ಅನಿಮಲ್ ನಟ ಮಂಜೋತ್ ಸಿಂಗ್ ಅವರು ಆತ್ಮಹತ್ಯೆಗೆ ಯತ್ನಿಸಿದ ಯುವತಿಯನ್ನು ಸಿನಿಮೀಯ ರೀತಿಯಲ್ಲಿ ಕಾಪಾಡಿದ್ದು ಅದರ ವಿಡಿಯೋ ವೈರಲ್ ಆಗಿದೆ.
ಸದ್ಯ ಅನಿಮಲ್ ಚಿತ್ರದ ಭರಾಟೆ ತಣ್ಣಗಾಗಿದ್ದರೂ, ಕಳೆದ ಕೆಲವು ವಾರಗಳಿಂದ ಇದು ಸೃಷ್ಟಿಸಿದ ಕೋಲಾಹರ ಅಷ್ಟಿಷ್ಟಲ್ಲ. 'ರಣಬೀರ್ ಕಪೂರ್, ಬಾಬಿ ಡಿಯೋಲ್, ರಶ್ಮಿಕಾ ಮಂದಣ್ಣ ಹಾಗೂ ತೃಪ್ತಿ ಡಿಮ್ರಿ ಅಭಿನಯದ ಅನಿಮಲ್ ಚಿತ್ರ ಡಿಸೆಂಬರ್ 1ರಂದು ಬಿಡುಗಡೆಯಾಗಿ ನಾಗಾಲೋಟದಿಂದ ಓಡಿತು, ಈ ಚಿತ್ರದಲ್ಲಿ ಮೃಗೀಯತೆ, ಕ್ರೌರ್ಯ, ರಕ್ತಪಾತ, ಪ್ರೀತಿಪ್ರೇಮ, ಸ್ತ್ರೀದ್ವೇಷ, ಸಂಬಂಧ, ಅನುಬಂಧ ಎಲ್ಲವೂ ಇದೆ. ಈ ಸಿನಿಮಾದಲ್ಲಿ ಹಿಂಸಾಚಾರ ಉತ್ತುಂಗದಲ್ಲಿದೆ. ಇದು ದುಷ್ಟರ ವಿರುದ್ಧದ ಕಾದಾಟವಾಗಿದೆ. ಆದರೂ ಹೆಣ್ಣಿನ ಮೇಲಿನ ದೌರ್ಜನ್ಯಕ್ಕೆ ಎಲ್ಲೆಯೇ ಇಲ್ಲವಾಗಿದೆ ಎನ್ನಲಾಗುತ್ತಿದೆ. ಚಿತ್ರದಲ್ಲಿ ರಣಬೀರ್ ಕಪೂರ್ ಸ್ತ್ರೀದ್ವೇಷದ ಪ್ರತಿರೂಪವಾಗಿ ಕಾಣಿಸುತ್ತಾರೆ. ತನ್ನ ತಂಗಿಗೆ ವೈನ್ ಕುಡಿಯಲು, ವಿಸ್ಕಿ ಕುಡಿಯಲು ಹೇಳುತ್ತಾನೆ ನಾಯಕ. ಸ್ತ್ರೀದ್ವೇಷಿಯಾಗಿಯೂ ಹಲವು ಕಡೆ ನಾಯಕ ಕಾಣಿಸುತ್ತಾನೆ. ಇವೆಲ್ಲ ಆರೋಪ ಮಾಡುತ್ತಲೇ ವೀಕ್ಷಕರು ಈ ಚಿತ್ರವನ್ನು ಭರ್ಜರಿಯಾಗಿ ಯಶಸ್ವಿ ಮಾಡಿದ್ದಾರೆ.
ಈ ಚಿತ್ರದಲ್ಲಿ ಚಿಕ್ಕದೊಂದು ಪಾತ್ರವಿದೆ. ಅದು ರಣಬೀರ್ ಕಪೂರ್ ಅವರ ಸೋದರ ಸಂಬಂಧಿ ಪಾತ್ರ. ಈ ಪಾತ್ರವನ್ನು ಮಾಡಿದವರು ಮಂಜೋತ್ ಸಿಂಗ್. ಈ ಚಿತ್ರದಲ್ಲಿ ಇವರ ಪಾತ್ರ ಅಷ್ಟೊಂದು ಗಣನೆಗೆ ಬರದಿದ್ದರೂ, ಅಸಲಿ ಜೀವನದಲದಲ್ಲಿ ಇವರು ಮಾಡಿರುವ ಸಾಹಸವೊಂದರ ವಿಡಿಯೋ ಸಕತ್ ವೈರಲ್ ಆಗುತ್ತಿದೆ. ಸಿನಿಮೀಯ ರೀತಿಯಲ್ಲಿ ಯುವತಿಯೊಬ್ಬಳನ್ನು ಬಚಾವ್ ಮಾಡಿದ್ದಾರೆ ಇವರು. ಆತ್ಮಹತ್ಯೆಗೆ ಟ್ರೈ ಮಾಡಲು ಕಟ್ಟಡದ ಮೇಲೇರಿದ್ದ ಯುವತಿ ಇನ್ನೇನು ಜಿಗಿಯಬೇಕು ಎನ್ನುವಷ್ಟರಲ್ಲಿ ಆಕೆಯನ್ನು ಬಚಾವ್ ಮಾಡಿದ್ದಾರೆ. ಈ ಮೂಲಕ ಮಂಜೋತ್ ಸಿಂಗ್ ಹೀರೋ ಎನಿಸಿಕೊಳ್ಳುತ್ತಿದ್ದಾರೆ. ಸದ್ಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ವಿಡಿಯೋ ನೋಡಿದ ನೆಟಿಜನ್‌ಗಳು ಮಂಜೋತ್ ಅವರನ್ನು ನಿಜ ಜೀವನದ ಹೀರೋ ಎಂದು ಕರೆಯುತ್ತಿದ್ದಾರೆ.
ಮದ್ವೆ ಯಾಕೆ ಎನ್ನುತ್ತಲೇ ಮಗುವಿನ ಅಪ್ಪನ ಸೀಕ್ರೇಟ್ ರಿವೀಲ್ ಮಾಡಿದ ನಟಿ ಇಲಿಯಾನಾ!
ಅಸಲಿಗೆ ಈ ಘಟನೆ ಸಂಭವಿಸಿದ್ದು 2019ರಲ್ಲಿ ಎನ್ನಲಾಗಿದೆ. ಅದರೆ ಅನಿಮಲ್ ಭರ್ಜರಿ ಯಶಸ್ಸಿನ ಬಳಿಕ ಇದು ಪುನಃ ನೊಯ್ಡಾದ ಶಾರದಾ ವಿಶ್ವವಿದ್ಯಾನಿಲಯದಲ್ಲಿ ಬಿ.ಟೆಕ್ ಮುಗಿಸಿದ ನಂತರ ಮಂಜೋತ್ ಸಿಂಗ್ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿದ್ದರು. 18 ವರ್ಷದ ಯುವತಿಯೊಬ್ಬಳು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾಗಿದ್ದಳು. ವಿಡಿಯೋದಲ್ಲಿ ನೋಡುವಂತೆ, ಹುಡುಗಿಯೊಬ್ಬಳು ಕಟ್ಟಡದಿಂದ ಜಿಗಿಯಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಅಲ್ಲಿ ಹಲವಾರು ಮಂದಿ ನಿಂತಿರುವುದನ್ನೂ ನೋಡಬಹುದು. ಆದರೆ ಎಲ್ಲರೂ ಮೂಕಪ್ರೇಕ್ಷಕರಾಗಿ ನಿಂತಿದ್ದಾರೆ.
ಆದರೆ ಯುವತಿ ಜಿಗಿಯುತ್ತಿದ್ದಂತೆ, ಒಬ್ಬ ವ್ಯಕ್ತಿ ಬಂದು ಅವಳ ಕೈಯನ್ನು ಹಿಡಿದು ಎಳೆದಿರುವುದನ್ನು ವಿಡಿಯೋದಲ್ಲಿ ಸ್ಪಷ್ಟವಾಗಿ ನೋಡಬಹುದು. ಅಸಲಿಗೆ ಈ ವ್ಯಕ್ತಿಯೇ ಅನಿಮಲ್ ಖ್ಯಾತಿಯ ಮಂಜೋತ್ ಸಿಂಗ್. ವಿಡಿಯೋದಲ್ಲಿ ಮಂಜೋತ್ ಮುಖ ಸ್ಪಷ್ಟವಾಗಿ ಕಾಣಿಸುತ್ತಿಲ್ಲವಾದರೂ ನಂತರ ಜೀವ ಉಳಿಸಿದ ಅವರನ್ನು ಎಲ್ಲರೂ ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ಐದು ವರ್ಷಗಳ ಬಳಿಕ ಇದೀಗ ಮತ್ತೆ ವಿಡಿಯೋ ವೈರಲ್ ಆಗಿದ್ದು, ಈಗಲೂ ಜನರು ಅವರನ್ನು ಶ್ಲಾಘಿಸುತ್ತಿದ್ದಾರೆ.
ತಾವೇ ಬೀಸಿದ ಗಾಳಕ್ಕೆ ಬಿದ್ದುಬಿಟ್ಟರಾ ನಟಿ ಜಾಕ್ವೆಲಿನ್? ಸುಕೇಶ್ ಜೊತೆಗಿನ ಚಾಟ್ಗಳು ತನಿಖಾಧಿಕಾರಿಗಳ ಕೈಗೆ!