Natu Natu ಪ್ರಶಸ್ತಿಗೆ ಅರ್ಹನಾ? ಇದೇನ್​ ಹುಚ್ಚಾಟ ಎಂದ ರಾಷ್ಟ್ರಪ್ರಶಸ್ತಿ ವಿಜೇತ ನಟಿ

By Suvarna NewsFirst Published Mar 15, 2023, 5:00 PM IST
Highlights

'ನಾಟು ನಾಟು' ಹಾಡು ಆಸ್ಕರ್​ ಅವಾರ್ಡ್​ ಬಂದಿರುವುದನ್ನು ನಟಿ ಅನನ್ಯಾ ಚಟರ್ಜಿ ಟೀಕಿಸಿದ್ದಾರೆ. ಅವರು ಹೇಳಿರುವುದೇನು? 
 

 ಎಸ್‌.ಎಸ್ ರಾಜಮೌಳಿ ಅವರ 'ಆರ್‌ಆರ್‌ಆರ್' ಚಿತ್ರದ 'ನಾಟು ನಾಟು' ಹಾಡು ಅತ್ಯುತ್ತಮ ಮೂಲ ಗೀತೆ ವಿಭಾಗದಲ್ಲಿ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದು, ಇಡೀ ದೇಶವೇ ಹೆಮ್ಮೆ ಪಡುತ್ತಿದೆ.  ಪ್ರತಿಯೊಬ್ಬ ಭಾರತೀಯ ಈ ಸಾಧನೆಯ ಬಗ್ಗೆ ಹೆಮ್ಮೆ ವ್ಯಕ್ತಪಡಿಸುತ್ತಿದ್ದರೆ, ಕೆಲವರು ಮಾತ್ರ ಈ ಪ್ರಶಸ್ತಿಯ ಕುರಿತಂತೆ ಇದಾಗಲೇ ಕ್ಯಾತೆ ತೆಗೆದಿದ್ದಾರೆ. ಈ ಹಿಂದೆ  ತೆಲುಗು ಹಿರಿಯ ನಿರ್ದೇಶಕ  ತಮ್ಮಾರೆಡ್ಡಿ ಭಾರದ್ವಾಜ್ (Tammareddy Bharadwaj) ಕೂಡ ನಾಟು ನಾಟುವಿನ ಕುರಿತಾಗಿ ಭಯಾನಕ ಹೇಳಿಕೆಯೊಂದನ್ನು ನೀಡಿದ್ದರು. ಆಸ್ಕರ್ ಪ್ರಶಸ್ತಿಯನ್ನು ಪಡೆಯಲೆಂದು ಆರ್.ಆರ್.ಆರ್ ಚಿತ್ರದ ನಿರ್ದೇಶಕ ರಾಜಮೌಳಿ (Rajamouli) 80 ಕೋಟಿ ಖರ್ಚು ಮಾಡಿದ್ದಾರೆ ಎಂದು ಆರೋಪಿಸಿದ್ದರು.  'RRR' ತಂಡ ಆಸ್ಕರ್ ಪ್ರಶಸ್ತಿ ಗೆಲ್ಲಲು ಭರ್ಜರಿಯಾಗಿ ಪ್ರಚಾರ ಮಾಡುತ್ತಿದೆ. ಅಮೆರಿಕದಲ್ಲಿ ಸಿಕ್ಕಾ ಹಣವನ್ನು ಸುರಿಯುತ್ತಿದೆ, ಈ ಮೊತ್ತದಲ್ಲಿ ನಾನು  8 10 ಸಿನಿಮಾಗಳನ್ನು ತಯಾರಿಸುತ್ತಿದ್ದೆ ಎಂದಿದ್ದರು. ‘ನಾನು ಆರೋಪ ಮಾಡುತ್ತಿಲ್ಲ. ನನಗೆ ಗೊತ್ತಿರುವವರೇ ಹೇಳಿರುವಂತೆ ಆಸ್ಕರ್ ಪ್ರಶಸ್ತಿಗಾಗಿ ರಾಜಮೌಳಿ ಮತ್ತು ತಂಡ ನೀರಿನಂತೆ ಹಣ ಖರ್ಚು ಮಾಡಿದ್ದಾರೆ. ಎಂಬತ್ತು ಕೋಟಿ ಖರ್ಚಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಲಿ ಸಿನಿಮಾ ಬಿಡುಗಡೆ, ಪ್ರಚಾರ, ತಂಡದ ಖರ್ಚು ಮತ್ತು ಆಸ್ಕರ್ ಪ್ರಶಸ್ತಿಗಾಗಿ ಮಾಡಬೇಕಾದ ಖರ್ಚು ಹೀಗೆ ಕೋಟಿ ಕೋಟಿ ಸುರಿದಿದ್ದಾರೆ. ಇಷ್ಟು ಹಣ ಖರ್ಚು ಮಾಡಿ ಪ್ರಶಸ್ತಿ ಪಡೆಯಬೇಕಾ?’ ಎಂದು ಅವರು ತಮ್ಮಾರೆಡ್ಡಿ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದರು.

ಇದಾದ ಬಳಿಕ ನಿನ್ನೆಯಷ್ಟೇ  ತಮ್ಮಾರೆಡ್ಡಿ ಅವರ ಧಾಟಿಯಲ್ಲಿಯೇ, ಜಾಕ್ವೆಲಿನ್ ಫರ್ನಾಂಡೀಸ್ (Jacqueline Fernandez) ಅವರ ಮೇಕಪ್ ಕಲಾವಿದ ಶಾನ್ ಮುತ್ತತ್ತಿಲ್ (Shan Muttattil) ಅವರು ಟೀಕಿಸಿದ್ದರು. ಈ ಕುರಿತು ಅವರು  ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ  ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಅದರಲ್ಲಿ ಅವರು ಪ್ರಶಸ್ತಿಯನ್ನು ಟೀಕಿಸಿದ್ದಾರೆ.  ಆರ್‌ಆರ್‌ಆರ್ ತಯಾರಕರನ್ನು ಗೇಲಿ ಮಾಡುತ್ತಾ ಕಮೆಂಟ್ ಮಾಡಿದ್ದಾರೆ. ಅವರ ಗಂಭೀರ ಆರೋಪ ಏನೆಂದರೆ ಹಾಡಿನ ಪ್ರಶಸ್ತಿಯನ್ನು ತಯಾರಕರು ಖರೀದಿಸಿದ್ದಾರೆ ಎನ್ನುವುದು. ಅವರು ತಮ್ಮ ಪೋಸ್ಟ್​ನಲ್ಲಿ,  ಹಹಹಹಾ, ಇದು ತುಂಬಾ ತಮಾಷೆಯಾಗಿದೆ. ಭಾರತದಲ್ಲಿ ಮಾತ್ರ ಪ್ರಶಸ್ತಿಗಳನ್ನು ಖರೀದಿಸಬಹುದು ಎಂದು ನಾನು ಭಾವಿಸಿದೆ. ಆದರೆ ಈಗ ಆಸ್ಕರ್‌ನಲ್ಲಿ (Oscar) ಕೂಡ. ನಮ್ಮಲ್ಲಿ ಹಣವಿದ್ದರೆ ಏನನ್ನಾದರೂ  ಖರೀದಿಬಹುದು ಎಂದಹಾಗಾಯ್ತು, ಕೊನೆಗೆ  ಸಾಧ್ಯವಿಲ್ಲ ಎಂದುಕೊಂಡಿದ್ದ ಆಸ್ಕರ್ ಕೂಡ' ಎಂದು ಬರೆದಿದ್ದಾರೆ. 

Latest Videos

ನಾಟು ನಾಟುಗೆ ಆಸ್ಕರ್​: ಶಾಕಿಂಗ್​ ಹೇಳಿಕೆ ಕೊಟ್ಟ ಜಾಕ್ವಲಿನ್​ Makeup Artist
 
ಇದೀಗ  ರಾಷ್ಟ್ರೀಯ ಪ್ರಶಸ್ತಿ ಗೆದ್ದ ಬಂಗಾಳಿ ನಟಿ ಅನನ್ಯಾ ಚಟರ್ಜಿ (Ananya Chatterjee) ಅವರು ಪ್ರಶಸ್ತಿಯನ್ನು ಪ್ರಶ್ನಿಸಿದ್ದಾರೆ. ನೀವೆಲ್ಲಾ ಅದೇನು ಖುಷಿಪಡುತ್ತಿದ್ದೀರೋ ಅರ್ಥವಾಗುತ್ತಿಲ್ಲ. ಇದಕ್ಕೆ ಪ್ರಶಸ್ತಿ ಬಂದಿದ್ದು ಹೇಗೆ ಎಂದೂ  ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದಿರುವ ನಟಿ 'ನಾಟು ನಾಟು' ಐತಿಹಾಸಿಕ ಸಾಧನೆ ಎನ್ನಬೇಕೆ? ಇದರ ಬಗ್ಗೆ ನಾವು ಹೆಮ್ಮೆಪಡಬೇಕೇ? ನಾವು ಎಲ್ಲಿಗೆ ಹೋಗುತ್ತಿದ್ದೇವೆ? ಎಲ್ಲರೂ ಯಾಕೆ ಮೌನವಾಗಿದ್ದಾರೆ? ಇದೇನು ಹುಚ್ಚಾಟ? ಈ ಹಾಡಿಗೆ ಏನು ಅರ್ಹತೆ ಇದೆ? ಈ ಹಾಡು ನಮ್ಮ ಪ್ರದರ್ಶನಗಳ ಪಟ್ಟಿಯಲ್ಲಿ ಅತ್ಯುತ್ತಮವಾಗಿದೆಯೇ ಎಂದು ಪ್ರಶ್ನಿಸಿದ್ದಾರೆ. 

ಅನನ್ಯಾ ಚಟರ್ಜಿಯ ಈ ಟ್ವೀಟ್‌ನಿಂದ ಸಿಟ್ಟಿಗೆದ್ದ ಜನರು ಆಕೆಗೆ ಕ್ಲಾಸ್ (Class) ತೆಗೆದುಕೊಳ್ಳುತ್ತಿದ್ದಾರೆ.  ಟೀಕಿಸುವುದನ್ನು ನಿಲ್ಲಿಸಿ ಮತ್ತು ಉತ್ತಮ ಚಲನಚಿತ್ರಗಳನ್ನು ಮಾಡಿ. ನಿಮ್ಮ ಉದ್ಯಮದ 65% ಕ್ಕಿಂತ ಹೆಚ್ಚು ಜನರು ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಆ ಪೈಕಿ ಶೇ.25ರಷ್ಟು ಮಂದಿ ಅಕ್ರಮ ಹಣ ವರ್ಗಾವಣೆ ಮತ್ತು ಇತರ ಆರೋಪಗಳನ್ನು ಎದುರಿಸುತ್ತಿದ್ದಾರೆ. ಒಂದು ಹಾಡು ಅಥವಾ ಆಕ್ಟ್ ಅನ್ನು ಟೀಕಿಸುವ ಮೊದಲು, ಜಾಗತಿಕ ಯಶಸ್ಸನ್ನು ಸಾಧಿಸಿದ ಯಾರೊಬ್ಬರ ಕೆಲಸವನ್ನು ನೋಡಿ ಎಂದು ಹಲವರು ಆಕ್ರೋಶ ಹೊರಹಾಕಿದ್ದಾರೆ.   'ನಿಮ್ಮ ಅಸೂಯೆ ಮತ್ತು ಪ್ರಚಾರ ಪಡೆಯುವ ವಿಧಾನವನ್ನು ನಾನು ಅರ್ಥಮಾಡಿಕೊಳ್ಳಬಲ್ಲೆ. ಈ ಕಾಮೆಂಟ್‌ಗೆ ಮೊದಲು ನೀವು ಯಾರೆಂದು ನನಗೆ ತಿಳಿದಿರಲಿಲ್ಲ ಮತ್ತು ತಿಳಿಯಲು ಬಯಸುವುದಿಲ್ಲ. ನೀವು ಏನು ಮಾಡುತ್ತೀರಿ ಎಂಬುದರ ಮೇಲೆ ಕೇಂದ್ರೀಕರಿಸುವುದು ಉತ್ತಮ' ಎಂದು ಇನ್ನೋರ್ವ ಬಳಕೆದಾರ ಕಿಡಿ (Angry) ಕಾರಿದ್ದಾರೆ. 

RRR: ಹೀಗೆಲ್ಲಾ ಮಾಡಿ ಇವ್ರಿಗೆ ಆಸ್ಕರ್​ ಬೇಕಾ ಎಂದ ಖ್ಯಾತ ನಿರ್ದೇಶಕ!

click me!