ಅಮಿತಾಬ್ ಬಚ್ಚನ್ ಮಗಳು ಶ್ವೇತಾಗೆ ಈ ಚರ್ಮ ಸಮಸ್ಯೆ ಇದೆಯಂತೆ! ಏನದು?

By Suvarna News  |  First Published Feb 28, 2024, 4:46 PM IST

ರೋಗ, ಅಲರ್ಜಿ, ಸಮಸ್ಯೆಗಳು ಎಲ್ಲರನ್ನೂ ಕಾಡುತ್ತವೆ. ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅವರನ್ನೂ ಬಿಟ್ಟಿಲ್ಲ. ಅವರ ಮಗಳು ಹಾಗೂ ಮೊಮ್ಮಗನಿಗೆ ಕೂಡ ಒಂದು ಖಾಯಿಲೆ ಇದೆ. ಅದೇನು ಅನ್ನೋದನ್ನು ಶ್ವೇತಾ ನಂದ ಮಗ ಹೇಳಿದ್ದಾರೆ. 
 


ಚರ್ಮ ನಮ್ಮ ದೇಹಕ್ಕೆ ರಕ್ಷಾಕವಚದಂತೆ ಕೆಲಸಮಾಡುತ್ತದೆ. ಹಾಗಾಗಿ ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯ. ಕಲುಷಿತ ವಾತಾವರಣ, ರಾಸಾಯನಿಕ ಮಿಶ್ರಿತ ಸೌಂದರ್ಯ ವರ್ಧಕಗಳ ಬಳಕೆ ಹಾಗೂ ಆಹಾರಕ್ರಮದಿಂದ ಚರ್ಮ ಹಾನಿಗೊಳಗಾಗುತ್ತದೆ. ಇದರಿಂದಲೇ ಅನೇಕ ರೀತಿಯ ಚರ್ಮದ ತೊಂದರೆಗಳೂ ಉಂಟಾಗುತ್ತವೆ. ಕೆಲವೊಮ್ಮೆ ದೇಹದ ಒಳಗೆ ಕೆಲವು ಬದಲಾವಣೆಗಳು ಆದಾಗ ಅದು ಚರ್ಮದಲ್ಲಿ ಕಾಣಿಸಿಕೊಳ್ಳುತ್ತದೆ ಹಾಗೂ ಚರ್ಮದ ಮೇಲೆ ಗುಳ್ಳೆ, ಕೆರೆತ ಉಂಟಾಗುವುದು ಯಾವುದೋ ಖಾಯಿಲೆಯ ಮುನ್ಸೂಚನೆಯೂ ಆಗಿರಬಹುದು. 

ಕೆಲವರಿಗೆ ಇದು ಅನುವಂಶಿಯವಾಗಿಯೂ ಬರಬಹುದು. ಇನ್ಕೆಲವರಿಗೆ ಅಲರ್ಜಿ (Allergy )ಅಥವಾ ಯಾವುದಾದರೂ ಖಾಯಿಲೆಯಿಂದ ಚರ್ಮ (Skin) ಮೇಲೆ ದದ್ದುಗಳು, ತುರಿಕೆ ಮುಂತಾದವು ಕಾಣಿಸಿಕೊಳ್ಳಬಹುದು. ಕೆಲವು ಚರ್ಮದ ಖಾಯಿಲೆ (disease)ಗಳು ಒಬ್ಬರಿಂದ ಇನ್ನೊಬ್ಬರಿಗೆ ಹರಡುವ ಸಾಧ್ಯತೆಯೂ ಇರುತ್ತದೆ. ಇದರಿಂದ ಅನೇಕ ಬಾರಿ ಇತರ ಜನರೆದುರು ಮುಜುಗರಕ್ಕೆ ಒಳಗಾಗುವ ಅಥವಾ ಕೀಳರಿಮೆ ಅನುಭವಿಸಬೇಕಾಗುತ್ತದೆ. ಖ್ಯಾತ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಮಗಳು ಶ್ವೇತಾ ಬಚ್ಚನ್ ಹಾಗೂ ಮೊಮ್ಮಗ ಅಗಸ್ತ್ಯ ನಂದಾ ಇವರಿಗೂ ಕೂಡ ಚರ್ಮದ ಖಾಯಿಲೆ ಇದೆ. ತಮಗೆ ಚರ್ಮದ ಖಾಯಿಲೆಯಿರುವ ಕುರಿತು ಸ್ವತಃ ಶ್ವೇತಾ ನಂದಾ ಅವರ ಮಗ ಅಗಸ್ತ್ಯ ನಂದಾ ಅವರೇ ಹೇಳಿಕೊಂಡಿದ್ದಾರೆ. ನನ್ನ ಅಮ್ಮನಿಗೆ ಹಾಗೂ ನನಗೆ ಇಬ್ಬರಿಗೂ ಚರ್ಮಕ್ಕೆ ಸಂಬಂಧಿಸಿದ ಎಕ್ಸಿಮಾ ಖಾಯಿಲೆಯಿದೆ ಎಂದಿದ್ದಾರೆ. ಅಮ್ಮನಿಂದಲೇ ನನಗೆ ಈ ಖಾಯಿಲೆ ಬಂದಿದೆ ಇದಕ್ಕೆ ಅಮ್ಮ ಕೂಡ ಏನೂ ಮಾಡಲು ಸಾಧ್ಯವಿಲ್ಲ. 

Tap to resize

Latest Videos

ಈ ಆಹಾರಗಳ ಜೊತೆ ಬೆಣ್ಣೆ ಸೇರಿಸಿದ್ರೆ… ವಿಷವಾಗೋದು ಖಂಡಿತಾ… ಹುಷಾರಾಗಿರಿ!

ಸ್ಕಿನ್ ಡಿಸೀಸ್ ಎಕ್ಸಿಮಾ ಕುರಿತು ಹೇಳಿರುವ ಅಗಸ್ತ್ಯ ನಂದಾ ಅವರು, ಈ ಖಾಯಿಲೆಯಿಂದ ನಾವು ಅನೇಕ ಬಾರಿ ಕೀಳರಿಮೆಗೆ ಒಳಗಾಗಿದ್ದೇವೆ ಎಂದು ಹೇಳಿದ್ದಾರೆ. ಈ ಖಾಯಿಲೆಯ ಬಗ್ಗೆ ಎಲ್ಲರೂ ಅರಿವು ಮೂಡಿಸಿಕೊಂಡು, ಚರ್ಮದ ಬಗ್ಗೆ ಹೆಚ್ಚು ಕಾಳಜಿ ವಹಿಸಿ ಎಂದು ಅವರು ಹೇಳಿದ್ದಾರೆ. ಇತ್ತೀಚೆಗೆ ಸಹೋದರಿ ನವ್ಯಾ ನವೇಲಿ ನಂದಾ ಅವರ ಜನಪ್ರಿಯ ಫಾಡ್ ಕಾಸ್ಟ್ ಗೆ ಸೇರಿಕೊಂಡ ಅಗಸ್ತ್ಯ ಅವರು ತಮ್ಮ ಅನಾರೋಗ್ಯ ಮತ್ತು ಮಾನಸಿಕ ಆರೋಗ್ಯದ ಬಗ್ಗೆ ಕೂಡ ಮಾತನಾಡಿದರು. ಎಕ್ಸಿಮಾದಿಂದ ನಮಗೆ ಆತಂಕ, ಅಭದ್ರತೆಯ ಅನುಭವವಾಗುತ್ತಲೇ ಇರುತ್ತದೆ. ಫಿಲ್ಮ್ ಶೂಟಿಂಗ್ ಸಮಯದಲ್ಲೂ ಅನೇಕ ಸಮಸ್ಯೆಗಳು ಎದುರಾಗುತ್ತವೆ ಎಂದು ಅವರು ಎಕ್ಸಿಮಾ ಖಾಯಿಲೆಯ ಪರಿಣಾಮದ ಬಗ್ಗೆ ಹೇಳಿಕೊಂಡಿದ್ದಾರೆ.

ಎಕ್ಸಿಮಾ ಎಂದರೇನು? : ಎಕ್ಸಿಮಾ ಒಂದು ರೀತಿಯ ಚರ್ಮದ ಖಾಯಿಲೆಯಾಗಿದೆ. ಈ ಖಾಯಿಲೆಗೆ ಒಳಗಾದವರಿಗೆ ತುರಿಕೆ, ಕಿರಿಕಿರಿಯ ಅನುಭವವಾಗುತ್ತದೆ. ಎಕ್ಸಿಮಾದಿಂದಾಗಿ ಚರ್ಮದ ಶುಷ್ಕತೆ ಹೆಚ್ಚಾಗುತ್ತದೆ. ಶುಷ್ಕತೆಯಿಂದ ಚರ್ಮಕ್ಕೆ ಸಂಬಂಧಿಸಿದ ಅನೇಕ ತೊಂದರೆಗಳು ಆರಂಭವಾಗುತ್ತದೆ. ಎಕ್ಸಿಮಾಕ್ಕೆ ಒಳಗಾದ ವ್ಯಕ್ತಿ ಇದರಿಂದ ಅನೇಕ ಬಾರು ಅಸಮಾಧಾನಕ್ಕೊಳಗಾಗುತ್ತಾನೆ. ಸಾಮಾನ್ಯವಾಗಿ ಎಕ್ಸಿಮಾ ಕೈ, ಕಾಲು, ಕುತ್ತಿಗೆ, ಕಿವಿಯ ಆಸು ಪಾಸು, ತುಟಿ ಹಾಗೂ ಮುಖದ ಮೇಲೆ ಕಾಣಿಸಿಕೊಳ್ಳುತ್ತದೆ.

ಎಕ್ಸಿಮಾ ಲಕ್ಷಣಗಳು :  ಎಕ್ಸಿಮಾ ಖಾಯಿಲೆಯ ಉಂಟಾದಾಗ ಚರ್ಮದ ಮೇಲೆ ತುರಿಕೆ, ಚರ್ಮದ ಕೆರಳಿಕೆ, ಉರಿ, ಚರ್ಮದ ಊತ ಮುಂತಾದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ.

ವಿಟಮಿನ್ ಡಿ ಕೊರತೆಗೆ ಪರಿಹಾರ.. ಬರ್ತಿದೆ ನೀರಿನ ಇಂಜೆಕ್ಷನ್

ಎಕ್ಸಿಮಾಗೆ ಕಾರಣಗಳು : ಒತ್ತಡದ ಜೀವನಶೈಲಿ ಹಾಗೂ ಕಳಪೆ ಆಹಾರ ಪದ್ಧತಿ ಅನೇಕ ರೀತಿಯ ರೋಗಗಳಿಗೆ ಆಹ್ವಾನ ನೀಡುತ್ತದೆ. ನಾವು ಹೆಚ್ಚಿನ ಒತ್ತಡವನ್ನು ತೆಗೆದುಕೊಳ್ಳುವುದರಿಂದ ಹಾಗೂ ಕೆಟ್ಟ ಮತ್ತು ಕಲುಷಿತ ಆಹಾರ ಸೇವನೆಯಿಂದ ಎಕ್ಸಿಮಾಗೆ ಒಳಗಾಗುತ್ತೇವೆ. ರಾಸಾಯನಿಕ ಮಿಶ್ರಿತ ಸೌಂದರ್ಯ ವರ್ಧಕ ಉತ್ಪನ್ನಗಳ ಬಳಕೆಯಿಂದ ಅಲರ್ಜಿ, ಹಾರ್ಮೋನ್ ಗಳಲ್ಲಿ ಅಸಮತೋಲನದಿಂದಲೂ ಎಕ್ಸಿಮಾ ಖಾಯಿಲೆ ಉಂಟಾಗುತ್ತದೆ. ಇನ್ನು ಕೆಲವು ಆನುವಂಶಿಕ ಕಾರಣದಿಂದಲೂ ವ್ಯಕ್ತಿ ಎಕ್ಸಿಮಾಗೆ ಒಳಗಾಗುತ್ತಾನೆ.
 

click me!