ಪೂಜಾ ಹೆಗ್ಡೆಗೆ ಡಿಸ್ಟರ್ಬ್ ಆಗದಂತೆ ಅನಿಲ್ ಕಪೂರ್ ಕ್ಯೂಟ್ ಗೆಸ್ಚರ್!

Published : Feb 28, 2023, 01:03 PM IST
ಪೂಜಾ ಹೆಗ್ಡೆಗೆ ಡಿಸ್ಟರ್ಬ್ ಆಗದಂತೆ ಅನಿಲ್ ಕಪೂರ್ ಕ್ಯೂಟ್ ಗೆಸ್ಚರ್!

ಸಾರಾಂಶ

ಬಾಲಿವುಡ್ ನಟಿ ಪೂಜಾ ಹೆಗ್ಡೆ ಮತ್ತು ಸ್ಟಾರ್ ನಟ ಅನಿಲ್ ಕಪೂರ್ ನಡುವಿನ ಕ್ಯೂಟ್ ಗೆಸ್ಚರ್ ಒಂದು ಇದೀಗ ಇಂಟರ್‌ನೆಟ್ ಸೆನ್ಸೇಶನ್ ಆಗಿದೆ. ಆ ಗೆಸ್ಚರ್ ಏನು, ಅನಿಲ್ ಕಪೂರ್‌ ಅವರನ್ನು ಜನ ಹಂಬಲ್ ಸ್ಟಾರ್ ಅಂತೇಕೆ ಕರೀತಾರೆ ಅನ್ನೋದೆಲ್ಲ ಇದರಲ್ಲಿ ಗೊತ್ತಾಗುತ್ತೆ.

ಅದೊಂದು ಬಾಂಬೆಯಲ್ಲಿ ನಡೆದ ಅವಾರ್ಡ್ ಫಂಕ್ಷನ್. ಬಾಲಿವುಡ್ ನಟ ನಟಿಯರೆಲ್ಲ ಬರೋ ಕಾರಣ ಪಾಪರಾಜಿಗಳ ದೊಡ್ಡ ಹಿಂಡೇ ಅಲ್ಲಿ ನೆರೆದಿರುತ್ತೆ. ಜೊತೆಗೆ ಬೇರೆ ಬೇರೆ ಮೀಡಿಯಾದವ್ರು ಸೆಲೆಬ್ರಿಟಿಗಳನ್ನು ಸುತ್ತುಪರಿದಿರ್ತಾರೆ. ಇಂಥದ್ದೊಂದು ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿ ಪೂಜಾ ಹೆಗ್ಡೆ ಪಾಪರಾಜಿಗಳು ಮತ್ತು ಮೀಡಿಯಾದವ್ರ ಮುಂದೆ ಬಂದಿದ್ದಾರೆ. ಆಕೆ ಸಿಗೋದೆ ಅಪರೂಪ, ಪದೇ ಪದೇ ಸಿಕ್ಕರೂ ಈ ಚೆಲುವೆ ನೋಡೋದಕ್ಕೆ ಜನ ಕ್ಯೂ ನಿಂತು ಕಾಯ್ತಾರೆ. ಹೀಗಿರುವಾಗ ಕ್ಯೂಟ್ ನಟಿಯನ್ನು ಮಾಧ್ಯಮದವರು ಸುತ್ತುವರಿದು ಮಾತಾಡಿಸ್ತಾ ಇದ್ದಾರೆ. ಅಂಥಾ ಟೈಮಲ್ಲಿ ಆ ಜಾಗಕ್ಕೆ ಬಾಲಿವುಡ್‌ನ ಎವರ್ ಹ್ಯಾಂಡ್‌ಸಮ್ ನಟ ಅನಿಲ್ ಕಪೂರ್ ಆಗಮನವಾಗಿದೆ. ಅಲ್ಲಿ ಅವರು ನಡೆದುಕೊಂಡ ರೀತಿಯೂ ಅಲ್ಲಿದ್ದ ಕ್ಯಾಮರಾಗಳಲ್ಲಿ ಸೆರೆಯಾಗಿದೆ. ಈಗ ಪೂಜಾ ಹೆಗ್ಡೆ ಮಾತಾಡಿದ್ದಕ್ಕಿಂತ ಈ ವೀಡಿಯೋದಲ್ಲಿ ಅನಿಲ್ ಕಪೂರ್ ಗೆಸ್ಚರ್‌ ನ ನೋಡಿ ಖುಷಿ ಪಟ್ಟೋರು ಲೈಕ್ ಮಾಡಿದೋರೆ ಹೆಚ್ಚಾಗಿದ್ದಾರೆ.

ಅನಿಲ್ ಕಪೂರ್ ಮೊದಲಿಂದಲೂ ವಿವಾದಗಳಿಂದ ದೂರ. ತಾನಾಯ್ತು ತನ್ನ ನಟನೆ ಆಯ್ತು, ಫ್ರೆಂಡ್ಲಿ ಬಿಹೇವಿಯರ್ ಆಯ್ತು ಅಂತಿದ್ದವರು. ಕಿರಿಯರಿಗೂ ಅವರು ಆದರ್ಶ. ಹೀಗಿರುವಾಗ ಅವರ ವಿನಯಕ್ಕೆ ಒಂದು ಸಾಕ್ಷಾತ್ ನಿದರ್ಶನ ಅವಾರ್ಡ್ ಫಂಕ್ಷನ್‌ನಲ್ಲಿ ಸಿಕ್ಕಿದೆ. ಈ ವೇಳೆ ಪೂಜಾ ಹೆಗ್ಡೆ ಪಾಪರಾಜಿಗಳ ಜೊತೆ ಮಾತಾಡ್ತಾ ಇದ್ರು. ಆ ಹೊತ್ತಿಗೆ ಅಲ್ಲಿಗೆ ಬಂದ ಅನಿಲ್ ಕಪೂರ್ ಯಾರಿಗೂ ಡಿಸ್ಟರ್ಬ್ ಆಗದಂತೆ ಹಿಂದಿನಿಂದಲೇ ನಾಜೂಕಾಗಿ ಸರಿದು ಆಚೆ ಬದಿ ಹೋಗಿದ್ದಾರೆ. ಮೀಡಿಯಾದವ್ರು ಸ್ಟಾರ್ ನಟನನ್ನು ನೋಡಿ ಕರೆದರೂ, ಮೀಡಿಯಾ ಮುಂದೆ ಮಾತಾಡ್ತಿದ್ದ ಪೂಜಾ ಹೆಗ್ಡೆ ಈ ಕಡೆ ತಿರುಗಿದರೂ ಅನಿಲ್ ಕಪೂರ್ ಏನೂ ಆಗದಂತೆ ಕಿರು ನಗೆ ಬೀರುತ್ತಾ ಅಲ್ಲಿಂದ ಜಾಗ ಖಾಲಿ ಮಾಡಿದ್ದಾರೆ.

ಅದಿತಿ ಜೊತೆ ಸಿದ್ಧಾರ್ಥ್ ಮಸ್ತ್ ಡಾನ್ಸ್; ಲವ್‌ಬರ್ಡ್ಸ್ ಕ್ಯೂಟ್ ವಿಡಿಯೋ ವೈರಲ್

ಅವರು ಮನಸ್ಸು ಮಾಡಿದ್ದರೆ ಪೂಜಾ ಹೆಗ್ಡೆ ಪಕ್ಕದಲ್ಲಿ ನಿಂತು ಮಾತಾಡಬಹುದಿತ್ತು. ಅಟ್‌ಲೀಸ್ಟ್ ಮೀಡಿಯಾದವ್ರ ಕ್ಯಾಮರಗೆ(Camara) ಪೋಸ್ ನೀಡಬಹುದಿತ್ತು. ಆದರೆ ತಾನು ಹಾಗೆ ಮಾಡಿದರೆ ಈಗಷ್ಟೇ ಸಿನಿಮಾ ರಂಗದಲ್ಲಿ ದೃಢವಾಗಿ ನಿಲ್ಲುತ್ತಿರುವ ಯುವ ನಟಿಗೆ ಎಲ್ಲಿ ಸ್ಕೋಪ್(Scope) ಮಿಸ್ ಆಗಿ ಬಿಡುತ್ತೋ ಅನ್ನೋದು ಅನಿಲ್ ಕಪೂರ್ ಕಾಳಜಿ. ಆಕೆಗೆ ತನ್ನಿಂದಾಗಿ ಯಾವ ತೊಂದರೆಯೂ ಆಗಬಾರದು ಅನ್ನೋದು ಅವರ ನಿಲುವು. ಹೀಗಾಗಿ ಅವರು ಹಿಂದಿನಂದ ಮೆಲ್ಲ ಕ್ಯಾಮರ ದೃಷ್ಟಿ ತನ್ನ ಮೇಲೆ ಬೀಳದಂತೆ ದೂರ ಹೋಗಿದ್ದಾರೆ. ಇದನ್ನು ಮೀಡಿಯದಾದವ್ರು(Media) ಗಮನಿಸಿದ್ದಾರೆ. ಪೂಜಾ ಹೆಗ್ಡೆಯೂ ಇವರೆಡೆ ನೋಡಿದ್ದಾರೆ. ಆದರೆ ಅನಿಲ್ ಕಪೂರ್ ಅದಕ್ಕೆ ಸೊಪ್ಪು ಹಾಕದೇ ತಮ್ಮ ಪಾಡಿಗೆ ತಾವು ಹೋಗಿದ್ದಾರೆ.

ಅನಿಲ್ ಕಪೂರ್ ಅವರ ಈ ನಿಲುವಿಗೆ ಈಗ ಸೋಷಿಯಲ್ ಮೀಡಿಯಾದಲ್ಲಿ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಜನ ಇವರನ್ನು ಹಂಬಲ್ ಸ್ಟಾರ್(Humble star) ಅಂತಲೇ ಕರೆಯಲು ಶುರು ಮಾಡಿದ್ದಾರೆ. ಬಾಲಿವುಡ್ ಸೆಲೆಬ್ರಿಟಿಗಳೂ ಅನಿಲ್‌ ಕಪೂರ್ ಅವರ ಈ ಕ್ಯೂಟ್ ಗೆಸ್ಚರ್ ಕಂಡು ಕಣ್ಣು ಮಿಟುಕಿಸಿದ್ದಾರೆ.

ಹಾಗೆ ನೋಡಿದರೆ ಎಲ್ಲೆಲ್ಲೂ ಸೀನಿಯರ್ಸ್ ಜ್ಯೂನಿಯರ್ಸ್ ನ ತುಳಿಯೋಕೆ ಟ್ರೈ ಮಾಡೋದು ಕಾಮನ್. ಆದರೆ ಅನಿಲ್ ಕಪೂರ್ ಹಾಗಲ್ಲ ಅನ್ನೋದು ಈ ವೀಡಿಯೋದಿಂದ ಸಾಬೀತಾಗಿದೆ. 'ಪೂಜಾ ಹೆಗ್ಡೆ ಅವರ ಕ್ಷಣಗಳನ್ನು ತಾನು ಕಸಿಯೋದು ಬೇಡ. ನನ್ನ ಪಾಡಿಗೆ ನಾನಿರ್ತೀನಿ' ಅಂತ ಈ ಮೂಲಕ ಅನಿಲ್ ಕಪೂರ್ ತಿಳಿಸಿಕೊಟ್ಟಿದ್ದಾರೆ ಅಂತ ನೆಟ್ಟಿಗರು ಕಮೆಂಟ್ ಮಾಡ್ತಿದ್ದಾರೆ.

ಆದಿತ್ಯ ರಾಯ್ ಕಪೂರ್ ಜೊತೆ 'ದಿ ನೈಟ್ ಮ್ಯಾನೇಜರ್' ಅನಿಲ್ ಕಪೂರ್ ಅವರ ಕೆಲ ದಿನಗಳ ಹಿಂದೆ ತೆರೆ ಕಂಡ ಸಿನಿಮಾ. ಉಳಿದಂತೆ ಬೆಸ್ಟ್ ಪತಿಯಾಗಿ, ಸೋನಂ ಅವರ ಮುದ್ದಿನ ಅಪ್ಪ, ವಾಯುವಿನ ಅಕ್ಕರೆಯ ತಾತನಾಗಿ ಅನಿಲ್ ಕಪೂರ್ ಸೈ ಅನಿಸಿಕೊಂಡಿದ್ದಾರೆ. ಇದೀಗ ಈ ಗೆಸ್ಚರ್ ಮೂಲಕ ಸೋಷಿಯಲ್ ಮೀಡಿಯಾ ಹೀರೋನೂ ಆಗಿದ್ದಾರೆ.

Anikha Surendran: 'ಬ್ರಾ' ಬಗ್ಗೆ ಪಾಠ ಮಾಡಿದ್ದ ನಟಿಯಿಂದ ಈಗ ಲಿಪ್​ಲಾಕ್​ ಅನುಭವ

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?