
ಬ್ಲಾಕ್ಬಸ್ಟರ್ ಎಂದು ಸಾಬೀತಾಗಿರೋ ಪಠಾಣ್ (Pathaan) ಚಿತ್ರಕ್ಕೇ ಪೈಪೋಟಿ ಒಡ್ಡುವಂತೆ ಜವಾನ್ ಚಿತ್ರ ಹುಟ್ಟಿಸಿರೋ ನಿರೀಕ್ಷೆ ಸುಳ್ಳಾಗಲಿಲ್ಲ. ಈ ಚಿತ್ರವನ್ನು ಭಾರಿ ಯಶಸ್ವಿಗೊಳಿಸಲು ವಿದೇಶಗಳಲ್ಲಿಯೂ ಬಹಳ ತಯಾರಿ ನಡೆಸಲಾಗಿತ್ತು, ವಿಭಿನ್ನ ರೀತಿಯಲ್ಲಿ ಪ್ರಚಾರವನ್ನೂ ಮಾಡಲಾಗಿತ್ತು. ಚಿತ್ರದ ಪ್ರಮೋಷನ್ಗೇ ಕೋಟಿ ಕೋಟಿ ಹಣ ಸುರಿಯಲಾಗಿತ್ತು. ಎಂಟು ವಿಭಿನ್ನ ಶೇಡ್ಗಳಲ್ಲಿ ಕಾಣಿಸಿಕೊಳ್ಳಲಿರುವ ಶಾರುಖ್ ಅವರನ್ನು ನೋಡಲು ಜನ ಬಹಳ ಕಾತರದಿಂದ ಕಾಯುತ್ತಿದ್ದರು. ಕೊನೆಗೂ ಜವಾನ್ ಸಕ್ಸಸ್ ಆಗಿದೆ. ಪಠಾಣ್ ಸೇರಿದಂತೆ ಹಲವು ಚಿತ್ರಗಳ ದಾಖಲೆಗಳನ್ನು ಮೀರಿ ಜವಾನ್ ಮುನ್ನುಗ್ಗುತ್ತಿದೆ. ಚಿತ್ರ ಬಿಡುಗಡೆ ಮೊದಲ ದಿನವೇ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡಿರೋ ಜವಾನ್ ಹೊಸ ದಾಖಲೆಯನ್ನು ಸೃಷ್ಟಿಸಿದೆ.
ಜಗತ್ತಿನಾದ್ಯಂತೆ 600 ಕೋಟಿ ರೂಪಾಯಿ ಹಾಗೂ ಭಾರತದಲ್ಲಿ 400 ಕೋಟಿ ರೂಪಾಯಿಗಳನ್ನು ಜವಾನ್ ಗಳಿಸಿದೆ. ಪೈರಸಿ ಕಾಟ ಜವಾನ್ (Jawan) ಅನ್ನೂ ಬಿಟ್ಟಿಲ್ಲ. ಉಚಿತ ಡೌನ್‌ಲೋಡ್ (Free Download) ಮತ್ತು ವೀಕ್ಷಣೆಗಾಗಿ ಪೂರ್ಣ ಎಚ್‌ಡಿ ಆವೃತ್ತಿಯಲ್ಲಿ ಜವಾನ್ ಆನ್‌ಲೈನ್‌ನಲ್ಲಿ ಸೋರಿಕೆಯಾಗಿಬಿಟ್ಟಿದೆ. ತಮಿಳುರಾಕರ್ಸ್, ಟೆಲಿಗ್ರಾಮ್, ಫಿಲ್ಮಿಜಿಲ್ಲಾ ಮತ್ತು ಇತರ ಪೈರಸಿ ಸೈಟ್‌ಗಳಲ್ಲಿ ಜವಾನ್ ಸೋರಿಕೆಯಾಗಿದೆ. ಇದರಿಂದಾಗಿ ಮುಂಬರುವ ದಿನಗಳಲ್ಲಿ ಬಾಕ್ಸ್ ಆಫೀಸ್ ಸಂಖ್ಯೆಗಳು ಹಿಟ್ ಆಗಬಹುದು ಎಂದೇ ಊಹಿಸಲಾಗುತ್ತಿತ್ತು. ಇದರ ನಡುವೆಯೇ ಜವಾನ್ ದಾಖಲೆ ಬರೆದಿದೆ.
ಶಾರುಖ್ಗೆ ತಿಮ್ಮಪ್ಪನ ಕೃಪಾಕಟಾಕ್ಷ: ಮೊದಲ ದಿನವೇ ಇತಿಹಾಸ ಸೃಷ್ಟಿಸಿದ ಜವಾನ್!
ಆದರೆ ಇದರ ನಡುವೆಯೇ ಒಂದು ಎಡವಟ್ಟು ಆಗಿ ಹೋಗಿದೆ. ಬ್ರಿಟನ್ನಲ್ಲಿ ಜವಾನ್ ವೀಕ್ಷಿಸಿ ಹೊರಬಂದ ಜನರು ಆಕ್ರೋಶ ಹೊರಹಾಕಿದ್ದು, ಟಿಕೆಟ್ ವಾಪಸ್ ನೀಡುವಂತೆ ಭಾರಿ ಪ್ರತಿಭಟನೆಯನ್ನೇ ನಡೆಸಿದ್ದಾರೆ. ಹೌದು! ಅಷ್ಟಕ್ಕೂ ಶಾರುಖ್ ಅಭಿಮಾನಿಗಳಿಗೆ ಆಗಿದ್ದೇನು ಎನ್ನುವುದೇ ಕುತೂಹಲ. ಇದರ ವಿಡಿಯೋ ಒಂದನ್ನು ಸಹಾರ್ ರಶೀದ್ ಎಂಬುವವರನ್ನು ಸೇರ್ ಮಾಡಿಕೊಂಡಿದ್ದಾರೆ.
ಅಷ್ಟಕ್ಕೂ ಆಗಿದ್ದೇನೆಂದರೆ, ಜವಾನ್ ಚಿತ್ರ ನೋಡಲು ಕಾತರದಿಂದ, ಅಭಿಮಾನದಿಂದ ಬಂದಿದ್ದ ಬ್ರಿಟನ್ನ ಶಾರುಖ್ ಪ್ರೇಮಿಗಳಿಗೆ ಚಿತ್ರ ನೋಡಿದಾಗ ದೊಡ್ಡ ಆಘಾತವೇ ಆಗಿ ಹೋಗಿದೆ. ಅದೇನೆಂದರೆ, ಸಿನಿಮಾ ಆರಂಭವಾಗುತ್ತಿದ್ದಂತೆ ತಪ್ಪಾಗಿ ಜವಾನ್‌ನ ದ್ವಿತೀಯಾರ್ಧವನ್ನು ಮೊದಲು ಪ್ಲೇ ಮಾಡಲಾಗಿದೆ. ಒಂದು ಗಂಟೆಯೊಳಗೆ ಸಿನಿಮಾ ಮುಗಿಸಿದ ಮೇಲೆ ಮಧ್ಯಂತರ ಎಂದು ತೋರಿಸಲಾಗಿದೆ. ಆಗಲೇ ಅಲ್ಲಿದ್ದವರಿಗೆ ಸಿನಿಮಾ ಅರ್ಧ ಹಾಕಿದ್ದಾರೆ ಎಂಬುದು ತಿಳಿದಿದೆ. ಇದರಿಂದ ಜನ ರೊಚ್ಚಿಗೆದ್ದಿದ್ದಾರೆ. ಚಿತ್ರಮಂದಿರದ ಮಾಲೀಕರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ ತಮ್ಮ ಹಣವನ್ನು ವಾಪಸ್ ನೀಡುವಂತೆ ಪಟ್ಟು ಹಿಡಿದಿದ್ದಾರೆ.
ಶಾರುಖ್ಗೆ ಚಾಟಿ ಬೀಸಿದ್ದ ಎನ್ಸಿಬಿ ಅಧಿಕಾರಿ ವಾಂಖೆಡೆಗೆ ಜಯ! ಜವಾನ್ ರಿಲೀಸ್ ಬೆನ್ನಲ್ಲೇ ಕ್ಲೀನ್ ಚಿಟ್
ಅಭಿಮಾನಿಗಳ ಕನಸನ್ನು ಹಾಳು ಮಾಡಲಾಗಿದೆ. ನಮಗೆ ಬಹು ದೊಡ್ಡ ಅನ್ಯಾಯವಾಗಿದೆ ಎಂದು ಪ್ರತಿಭಟನಾಕಾರರು ಕೂಗಿದ್ದು, ಕೇವಲ ಒಂದು ಟಿಕೆಟ್ ಅನ್ನು ಮಾತ್ರವಲ್ಲದೇ ಇಡೀ ವರ್ಷಗಳ ಟಿಕೆಟ್‌ಗಳನ್ನು ಉಚಿತವಾಗಿ ನೀಡಬೇಕು ಎಂದು ಘೋಷಣೆ ಕೂತಿದ್ದಾರೆ. ಶಾರುಖ್ ಖಾನ್ ಅವರನ್ನು ಟ್ಯಾಗ್ ಮಾಡಿ, ನಿಮ್ಮ ಅಭಿಮಾನಿಗಳಿಗೆ ಏನಾಯಿತು ಎಂಬುದನ್ನು ನೀವು ನೋಡಿ ಎಂದಿದ್ದಾರೆ. ಈ ಪರಿ ಆಕ್ರೋಶದಿಂದ ಭಯಗೊಂಡ ಚಿತ್ರಮಂದಿರದ ಮುಖ್ಯಸ್ಥರು ಟಿಕೆಟ್‌ಗಳ ಹಣವನ್ನು ಮರುಪಾವತಿ ಕೂಡ ಮಾಡಿದೆ ಮತ್ತು ಶಾರುಖ್ ಖಾನ್ ಅಭಿನಯದ ಜವಾನ್ ಮತ್ತೊಂದು ಪ್ರದರ್ಶನಕ್ಕಾಗಿ ಅವರಿಗೆ ಉಚಿತ ಟಿಕೆಟ್‌ಗಳನ್ನು ಒದಗಿಸಿದೆ!
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.