
ಹಿಂದೂ ದೇವರನ್ನು ಹೀಯಾಳಿಸುವುದು, ದೇವರನ್ನು ತಮ್ಮಿಚ್ಛೆಯಂತೆ ಬಳಸಿಕೊಳ್ಳುವುದು, ಅವಹೇಳನ ಮಾಡುವುದು, ಫೋಟೋಗಳನ್ನು ತಿರುಚುವುದು... ಹೀಗೆ ಮಾಡುವ ಮೂಲಕ ವಿಕೃತ ಸಂತೋಷವನ್ನು ಅನುಭವಿಸುವ ವರ್ಗವೇ ಇದೆ. ಆಗಾಗ್ಗೆ ಖುದ್ದು ಹಿಂದೂ ಎನಿಸಿಕೊಂಡವರೂ ಇವೆಲ್ಲಾ ಕೃತ್ಯ ಎಸಗಿರುವುದು ಇದಾಗಲೇ ಸಾಕಷ್ಟು ಉದಾಹರಣೆಗಳಿಗೆ. ಹಿಂದೂಗಳು ಸಹಿಷ್ಣುಗಳು, ಏನೇ ಮಾಡಿದರೂ ಅದನ್ನೆಲ್ಲಾ ಸಹಿಸಿಕೊಳ್ಳುತ್ತಾರೆ ಎನ್ನುವ ಕೆಟ್ಟ ಮನೋಧೋರಣೆಯಿಂದಲೂ ಇಂಥ ಕೃತ್ಯಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಅಬ್ಬಬ್ಬಾ ಎಂದರೆ ಆಕ್ರೋಶ ಹೊರಹಾಕಿ ತಣ್ಣಗಾಗುತ್ತಾರೆ, ಇನ್ನೇನೂ ಅವರಿಂದ ಮಾಡಲು ಸಾಧ್ಯವಿಲ್ಲ ಎನ್ನುವುದೇ ಇದಕ್ಕೆ ಕಾರಣ.
ಅದೇನೇ ಇದ್ದರೂ, ಇದೀಗ ಸೆಕ್ಸ್ ಬಾಂಬ್ ಎಂದೇ ಖ್ಯಾತಿ ಪಡೆದಿರುವ ಹಾಲಿವುಡ್ ನಟಿ ಕಿಮ್ ಕಿಮ್ ಕಾರ್ಡಶಿಯಾನ್, ಗಣೇಶನ ವಿಗ್ರಹದ ಜೊತೆ ನಡೆದುಕೊಂಡಿರುವ ರೀತಿಯಿಂದ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಅಷ್ಟಕ್ಕೂ ಈ ನಟಿ, ಮುಕೇಶ್ ಅಂಬಾನಿ ಪುತ್ರ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಕಾರ್ಯಕ್ರಮಕ್ಕೆ ಆಗಮಿಸಿದ್ದರು. ಭಾರದ ವಜ್ರಾಭರಣಗಳನ್ನು ತೊಟ್ಟಿದ್ದ ನಟಿ, ಅತ್ಯಂತ ಅಶ್ಲೀಲ ಎನ್ನುವ ರೀತಿಯಲ್ಲಿ ಡ್ರೆಸ್ ಮಾಡಿಕೊಂಡು ಬಂದಿದ್ದರು. ಅದು ಅವರಿಗೆ ಮಾಮೂಲು. ಇದೇ ಡ್ರೆಸ್‌ನಿಂದ ಮದುವೆ ಮನೆಯ ಅಟ್ರಾಕ್ಷನ್ ಕೂಡ ಆಗಿದ್ದರು.
ವಜ್ರಾಭರಣಗಳ ಭಾರದ ಜೊತೆ ಪ್ಲಾಸ್ಟಿಕ್ ದೇಹ ಹೊತ್ತು ಅಂಬಾನಿ ಮದ್ವೆಗೆ ಓಲಾಡುತ್ತಾ ಬಂದ ನಟಿ ಕಿಮ್!
ಮದುವೆಯ ಬಳಿಕ ಅದೇ ಅರೆಬರೆ ಡ್ರೆಸ್‌ನಲ್ಲಿಯೇ ನಟಿ ಗಣೇಶನ ವಿಗ್ರಹವನ್ನು ತಬ್ಬಿಕೊಂಡು ಫೋಟೋಶೂಟ್ ಮಾಡಿಸಿದ್ದಾರೆ. ಇದು ವೈರಲ್ ಆಗುತ್ತಲೇ ಸಾಕಷ್ಟು ಟ್ರೋಲ್‌ಗೆ ಒಳಗಾಗಿದ್ದರು. ಅಸಭ್ಯ, ಅಶ್ಲೀಲ ಎನ್ನುವ ರೀತಿಯಲ್ಲಿ ಕೊಟ್ಟ ಈ ಪೋಸ್‌ನಿಂದ ನಟಿಯ ವಿರುದ್ಧ ಟೀಕಾಪ್ರಹಾರ ಕೇಳಿಬಂದಿತು. ಒಂದು ಫೋಟೋದಿಂದ ಇಷ್ಟೆಲ್ಲಾ ಹಂಗಾಮ ಸೃಷ್ಟಿಯಾಗುತ್ತದೆ ಎಂದು ಅರಿಯದಿದ್ದ ನಟಿ, ಹೆದರಿ ಕೂಡಲೇ ಆ ಫೋಟೋ ಅನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಿಂದ ಡಿಲೀಟ್ ಮಾಡಿದ್ದಾರೆ. ಆದರೆ ಅದರ ಸ್ಕ್ರೀನ್‌ಷಾಟ್ ಇನ್ನೂ ಹರಿದಾಡುತ್ತಿದೆ.
ಅಷ್ಟಕ್ಕೂ ಈ ನಟಿಯ ಬಗ್ಗೆ ಒಂದು ಮಾತು ಹೇಳಲೇಬೇಕು. ಅಂಗಾಂಗಗಳಿಗೆ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿದ್ದಾರೆ ಈಕೆ. ಯೌವನಾವಸ್ಥೆಗೆ ಕಾಲಿಟ್ಟ ದಿನಗಳಲ್ಲಿ ಅಂಗಾಂಗಗಳು ಬಲಿಯುವ ಸಮಯದಲ್ಲಿ ನಾನು ಎಲ್ಲರಿಗಿಂತ ಉತ್ತಮವಾದ ಬಲಿಷ್ಠವಾದ ದೇಹ ನನ್ನದಾಗಲಿ ಎಂದು ಬಯಸುತ್ತಿದ್ದೆ. ಇದಕ್ಕಾಗಿ ದಿನವೂ ಪ್ರಾರ್ಥಿಸುತ್ತಿದ್ದೆ. ಈಗ ಅದೆಲ್ಲವೂ ನನಗೆ ಸಿಕ್ಕಿದೆ ಎಂದು ಕೆಲ ವರ್ಷಗಳ ಹಿಂದೆ ಹೇಳಿಕೊಂಡಿದ್ದ ನಟಿ, ಪ್ಲಾಸ್ಟಿಕ್ ಸರ್ಜರಿಯ ಮೊರೆ ಹೋಗಿರುವ ಗುಟ್ಟನ್ನು ರಟ್ಟು ಮಾಡಿದ್ದರು. ಈಕೆ ಬಹಳ ಸುದ್ದಿಯಾಗಿದ್ದು, 2007ರಲ್ಲಿ ಪ್ಲೇ ಬಾಯ್ ಮ್ಯಾಗಜೀನ್ ನಲ್ಲಿ ಬೆತ್ತಲೆಯಾಗಿ ಕಾಣಿಸಿಕೊಳ್ಳುವ ಮೂಲಕ. ಅಲ್ಲಿಂದ ಈಕೆಗೆ ಸಕತ್ ಡಿಮಾಂಡ್ ಬಂತು. ಸದ್ಯ ಕಿಮ್ಗೆ ವಯಸ್ಸು 43 ವರ್ಷ. ಸದ್ಯ ಈಕೆ ರೂಪದರ್ಶಿ, ನಟಿ, ನಿರ್ಮಾಪಕಿ ಹಾಗೂ ಮಳಿಗೆ ಓನರ್ ಕೂಡ ಹೌದು. ಈಕೆ ಸ್ತನಗಳನ್ನು ಮಾತ್ರವಲ್ಲದೇ ನಿತಂಬವನ್ನೂ ಪ್ಲಾಸ್ಟಿಕ್ ಸರ್ಜರಿ ಮೂಲಕ ಬದಲಾಯಿಸಿಕೊಂಡವರು! ಈಕೆಯನ್ನೇ ಹೋಲುತ್ತಿದ್ದ ನಟಿಯೊಬ್ಬಳು ತಾನೂ ಕಿಮ್ ರೀತಿ ಆಗಲು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡು ಕೆಲವೇ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪಿದ್ದು ಸಕತ್ ಸದ್ದು ಮಾಡಿತ್ತು.
ಶ್ರೀಮಂತರನ್ನು ಬುಟ್ಟಿಗೆ ಹಾಕಿಕೊಳ್ಳೋದನ್ನ ಕಲಿಸ್ತಾಳೆ ಈ ಲವ್ ಗುರು! ಪ್ರೇಮ ಪಾಠವೇ ಆದಾಯದ ಮೂಲ...
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.