂ ಇಲ್ಲ. ಅಥವಾ ವಿಶೇಷ ಶಕ್ತಿಯನ್ನು ಪಡೆದು ಹಾರಾಡಬೇಕಿಲ್ಲ. ಮನಸ್ಸು ಮಾಡಿದರೆ ನೀವು ಇರುವಲ್ಲಿಯೇ ಹೀರೋ ಆಗಿ ಮಿಂಚಬಹುದು. ಅದಕ್ಕೇ ಅಂತ ವಿಭಿನ್ನವಾಗಿ ಇನ್ನೋನೋ ಮಾಡಬೇಕಿಲ್ಲ, ನಾನು ಹೇಳಿದ್ದನ್ನು ಮಾಡಿದರೆ ಸಾಕು ಎಂಬುದು ನನ್ನ ಅಭಿಪ್ರಾಯ ಎಂದಿದ್ದಾರೆ. 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

'ಕಾಂತಾರ' ದೈವಕ್ಕೆ ರಣವೀರ್ ಸಿಂಗ್ ಅವಮಾನ: ಕೂಡಲಸಂಗಮದಲ್ಲಿ ಸಪ್ತಮಿ ಗೌಡ ಎಂಥ ಮಾತು ಹೇಳಿದ್ರು ನೋಡಿ!
Alia Bhatt New Home Photos: ಆಲಿಯಾ ಭಟ್‌, ರಣಬೀರ್‌ ಕಪೂರ್‌ 350 ಕೋಟಿ ರೂ ಮನೆಯನ್ನು ಪದಗಳಲ್ಲಿ ವರ್ಣಿಸೋಕಾಗಲ್ಲ