ಅನುಮತಿ ಇಲ್ಲದೆ ಇನ್ಮುಂದೆ ಅಮಿತಾಭ್ ಬಚ್ಚನ್ ಫೋಟೋ, ಧ್ವನಿ ಬಳಸುವಂತಿಲ್ಲ; ದೆಹಲಿ ಹೈಕೋರ್ಟ್

Published : Nov 25, 2022, 03:02 PM IST
ಅನುಮತಿ ಇಲ್ಲದೆ ಇನ್ಮುಂದೆ ಅಮಿತಾಭ್ ಬಚ್ಚನ್ ಫೋಟೋ, ಧ್ವನಿ ಬಳಸುವಂತಿಲ್ಲ; ದೆಹಲಿ ಹೈಕೋರ್ಟ್

ಸಾರಾಂಶ

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಫೋಟೋ ಮತ್ತು ಧ್ವನಿಯನ್ನು ಅವರ ಅನುಮತಿ ಇಲ್ಲದೆ ಬಳಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. ಇಂದು (ನವೆಂಬರ್ 25) ಅಮಿತಾಭ್ ಅರ್ಜಿ ವಿಚಾರಣೆ ನಡೆದ ದೆಹಲಿ ಹೈಕೋರ್ಟ್ ಇನ್ಮುಂದೆ ಫೋಟೋ ಮತ್ತು ಧ್ವನಿ ಬಳಸದಂತೆ ಆದೇಶಿಸಿದೆ.

ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್ ಅವರ ಫೋಟೋ ಮತ್ತು ಧ್ವನಿಯನ್ನು ಅವರ ಅನುಮತಿ ಇಲ್ಲದೆ ಬಳಸುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. ಇಂದು (ನವೆಂಬರ್ 25) ಅಮಿತಾಭ್ ಅರ್ಜಿ ವಿಚಾರಣೆ ನಡೆದ ದೆಹಲಿ ಹೈಕೋರ್ಟ್ ಇನ್ಮುಂದೆ ಫೋಟೋ ಮತ್ತು ಧ್ವನಿ ಬಳಸದಂತೆ ಆದೇಶಿಸಿದೆ. ಹಲವು ಸಂಸ್ಥೆಗಳು ಮತ್ತು ವ್ಯಕ್ತಿಗಳು ತಮ್ಮ ಅನುಮತಿ ಇಲ್ಲದೆ ಫೋಟೋ, ಹೆಸರು ಮತ್ತು ಧ್ವನಿ ಬಳಲುತ್ತಿದ್ದಾರೆ ಅವುಗಳಿಗೆ ಕಡಿವಾಣ ಹಾಕಬೇಕೆಂದು ಅಮಿತಾಭ್ ಕೋರ್ಟ್ ಮೆಟ್ಟಿಲೇರಿದ್ದರು. 

ಈಗಾಗಲೇ ಬಳಸಿದ ಅಮಿತಾಭ್ ಬಚ್ಚನ್ ಫೋಟೋ, ಧ್ವನಿ ಮತ್ತು ಹೆಸರನ್ನು ತೆಗೆದುಹಾಕುವಂತೆ ವಿದ್ಯುನ್ಮಾನ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವಾಲಯಕ್ಕೆ ಕೋರ್ಟ್ ಸೂಚಿಸಿದೆ. ಕೆಲವು ಸಂಸ್ಥೆಗಳು ತಮ್ಮ ಉತ್ಪನ್ನ ಹಾಗೂ ಸೇವೆಗಳನ್ನು ಪ್ರಚಾರ ಮಾಡುವ ಸಲುವಾಗಿ ಸೆಲೆಬ್ರಿಟಿ ಸ್ಥಾನವನ್ನು ಅನುಮತಿ ಇಲ್ಲದೆ ಬಳಸುತ್ತಿರುವುದರಿಂದ ಅವರು ನೊಂದಿದ್ದಾರೆ ಎಂದು ಕೋರ್ಟ್ ಹೇಳಿದೆ.  

ಉದ್ದ ಕೂದಲಿದೆ ಎನ್ನುವ ಕಾರಣಕ್ಕೆ ಜಯಾ ಬಚ್ಚನ್ ಮದುವೆಯಾದೆ; ಅಮಿತಾಭ್ ಬಚ್ಚನ್

 ಈ ಬಗ್ಗೆ ವಿವರಣೆ ನೀಡಿದ ಅಮಿತಾಭ್ ಬಚ್ಚನ್ ಪರ ವಕೀಲರು ಹರೀಶ್ ಸಾಳ್ವೆ ಅವರು, 'ಏನು ನಡೆಯುತ್ತಿದೆ ಎನ್ನುವ ಬಗ್ಗೆ ಹೇಳುತ್ತೇನೆ. ಯಾರೋ ಟಿ ಶರ್ಟ್‌ಗಳನ್ನು ತಯಾರಿಸುತ್ತಾರೆ ಅದರಲ್ಲಿ ಅಮಿತಾಭ್ ಬಚ್ಚನ್ ಫೋಟೋವನ್ನು ಬಳಲಸುತ್ತಾರೆ. ಅಮಿತಾಭ್ ಅವರ ಪೋಸ್ಟರ್ ಮಾರಾಟ ಮಾಡುವುದು, ಅಮಿತಾಭ್ ಬಚ್ಚನ್ ಹೆಸರಿನಲ್ಲಿ amitabhbachchan.com ಎಂದು ಡೊಮೇನ್ ನೋಂದಾಯಿಸಿದ್ದಾರೆ.  ಹಾಗಾಗಿ ಕೋರ್ಟ್‌ಗೆ ಬಂದೆವು' ಎಂದು ಹೇಳಿದರು.   

ಅಪ್ಪು ಬಗ್ಗೆ ಮಾತನಾಡಿದ ಅಮಿತಾಭ್ ಬಚ್ಚನ್: ಧನ್ಯವಾದ ತಿಳಿಸಿದ ಅಶ್ವಿನಿ ಪುನೀತ್ ರಾಜ್‍ಕುಮಾರ್

80 ವರ್ಷದ ನಟ ಅಮಿತಾಭ್ ಬಚ್ಚನ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಇಳಿ ವಯಸ್ಸಿನಲ್ಲೂ ಬಿಗ್ ಬಿ ಸಿಕ್ಕಾಪಟ್ಟೆ ಬ್ಯುಸಿ ಇರುವ ನಟ. ಇಂದಿಗೂ ಅದೇ ಬೇಡಿಕೆ ಉಳಿಸಿಕೊಂಡಿರುವ ಅಮಿತಾಭ್ ಬಚ್ಚನ್ ವಯಸ್ಸಿಗೆ ತಕ್ಕ ಪಾತ್ರಗಳನ್ನು ಮಾಡುತ್ತಾ ಅಭಿಮಾನಿಗಳನ್ನು ರಂಜಿಸುತ್ತಿದ್ದಾರೆ. ಅಮಿತಾಭ್ ಕೊನೆಯದಾಗಿ ಊಂಚೈ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಸದ್ಯ ಅವರ ಬಳಿ ಸಾಲು ಸಾಲು ಸಿನಿಮಾಗಳಿವೆ. ಬಾಲಿವುಡ್ ಸಿನಿಮಾ ಜೊತೆಗೆ ತೆಲುಗು ಸಿನಿಮಾದಲ್ಲೂ ಅಮಿತಾಭ್ ನಟಿಸುತ್ತಿದ್ದಾರೆ.   


 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Articles on
click me!

Recommended Stories

ಅತ್ತ ಪಂಚೆ ಉದುರಿ ಹೋಗುತ್ತಿದೆ.. ಇತ್ತ ಕುಣಿದು ಕುಪ್ಪಳಿಸಿ ಇಳಯರಾಜಾ ಕಂಪೋಸ್ ಮಾಡಿದ ಮಜವಾದ ಹಾಡು ಯಾವುದು?
ಅಖಂಡ 2 ರಿಲೀಸ್ ನಿಲ್ಲೋಕೆ ಅಸಲಿ ಕಾರಣ ಇದೇನಾ? ಅಷ್ಟಕ್ಕೂ ಬಾಲಯ್ಯ ಮುಂದೆ ಏನ್ಮಾಡ್ತಾರೆ?