ಆ್ಯನಿಮಲ್‌ನಲ್ಲಿ ಬೆತ್ತಲಾದ ದಿಮ್ರಿಗೆ ಭರ್ಜರಿ ಆಫರ್, ಮುಂಬೈನಲ್ಲಿ 14 ಕೋಟಿ ಮನೆ ಖರೀದಿಸಿದ ನಟಿ!

By Chethan Kumar  |  First Published Jun 7, 2024, 7:46 PM IST

ಅ್ಯನಿಮಲ್ ಚಿತ್ರದಲ್ಲಿ ಬೆತ್ತಲಾಗುವ ಮೂಲಕ ಬೋಲ್ಡ್ ಪಾತ್ರದಲ್ಲಿ ಕಾಣಿಸಿಕೊಂಡ ನಟಿ ತೃಪ್ತಿ ದಿಮ್ರಿಗೆ ಭಾರಿ ಬೇಡಿಕೆ. ಹಲವು ಚಿತ್ರಕ್ಕೆ ತೃಪ್ತಿ ಸಹಿ ಹಾಕಿದ್ದಾರೆ. ಬಾಲಿವುಡ್‌ನಲ್ಲಿ ಬ್ಯೂಸಿಯಾಗಿರುವ ನಟಿ ಇದೀಗ ಮುಂಬೈನಲ್ಲಿ 14 ಕೋಟಿ ರೂ ಮನೆ ಖರೀದಿಸಿದ್ದಾರೆ.
 


ಮುಂಬೈ(ಜೂ.07) ಆ್ಯನಿಮಲ್ ಹಾಗೂ ಖಾಲ ಚಿತ್ರದ ಮೂಲಕ ಭಾರಿ ಸದ್ದು ಮಾಡಿರುವ ನಟಿ ತೃಪ್ತಿ ದಿಮ್ರಿಗೆ ಮೇಲಿಂದ ಮೇಲೆ ಚಿತ್ರಗಳು ಬರುತ್ತಿದೆ. ಇತ್ತ ತೃಪ್ತಿ ಹಲವು ಚಿತ್ರಕ್ಕೆ ಸಹಿ ಹಾಕಿ ಕೆಲಸ ಆರಂಭಿಸಿದ್ದಾರೆ. ಬಾಲಿವುಡ್‌ನಲ್ಲಿ ಸಂಪೂರ್ಣ ಬ್ಯೂಸಿಯಾಗಿರುವ ತೃಪ್ತಿ ದಿಮ್ರಿ ಇದೀಗ ಮುಂಬೈನಲ್ಲಿ ಬರೋಬ್ಬರಿ 14 ಕೋಟಿ ರೂಪಾಯಿ ಮನೆ ಖರೀದಿಸಿದ್ದಾರೆ. ಬಾಲಿವುಡ್ ಸ್ಟಾರ್ ನಟ ನಟಿಯರು ಇರುವ ಬ್ಯಾಂಡ್ರಾದಲ್ಲಿ ತೃಪ್ತಿ ಹೊಸ ಮನೆ ಖರೀದಿಸಿದ್ದಾರೆ.

2,193 ಚದರ ಅಡಿ ವಿಸ್ತೀರ್ಣದ ಈ ಐಷಾರಾಮಿ ಮನೆ ಇದೀಗ ತೃಪ್ತಿ ದಿಮ್ರಿ ಹೆಸರಿಗೆ ನೋಂದಾಯಿಸಲಾಗಿದೆ. ಜೂನ್ 3ರಂದು ಈ ಮನೆಯ ರಿಜಿಸ್ಟ್ರೇಶನ್ ಪ್ರಕ್ರಿಯೆ ನಡೆದಿದೆ. ಝ್ಯಾಪ್‌ಕೀ ದಾಖಲೆ ಪ್ರಕಾರ ತೃಪ್ತಿ ದಿಮ್ರಿ ಈ ಮನೆ ಖರೀದಿ ವೇಳೆ 70 ಲಕ್ಷ ರೂಪಾಯಿ ಮೊತ್ತವನ್ನು ಸ್ಟಾಂಪ್ ಡ್ಯೂಟಿಗೆ ನೀಡಿದ್ದಾರೆ. ಇನ್ನು ರಿಜಿಸ್ಚ್ರೇಶನ್ ಶುಲ್ಕವಾಗಿ 30,000 ರೂಪಾಯಿ ನೀಡಿದ್ದಾರೆ. 

Tap to resize

Latest Videos

ಅ್ಯನಿಮಲ್‌ನಲ್ಲಿ ಬೆತ್ತಲಾದ ತೃಪ್ತಿಗೆ ಪುಷ್ಪಾ 2ನಲ್ಲೂ ಆಫರ್, ಮತ್ತೆ ರಶ್ಮಿಕಾ-ದಿಮ್ರಿ ಕಾಂಬಿನೇಷನ್!

ಪೂರ್ವ ಬ್ಯಾಂಡ್ರಾದಲ್ಲಿ ತೃಪ್ತಿ ದಿಮ್ರಿಯ ಹೊಸ ಮನೆ ಇದೆ. ಪೂರ್ವ ಬ್ಯಾಂಡ್ರಾದಲ್ಲಿ ಹಲವು ಉದ್ಯಮಿಗಳು, ಸೆಲೆಬ್ರೆಟಿಗಳ ಮನೆ ಇದೆ. ಕಳೆದ ವರ್ಷ ಬಾಲಿವುಡ್ ನಟಿ ಆಲಿಯಾ ಭಟ್ ಇದೇ ವೆಸ್ಟ್ ಬ್ಯಾಂಡ್ರಾದಲ್ಲಿ 37.80 ಕೋಟಿ ರೂಪಾಯಿಗೆ ಹೊಸ ಮನೆ ಖರೀದಿಸಿದ್ದರು. ಇತ್ತೀಚೆಗೆ ಕಾಜೋಲ್ ದೇವಗನ್ 16 ಕೋಟಿ ರೂಪಾಯಿ ಮನೆ ಖರೀದಿಸಿದ್ದರು. ಜಾಹ್ನವಿ ಕಪೂರ್ ಹಾಗೂ ಕುಟುಂಬ ಇದೇ ವೆಸ್ಟ್ ಬ್ಯಾಂಡ್ರಾದಲ್ಲಿ 65 ಕೋಟಿ ರೂಪಾಯಿ ಮೌಲ್ಯದ ಮನೆ ಖರೀದಿಸಿದ್ದರು. ಈ ದುಬಾರಿ ಮನೆಗಳ ಸಾಲಿನಲ್ಲಿ ಇದೀಗ ತೃಪ್ತಿ ದಿಮ್ರಿ ಮನೆ ಕೂಡ ಸೇರಿಕೊಂಡಿದೆ. 

ಆ್ಯನಿಮಲ್ ಚಿತ್ರದಲ್ಲಿ ಬೆತ್ತಲಾಗಿ ನಟಿಸಿದ್ದ ತೃಪ್ತಿ ದಿಮ್ರಿಗೆ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಇದೇ ವೇಳೆ ಕೆಲ ಟೀಕೆಗಳು ಬಂದಿತ್ತು. ಆದರೆ ತೃಪ್ತಿ ತಮ್ಮ ಪಾತ್ರಕ್ಕೆ ಜೀವ ತುಂಬ ಕೆಲಸ ಮಾಡಿದ್ದರು. ಆ್ಯನಿಮಲ್ ಚಿತ್ರದ ಯಶಸ್ಸಿನ ಬಳಿಕ ತೃಪ್ತಿ ದಿಮ್ರಿ ಹಲವು ಬಾಲಿವುಡ್ ಚಿತ್ರಗಳಿಗೆ ಸಹಿ ಹಾಕಿದ್ದಾರೆ. ಇತ್ತೀಚೆಗೆ ದಕ್ಷಿಣ ಭಾರತದ ಚಿತ್ರ ಪುಷ್ಪಾ 2 ಸೀರಿಸ್‌ನಲ್ಲಿ ಐಟಂ ಸಾಂಗ್‌ಗೆ ತೃಪ್ತಿ ದಿಮ್ರಿಗೆ ಆಫರ್ ನೀಡಲಾಗಿತ್ತು.

ಅಲ್ಲು ಅರ್ಜುನ್ ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪಾ 2 ಚಿತ್ರದ ಐಟಂ ಸಾಂಗ್‌ನಲ್ಲಿ ಕಾಣಿಸಿಕೊಳ್ಳಲು ಕೋಟಿ ಕೋಟಿ ರೂಪಾಯಿ ಆಫರ್ ನೀಡಲಾಗಿತ್ತು. ಪುಷ್ಪ 1 ಭಾಗದಲ್ಲಿನ ಐಟಂ ಸಾಂಗ್‌ನಲ್ಲಿ ನಟಿ ಸಮಂತಾ ಕಾಣಿಸಿಕೊಂಡಿದ್ದರು. ಈ ಬಾರಿ ತೃಪ್ತಿ ದಿಮ್ರಿ ಭಾರಿ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ. ಇಷ್ಟೇ ಅಲ್ಲ ಐಟಂ ಸಾಂಗ್‌ನಂತ ಬೋಲ್ಡ್ ಪಾತ್ರದಲ್ಲೂ ಕಾಣಿಸಿಕೊಳ್ಳಲು ತೃಪ್ತಿ ದಿಮ್ರಿ ಹಿಂಜರಿಯುವುದಿಲ್ಲ. ಹೀಗಾಗಿ ಭರ್ಜರಿ ಆಫರ್ ನೀಡಲಾಗಿದೆ.
ಆಲಿಯಾ or ತೃಪ್ತಿ ಡಿಮ್ರಿ? ರಣಬೀರ್ ಕಪೂರ್‌ ಜೊತೆ ಯಾರು ಬೆಸ್ಟ್ ? ತೃಪ್ತಿ ಕೊಟ್ಟ ಉತ್ತರ ವೈರಲ್

click me!