
ಮೆಗಾಸ್ಟಾರ್ ಚಿರಂಜೀವಿ ಮನೆಗೆ ಬಿಜೆಪಿ ಸಚಿವರು ದಿಢೀರ್ ಭೇಟಿ ನೀಡಿರುವುದು ಅಚ್ಚರಿ ಮೂಡಿಸಿದೆ. ಚಿರಂಜೀವಿ ಅವರ ಹೈದರಾಬಾದ್ ನಿವಾಸಕ್ಕೆ ಕೇಂದ್ರ ಸಚಿವ ಅನುರಾಗ್ ಠಾಕೂರ್ ಭೇಟಿ ನೀಡಿದ್ದಾರೆ. ಇಬ್ಬರ ಭೇಟಿ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದೆ. ಇದು ಕೇವಲ ಸೊಜನ್ಯದ ಭೇಟಿ ಎಂದು ಬಿಂಬಿಸಲಾಗಿದ್ದರೂ ಸಹ ಹೈದರಾಬಾದ್‌ನ ಚಿರಂಜೀವಿ ನಿವಾಸಕ್ಕೆ ಬಿಜೆಪಿ ಸಚಿವರು ಬಂದಿರುವುದು ಅಸಾಮಾನ್ಯವಾಗಿದೆ ಎಂದು ಅನೇಕರು ಹೇಳುತ್ತಿದ್ದಾರೆ.
ವಿಶೇಷ ಎಂದರೆ ಚಿರಂಜೀವಿ ನಿವಾಸಕ್ಕೆ ಅನುರಾಗ್ ಠಾಕೂರ್ ಜೊತೆ ತೆಲುಗಿನ ಮತ್ತೋರ್ವ ಸ್ಟಾರ್ ನಾಗಾರ್ಜುನ ಕೂಡ ಭೇಟಿ ನೀಡಿದ್ದರು. ಇದು ಭೇಟಿಯ ಬಗ್ಗೆ ಮತ್ತಷ್ಟು ಊಹಾಪೋಹಗಳಿಗೆ ಎಡೆಮಾಡಿ ಕೊಟ್ಟಿದೆ. ಅಂದಹಾಗೆ ಇದು ಕೇವಲ ಸೌಹಾರ್ದಯುತ್ತ ಭೇಟಿ, ಭಾರತೀಯ ಸಿನಿಮಾರಂಗದ ಬಗ್ಗೆ ಮಾತುಕತೆ ನಡೆಸಲಾಗಿದೆ ಎಂದು ನಟ ಚಿರಂಜೀವಿ ಬಹಿರಂಗ ಪಡಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಒಂದಿಷ್ಟು ಪೋಟೋಗಳನ್ನು ಸಹ ಶೇರ್ ಮಾಡಿದ್ದಾರೆ.
'ಹೈದರಾಬಾದ್‌ಗೆ ಭೇಟಿ ನೀಡಿದಾಗ ನಮ್ಮ ನಿವಾಸಕ್ಕೆ ಬರಲು ಸಮಯ ಮೀಸಲಿಟ್ಟಿದ್ದಕ್ಕೆ ಶ್ರೀಅನುರಾಗ್ ಠಾಕೂರ್ ಅವರಿಗೆ ಧನ್ಯವಾದಗಳು. ನನ್ನ ಸಹೋದರ ನಾಗಾರ್ಜುನ ಜೊತೆಗೆ ಭಾರತೀಯ ಚಲನಚಿತ್ರೋದ್ಯಮದ ಬಗ್ಗೆ ನಾವು ನಡೆಸಿದ ಚರ್ಚೆ ಇಷ್ಟವಾಯಿತು' ಎಂದು ಟ್ವೀಟ್ ಮಾಡಿದ್ದಾರೆ. ಚಿರಂಜೀವಿ ಭೇಟಿಯ ಉದ್ದೇಶ ಬಹಿರಂಗ ಪಡಿಸುವ ಮೂಲಕ ಕುತೂಹಲಕ್ಕೆ ತೆರೆ ಎಳೆಯುವ ಪ್ರಯತ್ನ ಮಾಡಿದರೂ ಈ ಭೇಟಿ ರಾಜಕೀಯ ಉದ್ದೇಶವಾಗಿದೆ ಎಂದು ಹೇಳಲಾಗುತ್ತಿದೆ.
Pawan Kalyan: ಪವನ್ ಕಲ್ಯಾಣ್ ನಕ್ಸಲ್ ಆಗ್ತಾನಂತ ಭಯವಿತ್ತು ಎಂದ ಅಣ್ಣ ಚಿರಂಜೀವಿ!
ಇದು ಅಸಮಾನ್ಯ ಭೇಟಿಯಾಗಿದೆ ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಸಿನಿಮಾರಂಗದ ಬಗ್ಗೆ ಚರ್ಚೆ ಮಾಡಲು ಕೇಂದ್ರ ಸಚಿವರೊಬ್ಬರು ಹೈದರಬಾದ್‌ಗೆ ಬರಬೇಕಿತ್ತಾ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಕೆಲವರು ಕಾಮೆಂಟ್ ಮಾಡಿ ಚಿರು ಮತ್ತು ಕೇಂದ್ರ ಸಚಿವರ ಮಾತುಕತೆಯಲ್ಲಿ ನಾಗಾರ್ಜುನ ಯಾಕೆ ಎಂದು ಕೇಳುತ್ತಿದ್ದಾರೆ. ಹಾಗಾದರೆ ಚಿತ್ರರಂಗದ ಉಳಿದ ದಿಗ್ಗಜರು ಎಲ್ಲ? ಈ ಚರ್ಚೆಯ ಅಸಲಿ ವಿಷಯ ಏನು? ಎಂದು ಕೇಳುತ್ತಿದ್ದಾರೆ.
Prabhas To Chiranjeevi: 2022ರಲ್ಲಿ ಫ್ಲಾಪ್ ಆಗಿರುವ ದಕ್ಷಿಣದ ಸೂಪರ್‌ಸ್ಟಾರ್ಸ್
ಇನ್ನು ಕೆಲವರು ಇದರಲ್ಲಿ ರಾಜಕೀಯ ಉದ್ದೇಶವಿದೆ ಎಂದು ಹೇಳುತ್ತಿದ್ದಾರೆ. ರಾಜಕೀಯ ಕಾರಣಕ್ಕೆ ಇಬ್ಬರೂ ಭೇಟಿ ಮಾಡಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿದೆ. ಮೆಗಾಸ್ಟಾರ್ ಮತ್ತೆ ರಾಜಕೀಯಕ್ಕೆ ಬರಲ್ಲ ಎಂದಿು ಸ್ಪಷ್ಟವಾಗಿ ಹೇಳಿದ್ದಾರೆ. ಹಾಗಾಗಿ ಚಿರಂಜೀವಿ ಅವರನ್ನು ಮನ ಒಲಿಸಿ ರಾಜಕೀಯಕ್ಕೆ ವಾಪಾಸ್ ಕರೆತರುವ ಪ್ರಯತ್ನ ನಡೆಸುತ್ತಿದೆ ಎನ್ನಲಾಗುತ್ತಿದೆ. ಪ್ರಚಾರಕ್ಕಾಗಿ ಚಿರಂಜೀವಿ ಅವರನ್ನು ಬಳಸಿಕೊಳ್ಳುವ ಕೇಂದ್ರ ತಂತ್ರ ಎಂದು ಹೇಳಲಾಗುತ್ತಿದೆ. ಪ್ರಚಾರದ ಅಭಿಯಾನದಲ್ಲಿ ಅನೇಕ ಸ್ಟಾರ್ಸ್ ಕೂಡ ಭಾಗಿಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದೇ ಕಾರಣಕ್ಕೆ ಚಿರಂಜೀವಿ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಲಾಯಿತು ಎಂದು ಮೂಲಗಳು ತಿಳಿಸಿವೆ ಎಂದು ಆಂಗ್ಲ ಮಾಧ್ಯಮಗಳು ವರದಿ ಮಾಡಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.