ಅನಿಮಲ್ ಚಿತ್ರದಲ್ಲಿ ಸಂಪೂರ್ಣ ನಗ್ನಳಾಗುವ ಮೂಲಕ ಹಲ್ಚಲ್ ಸೃಷ್ಟಿಸಿರೋ ನಟಿ ತೃಪ್ತಿ ಡಿಮ್ರಿ ಜೊತೆ ಈ ನಟನಿಗೆ ಡೇಟಿಂಗ್ ಮಾಡುವ ಆಸೆಯಂತೆ. ಮದ್ವೆಯ ಬಗ್ಗೆಯೂ ಏನು ಹೇಳಿದ್ದಾರೆ ಕೇಳಿ...
ಅನಿಮಲ್ ಚಿತ್ರದಲ್ಲಿ ಸಂಪೂರ್ಣ ಬೆತ್ತಲಾಗುವ ಮೂಲಕ ಭಾರಿ ಸಂಚಲನ ಸೃಷ್ಟಿಸಿರುವ ನಟಿ ತೃಪ್ತಿ ಡಿಮ್ರಿ. ಕಳೆದ ವರ್ಷದವರೆಗೂ ತೃಪ್ತಿ ಡಿಮ್ರಿ ಎನ್ನುವ ಬಾಲಿವುಡ್ ನಟಿ ಇದ್ದಾರೆ ಎನ್ನುವುದೇ ಎಷ್ಟೋ ಮಂದಿಗೆ ತಿಳಿದಿರಲಿಲ್ಲ. ಆದರೆ ಇದೀಗ ಗೂಗಲ್ನಲ್ಲಿ ತೃಪ್ತಿಯ ಬಗ್ಗೆ ಸಿನಿ ಪ್ರಿಯರಿಗೆ ಇಂಟರೆಸ್ಟ್ ಜಾಸ್ತಿಯಾಗುತ್ತಿದೆ. ಯಾರೀಕೆ? ಯಾವೆಲ್ಲಾ ಚಿತ್ರಗಳಲ್ಲಿ ನಟಿಸಿದ್ದಾರೆ? ಎಲ್ಲಿಯವರು ಎಂದೆಲ್ಲಾ ಸರ್ಚ್ ಶುರುವಿಟ್ಟುಕೊಂಡಿದ್ದಾರೆ. ಪಾಳುಬಿದ್ದಿದ್ದ ಈಕೆಯ ಸೋಷಿಯಲ್ ಮೀಡಿಯಾ ಖಾತೆ ಸಕ್ರಿಯಗೊಂಡಿದ್ದು, ಈಕೆಯ ಸೋಷಿಯಲ್ ಮೀಡಿಯಾ ಕೂಡ ಸರ್ಚ್ ಮಾಡಲಾಗುತ್ತಿದೆ. ದಿಢೀರನೆ ಎಲ್ಲರ ಕಣ್ಣು ಕುಕ್ಕಿದ್ದಾರೆ ಈ ಬೆಡಗಿ. ಅನಿಮಲ್ ಚಿತ್ರದಲ್ಲಿ ನಟ ರಣಬೀರ್ ಕಪೂರ್ ಜೊತೆ ಈಕೆಯ ನಗ್ನ ದೃಶ್ಯಗಳನ್ನು ನೋಡುತ್ತಿದ್ದಂತೆಯೇ ದಿಢೀರನೆ ಫ್ಯಾನ್ಸ್ ಸಂಖ್ಯೆಯನ್ನೂ ಏರಿಸಿಕೊಂಡಿದ್ದಾರೆ ತಾರೆ.
ಈ ನಟಿಯ ಬೇಡಿಕೆ ಹೆಚ್ಚುತ್ತಲೇ ಸಾಗಿದೆ. ಬೆತ್ತಲಾದ ನಟಿಯ ಜೊತೆ ಡೇಟಿಂಗ್ ಮಾಡಲು ಹಲವರು ಉತ್ಸುಕರಾಗಿದ್ದಾರೆ. ಇದೀಗ ಅನಿಮಲ್ ಚಿತ್ರದಲ್ಲಿ ತೃಪ್ತಿ ಜೊತೆ ನಟಿಸಿದ ನಟ ಸಿದ್ಧಾಂತ್ ಕಾರ್ನಿಕ್ ಅವರೂ ತೃಪ್ತಿ ಡಿಮ್ರಿಯ ಜೊತೆ ಡೇಟಿಂಗ್ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಡೇಟಿಂಗ್ ಮಾಡುವುದು ತಮ್ಮ ಬಹು ದಿನಗಳ ಕನಸು ಎಂದು ಹೇಳಿದ್ದಾರೆ. ಫಿಲ್ಮಿಗ್ಯಾನ್ ಜೊತೆಗಿನ ಇತ್ತೀಚಿನ ಸಂದರ್ಶನದಲ್ಲಿ, ಸಿದ್ಧಾಂತ್, ಬಾಲಿವುಡ್ ನಟಿ ಟ್ರಿಪ್ಟಿ ಡಿಮ್ರಿ ಬಗ್ಗೆ ತಮ್ಮ ಮೆಚ್ಚುಗೆಯನ್ನು ಬಹಿರಂಗಪಡಿಸಿದರು. ಅವರೊಂದಿಗೆ ಡೇಟಿಂಗ್ ಮಾಡುವ ಆಸೆ ವ್ಯಕ್ತಪಡಿಸಿದರು. ಇದೇ ವೇಳೆ, ಈ ಉದ್ದೇಶ ಕೆಟ್ಟದ್ದು ಅಲ್ಲ, ಅಥವಾ ಯಾವುದೇ ರೀತಿಯ ವಿವಾದವನ್ನು ಹುಟ್ಟುಹಾಕಲು ಉದ್ದೇಶಿಸಿಲ್ಲ ಎಂದು ಸ್ಪಷ್ಟಪಡಿಸಿರೋ ಸಿದ್ಧಾಂತ್ ಅವರು, ತೃಪ್ತಿ ಜೊತೆ ಕಾಫಿಗೆ ಹೋಗುವುದಾಗಿ ಹೇಳಿದ್ದಾರೆ. ಒಂದು ವೇಳೆ ನಟಿ ಬಂದರೆ, ತಾವು ಸಂತೋಷದಿಂದ ಬಿಲ್ ಅನ್ನು ಪಾವತಿಸುವುದಾಗಿ ತಿಳಿಸಿದ್ದಾರೆ. ಇದೇ ವೇಳೆ ಮದುವೆಯ ಬಗ್ಗೆ ಕೇಳಿದ ಪ್ರಶ್ನೆಗೆ ಸಿದ್ಧಾಂತ್, ತೃಪ್ತಿ ಹಲವು ಪ್ರತಿಭೆಗಳುಳ್ಳ ನಟಿ. ಆಕೆ ಹೆಚ್ಚು ನುರಿತ ವ್ಯಕ್ತಿ ಎಂದು ಶ್ಲಾಘಿಸುವ ಮೂಲಕ, ತಾವು ಕೂಡ ತುಂಬಾ ಒಳ್ಳೆಯ ವ್ಯಕ್ತಿ. ಒಂದು ವೇಳೆ ಆಕೆ ಒಪ್ಪುವುದಾದರೆ ಮದುವೆಗೂ ಸಿದ್ಧ. ತಮ್ಮಂಥ ಒಳ್ಳೆಯ ವ್ಯಕ್ತಿ ಆಕೆಗೂ ಸಿಗುವುದಿಲ್ಲ ಎಂದಿದ್ದಾರೆ.
ಪ್ರಕಾಶ್ ರಾಜ್@59: ದಕ್ಷಿಣದ ಅತ್ಯಂತ ವಿವಾದಾತ್ಮಕ ನಟ ಎನಿಸಿಕೊಳ್ತಿರುವುದಕ್ಕೆ ಇವೆಲ್ಲಾ ಸಾಕ್ಷಿಯಾದವಾ?
ಅಂದಹಾಗೆ, 29 ವರ್ಷದ ತೃಪ್ತಿ ಈ ಮೊದಲು ಅನುಷ್ಕಾ ಶರ್ಮಾ ಅವರ ಸಹೋದರ ಕರ್ಣೇಶ್ ಜೊತೆ ಸಂಬಂಧದಲ್ಲಿದ್ದರು. ಅದರ ಬಳಿ ಅವರ ನಡುವೆ ಬ್ರೇಕಪ್ ಆಗಿದೆ. ಇದೀಗ ನಟಿ, ಹೋಟೆಲ್ ಉದ್ಯಮಿ ಆಗಿರುವ ಸ್ಯಾಮ್ ಮರ್ಚೆಂಟ್ ಜೊತೆ ಸಂಬಂಧ ಹೊಂದಿದ್ದು, ಇವರಿಬ್ಬರ ಫೋಟೋಗಳು ಇದಾಗಲೇ ವೈರಲ್ ಆಗಿವೆ. ತಮ್ಮ ಸಂಬಂಧವನ್ನು ಇನ್ನೂ ಕನ್ಫರ್ಮ್ ಮಾಡಿಲ್ಲ ನಟಿ. ಆದರೆ ಚಿತ್ರತಾರೆಯರ ಸಂಬಂಧ ಗುಟ್ಟಾಗೇನೂ ಉಳಿಯುವುದಿಲ್ಲವಲ್ಲ. ಅಂದಹಾಗೆ, ಸ್ಯಾಮ್ ಮರ್ಚೆಂಟ್ ಅವರು ಗೋವಾದಲ್ಲಿರುವ ವಾಟರ್ಸ್ ಬೀಚ್ ಲೌಂಜ್ ಮತ್ತು ಗ್ರಿಲ್‌ನ ಸಂಸ್ಥಾಪಕರಾಗಿದ್ದಾರೆ. ಅವರ 249K ಅನುಯಾಯಿಗಳಲ್ಲಿ ದಿಶಾ ಪಟಾನಿ, ತೃಪ್ತಿ ಡಿಮ್ರಿ ಮತ್ತು ಟೈಗರ್ ಶ್ರಾಫ್ ಸೇರಿದ್ದಾರೆ. ಸ್ಯಾಮ್ ಮರ್ಚೆಂಟ್ ಮಾಡೆಲ್ ಆಗಿದ್ದರು. 2002ರಲ್ಲಿ ಗ್ಲಾಡ್ರಾಗ್ಸ್ ಮ್ಯಾನ್‌ಹಂಟ್ ಸ್ಪರ್ಧೆಯಲ್ಲಿ ವಿಜೇತರಾಗಿದ್ದರು. ನಂತರ ಬಿಸಿನೆಸ್‌ನಲ್ಲಿ ತೊಡಗಿಸಿಕೊಂಡರು. ಗೋವಾದಲ್ಲಿ ಬೀಚ್ ಕ್ಲಬ್‌ಗಳು ಮತ್ತು ಹೋಟೆಲ್‌ಗಳನ್ನು ಪ್ರಾರಂಭಿಸಿದರು.
ಅಷ್ಟಕ್ಕೂ ನಟಿ ತೃಪ್ತಿ 2017 ತೆಗೆದ ಫೋಟೋ ಮತ್ತು 2023ರಲ್ಲಿ ತೆಗೆದ ಫೋಟೋವನ್ನು ಜೊತೆ ಸೇರಿಸಿ ಸ್ಯಾಮ್ ಜೊತೆ ಚಿತ್ರ ಶೇರ್ ಮಾಡಿಕೊಂಡಿದ್ದಾರೆ. ಹೀಗೆಯೇ ತೆಳ್ಳಗಿದ್ದರೆ ಚೆನ್ನಾಗಿತ್ತು ಎಂದು ಹೇಳಿಕೊಂಡಿದ್ದಾರೆ. ಇತ್ತೀಚೆಗೆ, ತೃಪ್ತಿ ದಿಮ್ರಿ ಮದುವೆಗೆ ಹಾಜರಾಗಿದ್ದರು ಮತ್ತು ಸಾಮಾಜಿಕ ಮಾಧ್ಯಮದಲ್ಲಿ (Social media) ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದರು.. ಇತ್ತೀಚೆಗೆ, ತೃಪ್ತಿ, ಮದುವೆ ಕಾರ್ಯದಲ್ಲಿ ಕಾಣಿಸಿಕೊಂಡ ಫೋಟೋಗಳನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ಒಂದು ಸ್ಯಾಮ್ ಮರ್ಚೆಂಟ್ ಜೊತೆಗಿನ ಸೆಲ್ಫಿ ಆಗಿತ್ತು. ಇದು ಇವರಿಬ್ಬರೂ ಡೇಟಿಂಗ್ ಮಾಡ್ತಿದ್ದಾರೆ ಅನ್ನೋ ವದಂತಿಗಳನ್ನು ಹುಟ್ಟುಹಾಕಿದೆ.
ಹೋಳಿ ಆಚರಣೆ ವೇಳೆ ಶೆರ್ಲಿನ್ ಚೋಪ್ರಾ ನಂಗಾ ನಾಚ್! ಕಾಮನೇನಾದ್ರೂ ಈಗ ನೋಡಿದ್ರೆ... ಅಂದ ನೆಟ್ಟಿಗರು