ನಟ, ರಾಜಕಾರಣ ಪವನ್ ಕಲ್ಯಾಣ್ ಅವರು ಇದೇ ವರ್ಷ ಮೂರನೆಯ ಪತ್ನಿಗೂ ವಿಚ್ಛೇದನ ಕೊಡಲಿದ್ದಾರೆ ಎಂದ ಜ್ಯೋತಿಷಿ ವೇಣುಸ್ವಾಮಿ ಹೇಳಿದ್ದೇನು?
ಟಾಲಿವುಡ್ ಪವರ್ ಸ್ಟಾರ್ ಹಾಗೂ ಜನಸೇನ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್ ರಾಜಕೀಯವಾಗಿಯೂ ಸದ್ದು ಮಾಡುತ್ತಿದ್ದಾರೆ. ಇದಾಗಲೇ ಮೂರು ಮದ್ವೆಯಾಗಿರುವ ಪವನ್ ಕಲ್ಯಾಣ್ ಕುರಿತಾಗಿ ಈಗ ಖ್ಯಾತ ಜ್ಯೋತಿಷಿ ಒಬ್ಬರು ಆಘಾತಕಾಗಿ ಸ್ಟೇಟ್ಮೆಂಟ್ ನೀಡಿದ್ದಾರೆ. ಪವನ್ ಕಲ್ಯಾಣ್ ಅವರು ತಮ್ಮ ವೈಯಕ್ತಿಕ ಜೀವನದ ಬಗ್ಗೆ ಸಾಕಷ್ಟು ಚರ್ಚೆಯಲ್ಲಿ ಇದ್ದೇ ಇರುತ್ತಾರೆ. ಅದರಲ್ಲಿಯೂ ಅವರ ಮದುವೆ ವಿಷಯವಾಗಿ ಟೀಕೆಗಳನ್ನು ಎದುರಿಸುತ್ತಲೇ ಇರುತ್ತಾರೆ. ಬಾಲಿವುಡ್ನಲ್ಲಿ ಜ್ಯೋತಿಷಿ ಪಂಡಿತ್ ಜಗನ್ನಾಥ್ ಗುರೂಜಿ ಇದ್ದಂತೆಯೇ ಟಾಲಿವುಡ್ ನಟ-ನಟಿಯರ ಜೀವನದ ಭವಿಷ್ಯ ನುಡಿಯುವಲ್ಲಿ ಫೇಮಸ್ ಆಗಿರುವವರು ಜ್ಯೋತಿಷಿ ವೇಣುಸ್ವಾಮಿ ಅವರು. ಇದಾಗಲೇ ಹಲವಾರು ಮಂದಿಗೆ ಇರುವ ಭವಿಷ್ಯ ನುಡಿದಿದ್ದು, ಬಹುತೇಕ ಭವಿಷ್ಯ ಸರಿಯಾಗಿಯೇ ಆಗಿದೆ. ಅವರು ಇದೀಗ ಪವನ್ ಕಲ್ಯಾಣ್ ಅವರ ಮೂರನೆಯ ಮದ್ವೆಯ ಕುರಿತು ಮಾತನಾಡಿದ್ದಾರೆ.
ಅಂದಹಾಗೆ, ಪವನ್ ಕಲ್ಯಾಣ್ ಅವರದ್ದು ಈಗ ಮೂರನೆಯ ಮದ್ವೆ. ಪವನ್ ಕಲ್ಯಾಣ್ 1997 ರಲ್ಲಿ ನಂದಿನಿ ಎಂಬುವವರನ್ನು ಮದುವೆಯಾದರು. 2007ರಲ್ಲಿ ಅವರು ವಿಚ್ಛೇದನ ನೀಡಿದ ಅವರು, 2008ರಲ್ಲಿ ರೇಣು ಎಂಬುವವರನ್ನು ವಿವಾಹವಾದರು. ಬದ್ರಿ ಚಿತ್ರದಲ್ಲಿ ಪವನ್ ಅವರೊಂದಿಗೆ ನಾಯಕಿಯಾಗಿ ನಟಿಸಿದ್ದ ನಟಿ ರೇಣು ದೇಸಾಯಿ ಅವರಿಂದ ಇಬ್ಬರು ಮಕ್ಕಳನ್ನು ಪಡೆದರು. ಅದಾದ ನಂತರ ರೇಣು ದೇಸಾಯಿ ಜೊತೆಗಿನ ಸಂಬಂಧ ಮುರಿದುಬಿತ್ತು. ಅವರಿಗೆ ಡಿವೋರ್ಸ್ (Divorce) ಕೊಟ್ಟರು. ಪವನ್ ಜೊತೆ ಬ್ರೇಕ್ ಅಪ್ ಮಾಡಿಕೊಂಡ ರೇಣು ದೇಸಾಯಿ (Renu Desai) ಸದ್ಯ ಪುಣೆಯಲ್ಲಿ ವಾಸವಾಗಿದ್ದು ನಿರ್ಮಾಪಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಆಗಾಗ ಹಲವು ಟಿವಿ ಶೋಗಳಲ್ಲಿ ಅತಿಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ರೇಣು ಅವರಿಗೆ ಡಿವೋರ್ಸ್ ನೀಡಿದ ಬಳಿಕ ಪವನ್ ಕಲ್ಯಾಣ್ ಅವರು ರಷ್ಯಾದ ಹುಡುಗಿ ಅನ್ನಾ ಲೆಜಿನೇವಾರನ್ನು ಮದುವೆಯಾಗಿದ್ದಾರೆ. ಈ ಜೋಡಿಗೆ ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ.
ಮದ್ವೆ ಯಾಕೆ ಎನ್ನುತ್ತಲೇ ಮಗುವಿನ ಅಪ್ಪನ ಸೀಕ್ರೇಟ್ ರಿವೀಲ್ ಮಾಡಿದ ನಟಿ ಇಲಿಯಾನಾ!
ಆದರೆ ಈ ಮದುವೆ ಕೂಡ ಮುರಿದು ಬಿದ್ದು ಅವರು ನಾಲ್ಕನೆಯ ಮದುವೆಯಾಗುತ್ತಾರೆ ಎಂದು ವೇಣುಸ್ವಾಮಿ ಈ ಹಿಂದೆಯೇ ನುಡಿದಿದ್ದರು. ಆದರೆ ಈ ಮದುವೆ ಮುರಿದು ಬೀಳುವುದು ಇದೇ ವರ್ಷ ಎಂದರೆ 2024 ಎಂದು ಇದೀಗ ಮತ್ತೊಮ್ಮೆ ಭವಿಷ್ಯ ನುಡಿದಿದ್ದಾರೆ. ಜೊತೆಗೆ, ಪವನ್ ಕಲ್ಯಾಣ್ ಅವರಿಗೆ ಸಿನಿಮಾಗಳಲ್ಲಿ ಒಳ್ಳೆಯ ಸಮಯವಿದೆ ಆದರೆ ರಾಜಕೀಯದಲ್ಲಿ ಹಾಗಲ್ಲ ಎಂದಿದ್ದಾರೆ. ಪವನ್ ಕಲ್ಯಾಣ್ ಅವರ ರಾಜಕೀಯ ಮತ್ತು ವೈಯಕ್ತಿಕ ಜೀವನದಲ್ಲಿ ಕೆಲವು ಸಮಸ್ಯೆಗಳಿವೆ ಎಂದು ಹೇಳಿರುವ ವೇಣು ಸ್ವಾಮಿ, ತ್ರಿವಿಕ್ರಮ್ ಶ್ರೀನಿವಾಸ್ ಹೊರತುಪಡಿಸಿ ಪವನ್ ಕಲ್ಯಾಣ್ ಯಾರ ಮಾತನ್ನೂ ಕೇಳುವುದಿಲ್ಲ. ರಾಜಕೀಯದಲ್ಲಿ ಯಶಸ್ವಿಯಾಗಲು ಏನು ಮಾಡಬೇಕು ಎಂಬುದರತ್ತ ಗಮನ ಹರಿಸಬೇಕು ಎಂದು ಹೇಳಿದ್ದಾರೆ.
ಅಂದಹಾಗೆ ಈ ಹಿಂದೆ ನಟಿ ರಶ್ಮಿಕಾ ಮಂದಣ್ಣ (Rashmika Mandanna) ಸಹ, ವೇಣುಸ್ವಾಮಿ ಬಳಿ ಪೂಜೆ ಮಾಡಿಸಿಕೊಂಡ ಬಳಿಕವೇ ಸ್ಟಾರ್ ನಟಿಯಾಗಿದ್ದು ಎನ್ನಲಾಗಿದೆ. ರಶ್ಮಿಕಾ ಸ್ಟಾರ್ ಆಗುವ ಬಗ್ಗೆಯೂ ಹೇಳಿದ್ದರಲ್ಲದೆ ಅವರಿಗಾಗಿ ವಿಶೇಷ ಪೂಜೆ ಮಾಡಿದ್ದರು. ಪ್ರಭಾಸ್ರ ಕೆಲ ಸಿನಿಮಾಗಳು ಫ್ಲಾಪ್ ಆಗುತ್ತವೆಂದು ಹೇಳಿದ್ದರು. ಇನ್ನೂ ಕೆಲವು ನಟ-ನಟಿಯರ ಬಗ್ಗೆ ಭವಿಷ್ಯವನ್ನು ವೇಣು ಸ್ವಾಮಿ ಈ ಹಿಂದೆ ಹೇಳಿದ್ದರು. ಇವರು ಹೇಳುವ ಭವಿಷ್ಯ ತುಂಬಾ ಸ್ಪಷ್ಟವಾಗಿರುತ್ತದೆ ಎಂದು ತಿಳಿದದ್ದು, ಸಮಂತಾ-ನಾಗ ಚೈತನ್ಯ (Samantha-Naga Chaitanya) ಬೇರೆಯಾಗುತ್ತಾರೆ ಎಂದು ಹೇಳಿದ್ದಾಗ. ಈ ಬಗ್ಗೆ ವೇಣು ಸ್ವಾಮಿ ಮೂರು ವರ್ಷಗಳ ಹಿಂದೆ ಹೇಳಿದ್ದರು. ಸಂದರ್ಶನವೊಂದರಲ್ಲಿ ವೇಣು ಸ್ವಾಮಿ ಅವರು ಸಮಂತಾ-ನಾಗ ಚೈತನ್ಯ ಮದುವೆಯ ನಂತರ ಭಿನ್ನಾಭಿಪ್ರಾಯಗಳನ್ನು ಹೊಂದಿರುತ್ತಾರೆ ಮತ್ತು ಅವರು ಚಲನಚಿತ್ರಗಳ ವಿಷಯದಲ್ಲಿ ಚೆನ್ನಾಗಿದ್ದರೂ ತಮ್ಮ ವೈಯಕ್ತಿಕ ಜೀವನದಲ್ಲಿ ಸಮಸ್ಯೆಗಳನ್ನು ಎದುರಿಸುತ್ತಾರೆ ಎಂದು ಹೇಳಿದ್ದರು. ಇದು ನಿಜವಾಗಿತ್ತು. ಇವರಿಬ್ಬರು ಬೇರೆಯಾಗಲು ಸಾಧ್ಯವೇ ಇಲ್ಲ, ಅಷ್ಟು ಕ್ಯೂಟ್ ಜೋಡಿ ಎಂದೆಲ್ಲಾ ಹೇಳಿದವರಿಗೆ ಇವರ ಡಿವೋರ್ಸ್ ವಿಷಯ ನಿಜಕ್ಕೂ ಶಾಕಿಂಗ್ ಆಗಿತ್ತು.
ಮುಖದ ಮೇಲೊಂದು ಮಚ್ಚೆ, ಪ್ರೇಮ ಸ್ಥಾನದಲ್ಲಿ ತೂತು... ಬಿಗ್ಬಾಸ್ ನಮ್ರತಾ ಭವಿಷ್ಯ ಹೇಗಿದೆ?