ಅನುಷ್ಕಾ, ಕತ್ರಿನಾ, ದೀಪಿಕಾ ಜೊತೆ ಲಿಫ್ಟ್‌ನಲ್ಲಿ ತಗಲಾಕ್ಕೊಂಡ್ರೆ ಏನ್ ಮಾಡ್ತಾರಂತೆ ರಣ್ವೀರ್ ಸಿಂಗ್?

Published : Feb 28, 2023, 12:27 PM ISTUpdated : Feb 28, 2023, 12:48 PM IST
ಅನುಷ್ಕಾ, ಕತ್ರಿನಾ, ದೀಪಿಕಾ ಜೊತೆ ಲಿಫ್ಟ್‌ನಲ್ಲಿ ತಗಲಾಕ್ಕೊಂಡ್ರೆ  ಏನ್ ಮಾಡ್ತಾರಂತೆ ರಣ್ವೀರ್ ಸಿಂಗ್?

ಸಾರಾಂಶ

ಅನುಷ್ಕಾ, ಕತ್ರಿನಾ, ದೀಪಿಕಾ ಜೊತೆ ಲಿಫ್ಟ್‌ನಲ್ಲಿ ತಗಲಾಕ್ಕೊಂಡ್ರೆ ಏನ್ಮಾಡ್ತೀರಾ? ಕರಣ್ ಜೋಹರ್ ಪ್ರಶ್ನೆಗೆ ರಣ್ವೀರ್ ಉತ್ತರ ಅಭಿಮಾನಿಗಳ ಹೃದಯ ಗೆದ್ದಿದೆ. 

ಬಾಲಿವುಡ್ ಸ್ಟಾರ್ ನಟ, ಬಹುಬೇಡಿಯ ಭಾರತದ ನಟರಲ್ಲಿ ರಣವೀರ್ ಸಿಂಗ್ ಕೂಡ ಒಬ್ಬರು. ಅನೇಕ ಸಿನಿಮಾಗಳು, ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ, ರಂಜಿಸುತ್ತಿದ್ದಾರೆ ರಣ್ವೀರ್ ಸಿಂಗ್. ಹಾಗೆ ಸಾಕಷ್ಟು ಪ್ರತಿಷ್ಠಿತ ಪ್ರಶಸ್ತಿಗಳನ್ನು ಬಾಚಿಕೊಂಡಿದ್ದಾರೆ. ಅತೀ ಹೆಚ್ಚು ಸಂಭಾವನೆ ಪಡೆಯುವ ಸ್ಟಾರ್‌ಗಳಲ್ಲಿ ಒಬ್ಬರಾಗಿರುವ ರಣ್ವೀರ್ ಸಿಂಗ್ 2012ರಿಂದ  ಫೋರ್ಬ್ಸ್ ಇಂಡಿಯಾದ ಸೆಲೆಬ್ರಿಟಿ 100 ಪಟ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಆಗಾಗ ಸುದ್ದಿಯಲ್ಲಿರುವ ರಣ್ವೀರ್ ಸಿಂಗ್ ಚಿತ್ರವಿಚಿತ್ರ ಸ್ಟೈಲ್‌ಗಳ ಮೂಲಕ ಅಭಿಮಾನಿಗಳ ಗಮನ ಸೆಳೆಯುತ್ತಿರುತ್ತಾರೆ. ವಿಚಿತ್ರವಾಗಿ ಬಟ್ಟೆ ಧರಿಸುವ ಮೂಲಕ ರಣ್ವೀರ್ ಸಿಂಗ್ ಸುದ್ದಿಯಲ್ಲಿರುತ್ತಾರೆ. ಆಗಾಗ ವಿವಾದದಲ್ಲೂ ಸಿಲುಕುತ್ತಾರೆ. 

ರಣ್ವೀರ್ ಸಿಂಗ್ ಹಿಂದಿಯ ಜನಪ್ರಿಯ ಶೋ ಕಾಫಿ ವಿತ್ ಕರಣ್ ನಲ್ಲಿ ಭಾಗಿಯಾಗಿದ್ದರು. ಖ್ಯಾತ ನಿರ್ಮಾಪಕ ಕರಣ್ ಜೋಹರ್ ನಡೆಸಿಕೊಡುವ ಈ ಶೋ ಸಾಕಷ್ಟು ಪ್ರಸಿದ್ಧ ಪಡೆದ ಶೋಗಳಲ್ಲಿ ಒಂದಾಗಿದೆ. ಒಂದಿಷ್ಟು ವಿವಾದಗಳ ಮೂಲಕವೇ ಈ ಶೋ ಗಮನ ಸೆಳೆದಿದ್ದು. ಈ ಶೋನಲ್ಲಿ ಅನೇಕ ಸ್ಟಾರ್ಸ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಅದರಲ್ಲೂ ಸೆಕ್ಸ್ ಲೈಫ್ ಬಗ್ಗೆ ಬಹಿರಂಗ ಪಡಿಸಿದ್ದರು. ರಣ್ವೀರ್ ಸಿಂಗ್ ಕೂಡ ಮಾತನಾಡಿದ್ದರು. ಕರಣ್ ಜೋಹರ್, ಒನ್ ನೈಟ್ ಸ್ಟ್ಯಾಂಡ್ ಹೊಂದಿದ್ದೀರಾ ಎಂದು ಪ್ರಶ್ನೆ ಮಾಡಿದರು. ಇದಕ್ಕೆ ಉತ್ತರಿಸಿದ ರಣ್ವೀರ್, 'ಹೌದು.. ಒಂದಕ್ಕಿಂತ್ ಹೆಚ್ಚು ನೈಟ್' ಎಂದು ಹೇಳಿದರು. 

ಬಣ್ಣದ ಲೋಕದ ವಿವಾದಗಳು, ಗಾಸಿಪ್ ಮತ್ತು ಬ್ರೇಕಪ್‌ಗಳೇ ಅಭಿಮಾನಿಗಳ ಕೇಂದ್ರ ಬಿಂದುವಾಗಿದೆ. ಈ ಎಲ್ಲಾ ವಿಚಾರಗಳು ಕಾಫಿ ವಿತ್ ಕರಣ್ ಶೋನಲ್ಲಿ ಬಹಿರಂಗವಾಗುತ್ತದೆ. ಇದೇ ಶೋನಲ್ಲಿ ಕರಣ್, ರಣ್ವೀರ್ ಸಿಂಗ್‌ಗೆ ಕಠಿಣ ಪ್ರಶ್ನೆ ಕೇಳಿ ಇಕ್ಕಟ್ಟಿಗೆ ಸಿಲುಕಿಸಿದರು. 

ಕರಣ್ ಕೇಳಿದ ಪ್ರಶ್ನೆ ಹೀಗಿತ್ತು, 'ನೀವು ಅನುಷ್ಕಾ ಶರ್ಮಾ, ದೀಪಿಕಾ ಪಡುಕೋಣೆ ಮಚ್ಚು ಕತ್ರಿನಾ ಕೈಫ್ ಜೊತೆ ಲಿಫ್ಟ್ ನಲ್ಲಿ ಸಿಲುಕಿಕೊಂಡರೆ ಏನು ಮಾಡುತ್ತೀರಿ? ಎಂದು ಕೇಳಿದರು. ಈ ಪ್ರಶ್ನೆಯಿಂದ ರಣ್ವೀರ್ ಅಕ್ಷರಶಃ ದಿಗ್ಭ್ರಮೆಗೊಂಡರು. ಬಳಿಕ ಉತ್ತರ ನೀಡಿದರು. 'ನಾನು ರಣಬೀರ್ ಕಪೂರ್ ಬಗ್ಗೆ ಗಾಸಿಪ್ ಮಾಡುತ್ತೇನೆ' ಎಂದು ಹೇಳಿದರು. ರಣ್ವೀರ್ ಕೊಟ್ಟ ಉತ್ತರ ಅಭಿಮಾನಿಗಳ ಮೆಚ್ಚುಗೆಗೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗತ್ತು. 

ಅಷ್ಟಕ್ಕೂ ರಣ್ವೀರ್ ಹಾಗೆ ಹೇಳಲು ಕಾರಣ ದೀಪಿಕಾ, ಕತ್ರಿನಾ ಮತ್ತು ಅನುಷ್ಕಾ ಈ ಮೂವರ ಜೊತೆಯೂ ರಣಬೀರ್ ಕಪೂರ್ ಡೇಟ್ ಮಾಡಿದ್ದಾರೆ. ಹಾಗಾಗಿ ರಣ್ವೀರ್ ಸಿಂಗ್ ರಣಬೀರ್ ಹೆಸರು ಹೇಳುವ ಮೂಲಕ ಜಾಣ್ಮೆಯ ಉತ್ತರ ನೀಡಿದರು. 

ಶಾರುಖ್‌ , ದೀಪಿಕಾ, ರಣವೀರ್‌, ಕತ್ರೀನಾ , ರಣಬೀರ್‌ ಪಾರ್ಟಿಯಲ್ಲಿ ಪಾರ್ಫಾಮ್‌ ಮಾಡಲು ಎಷ್ಷು ಜಾರ್ಜ್‌ ಮಾಡ್ತಾರೆ?

2018ರಲ್ಲಿ ದೀಪಿಕಾ ಮತ್ತು ರಣ್ವೀರ್ ಸಿಂಗ್ ಇಬ್ಬರೂ ಇಟಲಿಯಲ್ಲಿ ಮದುವೆಯಾದರು. ಬಳಿಕ ಈ ಸ್ಟಾರ್ ಕಪಲ್ ಮುಂಬೈ ಮತ್ತು ಬೆಂಗಳೂರಿನಲ್ಲಿ ಅದ್ದೂರಿ ಆರತಕ್ಷತೆ ಮಾಡಿಕೊಂಡರು. ಇಬ್ಬರ ಮದುವೆಗೆ ಅನೇಕ ಸ್ಟಾರ್ಸ್ ಭಾಗಿಯಾಗಿದ್ದರು. ಬೇರೆ ಬೇರೆ ಕ್ಷೇತ್ರದ ಗಣ್ಯರು ಭಾಗಿಯಾಗಿ ನವಜೋಡಿಗೆ ಹಾರೈಸಿದ್ದರು. ಇಬ್ಬರೂ ಮದುವೆ ಬಳಿಕವೂ ಸಿಕ್ಕಾಪಟ್ಟೆ ಬ್ಯುಸಿಯಾಗಿದ್ದಾರೆ. ದೀಪಿಕಾ ಇತ್ತೀಚಿಗಷ್ಟೆ ಪಠಾಣ್ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ. ಈ ಸಿನಿಮಾ ದೊಡ್ಡ ಮಟ್ಟದಲ್ಲಿ ಸಕ್ಸಸ್ ಕಂಡಿದೆ. ಶಾರುಖ್ ಕಾನ್ ಜೊತೆ ದೀಪಿಕಾ ಮಿಂಚಿದ್ದರು. ಇದೀಗ ಹೃತಿಕ್ ರೋಷನ್ ಜೊತೆ ಫೈಟರ್ ಮತ್ತು ಪ್ರಭಾಸ್ ಜೊತೆ ಇನ್ನು ಹೆಸರಿಡದ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 

ಸಂಜಯ್ ಲೀಲಾ ಬನ್ಸಾಲಿಯನ್ನು ಮದುವೆಯಾಗಲು ಬಯಸಿದ್ದರಂತೆ ದೀಪಿಕಾ ಪಡುಕೋಣೆ !

ರಣ್ವೀರ್ ಕೂಡ ಅನೇಕ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚಿಗೆ ರಣ್ವೀರ್ ಸಿಂಗ್ ನಟನೆಯ ಯಾವ ಸಿನಿಮಾಗಳು ಸಕ್ಸಸ್ ಕಂಡಿಲ್ಲ. ಸಾಲು ಸಾಲು ಸಿನಿಮಾಗಳಲ್ಲಿ ಸೋಲಿನಲ್ಲಿ ಸಿಲುಕಿದ್ದಾರೆ. 83 ಸಿನಿಮಾ ಬಳಇಕ ಬಂದ ಜಯೇಶಭಾಯಿ ಜೋರ್ದಾರ್, ಸರ್ಕಸ್ ಸಿನಿಮಾಗಳು ಸೋಲು ಕಂಡಿವೆ. ಸದ್ಯ ರಾಕಿ ಔರ್ ರಾಣಿ ಕೀ ಪ್ರೇಮ್ ಕಹಾನಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾದಲ್ಲಿ ಅಲಿಯಾ ಭಟ್ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಕರಣ್ ಜೋಹರ್ ಸಾರಥ್ಯದಲ್ಲಿ ಮೂಡಿಬರುತ್ತಿದೆ. 
    

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ನಾನೇನು ಸಾಧುವಲ್ಲ.. ಹೀಗೆ ಮಾತಾಡೋಕೆ ನನಗೂ ಬರುತ್ತೆ: ಪುಷ್ಪ ನಟಿ ಹೇಳಿದ್ದೇನು?
ವೃತ್ತಿಜೀವನದಲ್ಲಿ 2 ಬಾರಿ ದೊಡ್ಡ ತಪ್ಪು ಮಾಡಿದ ರಾಮ್ ಚರಣ್.. ಚಿರಂಜೀವಿಯೂ ಏನೂ ಮಾಡಲಾಗಲಿಲ್ಲವೇ?